ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಭಾವಮಾಧ್ಯಮ' ಸಿನಿಮಾ ಸಂಭ್ರಮ

ಮಾನ್ಯರೆ,
‘ಭಾವಮಾಧ್ಯಮ’ ಸಂಸ್ಥೆಯು ಜನವರಿ 20ರಿಂದ 26ರವರೆಗೆ “ಸಿನಿಮಾ ಸಂಭ್ರಮ” ವನ್ನು ಬೆಂಗಳೂರಿನ ಮಲ್ಲೇಶ್ವರದ ಸವಿತಾ ಚಿತ್ರಮಂದಿರದಲ್ಲಿ ಆಯೋಜಿಸಿದೆ.
ಈ ಸಂಭ್ರಮದ ವಿಶೇಷವೆಂದರೆ ಏಳೂ ದಿನ ಸಿನೆಮಾ ಪ್ರದರ್ಶನ ಮತ್ತು ಸಿನೆಮಾ ಕುರಿತ ಕಮ್ಮಟವಿರಲಿದೆ.
ಕಮ್ಮಟ ಪ್ರತಿದಿನ ಬೆಳಿಗ್ಗೆ ನಡೆಯಲಿದ್ದು, ಸಿನೆಮಾ ಕಥೆಯ ಆಯ್ಕೆ, ಚಿತ್ರಕತೆಯ ರಚನೆ, ವಿನ್ಯಾಸ, ನಿರ್ದೇಶನ, ಸಿನೆಮಾ ಛಾಯಾಗ್ರಹಣ, ಸಂಕಲನ ಮತ್ತು ಸಂಗೀತ ಇತ್ಯಾದಿ ಅಂಶಗಳ ಬಗ್ಗೆ ವಿವರಿಸಲಾಗುವುದು.
ಇಡೀ ಕಮ್ಮಟವನ್ನು ಖ್ಯಾತ ಸಿನೆಮಾ ತಜ್ಞರಾದ ಜಿ ಎಸ್ ಭಾಸ್ಕರ್ ನಿರ್ವಹಿಸುವರು. ಹಿರಿಯ ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಹೆಚ್ ಎಮ್ ರಾಮಚಂದ್ರ, ಪೂರ್ಣಚಂದ್ರ ತೇಜಸ್ವಿ (ಸಂಗೀತ), ಜಯತೀರ್ಥ, ಶಶಿಧರ ಅಡಪ ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ಭಾವಮಾಧ್ಯಮ ಸಂಸ್ಥೆ ನಿರ್ಮಿಸಿ ಉಮಾಶಂಕರ ಸ್ವಾಮಿ ನಿರ್ದೇಶಿಸಿರುವ, ಹಲವು ಪ್ರಶಸ್ತಿಗಳನ್ನು ಗಳಿಸಿರುವ ಬಾಗಲೋಡಿ ದೇವರಾಯರ ಕಥೆಯಾಧಾರಿತ ‘ಮುನ್ಸೀಫ’ ಹಾಗೂ ಕುವೆಂಪು ಕಥೆಯಾಧಾರಿತ ‘ಸಾಲದ ಮಗು’ ತೆರೆ ಕಾಣಲಿವೆ.
ಇದೇ ಸಂದರ್ಭದಲ್ಲಿ ಕುವೆಂಪು ಪುಸ್ತಕಗಳು ಹಾಗೂ ಕನ್ನಡ ಚಿತ್ರಗಳ ಡಿ.ವಿ.ಡಿಗಳ ಮಾರಾಟ ಮಾಡುವ ವ್ಯವಸ್ಥೆಯನ್ನೂ ಏರ್ಪಡಿಸಲಾಗಿದೆ.
ಕಾರ್ಯಾಗಾರದ ಕುರಿತು
ಜ. 20 ರಂದು ಬೆಳಗ್ಗೆ ಕಾರ್ಯಾಗಾರ ಉದ್ಘಾಟನೆಗೊಳ್ಳಲಿದ್ದು, ಬೆಳಗ್ಗೆ 10 ರಿಂದ 12.15 ರವರೆಗೆ ತಜ್ಞರು ಮಾಹಿತಿ ನೀಡುವರು. ಬಳಿಕ ಆಸಕ್ತರು ತಜ್ಞರೊಂದಿಗೆ ಚರ್ಚಿಸಲು ಅವಕಾಶವಿರುತ್ತದೆ.
ಸಿನೆಮಾ ಪ್ರದರ್ಶನ ಮತ್ತು ಕಮ್ಮಟ ಒಂದಕ್ಕೊಂದು ಪೂರಕವಾಗುವ ಹಾಗೆ ಯೋಜಿಸಲಾಗಿದೆ.
ಕಮ್ಮಟವು ಉಚಿತವಾಗಿದ್ದು ಎರಡೂ ಚಿತ್ರಗಳನ್ನು ನೋಡಲು ಶುಲ್ಕ 100 ರೂ. ಗಳನ್ನು ಕೊಟ್ಟು ಕಮ್ಮಟಕ್ಕೆ ನೋಂದಣಿ ಮಾಡಿಕೊಳ್ಳಬೇಕಾಗಿ ವಿನಂತಿ.
ಸ್ಥಳದಲ್ಲೂ ಹೆಸರು ನೋಂದಾಯಿಸಲು ಅವಕಾಶವಿದೆ.
ವಾಟ್ಸಪ್‍ನಂಬರ್ 9448304148 Email : bhavamadhyama@hotmail.com ಗೆಕಳುಹಿಸಬಹುದು.
ಸಾಲದ ಮಗು : 12.30 ಗಂಟೆಗೆ ಹಾಗೂ 6.00
ಮುನ್ಸೀಫ: 3.00 ಗಂಟೆಗೆ ಹಾಗೂ 8.30

‍ಲೇಖಕರು admin

8 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading