ಭಾವುಕತೆಯ ಬಿಂಬ ‘ಅಮ್ಮ ಮತ್ತು ಸುಹೇಲ್…’

ಸಂಗಮೇಶ್‌ ಸಜ್ಜನ್

ಯಾವ ಗಂಡೊ
ಯಾವ ಹೆಣ್ಣೊ
ಪ್ರೀತಿಎಂಬ ಚುಂಬಕ

– ಬೇಂದ್ರೆ.

ಪ್ರೀತಿ ಅನ್ನೋದು ಹೀಗೆ ಮತ್ತೆ ಇವರಲ್ಲೇ ಆಗಬೇಕಂತೇನಿಲ್ಲ, ಅದು ಪರಿಶುದ್ಧ ಮನಸ್ಸುಗಳ ಸಂಗಮ ಅಷ್ಟೇ. ಅದು ಮತ್ತೆ ಮತ್ತೆ ಮನಸಲ್ಲಿ ಉಳಿಯುವ ಹಾಗೆ ಮಾಡಿದ್ದು ಕಾರ್ತಿಕ್‌ ಹೆಬ್ಬಾರ್ ಅವರ ಅಮ್ಮ ಮತ್ತು ಸುಹೇಲ್ ನಾಟಕ. ಎರಡು ಹೃದಯಗಳು ಒಂದಾಗುವ ಸಾಧ್ಯತೆ ಇದ್ರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಕೊನೆಗೊಮ್ಮೆ ತಡೆಯುವ ಮನಸ್ಸು ಕೂಡ ಕರಗಲೂಬಹುದೇ ಅನ್ನೋದು ಸೀತಾ ಕೋಟೆ ಅವರ ಪಾತ್ರದ ಮೂಲಕ ತಿಳಿದು ಬಂತು.

ನಾಟಕದುದ್ದಕ್ಕೂ ಎಲ್ಲಿಯೂ ಬೋರ್ ಆಗದ ಹಾಗೆ ನಟಿಸಿದ್ದು ಶೃಂಗಾ ಬಿವಿ ಹಾಗು ದೀಪಕ್ ಸುಬ್ರಹ್ಮಣ್ಯ ಅವರ ನಟನೆಯೂ ಅದ್ಭುತವಾದುದ್ದೆ. ನಮ್ಮಲ್ಲಿನ ಎಷ್ಟೋ ಸಂಸ್ಕೃತಿ, ಸಂಪ್ರದಾಯಗಳು ನಮ್ಮಗಳ ಬದುಕಿಗೆ ಅಡ್ಡಿಯಾಗಿವೆ, ಅಡ್ಡಿಯಾಗುತ್ತಲೇ ಇವೆ. ಆದರೆ ಸ್ವತಂತ್ರ ಭಾರತದ ಪ್ರಜೆಗಳಾದ ನಮಗೆ ಸ್ವತಂತ್ರವಾಗಿ ಬದುಕುವ ಹಕ್ಕಾದರೂ ಇರಬೇಕಲ್ಲವೇ.

ಅಂದಮಾತ್ರಕ್ಕೆ ಎಲ್ಲರ ಮನಸ್ಥಿತಿಯೂ ಒಂದೇ ರೀತಿಯು ಇರಬೇಕಂತೇನಿಲ್ಲ. ನಮಗೆ ಇಷ್ಟವಾದದ್ದು ಸರಿ ಅಂತ ಅನ್ನಿಸಿದರೆ, ಅದು ನಮಗೆ ಖುಷಿ ಪಡಿಸುವ ಹಾಗಿದ್ರೆ ಅದನ್ನು ತಡಿಯೊ ಶಕ್ತಿ ಯಾರಿಂದಲೂ ಇಲ್ಲ, ಆದರೆ ಹೆತ್ತವರಿಗೂ ಒಮ್ಮೊಮ್ಮೆ ನೋವಾಗಬಹುದು ತಮ್ಮ ಮಕ್ಕಳು ಕೆಟ್ಟ ಹಾದಿ ಹಿಡಿತಿರಬಹುದು ಅಂತ, ಆದರೆ ಇವತ್ತಿನ ನಾಟಕ ನೋಡಿದಾಗ ಕೊನೆಗೊಮ್ಮೆ ಅಳುವೇ ಬಂತು.

ನಿಜಕ್ಕೂ ನಾವು ಮನುಷ್ಯರು ಎಷ್ಟು ಸ್ವಾರ್ಥಿಗಳಲ್ವಾ…
‘ಸ್ಮಶಾಣದಲ್ಲಿ ಹೂ ಅರಳುತ್ತಾ…?
ಅವನನ್ನು ನೋಡಿ ಸ್ಮಶಾಣವೇ ಹೂ ಆಗಿಬಿಟ್ಟಿದೆ…’

ಈ ಮೇಲಿನೆರಡು ಸಾಲುಗಳು ನನ್ನನ್ನು ತುಂಬಾನೇ ಭಾವುಕನನ್ನಾಗಿ ಮಾಡಿತು. ರಂಗಶಂಕರದಲ್ಲಿ ಕೂತು ನೋಡುವಾಗ ಭಾವುಕತೆಯಾಗುವ ಬಿಂಬ ಒಂದೆಡೆಯಾದರೆ, ನಾಟಕದುದ್ದಕ್ಕೂ ಚಪ್ಪಾಳೆಯ ಸುರಿಮಳೆಯ ಪ್ರತಿಬಿಂಬವೇ ನನ್ನನ್ನು ಮತ್ತೆ ಮತ್ತೆ ಬಡಿದೆಬ್ಬಿಸಿತು.

Thank you very much RANGASHANKARA and team for taking very much careful about COVID.

‍ಲೇಖಕರು Avadhi

April 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: