ಭರತ ಮುನಿಯ ಬಗ್ಗೆ ಹೀಗೊಂದು ಪುಸ್ತಕ

ಸಾರಸ್ವತಲೋಕಕ್ಕೆ ಹೊಸ ಕೊಡುಗೆ- ‘ಮಹಾಮುನಿ ಭರತ’ ನೂತನ ಪುಸ್ತಕ

– ‘ವಿಪ್ರಭಾ’, ಪುತ್ತೂರು

ಭಾರತೀಯ ಪರಂಪರೆಯ 60 ಮಹಾಪುರುಷರ ಜೀವನಕಥನವನ್ನು ಒಳಗೊಂಡ 60 ಕನ್ನಡ ಪುಸ್ತಕಗಳ ಲೋಕಾರ್ಪಣೆಯೆಂಬುದೇ ವಿಶೇಷ ಸಂಗತಿ. ಅದರಲ್ಲೂ ಪ್ರಕಾಶನವೊಂದು ಏಕಕಾಲದಲ್ಲಿ, ನಿರಂತರವಾಗಿ, ಅದೂ 60 ದಿನಗಳ ಕಾಲ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಾ ಭಾರತೀಯ ಗುರು-ಮಹಾಪುರುಷರ ಕುರಿತು ದಿನಕ್ಕೊಂದು ಪುಸ್ತಕದಂತೆ ಬಿಡುಗಡೆ ಮಾಡುತ್ತಿರುವುದು ಸಾಹಿತ್ಯ-ಪ್ರಕಾಶನ ಕ್ಷೇತ್ರದಲ್ಲೇ ಪ್ರಥಮ ಅಲ್ಲದೆ ಸಮಾಜದ 25-30ಸಾವಿರ ಮನೆಗಳಿಗೆ ಉಚಿತವಾಗಿ ಪುಸ್ತಕ ನೀಡಲಾಗುತ್ತಿರುವುದು ಇತಿಹಾಸದಲ್ಲೊಂದು ಮೈಲುಗಲ್ಲು. ಬೆಂಗಳೂರಿನ ಶ್ರೀ ಭಾರತೀ ಪ್ರಕಾಶನ ಈ ಹೆಗ್ಗಳಿಕ್ಜೆಗೆ ಪಾತ್ರವಾಗಿದ್ದು; ಈ ಪುಸ್ತಕಯಾತ್ರೆಯು ‘ಲಿಮ್ಕಾ ಬುಕ್ ಆಫ್ ರೆಕಾಡರ್್’ಗೆ ಸೇರಲಿದೆ ಎಂಬುದು ಕನ್ನಡ ಸಾಹಿತ್ಯಲೋಕದ ಪಾಲಿಗೆ ಹೆಮ್ಮೆ ಪಡಬೇಕಾದ ಅಂಶ.

ಹೀಗೆ ಜುಲೈ 12, 2014ರಿಂದ ಪ್ರಾರಂಭವಾದ ಈ ಪಯಣ ಸೆಪ್ಟೆಂಬರ್ 9 ರವರೆಗೆ ಪ್ರತಿನಿತ್ಯವೂ ಜರುಗುತ್ತಿದ್ದು; ಭರತಮುನಿಯ ಕುರಿತಾಗಿ ‘ಮಹಾಮುನಿ ಭರತ’ ಎಂಬ ಹೆಸರಿನ ಪುಸ್ತಕವು 23 ಬುಧವಾರ, 2014ರಂದು ಅನಾವರಣಗೊಂಡಿತು. ಸಾರಸ್ವತಲೋಕಕ್ಕೆ ಸೇರ್ಪಡೆಯಾದ ಇತ್ತೀಚಿನ ಕೃತಿಗಳ ಪೈಕಿ ‘ಮಹಾಮುನಿ ಭರತ’ – ಉತ್ತಮ ಕೊಡುಗೆಯಾಗಿದ್ದು ನಾಟ್ಯ-ನೃತ್ಯಕ್ಷೇತ್ರದಲ್ಲಿ ಈವರೆಗೆ ಇದ್ದ ಭರತಮುನಿಯ ಕುರಿತ ಪುಸ್ತಕಗಳ ಕೊರತೆಯನ್ನು ತುಂಬಿದೆಯೆಂದೇ ಹೇಳಬಹುದು. ಸಂಶೋಧಕಿ, ಭರತನಾಟ್ಯ-ಯಕ್ಷಗಾನ ಕಲಾವಿದೆ, ಸಂಘಟಕಿ, ‘ರಾಮಕಥಾ’ ರೂಪಕಕಲಾವಿದೆ, ಮಡಿಕೇರಿಯ ‘ನೂಪುರ ಭ್ರಮರಿ’ ನೃತ್ಯಸಂಶೋಧನ ನಿಯತಕಾಲಿಕೆಯ ಸಂಪಾದಕಿ ಮತ್ತು ನೂಪುರ ಭ್ರಮರಿ ಟ್ರಸ್ಟ್ನ ಅಧ್ಯಕ್ಷೆ ವಿದುಷಿ ಮನೋರಮಾ ಬಿ.ಎನ್ ಅವರ ಲೇಖನಿಯಲ್ಲರಳಿದೆ ಈ ಕೃತಿ. ಈ ಕೃತಿಯ ಬೆಲೆ – 80 ರೂ. ಪುಟ- 98.
ಮನೋರಮಾ ಬಿ.ಎನ್ ಅವರು ಲೇಖಕರಾಗಿ, ಪುಸ್ತಕಪ್ರಕಾಶಕಿಯಾಗಿ, ಸಂಘಟಕಿ, ಸಂಯೋಜಕಿಯಾಗಿ ಕಲಾಕ್ಷೇತ್ರದಲ್ಲಿ ಖ್ಯಾತರು. ಬಾಲ್ಯದಿಂದಲೂ ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿ, ವಿವಿಧ ಕ್ಷೇತ್ರದ ಅಧ್ಯಯನಗಳಲ್ಲಿ ಬಹುಮುಖ ಪ್ರತಿಭಾವಂತೆಯಾಗಿ ಮನ್ನಣೆ, ಪ್ರಶಸ್ತಿ-ಪುರಸ್ಕಾರ ಪಡೆದವರು. ಸಮೂಹ ಸಂವಹನ ಪತ್ರಿಕೋದ್ಯಮ ಹಾಗೂ ಭರತನಾಟ್ಯ-ಇವೆರಡರಲ್ಲೂ ಸ್ನಾತಕೋತ್ತರ ಪದವಿ ಪಡೆದು ಪಿಎಚ್ಡಿ ಉನ್ನತ ವ್ಯಾಸಂಗದಲ್ಲಿ ಗಮ್ಯೋನ್ಮುಖರು. ಮನೋರಮಾ ಅವರು ಕನ್ನಡದ ಮೊತ್ತಮೊದಲ ಶತಾವಧಾನದಲ್ಲಿ ಪೃಚ್ಛಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ‘ಅಕ್ಕ’ ಕನ್ನಡ ಕೂಟಗಳ ಜಾಗತಿಕ ಪ್ರಬಂಧ ಸ್ಪಧರ್ೆಯಲ್ಲಿ 2008ರಲ್ಲಿ ಪ್ರಥಮ ಬಹುಮಾನಕ್ಕೆ ಪಾತ್ರರಾಗಿದ್ದು ಅಖಿಲ ಕನರ್ಾಟಕ ಹವ್ಯಕ ಮಹಾಸಭಾದಿಂದ ವಿದ್ವತ್ ಸಮ್ಮಾನ್ಕ್ಕೆ 2010ರಲ್ಲಿ ಪಡೆದಿದ್ದಾರೆ. ಕನರ್ಾಟಕ ಸಕರ್ಾರಕ್ಕೆ ಸಲ್ಲಿಸಲಾದ ಸಿನೆಮಾಗಳ ಸಬ್ಸಿಡಿ ಕುರಿತ ಅಧ್ಯಯನಕ್ಕೆ ಸಂಶೋಧನ ಸಹಾಯಕಿಯಾಗಿ ದುಡಿದಿದ್ದಾರೆ. ಪ್ರಸ್ತುತ ನೂಪುರ ಭ್ರಮರಿ ನೃತ್ಯ ಸಂಶೋಧನಾ ವಿಭಾಗ ಮುಖ್ಯಸ್ಥೆ; ರಾಜ್ಯ(2012) ಮತ್ತು ರಾಷ್ಟ್ರೀಯ(2013) ಪ್ರಥಮ ನೃತ್ಯ ಸಂಶೋಧನ ಸಮ್ಮೇಳನದ ಪ್ರಧಾನ ಸಂಚಾಲಕಿ; ಭಾರತದ ಪ್ರಥಮ ನೃತ್ಯ ಸಂಶೋಧನ ನಿಯತಕಾಲಿಕೆ-‘ನೂಪುರಾಗಮ’ದ ಸಂಪಾದಕಿ. ಇವರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ ‘ನೂಪುರ ಭ್ರಮರಿ’ ಭಾರತದ ಪ್ರಸಕ್ತ ಕಲಾಮಾಧ್ಯಮದಲ್ಲಿ ಪ್ರತಿಷ್ಠಿತ ಐಎಸ್ಎಸ್ಎನ್ ನೋಂದಣಿಯನ್ನು ಪಡೆದು ಕ್ರಮವತ್ತಾಗಿ ಪ್ರಕಟಗೊಳ್ಳುತ್ತಿರುವ ಏಕೈಕ ಕಲಾಸಂಶೋಧನ ನಿಯತಕಾಲಿಕೆಯೆಂದು ಪ್ರಸಿದ್ಧಿ ಪಡೆದಿದೆ.
ಮನೋರಮಾ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಗಾಗಿ ‘ಕನರ್ಾಟಕದ ನಟುವಾಂಗ ಪರಂಪರೆಯ’ ಕುರಿತು 250 ಪುಟಗಳ ಸಂಶೋಧನೆಯನ್ನು ಕರ್ನಾಟಕದಲ್ಲೇ ಮೊದಲ ಬಾರಿಗೆ ಸ್ವತಃ ಸಿದ್ಧಪಡಿಸಿ ಸಲ್ಲಿಸಿದವರು.
ಮನೋರಮಾ ಅವರು ಬರೆದ ‘ಭವ್ಯ ಇತಿಹಾಸದ ಶ್ರೀ ಓಂಕಾರೇಶ್ವರ ದೇವಾಲಯ’ ಎಂಬ ಸ್ಥಳಪುರಾಣ-ಐತಿಹಾಸಿಕ ನೆಲೆಯನ್ನು ವಿವೇಚಿಸುವ ಪುಸ್ತಕ (2004); ಹಸ್ತ ಮುದ್ರೆಗಳ ಸಾಕಲ್ಯದೃಷ್ಟಿಯ ಬಹುಆಯಾಮದ ಬಹುಶಿಸ್ತೀಯ ಅಧ್ಯಯನಕೃತಿ ‘ಮುದ್ರಾರ್ಣವ'(2010); ಭರತನಾಟ್ಯದ ಇತಿಹಾಸ, ಪರಂಪರೆ, ಪದ್ಧತಿಗಳನ್ನು ವಿವೇಚಿಸುವ ‘ನೃತ್ಯಮಾರ್ಗಮುಕುರ'(2011) ; ನೃತ್ಯ ಸಂಶೋಧನೆಯ ಸಂಪಾದಿತ ಕೃತಿ ‘ನೂಪುರಾಗಮ’ (2013)ದ ಅನಂತರದಲ್ಲಿ ಅನಾವರಣಗೊಂಡ ಐದನೇಯ ಕೃತಿ ‘ಮಹಾಮುನಿ ಭರತ’ ಆಗಿದೆ. ಅಷ್ಟೇ ಅಲ್ಲದೆ, ಈ ಕೃತಿಯ ಪೂರ್ವಭಾವಿ ಪ್ರಯತ್ನಗಳಲ್ಲೊಂದಾಗಿ ಮನೋರಮಾ ಅವರು; ಇತ್ತೀಚೆಗಷ್ಟೇ ಪುತ್ತೂರಿನಲ್ಲಿ ಸಮಾಪನಗೊಂಡ ಕರಾವಳಿಯ ಪಾಲಿಗೆ ವಿನೂತನವಾದ ನಾಟ್ಯಶಾಸ್ತ್ರದ ಕುರಿತ ‘ನಾಟ್ಯಚಿಂತನ'(2014) ಎಂಬ ಕಾಯರ್ಾಗಾರಕ್ಕೆ ರೂವಾರಿಗಳಾಗಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಈ ಸಂದರ್ಭ ಇವರ ರಚನೆಯಲ್ಲಿ ಬಂದ ನಾಟ್ಯಶಾಸ್ತ್ರದ ಕಥೆಗಳ ಕುರಿತ ಕಾವ್ಯವು ಕನ್ನಡದಲ್ಲಿ ಈವರೆಗೆ ಇದ್ದ ನಾಟ್ಯಶಾಸ್ತ್ರಸಂಬಂಧ ನೃತ್ಯಸಾಹಿತ್ಯದ ಕೊರತೆಯನ್ನು ನೀಗಿಸಿರುವುದು ಶ್ಲಾಘನೀಯ ಸಂಗತಿ. ಪತ್ರಿಕೋದ್ಯಮ-ಸಮೂಹಸಂವಹನ ಮತ್ತು ಭರತನಾಟ್ಯವೆರಡೂ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಮನೋರಮಾ- ಇವರ ಡಾಕ್ಟರೇಟ್ ಪ್ರಬಂಧಕ್ಕೆ ಪೂರಕವಾಗಿ ಸಂಯೋಜಿತವಾದ ಸಾಮಾಜಿಕ ಸಂವಹನ ಉದ್ದೇಶಿತ ಭರತನಾಟ್ಯ ಪ್ರಯೋಗದ ಸಾಹಿತ್ಯಗಳು ಕನ್ನಡದಲ್ಲೇ ರಚಿತವಾಗಿ ಪ್ರದರ್ಶನ, ಪ್ರಶಂಸೆ ಕಂಡಿವೆ. ಅವುಗಳ ಪೈಕಿ ‘ಬಾಲಾಲಾಪ’ವೆಂಬ ಮಕ್ಕಳ ಶಿಕ್ಷಣವನ್ನಾಧರಿಸಿದ ವರ್ಣವೆಂಬ ನೃತ್ಯಬಂಧದ ಪ್ರಯೋಗ ಚಿಂತನೆಯೂ 2013ರಲ್ಲಿ ಜರುಗಿ ಇಡಿಯ ಕನರ್ಾಟಕದ ಕಲಾಮಾಧ್ಯಮಕ್ಕೇ ಹೊಸ ಮಾದರಿಯ ಚಿಂತನೆ ಮತ್ತು ಕೊಡುಗೆಯನ್ನು ಇತ್ತಿದೆ. ಇದು ಭರತಮಾರ್ಗದಲ್ಲಿ ನಡೆಯುತ್ತಾ ಪ್ರಸ್ತುತ ಸಾಮಾಜಿಕ ಜನಜೀವನಕ್ಕೆ ಸ್ಪಂದಿಸಬೇಕಾದ ಅಗತ್ಯವನ್ನು ರಸೌಚಿತ್ಯ ನೆಲೆಯಲ್ಲಿ ಸಾಧಿಸುವತ್ತ ಗಮನ ಹರಿಸಿದೆ. ಇದೀಗ ಬಂದಿರುವ ‘ಮಹಾಮುನಿ ಭರತ’ ಕೃತಿಯು ಭರತನ ಕುರಿತಂತೆ ಬರೆಯಲ್ಪಟ್ಟ ಕನ್ನಡದ ಕೆಲವೇ ಕೆಲವು ಅಮೂಲ್ಯ ಕೃತಿಗಳ ಸಾಲಿನಲ್ಲಿ ಮೇಲ್ಪಂಕ್ತಿಯನ್ನು ಪಡೆದಿದ್ದು; ವಿಶ್ವದಾಖಲೆಗೆ ಸಲ್ಲಲ್ಪಡುತ್ತಿರುವ ಪುಸ್ತಕಸರಣಿಯ ಗೌರವದಲ್ಲಿ ಒಂದಾಗಿದ್ದಾರೆ.
ಮನೋರಮಾ ಬಿ.ಎನ್ ಅವರು ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಪುರೋಹಿತರಾದ ವೇ.ಮೂ.ಬಿ.ಜಿ.ನಾರಾಯಣ ಭಟ್ ಮತ್ತು ಬಿ.ಎನ್ ಸಾವಿತ್ರಿ ದಂಪತಿಗಳ ಪುತ್ರಿ. ಫೆಡರಲ್ ಬ್ಯಾಂಕ್ ಶಾಖೆಯಲ್ಲಿ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿರುವ ವಿಷ್ಣುಪ್ರಸಾದ್ ಎನ್ ಅವರ ಪತ್ನಿ.
ಪುಸ್ತಕದ ಕುರಿತು
ಭರತಮುನಿ ಕೇವಲ ಒಬ್ಬ ಲಾಕ್ಷಣಿಕನಲ್ಲ, ಶಾಸ್ತ್ರಕಾರನಾಗಿರುವಲ್ಲಿಗೋ ಅಥವಾ ಸಮನ್ವಯಕಾರನಾಗುವಲ್ಲಿಗೋ ಆತನ ಕರ್ತವ್ಯ ಮುಗಿದಿಲ್ಲವೆಂದು ಅರ್ಥವಾಗಲಿಕ್ಕಾದರೂ ಒಮ್ಮೆ ಆತನ ನಾಟ್ಯಶಾಸ್ತ್ರವೆಂಬ ಕೃತಿಯೊಳಗೆ ಇಣುಕಿ ನೋಡಬೇಕು. ಕಾರಣ, ಭರತಮುನಿಯನ್ನು ಅರಿಯಲು ನಾಟ್ಯಶಾಸ್ತ್ರ-ಮತ್ತದರ ಭಾಷ್ಯಗಳನ್ನುಳಿದು ಬೇರಾವುದೇ ಆಕರ ಇಲ್ಲ. ಆದರೆ ಇಂತಹ ಅನುಕೂಲ ಕನ್ನಡದಲ್ಲಿ ಅಷ್ಟಾಗಿ ಲಭ್ಯವಿಲ್ಲ. ಜೊತೆಗೆೆ ನೃತ್ಯಕ್ಷೇತ್ರವನ್ನೂ ಒಳಗೊಂಡಂತೆ ಕನ್ನಡದ ಸಮಗ್ರ ಸಾಹಿತ್ಯ ವಾಙ್ಮಯದಲ್ಲಿ ಅದರಲ್ಲೂ ಇತ್ತೀಚೆಗಿನ ದಶಕಗಳಲ್ಲಿ ಭರತನ ಬಗ್ಗೆ ಸಮಗ್ರ ಪರಿಚಯವನ್ನೀಯುವ ಕೃತಿಗಳು ಬಂದದ್ದು ವಿರಳಕ್ಕೇ ವಿರಳ. ಭರತಮುನಿ ವಿರಚಿತ ನಾಟ್ಯಶಾಸ್ತ್ರವು ಕೂಡಾ ಎಲ್ಲರಿಗೂ ತಲುಪಬಲ್ಲಂತಹ ರೀತಿಯಲ್ಲಿ ಸಮ್ಯಕ್ ದರ್ಶನ ನೀಡುವ ಮತ್ತು ಸಾಮಾನ್ಯ ಓದುಗರಿಗೂ ಕಡಿಮೆ ದರದಲ್ಲಿ ದೊರೆಯುವ ಪ್ರಕಟಣೆಯಾಗದೆ ಕಾಲವದೆಷ್ಟೋ ಕಳೆದುಹೋಗಿದೆ. ನಾಟ್ಯಶಾಸ್ತ್ರದ ಬೃಹತ್ ಸಂಪುಟಗಳಲ್ಲಿ ಭರತನ ಕುರಿತು ವಿವರಗಳು ದೊರೆಯುತ್ತವಾದರೂ; ಬಹುಮೊತ್ತದ ಬೆಲೆಯಿತ್ತು, ಆಯಾಯ ಭಾಷೆಯಲ್ಲಿ ಕೊಂಚಹಿಡಿತವನ್ನಾದರೂ ಸಾಧಿಸಿ, ಓದುವ ತಾಳ್ಮೆಗೆ ಜನ ಮನ ಮಾಡುವುದಿಲ್ಲ; ಅಲ್ಲಲ್ಲಿ ಮಿಂಚಿ ಮರೆಯಾಗುವ ವಿದ್ವತ್ಪೂರ್ಣ ಉಪನ್ಯಾಸಗಳ ಇರವು-ಸೆಳೆವು ಸರ್ವರಿಗೂ ಸಕಾಲಕ್ಕೆ, ಅರ್ಥಗಭರ್ಿತವಾಗಿ ದೊರೆಯುವುದಿಲ್ಲ.
ಅಷ್ಟೇಕೆ, ಪಾಶ್ಚಾತ್ಯ ಮೀಮಾಂಸೆಗಳಿಗೆ ತಮ್ಮ ಭಾರತೀಯ ಪ್ರಜ್ಞೆಯನ್ನು ಮಾರಿಕೊಂಡು ಏನೇನೋ ದ್ವಂದ್ವಗಳನ್ನು ಕಲ್ಪಿಸುತ್ತಾ, ಹಲವು ವಿದ್ವಾಂಸರು, ಸಂಶೋಧಕರೂ ಗೊಂದಲಕ್ಕೀಡಾಗುತ್ತಿದ್ದಾರೆ. ಭರತನ ಕಾಲ-ದೇಶ-ವ್ಯಾಪ್ತಿ-ಕೃತಿಯ ಸಂಬಂಧವಾಗಿ ಭಾರತೀಯ ಸಂಸ್ಕಾರದಿಂದ ತೀರಾ ಹೊರಗುಳಿದು ; ಅಲ್ಲೇ ತಮ್ಮ ತಮ್ಮ ಹಿತಾಸಕ್ತಿಯ ಚಚರ್ೆಗಳಿಗೆ ಮೇಲ್ಪಂಕ್ತಿಯ ಹಾಸಿಗೆಯನ್ನು ಹಾಸಿಕೊಂಡು ಭರತಮಾರ್ಗವನ್ನು ಬೀದಿಗೆ ಎಳೆದು ತಂದು ನಿಲ್ಲಿಸಿದ್ದೂ ಇದೆ. ಹೀಗಾಗಿ ಭರತನ ಬಗೆಗೆ ಬರೆಯುವುದೆಂದರೆ ಅದು ದುಸ್ತರ, ಗೊಂದಲಗಳ ಗೂಡು, ಸವಾಲಿನ ಸರಕು ಎಂದೇ ಸಾಹಿತ್ಯ-ನೃತ್ಯಕ್ಷೇತ್ರದಲ್ಲಿ ಗಣಿತವಾಗಿದೆ.
ಹಾಗಾಗಿ ಭರತನ ಬಗ್ಗೆ ತಿಳಿಯಬೇಕೆಂದಿರುವ ಹಲವು ಆಸಕ್ತರಿಗೆ ಅವಕಾಶಗಳು ದೊರೆಯದೆ ; ಭರತನ ಬಗೆಗೆ ಸಾಕಷ್ಟು ಪ್ರಶ್ನೆಗಳು ಒಗಟು ಒಗಟಾಗಿಯೇ ಉಳಿದಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ದುರ್ಲಭವೆನಿಸುವ ಭರತಮುನಿಯ ಸಂಕ್ಷಿಪ್ತ ಪರಿಚಯ-ಪ್ರತಿಭೆಗಳ ಕುರಿತಂತೆ ಕಲಾವಿದರಿಗೆ-ವಿದ್ಯಾಥರ್ಿಗಳಿಗೆ- ಅಧ್ಯಯನಾಸಕ್ತರಿಗೆ- ಸಹೃದಯ ಓದುಗರಿಗೆೆ ಏಕಕಾಲಕ್ಕೆ ಆಪ್ತವೆನಿಸುವ ಸಮಗ್ರ ಕೃತಿಯ ಅಗತ್ಯ ಇಂದಿಗೆ ಖಂಡಿತಾ ಇದೆ. ಅದನ್ನು ಶ್ರೀಮತಿ ಮನೋರಮಾ ಅವರು ‘ಮಹಾಮುನಿ ಭರತ’ ಎಂಬ ಕೃತಿಯ ಮೂಲಕ ಸಂಕ್ಷಿಪ್ತವಾಗಿ, ಓದಲು ಅನುಕೂಲವಾಗುವಂತೆ ಸರಳಮಾದರಿಯಲ್ಲಿ ನೀಡುತ್ತಾ ನೆರವೇರಿಸಿದ್ದಾರೆ. ಹಿರಿಯ ವಿದ್ವಾಂಸ ಡಾ.ಕೆ.ಎಲ್. ಶಂಕರನಾರಾಯಣ ಜೋಯಿಸ್ ಅವರು ಭಾರತೀಯ ಗುರುಪರಂಪರೆಯ ಕುರಿತು ಬರೆದಿರುವ ಮುನ್ನುಡಿ ಇಡಿಯ ಪುಸ್ತಕಕ್ಕೆ ಶೋಭೆಯನ್ನಿತ್ತಿದೆ.
ಈ ಕೃತಿಯಲ್ಲಿ ಭರತನೆಂದರೆ ಯಾರು? ಯಾವ ಕಾಲದವನು? ಎಲ್ಲಿ ಬಾಳಿ ಬದುಕಿದವನು? ಅವನನ್ನು ಅರಿಯುವ ಬಗೆ ಹೇಗೆ? ಅವನ ಹಿಂದಿನ ಪರಂಪರೆ ಹೇಗಿತ್ತು? ಸಮಕಾಲೀನರು ಯಾರು? ಅವನ ಗುರುತ್ವ, ಸಾರ್ವಕಾಲೀನ ಪ್ರಜ್ಞೆಗೆ ಇರುವ ಸಾಕ್ಷಿಗಳು ಯಾವುವು? – ಎಂಬಂತಹ ಹಲವು ಕಾಲಗಳಿಂದ ಚಾಲ್ತಿಯಲ್ಲಿರುವ ವಾದ-ವಾಗ್ವಾದದ ಚಚರ್ೆ, ನಿರ್ಣಯಗಳಿಂದ ಮೊದಲ್ಗೊಂಡು ಭರತನ ನಾಟ್ಯಶಾಸ್ತ್ರದ ಮುಖ್ಯ ಅಂಶ, ಸೂಕ್ತಿ-ಉಕ್ತಿಗಳು ಯಾವುವು? ನಾಟ್ಯಶಾಸ್ತ್ರದ ರಚನೆಯ ದಿಕ್ಕು-ದಿಶೆ-ಲಕ್ಷಗಳು ಹೇಗಿವೆ? ನಾಟ್ಯಶಾಸ್ತ್ರದ ಅಧ್ಯಾಯಸಂಕ್ಷೇಪ ಮತ್ತು ಅವುಗಳ ಮಹತ್ತ್ವ, ವ್ಯಾಖ್ಯಾನ ಪರಂಪರೆ ಸಾಗಿಬಂದ ದಾರಿ, ನಾಟ್ಯಶಾಸ್ತ್ರ ಮತ್ತು ಭರತರು ಹೇಗೆ ಪ್ರಸ್ತುತರಾಗುತ್ತಾರೆ? ಆಧುನಿಕ ಕಾಲದಲ್ಲಿ ನಾಟ್ಯಶಾಸ್ತ್ರದ ಸಂಪಾದನೆ ಹೇಗೆ-ಯಾರಿಂದ ನಡೆಯಿತು? ನಾಟ್ಯಶಾಸ್ತ್ರದ ಆವೃತ್ತಿಗಳ ನೆಲೆ ಹೇಗಿದೆ? ಇಂದಿನ ನಾಟ್ಯಪದ್ಧತಿಗೂ ಭರತನ ನಾಟ್ಯಶಾಸ್ತ್ರಕ್ಕೂ ಇರುವ ಸಂಬಂಧ, ವ್ಯತ್ಯಾಸ-ಹೋಲಿಕೆಗಳು ಯಾವುವು? ಭರತಮತಕ್ಕೆ ಅನ್ವಯಿಸಿದರೆ ಇಂದಿನ ಸಾಂಸ್ಕೃತಿಕ ಪರಂಪರೆ ಹೇಗಿದೆ? ಭರತಮಾರ್ಗದಿಂದ ಕಲಿಯಬೇಕಾದದ್ದು- ಅನುಸರಿಸಬೇಕಾದದ್ದು ಏನು? ಭರತನ ಹಾದಿಯಲ್ಲಿ ಇತ್ತೀಚೆಗಿನ ದಶಕಗಳಲ್ಲಿ ಜರುಗಿದ ಉತ್ತಮ ಸಂಶೋಧನೆಗಳು ಯಾವುವು? ಅವುಗಳ ವೈಶಿಷ್ಟ್ಯತೆ ಏನು? ಭರತನ ಬಗೆಗೆ ಇರುವ ಸಂದೇಹ-ಆರೋಪಗಳು ಯಾವುವು? ವಿದ್ವಾಂಸರ ಅಭಿಪ್ರಾಯವೇನು?… ಹೀಗೆ ಭೂತ-ವರ್ತಮಾನ-ಭವಿಷ್ಯತ್ತಿನ ಸಮಗ್ರ ನೆಲೆಯಲ್ಲಿ ಈಗಾಗಲೇ ಕಾಡುತ್ತಿರುವ ಹತ್ತು ಹಲವು ಪ್ರಶ್ನೆಗಳಿಗೆ ಅಧ್ಯಯನ ನಡೆಸಿ ಉತ್ತರಗಳನ್ನು ಶೋಧಮಾರ್ಗದಲ್ಲಿ ಸಮರ್ಪಕವಾಗಿ ಕಂಡುಕೊಂಡು ಯುಕ್ತಮಾರ್ಗದಲ್ಲಿ ಪ್ರತಿಪಾದಿಸಲಾಗಿದೆ. ಜೊತೆಗೆ ಅಧ್ಯಯನವೊಂದನ್ನು ತೀರಾ ಶುಷ್ಕವಾಗಿ ಬರೆಯುವ ಗೋಜಿಗೆ ಹೋಗದೆ; ಯಾವುದೇ ಓದುಗರಿಗೆ ಸರಳವಾಗಿ, ಸಂಕ್ಷಿಪ್ತವಾಗಿ ಓದಿಸಿಕೊಂಡು ಹೋಗುವಂತೆ ಮಾಡುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಉತ್ತಮಕೃತಿಗೆ ಇರಬೇಕಾದ ಎಲ್ಲ ಸಲಕ್ಷಣಗಳೂ ಇದಕ್ಕಿವೆ ಎಂಬುದು ಗಮನಾರ್ಹ ಅಂಶ. ಈ ನೆಲೆಯಲ್ಲಿ ಭರತನಂತಹ ಅಸಾಮಾನ್ಯ ವ್ಯಕ್ತಿ ಮತ್ತು ನಾಟ್ಯಶಾಸ್ತ್ರದಂತಹ ಬೃಹತ್ ವಿಶ್ವಕೋಶವನ್ನು ಏಕಕಾಲಕ್ಕೆ ಸಮಗ್ರವಾಗಿ, ಅಂಗೈಯಗಲಕ್ಕೆ ತಕ್ಕಂತೆ ನೀಡಿದ ಲೇಖಿಕೆ ಮತ್ತು ಪ್ರಕಾಶನ ಅಭಿನಂದನಾರ್ಹರು.
ಪುಸ್ತಕಗಳಿಗೆ ಶ್ರೀ ಭಾರತೀ ಪ್ರಕಾಶನದ ಅನೂರಾಧಾ ಪಾರ್ವತೀ ಬೆಂಗಳೂರು (ಮೊಬೈಲ್: 9880455776) ಇವರನ್ನು ಸಂಪರ್ಕಿಸಬಹುದು.
 

‍ಲೇಖಕರು G

August 5, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: