ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೂಮಿ ಕೆಸರಾಯಿತೆಂದೇ ಬೀಜ ಮೊಳಕೆಯೊಡೆಯಿತು

ಕೆಲವು ದ್ವಿಪದಿಗಳು

– ಬಸವರಾಜ ಸೂಳಿಭಾವಿ

ಲಡಾಯಿ ಪ್ರಕಾಶನ

೧

ತೀರ ನಾಜೂಕಾಗಿ ವ್ಯವಹರಿಸುವುದು ಬರಡಾಗಿಯೇ ಉಳಿಯಿತು

ಅಲ್ಲಿ ನೋಡು ಭೂಮಿ ಕೆಸರಾಯಿತೆಂದೇ ಬೀಜ ಮೊಳಕೆಯೊಡೆಯಿತು

೨

ನಡೆವ ಹಾದಿಯ ನೋಡಿ ನಕ್ಕವರ ಮರೆಯುವುದೇನೂ ಕಷ್ಟವೇನಿಸಲಿಲ್ಲ

ರೆಪ್ಪೆ ಒದ್ದೆ ಮಾಡಿಕೊಂಡವರನು ಏನೂ ಮಾಡಿದರೂ ಮರೆಯಲಾಗಲಿಲ್ಲ!

೩

ನೀ ಉರಿ ಹೊತ್ತ ಸೂರ್ಯನಾಗದೇ ಹೋದರೆ

ನಿನ್ನದೇ ಭೂಮಿ ನಿನ್ನ ಸುತ್ತ ತಿರುಗುವುದಿಲ್ಲ..!

೪

ಮನೆಯಲಿ ಸ್ವರ್ಗ ಬಯಸಿದರೆ ತೋಳಬಂಧಿಯಾಗಿ ಇಂದು ಮನುಷ್ಯರಾಗೋಣ

ಕಣ್ಣೆದುರೆ ನರಕವು ಸೃಷ್ಟಿಯಾಗುವುದು ಬೇಕಿದ್ದರೆ ನಾವೂ ದೇವರಾಗಿ ಬಿಡೋಣ

೫

ಏನೂ ಕಾಣದಿದ್ದರೂ ಈ ಇರುಳಿಗೇಕೆ ಒಲಿದೆ ?

ಬೆಳಕಿನಲ್ಲಿ ದೇಹಕಿಂತ ನೆರಳುಗಳೇ ಉದ್ದವಾಗುವುದು

೬

ಅಂಬೆಗಾಲಿನಿಂದ ಸುರುವಾದ ಈ ಹಾದಿ

ಏನಿದ್ದರೂ ಚಿಟ್ಟೆಯಾಗಿ ಹಾರಿದಾಗಲೇ ಮುಗಿಯುವುದು

೭

ಈ ಬಾರಿ ಯಾತನೆಯ ಬದುಕನ್ನಲ್ಲ ನಾ ಬರೆದಿದ್ದು ನಗುವಿನ ಬಗೆಗೆ

ದೋಷ ಎಲ್ಲಾಗಿತ್ತೋ? ಅದನ್ನೊದಿದ ಮೇಲೂ ಅವಳ ಕಣ್ಣಲ್ಲಿ ನೀರಾಡಿತು

 ]]>

‍ಲೇಖಕರು G

13 August, 2012

3 Comments

  1. Swarna

    ಸುಂದರ ಸಾಲುಗಳು

  2. vijayakumar hanchinal

    ನಮಸ್ತೆ ಬಸವರಾಜ ಸರ್, ನಿಮ್ಮ ದ್ವಿಪದಿಗಳು ದೀಪದ ಸಾಲುಗಳಂತಿವೆ…

    • ಬಸೂ

      ನಿಮ್ಮ ಸ್ಪಂದನಕ್ಕೆ ನಮನಗಳು ವಿಜಯಕುಮಾರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading