ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ಲ್ಯಾಕ್ ಕಾಮಿಡಿ ‘ಚದುರಂಗ ಮತ್ತು ಕತ್ತೆ’

ಪಂಚಮುಖಿ ನಟರ ಸಮೂಹ ಬೆಂಗಳೂರು ತಂಡ ಪ್ರಸ್ತುತಪಡಿಸುವ ನಾಟಕ ಚದುರಂಗ ಮತ್ತು ಕತ್ತೆ.

ಮೂಲ ಮರಾಠಿ
ನಾಟಕ ರಚನೆ ಚಂ ಪ್ರ ದೇಶಪಾಂಡೆ
ಕನ್ನಡಕ್ಕೆ ಡಿ ಎಸ್ ಚೌಗಲೆ 
ನಿರ್ದೇಶನ ಅಭಿಮನ್ಯು ಭೂಪತಿ 
ನಿರ್ವಹಣೆ ಮಧುಸೂದನ್ ಕೆ ಎಸ್ 

ಏಪ್ರಿಲ್  27th ಬುಧುವಾರ   2022 ಸಂಜೆ 7.30 ಕ್ಕೆ ರಂಗಶಂಕರದಲ್ಲಿ ನಾಟಕವನ್ನು ಪ್ರಸ್ತುತ ಪಡಿಸುತ್ತಿದ್ದೇವೆ.
ಟಿಕೆಟ್ ಗಳು Bookmyshow ಟೆಲಿ ಬುಕ್ಕಿಂಗ್ ಮುಖಾಂತರ ಮಾಡಬಹುದು ಸಂಪರ್ಕಿಸಬೇಕಾದ ಸಂಖ್ಯೆ 9916733461. Tickets 150/-.

ನಾಟಕದ ಬಗ್ಗೆ 
‘ಚದುರಂಗ ಮತ್ತು ಕತ್ತೆ’ 
ಇದೊಂದು ಮನೋವಿಶ್ಲೇಷಣಾತ್ಮಕ ನಾಟಕ. ಸದಾ ಕಾಂಟ್ರಾಡಿಕ್ಷನ್ ನಲ್ಲಿಯೇ ಬಾಳುವ ಮನುಷ್ಯ ಮುಖವಾಡ ಧರಿಸಿ  ಢೋಂಗಿತನ ಪ್ರದರ್ಶಿಸುತ್ತಿರುತ್ತಾನೆ. ತನ್ನ ಅಸ್ತಿತ್ವವನ್ನು ಪದೇಪದೆ ಒರೆಗೆ ಹಚ್ಚುವುದರ ಜೊತೆಗೆ ತನ್ನೊಳಗಿನ ಮನದ ಸುಪ್ತ ಭಾವನೆಗಳಿಗೆ ಆಗಾಗ ಎಚ್ಚರ ತಂದು, ಹೊರಹಾಕುವುದನ್ನು ಮಾಡುತ್ತಿರುತ್ತಾನೆ. ಅಲ್ಲೂ ಸಹ ಒಂದು ಅಸಂಗತತೆ ಇರುತ್ತದೆ.ಮನೋರಂಗದ  ಒಳ ತೋಟಿಗಳನ್ನು  ಬಿಚ್ಚಿಡುವಲ್ಲಿ ಪಾತ್ರಗಳು ನಡೆಸುವ ಸಂವಾದ ಸಹಜರೂಪದಲ್ಲಿ ಹರಿಯುತ್ತದೆ. ಪ್ರಸ್ತುತ ನಾಟಕ ಬ್ಲ್ಯಾಕ್ ಕಾಮಿಡಿ ಪ್ರಕಾರದಲ್ಲಿ ರೂಪಗೊಂಡಿದೆ. 

‍ಲೇಖಕರು Admin

25 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading