ಶಿಲ್ಪಾ ಜೋಶಿ
ಫೇಸ್ ಬುಕ್ ನಿಂದ ಪರಿಚಯವಾದ ಭಾರತಿ ಅಕ್ಕನ – “ಕಿಚನ್ ಕವಿತೆಗಳು” ಎಲ್ಲ ಕಾಮೆಂಟ್ಸ್ ಎಲ್ಲಕ್ಕೂ ಮೀರಿ ನಿಲ್ಲುತ್ತದೆ ಕವಿತೆಗಳ ಸಾಲುಗಳು
ಎಲ್ಲದ್ರಲ್ಲೂ ಒಂದೊಂದು ನೀತಿ , ಬದುಕುವ ಪಾಠ , ಒಳಮರ್ಮ ಅಡಗಿದೆ.
ನಂಗು ಕಿಚನ್ನಿಗೂ ಮೊದಲಿಂದಾನು ಅಷ್ಟಕಷ್ಟೇ ನನ್ನ ಪ್ರೀತಿಸೋ ಜೀವಗಳಿಗೆ ತಿನ್ನೋದು ಇಷ್ಟ ಅದ್ರಿಂದ ಕಿಚನ್ ಸಹಿಸಿಕೊಳ್ಳೋದು ನಂಗು ಅನಿವಾರ್ಯ
.
ಭಾರತಿಯಕ್ಕನ ಕವಿತೆ ಓದಿದ ನಂತ್ರ ಕಿಚನ್ ನೋಡೋ ದೃಷ್ಠಿನೆ ಬದಲಾಗಬಹುದು
ಕೆಲವು ಸಾಲುಗಳು ಯಾಕೋ ಕಣ್ಣಲ್ಲಿ ನೀರು ತರಿಸಿತು , ಪುನಃ ಪುನಃ ಓದಿದಾಗ ತುಂಬಾ ಆಪ್ತವಾಗೋ ಸಾಲುಗಳು ಹೊಳೆಯುವ ಹೊಸ ಅರ್ಥಗಳು. ಕೆಲವು ಸಾಲುಗಳು ಸಕ್ಕತ್ ಇಷ್ಟ ಆಯಿತು.
ಕವನ ನೋಡಿ :
ಹೆಂಗಸರು ಹೊಂದಾಣಿಕೆಯ ಪಾಠ
ಚಪಾತಿಯಿಂದ ಕಲಿಯುತ್ತಾರೆ
ಹಿಟ್ಟು ಕಡಿಮೆ ಇದ್ದಾಗಲೂ ಕೂಡ
ಸುತ್ತಳತೆ ಕಡಿಮೆಯಾಗದಂತೆ ಲಟ್ಟಿಸಬಹುದು
ಅಯ್ಯೋ ಹಿಟ್ಟು ಕಡಿಮೆಯಾಗಿದೆ ಅಂತ ಹೆಂಗಸಿಗೆ ಗೊತ್ತಾಗಿರತ್ತೆ ಆದ್ರೂ ಹೊಂದಾಣಿಕೆ
ಅಮ್ಮ ನೆನಪಾದ್ಲು. 74 ರ ಇಳಿವಯಸ್ಸಲ್ಲೂ ಅಪಾರ ತಾಳ್ಮೆ ಒಂದೊಂದು ಸಲ 35-40 ಚಪಾತಿ ಮಾಡ್ತಾಳೆ ಅದ್ರಲ್ಲಿ ನಂಗು ನನ್ನ ಮಕ್ಕಳಿಗೂ ಪಾಲಿರುತ್ತೆ , ಸಿಗುವ ಒಂದು ಸಂಡೆ ಅಪರೂಪಕ್ಕೆ ಯಾರಿಗೆ ಎಷ್ಟು ಬೇಕು ಅಂತ ಲೆಕ್ಕ ಹಾಕಿ ಚಪಾತಿ ದೋಸೆ ಮಾಡುವಾಗ ಅಮ್ಮ ಕಾಡುತ್ತಲೇ .. ಅವಳ ತಾಳ್ಮೆ ಸಹನೆ ಎಲ್ಲ ..
ಇನ್ನೊಂದು ಕವನ :
ಕತ್ತರಿಸ ಹೊರಟ ಚಾಕುವಿಗೂ ನಾನು ಅತ್ತತ್ತ
ಎಂದು ಮರುಗುತ್ತದೆ
ಕೊಳೆತ ತರಕಾರಿಯೊಂದು
ಅಬ್ಭಾ ಅದರ ಮನಸ್ಥಿತಿ ಹೇಗಿರ ಬಹುದು ಅಲ್ವ… ಯೌವನ ಜಾರಿದ ಮೇಲೆ ಹೆಣ್ಣಿನ, ಗಂಡಿನ ಮನಸ್ಸು ಹಾಗೆ ಇರಬಹುದೇನೋ …
ನೀನೆಂಬ ದೌರ್ಬಲ್ಯ
ನನ್ನ ಬೆಳಗಿನ ಕಾಪಿಯಂತೆ
ಹೆಚ್ಚಾದರೆ ಎದೆ ಉರಿ
ಬಿಟ್ಟು ಬಿಡೋಣವೆಂದರೆ ಬಧುಕೇ ಅಧುರಿ
ಕೆಲವು ಸಲ ಸಂಬಂಧಗಳು ಹೀಗೇ ಅಲ್ವ, ಸಹಿಸಿಕೊಳ್ಳೋದು ಅನಿವಾರ್ಯವಾಗಿ ಬಿಡುತ್ತೆ. ಒಂದಕ್ಕಿಂತ ಒಂದು ಕವಿತೆಗಳು ಸೂಪರ್
ಇಂಡಕ್ಷನ್ ಒಲೆಯ ಶಾಖ ಹೆಚ್ಚು
ಆಗಾಗ ಸೌಟಿನಿಂದ ತಿರುಗಿಸದಿದ್ದರೆ
ಬೇಗನೆ ತಳ ಹತ್ತಿ ಬಿಡುತ್ತದೆ
ಮಿತಿ ಗೊತ್ತಿಲ್ಲದ ಸಂಬಂಧಗಳು ಹೀಗೆಯೇ
ಕೆಡುತ್ತದೆಂದು ಫ್ರಿಡ್ಜ್ ನಲ್ಲಿ ಪೇರಿಸಿಡುತ್ತೇವೆ
ಕರೆಂಟಿನ ನಷ್ಟ ಲೆಕ್ಕಕ್ಕೆ ತೆಗೆದು ಕೊಳ್ಳದೆ
ಅಪಾತ್ರರಿಗಿತ್ತ ಪ್ರೀತಿಯದು ಅದೇ ಲೆಕ್ಕ
ಜೋಪಾನ ಮಾಡಿದಷ್ಟು ನಷ್ಟದ ಬಾಬತ್ತೇ
ಭಾರತೀ ಎಂಬ ಕೃಷ್ಣ ಹೇಳಿದ ಇದು ಕಿಚನ್ ಭಗವದ್ಗೀತಾ ಉವಾಚ
ಸಿಹಿ ಹೆಚ್ಚಾದರೆ ಹೊಡೆಯಲಿಷ್ಟು ಹುಳಿ
ಖಾರ ಹೆಚ್ಚಾದರೆ ತಗ್ಗಿಸಲಿಷ್ಟು ತೆಂಗು
ಉಪ್ಪು ಹೆಚ್ಚಾದರೆ ನೀರು ಬೆರೆಸಿ ತುಸು ಅಳ್ಳಕ
ಬದುಕಿನ ಪಾಕದಂತೆ , ಟ್ರೈಯಲ್ ಅಂಡ್ ಎರರ್ ಅಷ್ಟೇ
ಆದ್ರೆ… ಆದ್ರೆ…… ನನ್ನ ವೋಟ್ ಮಾತ್ರ ಇದಕ್ಕೆ ….ನಾನು ಹಾಗೆ ಯಾವಾಗ್ಲು ಶಾಪ ಹಾಕ್ತಾ ಇರ್ತೇನೆ
ಶಿಲಾಯುಗದಲ್ಲಿ ಕಲ್ಲು ಕಿಡಿ ಹೊತ್ತಿಸಿದ
ಆ ಪಾಪಿಗೆ ನರಕವೇ ಸಿಕ್ಕಿರಲಿ
ಆವಾ ಅಂದು ತೆಪ್ಪಗಿದ್ದಿದ್ದರೆ
ಇಂದು ಗೆಡ್ಡೆ ಗೆಣಸು ತಿನ್ನುತ್ತಾ ಸುಖದಿಂದಿರಬಹುದಿತ್ತು
ಪುಸ್ತಕ ಕೈಗೆ ಸಿಕ್ಕಾಗಲೇ ಮಂಗನ ಕೈಗೆ ಸಿಕ್ಕ ಮಾಣಿಕ್ಯದ ಹಾಗೆ ಆಗಿತ್ತು ನನ್ನ ಪರಿಸ್ಥಿತಿ. ಎಷ್ಟು ಹೊತ್ತಿಗೆ ಓದುತ್ತೇನೋ ಅಂತ.. ಗಂಡ ಮಕ್ಕಳು ಎಲ್ಲರನ್ನು ಸೇರಿಸಿ ಕೂತು ಓದಿ ಹೇಳಿದೆ ..
ಪ್ರತಿ ಸಲ ಓದಿದಾಗಲೂ ಹೊಸ ಅರ್ಥನೇ ಕೊಡತ್ತೆ … , ನಿಮ್ಮನ್ನು ಬರಹಗಳಿಂದ ಪ್ರೀತಿಸೋ ಜೀವಗಳಲ್ಲಿ ನಾನು ಒಬ್ಬಳು . ನಿಮ್ಮ ಮುಖದ ನಗು ಸದಾ ಬೆಳಗುತ್ತಿರಲಿ. ಹೀಗೆ ನಿಮ್ಮ ಬರಹಗಳ ಮೆರವಣಿಗೆ ಸಾಗುತ್ತಿರಲಿ





ಥ್ಯಾಂಕ್ ಯೂ ಶಿಲ್ಪಾ ❤
Abbabba!!! BHARTHI AKKANA uvaacha sadaakaala arthagarbitavagiruttade .Thank you SHILPA, kitchen kavite tunukugallannu vivarisiddakke.
ಥ್ಯಾಂಕ್ ಯೂ ರೇಖಾ
“ಶಿಲಾಯುಗದಲ್ಲಿ ಕಲ್ಲು ಕಿಡಿ ಹೊತ್ತಿಸಿದ
ಆ ಪಾಪಿಗೆ ನರಕವೇ ಸಿಕ್ಕಿರಲಿ
ಆವಾ ಅಂದು ತೆಪ್ಪಗಿದ್ದಿದ್ದರೆ
ಇಂದು ಗೆಡ್ಡೆ ಗೆಣಸು ತಿನ್ನುತ್ತಾ ಸುಖದಿಂದಿರಬಹುದಿತ್ತು” ನನ್ನ ಓಟೂ ಇದಕ್ಕೇ ಶಿಲ್ಪಾ… ಲವ್ ಯು ಭಾರತೀ
ಹಹಹಹ ಥ್ಯಾಂಕ್ಸ್ ಪ್ರತಿಭಾ