ಭಾರತ್ ಸ್ಟೋರ್ಸ್ ಮತ್ತು ಮಾಲ್ ಕಲ್ಚರ್

ದಯಾನಂದ್ ಟಿ ಕೆ

ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ “ಭಾರತ್ ಸ್ಟೋರ್ಸ್” ನಾಳೆ ಬಿಡುಗಡೆಯಾಗುತ್ತಿದೆ. ಕೊಳ್ಳುಬಾಕತನವನ್ನು ಕೇಂದ್ರವಾಗಿಟ್ಟುಕೊಂಡ ಶಾಪಿಂಗ್ ಮಾಲ್ ಕಲ್ಚರ್ ಹೇಗೆ ಚಿಲ್ಲರೆ ಅಂಗಡಿಗಳನ್ನು ಹುರಿದು ಮುಕ್ಕುತ್ತಿದೆ ಮತ್ತು ನಮ್ಮೆಲ್ಲರ ನಡುವೆಯೂ ಇರಬಹುದಾದ ಗೋವಿಂದಶೆಟ್ಟಿಯೆಂಬ ಚಿಲ್ಲರೆಅಂಗಡಿಯಾತ ಈ ಬೃಹತ್ ಕನ್ ಸ್ಯೂಮರಿಸಂ ಭೂತದ ಪಂಜಾದೇಟಿಗೆ ತನ್ನೆಲ್ಲವನ್ನೂ ಕಳೆದುಕೊಳ್ಳುತ್ತಾನೆ.. ಶೆಟ್ಟಿ ಅಂಗಡಿಯನ್ನು ಕಳೆದುಕೊಳ್ಳುವ ಮೂಲಕ ಜನಸಾಮಾನ್ಯರು ಯಾಕಾಗಿ ಒಂದು ಸಂಬಂಧತಂತುವನ್ನು ವಿಸ್ಮೃತಿಗೆ ತಳ್ಳಲೇಬೇಕಾದ ಸಂಕಟಕ್ಕೆ ಸಿಕ್ಕುತ್ತಾರೆ ಅನ್ನುವುದರ ಶೋಧ ಚಿತ್ರದ ವಸ್ತು. ಆದ್ರೆ ಒಂದೇ ಒಂದು ಬೇಜಾರು.

ಬಾರತ್ ಸ್ಟೋರ್ಸ್ ಚಿತ್ರ ಯಾವ ಶಾಪಿಂಗ್ ಮಾಲ್ ಮಲ್ಟಿಪ್ಲೆಕ್ಸ್ ಬ್ಯುಸಿನೆಸ್ ಸಂಸ್ಕೃತಿಯ ವಿರುದ್ಧ ಕಟ್ಟಲ್ಪಟ್ಟಿದೆಯೋ ಅದೇ ಐನಾಕ್ಸ್, ಓರಿಯನ್, ಪಿವಿಆರ್ ಮಾಲ್-ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರ ಈ ಚಿತ್ರ ತೆರೆಕಾಣುತ್ತಿದೆ. ಇದು ಚಿತ್ರದ ವಸ್ತು ಹೇಳುವ ಮೂಲ ಆಶಯಕ್ಕೇ ಮಸಿ ಬಳಿದಂತೆ ಅಲ್ಲವೆ?
ಗೋವಿಂದಶೆಟ್ಟಿಯಂತೆಯೇ ಆಮ್ ಆದ್ಮಿಗಳಾದ ನಮ್ಮಂಥವರು ವೀಕೆಂಡಲ್ಲಿ 300-400ರುಪಾಯಿ ಕೊಟ್ಟು ನಮ್ಮಂಥಹವರ ಬಗ್ಗೆ ಇರುವ ಈ ಚಿತ್ರವನ್ನು ನೋಡುವುದು ಹೇಗೆ? ಅಟ್ ಲೀಸ್ಟ್ ರೆಗ್ಯುಲರ್ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಿದ್ದರೆ 40-50 ರುಪಾಯಿ ಟಿಕೇಟು ಕೊಟ್ಟು ನಮ್ಮನ್ನು ನಾವು ಚಿತ್ರದೊಳಗೆನೋಡಿಕೊಳ್ಳಬಹುದಿತ್ತು.
ತನ್ನ ಚಿತ್ರದ ಪ್ರತಿಪಾದನೆಯನ್ನೇ ಈ ಮೂಲಕ ಅಲ್ಲಗಳೆದರೇ ಶೇಷಾದ್ರಿಯವರು ಅನ್ನೋ ಅನುಮಾನ ಮೂಡುತ್ತಿದೆ

‍ಲೇಖಕರು avadhi

April 5, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

17 ಪ್ರತಿಕ್ರಿಯೆಗಳು

  1. ಹರಿ

    ಶೇಷಾದ್ರಿಯವರ ಮುನ್ನುಡಿ, ಬೇರು, ವಿಮುಕ್ತಿ… ಎಲ್ಲವನ್ನೂ ವಿಶೇಷ ಪ್ರದರ್ಶನದಲ್ಲಿ ನೋಡಿದ್ದೇನೆ. ಪ್ರತೀ ಚಿತ್ರ ಪ್ರದರ್ಶನದ ನಂತರದ ಚರ್ಚೆಯಲ್ಲಿ ಚಿತ್ರ ಬಿಡುಗಡೆಯ ಸಮಸ್ಯೆಗಳನ್ನು ಶೇಷಾದ್ರಿಯವರು ವೀಕ್ಷಕರೊಂದಿಗೆ ಹಂಚಿ ಕೊಂಡಿದ್ದಾರೆ. ಶೇಷಾದ್ರಿಯವರು ತೆರೆಗೆ ಚಿತ್ರ ಬಿಡುಗಡೆ ಮಾಡಲು ಪಡುವ ಶ್ರಮ ಅವರಿಗೇ ಗೊತ್ತು. ಇದು ಶೇಷಾದ್ರಿಯವರ ತಪ್ಪಲ್ಲ…ನಮ್ಮ ಅಂದರೆ ವೀಕ್ಷಕರ ತಪ್ಪು.

    ಪ್ರತಿಕ್ರಿಯೆ
  2. ಅಶೋಕವರ್ಧನ

    ಅಹ್ಹಾ, ತುಂಬ ಸರಿಯಾದ ಮಾತು. ಈಗಷ್ಟೇ ಇದೇ ಧ್ವನಿಯನ್ನು ಮುಖಪುಸ್ತಕದಲ್ಲಿ ನನ್ನ ಮಾತಿನಲ್ಲಿ ಹಾಕಿ ಬಂದೆ – ಬಿಡಿ ಥಿಯೇಟರ್ ಗಳನ್ನು ನುಂಗುತ್ತ ಬರುವ ಮಲ್ಟಿಪ್ಲೆಕ್ಸಿನಲ್ಲಿ ಇದು ಬರಬೇಕಿತ್ತಾ?

    ಪ್ರತಿಕ್ರಿಯೆ
  3. rajesh

    ಕೊಂಕು ತೆಗೆಯುವವರು ಎಲ್ಲೆಲ್ಲೂ ಇರುತ್ತಾರೆ ಶೇಷಾದ್ರಿ ಸರ್. ಈ ಅಶೋಕ ವರ್ಧನ, ದಯಾನಂದ್ ಮುಂತಾದವರಿಗೆ ಮಾರುಕಟ್ಟೆಯ ಸತ್ಯ ಗೊತ್ತಿಲ್ಲ. ಸಿನಿಮಾರಂಗದ ಲೆಕ್ಕಾಚಾರ ಗೊತ್ತಿಲ್ಲ. ಇನ್ನೊಬ್ಬರು ಏನು ಮಾಡಿದರೂ ವ್ಯಂಗ್ಯ ಆಡುವುದು ಗೊತ್ತು. ಇಂಥವರನ್ನು ನಿರ್ಲಕ್ಷಿಸಿ. ನಾವು ಸಿನಿಮಾ ನೋಡುತ್ತೇವೆ.

    ಪ್ರತಿಕ್ರಿಯೆ
    • ಅಶೋಕವರ್ಧನ

      ಮಾಲ್ ಕಲ್ಚರ್ರಿನ ಅಜ್ಜ – ಪುಸ್ತಕೋದ್ಯಮದ ಸರ್ಕಾರೀಕರಣ, ಇದರ ವಿರುದ್ಧ ಸುಮಾರು ಇಪ್ಪತ್ತು ವರ್ಶ ಪ್ರಕಾಶನ ನಡೆಸಿದ, ಮೂವತ್ತಾರು ವರ್ಷ ಮಳಿಗೆ ನಡೆಸಿ, ಮರ್ಯಾದೆಯ ಬದುಕನ್ನು ಕಟ್ಟಿಕೊಂಡ ಹಿನ್ನೆಲೆ ನನ್ನದು. ಶೇಷಾದ್ರಿಯವರಷ್ಟು ವ್ಯಾಪಕವಲ್ಲದಿದ್ದರೂ ಈಗಾಗಲೇ ಮೂರು ಸಿನಿಮಾ ನಿರ್ದೇಶಿಸಿದವನ ತಂದೆಯಾಗಿಯೂ ಸ್ವಲ್ಪ ಸಿನಿಮಾರಂಗದ ಲೆಕ್ಕಾಚಾರ ತಿಳಿದವನೂ ನಾನು. ಇವೆಲ್ಲಕ್ಕೂ ಮಿಗಿಲಾಗಿ ನನ್ನದು ಕೊಂಕು, ವಿಮರ್ಶೆ, ತೀರ್ಮಾನ ಅಲ್ಲ – ಕೆಳಗೆ ನೋಡಿ ಸ್ವತಃ ಶೇಷಾದ್ರಿಯವರೂ ಸ್ಪಷ್ಟವಾಗಿಯೇ ಹೇಳಿಕೊಂಡಂತೆ ಒಂದು ವಿಷಾದಪೂರ್ವಕ ಉದ್ಗಾರ! ರಾಜೇಶರ ಅಂಧಭಕ್ತಿ ಕನ್ನಡ ಸಿನಿಮಾವನ್ನು ಉಳಿಸಿ, ಬೆಳೆಸಲಿ.

      ಪ್ರತಿಕ್ರಿಯೆ
  4. malathi S

    i was about to book 2 tickets to view this Orion Mall. my husband said NO…:-( 🙁

    ಪ್ರತಿಕ್ರಿಯೆ
  5. shubha

    mantri’nalli 200kke ticket. beLigge show idre 80/90kke irtittu. just stating facts

    ಪ್ರತಿಕ್ರಿಯೆ
  6. Sathish Naik

    ಮಾಲ್ ಸಂಸ್ಕೃತಿಯ ಅಡ್ಡ ಪರಿಣಾಮಗಳ ಕುರಿತಾದ ಚಿತ್ರವನ್ನ ಮಾಲ್ ಗಳಲ್ಲೇ ನೋಡ ಬೇಕಾದದ್ದು ದುರಾದೃಷ್ಟವೇ ಸರಿ.
    ಇದರ ಕುರಿತಾಗಿನ ಫೇಸ್ಬುಕ್ ಚರ್ಚೆಯೊಂದರಲ್ಲಿ ನಿರ್ದೇಶಕ ಶೇಷಾದ್ರಿ ಯವರು ಈ ಕೆಳಗಿನ ಮಾತುಗಳನ್ನ ಹೇಳ್ತಾರೆ..
    //ಸ್ನೇಹಿತರೇ,
    ನಿಮ್ಮ ಅಭಿಪ್ರಾಯಗಳನ್ನು ಗಮನಿಸಿದೆ.
    ನನಗೂ ನನ್ನ ‘ಭಾರತ್ ಸ್ಟೋರ್ಸ್’ ಚಿತ್ರವನ್ನು ಮಲ್ಟಿಪ್ಲೆಕ್ಸ್‌ನಲ್ಲಿ ಮಾತ್ರ ಬಿಡುಗಡೆ ಮಾಡುತ್ತಿರುವುದಕ್ಕೆ ವಿಷಾದವಿದೆ.
    ಆದರೆ ಏನು ಮಾಡುವುದು? ಪರಿಸ್ಥಿತಿ ಹಾಗಿದೆ.
    ಕೆಂಪೇಗೌಡ ರಸ್ತೆಯಲ್ಲೋ, ಇನ್ನೆಲ್ಲೋ (ಸಿಂಗಲ್ ಸ್ಕ್ರೀನ್‌ನಲ್ಲಿ) ಒಂದು ಚಿತ್ರ ಬಿಡುಗಡೆ ಮಾಡಲು ಒಂದು ವಾರಕ್ಕೆ ಕನಿಷ್ಟ ನಾಲ್ಕೈದು ಲಕ್ಷ ಬಾಡಿಗೆ ತೆರಬೇಕು.
    ಅಷ್ಟು ಕೊಟ್ಟು ಬಿಡುಗಡೆ ಮಾಡಿದರೂ ನಮ್ಮ ಪ್ರೇಕ್ಷಕ ಪ್ರಭು ಬಂದು ನೋಡುತ್ತಾನೆ ಎನ್ನುವ ನಂಬಿಕೆ ಇಲ್ಲ.
    ಈ ಹಿಂದೆ ಅಂಥ ಪ್ರಯತ್ನಗಳನ್ನು ಮಾಡಿ ನಾನು ಕೈ ಸುಟ್ಟುಕೊಂಡಿದ್ದೇನೆ.
    ಎಲ್ಲ ದೊಡ್ಡಚಿತ್ರಮಂದಿರಗಳು ವಿತರಕರ/ಪ್ರದರ್ಶಕರ ಕೈಲಿದೆ.
    ಅವರು ಇಂಥ ಚಿತ್ರಗಳನ್ನು ಮೂಸಿಯೂ ನೋಡುವುದಿಲ್ಲ.
    ಮಲ್ಟಿಪ್ಲೆಕ್ಸ್‌ನಲ್ಲಿ ಶೇಕಡಾವಾರು ಆಧಾರದ ಮೇಲೆ ಬಿಡುಗಡೆ ಮಾಡುವ ಸೌಲಭ್ಯವಿರುವುದರಿಂದ
    ನಮ್ಮ ಚಿತ್ರ ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಇದರಿಂದ ನಿರ್ಮಾಪಕನ ಕೈ ಕಚ್ಚುವುದಿಲ್ಲ.
    ಕೋರಮಂಗಲ ದೂರ, ಮಲ್ಲೇಶ್ವರಂ ದೂರ, ರಾಜಾಜಿನಗರ ದೂರ ಎನ್ನುವವರಿಗೆ ಎಲ್ಲವೂ ದೂರವೇ…//
    ನೂರು ರುಪಾಯಿ ಷೋ ಅಂತಾ ಒಂದಿನ ಪೂರ್ತಿ ಕೆಲಸ ಬಿಟ್ಟು ಬಂದು ಸಿನಿಮಾ ನೋಡೋಕಾಗತ್ತಾ..?? ಬೇರೆ ದಿನಗಳಿಗಿರೋ ರಿಯಾಯಿತಿ ಭಾನುವಾರ ಯಾಕಿಲ್ಲ..?? ಜನಕ್ಕೆ ಸಿಗೋದೆ ಒಂದು ಭಾನುವಾರ ಅಲ್ಪ ಸ್ವಲ್ಪ ಮೋಜು ಮಸ್ತಿಗೆ.. ಅದನ್ನು ಈ ರೀತಿ ದುಬಾರಿ ಆಗ್ಸಿದ್ರೆ ಹೇಗೆ..?? ಗ್ರಾಫಿಕ್ಸ್ ಅನಿಮೇಶನ್ ತ್ರೀಡಿ ಅದೂ ಇದೂ ಅತ್ಯಾಧುನಿಕ ತಂತ್ರಜ್ಞಾನದಿಂದ ಮುಂದುವರೆದು ತಯಾರಾಗೋ ವೈಭವೀ ವ್ಯಾಪಾರೀ ಚಿತ್ರಗಳನ್ನ ಹುರಿದು ಮುಕ್ಕುವಂತೆ ನೋಡೋ ಈ ಕಾಲದಲ್ಲಿ.. ಬಯಸೀ ಬಯಸೀ ಇಂಥ ಕಲಾತ್ಮಕ, ಪ್ರಶಸ್ತಿ ವಿಜೇತ ಸಿನಿಮಾಗಳನ್ನ ನೋಡಬಯಸುವ ಅಲ್ಪವೇ ಅನ್ನುವಷ್ಟು ಕನಾತ್ಮಕ ಸಿನಿಮಾ ಪ್ರೇಮಿ ಮನಸುಗಳಿಗೆ ಖಂಡಿತ ಈ ಎಲ್ಲಾ ನಡವಳಿಕೆಗಳಿಂದ ಬೇಸರವಾಗ್ತದೆ. ಮತ್ತು ಅದರಿಂದ ನಷ್ಟ ಆ ಸಿನಿಮಾಕ್ಕೆಯೇ ಹೊರತು ಪ್ರೇಕ್ಷಕನಿಗಲ್ಲ. ಸ್ವಲ್ಪ ತಡವಾದರೂ ಸರಿ ಆ ಸಿನಿಮಾ ಪ್ರೇಕ್ಷಕನನ್ನ ತಲುಪೇ ತಲುಪತ್ತೆ. ಕೊನೆಗೆ ಲಾಭ ಪ್ರೆಕ್ಷಕನಿಗೆಯೇ..!!

    ಪ್ರತಿಕ್ರಿಯೆ
  7. ಪವನಜ

    ಈ ಬಗ್ಗೆ ನಾನು ಫೇಸ್‌ಬುಕ್‌ನಲ್ಲಿ ಈಗಾಗಲೇ ಬರೆದಿದ್ದೇನೆ. ಕೆಂಪೇಗೌಡ ರಸ್ತೆಯ ಥಿಯೇಟರುಗಳ ಸಾಮರ್ಥ್ಯ ಸಾವಿರದ ಆಸುಪಾಸಿಲ್ಲಿ ಇರಬಹುದು. ಅಷ್ಟು ದೊಡ್ಡ ಥಿಯೇಟರು ತುಂಬುವಷ್ಟು ಕನ್ನಡಿಗರು ಇಂತಹ ಸಿನಿಮಾ ನೋಡುತ್ತಾರೋ? ಅಷ್ಟು ದೊಡ್ಡ ಥಿಯೇಟರಿಗೆ ಬಾಡಿಗೆ ಕೊಡುವಷ್ಟು ಈ ಸಿನಿಮಾ ಸಂಪಾದಿಸುತ್ತದೆಯೇ? ಟೀಕೆ ಮಾಡುವವರು ಸ್ವಲ್ಪ ಈ ವಿಷಯದ ಬಗ್ಗೆ ಸಂಶೋಧನೆ ನಡೆಸಿದರೆ ಒಳ್ಳೆಯದಿತ್ತು. ಆರಾಮ ಖುರ್ಚಿಯಲ್ಲಿ ಕುಳಿತು ಟೀಕಿಸುವುದು ಅತಿ ಸುಲಭ.
    ಇಂತಹ ಸಿನಿಮಾಗಳಿಗೆಂದೇ ಕಡಿಮೆ ಖರ್ಚಿನಲ್ಲಿ ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಕಡಿಮೆ ಸೀಟುಗಳ ಚಿಕ್ಕ ಥಿಯೇಟರುಗಳನ್ನು ಪ್ರತಿ ಜಿಲ್ಲೆಯಲ್ಲೂ ಮಾಡುವ ಯೋಜನೆ ಬಗ್ಗೆ ಆಗಾಗ ಕೇಳಿಬರುತ್ತಿದೆ. ಆದರೆ ಆ ಬಗ್ಗೆ ಸರಕಾರ ಇನ್ನೂ ಕಾರ್ಯೋನ್ಮುಖವಾಗಿಲ್ಲ.

    ಪ್ರತಿಕ್ರಿಯೆ
  8. renuka manjunath

    ಸರ್, ಮಾಲ್ ನ ಸುತ್ತ ಶೆಟ್ಟಿ ತನ್ನ ಅಸ್ತಿತ್ವಕ್ಕೆ ಪರದಾಡುವುದರೊಂದಿಗೆ ನಮ್ಮ ನಿತ್ಯ ಬದುಕಿನಲ್ಲಿ ಏನೆಲ್ಲಾ ಮರೆಯಾಗುತ್ತವೆ ಎಂಬುದು ಚಿತ್ರದ ವಿಷಯವೆಂದಾಯಿತು…! ನೋಡಬೇಕು…. ನಾವುಗಳೂ ಶೆಟ್ಟಿಯನ್ನು ಮಾಲ್ ನಲ್ಲಿ! ಅದರ ಮುಂದುವರೆದ ಭಾಗವಾಗಿ, ಅದರ ಬಾಲಂಗೋಚಿಯಾಗಿ ಟೆಂಟ್ ಸಿನಿಮಾ ಹಾಗೂ ಮಲ್ಟಿಪ್ಲೆಕ್ಸ್ ನ ವೈರುಧ್ಯಗಳನ್ನೂ ಸೇರಿಸಿಬಿಡಿ! then it would be easy foe us to go and see!

    ಪ್ರತಿಕ್ರಿಯೆ
  9. karthik pai

    Dear ashokvardhan, do not bring your bookshop experience here . Even today publishing business is doing well. There are great publishers like Akshara, pustaka prakashana, pallava, aharnishi nd so on. And experience of a father, whose son is a director. Ha ha ha. Your son made three films? Shikari was so stupid. Another one not released. One film was released in multiplexer and ran for two days. You don’t know the market. and tell me whose books have you published? Apart from yours and your father’s. If possible watch Sheshadri film. Do not depress others by your nonsense. I know you are the one who wanted to file a case against Bharath mall for not allowing to take in peanuts. Ufff. I know your reasons for opposing Sheshadri film. Your son’s film was also in the award race and it failed to bag an award:-)

    ಪ್ರತಿಕ್ರಿಯೆ
  10. na.damodara shetty

    ‘bharath stores’nnu mallge seledadduu ide maal culture. adu bittubidi. cinema bagge heluva satya eshtondu maarmikavaagi nammannu naatuttade embudee mukhya. cinema nodi nammolagidda sandehagalannu duuramaadona.
    “elai mall, ninna samskritiyannu(?) ninna olakke thandu thoristhiivi. innaadaruu shettiannu badukalu bidu”

    ಪ್ರತಿಕ್ರಿಯೆ
  11. ಶ್ರೀನಿವಾಸ ಡಿ.ಶೆಟ್ಟಿ

    ದುರಂತಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ಆದರೆ ವ್ಯವಸ್ಥೆಯ ಗೋಜಲಿಗೆ ಒಗ್ಗಿ ಬದುಕಲೇ ಬೇಕು.

    ಪ್ರತಿಕ್ರಿಯೆ
  12. Gubbachchi Sathish

    Ondu olleya pustaka tanna oduganannu taluputadde. hage ondu olleya cinema kuda olleya prekshakanannu taluputtade emba vishwasa nannadu. Sheshadri sir kasta nanage artavaguttade. tumakurinalli cinema bandaga tappade noduttene. ittichige avara “bettada jiva”vannu ille ondu shownalli nodide.

    ಪ್ರತಿಕ್ರಿಯೆ
  13. bharathi

    ಯಾವ ಮಾಲ್ ಸಂಸೃತಿ ಬಂದರೂ ಅಲ್ಲಿ ಹೋಗಿ ನಾವೇ ಗೊತ್ತು ಗುರಿ ಇಲ್ಲದೇ ಎಲ್ಲ ಆರಿಸಿ ಸಾಯುವ ಕಷ್ಟಕ್ಕಿಂತ ನಮ್ಮ ಶೆಟ್ಟಿ ಅಂಗಡಿಗೇ ವಾಪಸ್ ಬಂದೆ ನಾನು …ಆ human touch ಇಲ್ಲದ ವ್ಯಾಪಾರ ಸಖತ್ ಬೋರೋ ಬೋರು …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: