‘ಚಂದಿನ’- ಅವಧಿಯ ಖಾಯಂ ಓದುಗರು. ಅಪಾರ ಪ್ರೀತಿಯಿಂದ ನಮ್ಮ ಬರಹಗಳಿಗೆ ಪ್ರತಿಕ್ರಿಯಿಸುತ್ತಾರೆ. ಕವಿತೆ ಇವರನ್ನು ಸೆಳೆದಿದೆ. ಹಾಗಾಗಿ ತಮ್ಮ ಭಾವನೆಗಳಿಗೆ ವೇದಿಕೆ ಒದಗಿಸಲು ‘ಕೂಗು’ ಬ್ಲಾಗ್ ರೂಪಿಸಿದ್ದಾರೆ. ಹತ್ತು ಹಲವು ವಿಷಯಗಳ ಸುತ್ತ ಇವರ ಕವನಗಳು ಗಿರಕಿ ಹೊಡೆಯುತ್ತವೆ. ಈ ಬಾರಿ ಕನ್ನಡದ ಬ್ಲಾಗ್ ಗಳನ್ನೇ ಆಧರಿಸಿ ಕವಿತೆ ರಚಿಸಿದ್ದಾರೆ. ಕುತೂಹಲಕರವಾಗಿದೆ. ಓದಿ…
ಪದಗಳ ಜಗದಲಿ ಗಾಳಿ ಬೆಳಕು
ನವಿಲುಗರಿಯ ಕಣ್ಣಿನ ನೆನಪು
ಭಾಮಿನಿ ಷಟ್ಪದಿ ದೇಶ ಕೋಶ
ಬಾ ಕವಿತಾ ಬ್ಲಾಗಮಂಡಲಕೆ
ಚಿನ್ನದ ಪುಟಗಳ ಬುಕ್ ಬಝಾರಿಗೆ
ಟೈಂಪಾಸ್ ಕಡ್ಲೆಕಾಯ್ ಜೊತೆ
ಮಹಮ್ಮದ್ ಮ್ಯಾಜಿಕ್ ನೋಡೋಕೆ
ರಾಗಿ ರೊಟ್ಟಿ ವೆಂಕಿ ಬರ್ಗರ್ ರುಚಿಗೆ
ಕನ್ನಡ ಟೈಮ್ಸ್ ಜೋನ್ ಕ್ಯಾನ್ವಾಸ್
ಹಾಯ್ ರೇಖಾ ಕಾಮೆಂಟ್ಸ್ ಪ್ಲೀಸ್
ಅಲ್ಲಿದೆ ನಮ್ಮಮನೆ ಸುಮ್ಮನೆ ಜೋಗಿ ಮನೆ
ಹೈವೇ 7, ಡೋರ್ ನಂ.142
ಫ್ರೆಂಡ್ಸ್ ಕಾಲೋನಿಯ ಝೂಮ್
ಆಲದಮರದಡಿ ಅವಲೋಕನ
ಅಗಸೆಯ ಅಂಗಳ ಅಮೃತ ಸಿಂಚನ
ಅಲೆಮಾರಿಯ ಅನುಭವ ಅಪಾರ ಕಣಾ
ಒಂಟಿ ಹಕ್ಕಿಯ ಹಾಡು ಕಲರವ ಕೂಗು
ಓ ನನ್ನ ಚೇತನಾ ಒಳಗೂ ಹೊರಗೂ
ಕವನ ರಸಾಯನ ಕಾಲಹರಣ
ಕಾವ್ಯಸುಧೆಗೆ ಕುಂಚ ಪ್ರಪಂಚ
ಕುಂಟಿನಿ ಕಾವ್ಯಕೃಷಿ ಚಂದನ
ಚಂಡಮದ್ದಳೆ ಚಂಪಕಾವತಿ ಚಿತ್ರಕವನ
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ
ತಿರುಕನೋರ್ವನ ದೃಷ್ಟಿಯಲ್ಲಿ
ತುಂತುರ ಹನಿಗಳ ತುಳಸೀವನ
ಜೀವ ಸಂಶಯದ ತೊದಲ ಮಾತು
ನೂರಾರು ಮಾತು ನನ್ನ ಮಾತು
ನೂರಾರು ಕನಸು ನನ್ನ ಹಾಡು
ನೆನಪು ಕನಸುಗಳ ನಡುವೆ ನೆಟ್ಟ ನೋಟ
ನೆನಪಿನಂಗಳದಿಂದ ಒಂದಿಷ್ಟು ಬಯಲು
ಮಂಜು ಮುಸುಕಿದ ದಾರಿಯಲ್ಲಿ ಮನದ ಮಾತು
ಮನದ ಪುಟಗಳ ನಡುವೆ ಮನದಾಳದ ಮಾತು
ಗಂಡಭೇರುಂಡ ಉವಾಚ ಕ್ಷಿತಿಜದೆಡೆಗೆ
ಬದಲಾವಣೆಯೇ ಜಗದ ನಿಯಮ
ಬ್ಲಾಗಾವತಾರ ಭಾವತೀರ ಯಾನ
ಹುಚ್ಚು ಮನಸಿನ ಹತ್ತು ಮುಖಗಳು
ನನ್ನರಿವಿನಲಿ ಮಾವಿನ ಸರ ಮೌನಗಾಳ
ಅಂತರಂಗದ ಕಗ್ಗ ಪಾತರಗಿತ್ತಿಯ ಪಕ್ಕ
ಅದು ಇದು ಕಾಲಚಕ್ರದ ಗಹನ ತತ್ವ
ಹರಿವ ಲಹರಿಯ ಸೃಜನ ಹರಿಣಿ
ವಿಸ್ಮಯನಗರಿಯ ಋಜುವಾತು ಸಂಪದ
ಕೆಂಡಸಂಪಿಗೆಗೆ ಕನ್ನಡವೇ ನಿತ್ಯ ಉಸಿರು
ಕನ್ನಡ ಕಸ್ತೂರಿ ಪ್ಲಾನೆಟ್ ಕನ್ನಡ
ಕನ್ನಡ ಸಾರಥಿ ಅವಧಿ ಪದಗತಿ






AAhaa!
ಹಹ್ಹಹ್ಹಹ್ಹಾ…!
caMdada prayatna
aadarinnoo bahaLa kannaDa blaagugaLa hesarugaLu upayOgisadE uLidive – alvE?
ನನ್ನ ಕೂಗು…ಎನ್ನ ಮನುಕುಲಕೆ!!! ಬ್ಲಾಗನ್ನು ಅವಧಿಯ ಓದುಗರಿಗೆ
ಪರಿಚಯಿಸಿದ ನಿಮಗೆ ಧನ್ಯವಾದಗಳು.
– ಚಂದಿನ
http://www.koogu.blogspot.com
ತವಿಶ್ರೀಯವರೆ ನಮಸ್ತೆ,
ಒಮ್ಮೆಗೇ ಎಲ್ಲ ನಲ್ದಾಣಗಳ ಸುತ್ತಿ ಬರಲು ಶಕ್ತಿ ಇರಲಿಲ್ಲ. ಅವಧಿ ಮತ್ತು ಪ್ಲಾನೆಟ್ ಕನ್ನಡದಲ್ಲಿ ಪೂರಕವಾದ ಪದಗಳಿರುವ ಬ್ಲಾಗುಗಳನ್ನು ಬಳಸಿದ್ದೇನೆ.
ಧನ್ಯವಾದಗಳೊಂದಿಗೆ,
ಚಂದಿನ
ಛಲೋ ಐತಲ್ರೀ ಸರ್ರ…….