ಬ್ರೇಕಿಂಗ್ ನ್ಯೂಸ್: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾಗಿ ದಿನೇಶ್ ಅಮೀನ್ ಮಟ್ಟು

ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ನೇಮಕಗೊಂಡಿದ್ದಾರೆ. ಮುಖ್ಯಮಂತ್ರಿಗಳನ್ನು ಮಾಧ್ಯಮದ ಮುಂದೆ ಸರಿಯಾಗಿ ಮಂಡಿಸುವ, ಮುಖ್ಯಮಂತ್ರಿಗಳಿಗೆ ಮಾಧ್ಯಮ ಕುರಿತು ಸರಿಯಾದ ಕಣ್ಣೋಟ ನೀಡುವ ಮಹತ್ವದ ಜವಾಬ್ದಾರಿ ದಿನೇಶ್ ಅವರ ಮುಂದಿದೆ.
‘ಮುಂಗಾರು’ ‘ಪ್ರಜಾವಾಣಿ’ಯಲ್ಲಿ ದೊಡ್ಡ ಹೆಸರು ಮಾಡಿರುವ, ಜಾತ್ಯಾತೀತ ನಿಲುವಿನ ದಿನೇಶ್ ತಮ್ಮ ಹೊಸ ಜವಾಬ್ದಾರಿಯಲ್ಲಿ ಯಶಸ್ವಿಯಾಗಲಿ ಎನ್ನುವುದು ‘ಅವಧಿ‘ಯ ಹಾರೈಕೆ.

ಈ ಸುದ್ದಿಯನ್ನು ಲಕ್ಷ್ಮಣ್ ಕೊಡಸೆ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದು ಹೀಗೆ :
ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿ ದಿನೇಶ್ ಅಮೀನ್ ಮಟ್ಟು. ಒಳ್ಳೆಯ ಆರಂಭ. ಇಬ್ಬರಿಗೂ ತಮ್ಮ ಸ್ಥಾನಗಳಿಗೆ ಅಂಟಿದ ಕೆಸರನ್ನು ತೊಳೆಯುವ ಕೆಲಸ. ಇಬ್ಬರೂ ಯಶಸ್ವಿಯಾಗಲಿ. ಪಿ.ಕೆ.ಶ್ರೀನಿವಾಸ್ ಸಲಹೆಗಾರರಾಗಿದ್ದರಿಂದ ದೇವರಾಜ ಅರಸು ಸಾರ್ವಜನಿಕ ವ್ಯಕ್ತಿತ್ವ ವರ್ಧಿಸಿತ್ತೆಂದು ಮಾಧ್ಯಮ ಲೋಕದ ಹಳೆಯ ತಲೆಗಳು ನೆನಪಿಸಿಕೊಳ್ಳುತ್ತವೆ. ಪಿಕೆ ತಮ್ಮ ಕೆಲಸ ಮುಗಿದ ನಂತರ ಮತ್ತೆ ಡೆಕನ್ ಹೆರಾಲ್ಡ್ ನಲ್ಲಿ ಕೆಲಸಕ್ಕೆ ಹಾಜರಾಗಿದ್ದರು. ದಿನೇಶ್‍ ಮಟ್ಟು ಕೂಡ ಅವರ ಮಾರ್ಗವನ್ನು ಅನುಸರಿಸುತ್ತಾರಾ.. ನೋಡಬೇಕು…
-ಲಕ್ಷ್ಮಣ ಕೊಡಸೆ

‍ಲೇಖಕರು G

May 14, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

47 ಪ್ರತಿಕ್ರಿಯೆಗಳು

  1. ರೂಪ ಹಾಸನ

    ನಮ್ಮ ನೆಚ್ಚಿನ ದಿನೇಶ್ ಅಮ್ಮಿನ್ಮಟ್ಟು ಅವರಿಗೆ ಹಾದಿಱಕ ಅಭಿನಂದನೆಗಳು. ಖಂಡಿತಾ ಅವರಿಂದ ನಮಗೆ ತುಂಬಾ ನಿರೀಕ್ಷೆ ಇದೆ.

    ಪ್ರತಿಕ್ರಿಯೆ
  2. ಹುಲಿಕುಂಟೆ ಮೂರ್ತಿ

    ಸಿದ್ಧರಾಮಯ್ಯನವರಿಗೆ ಅಭಿನಂದನೆಗಳು…

    ಪ್ರತಿಕ್ರಿಯೆ
  3. murali kati

    ಅಮೀನಮಟ್ಟು ರವರು ಪರಿಣಾಮಕಾರಿ ವಿರೋದ ಪಕ್ಷವಾಗುವ ಅವಕಾಶ ಕಳೆದುಕೊಂಡಿದ್ದಾರೆ… ಮೂರು ದಿನಗಳಿಂದ ಸಿದ್ದರಾಮಯ್ಯನವರ ನಡೆ ಅವರ ರಾಜಕೀಯ ಮುತ್ಸದ್ದಿತನವನ್ನು ತೋರಿಸುತ್ತದೆ. ಅದರೆ ಅವರು ” ಕಾಂಗ್ರೇಸ್ ಅಂಥಾ ಕಾಂಗ್ರೇಸ್” ಅನ್ನು ಮೀರಿ ಬೆಳೆಯ ಬಲ್ಲರೇ>>> ಸಮಯವೇ ಉತ್ತರಿಸಬೇಕು.
    ಮುರಳಿ ಕಾಟಿ

    ಪ್ರತಿಕ್ರಿಯೆ
  4. Dinesh Nayak

    congratulations. you r capable of doing that work. Ofcourse expectation is huge from congress government. They have got bright chance to rule the state in a proper way.

    ಪ್ರತಿಕ್ರಿಯೆ
  5. Gopaal Wajapeyi

    ಅಭಿನಂದನೆಗಳು ದಿನೇಶ್ ಅಮೀನಮಟ್ಟು ಅವರೇ… 🙂

    ಪ್ರತಿಕ್ರಿಯೆ
  6. arun joladkudligi

    ಸೂಕ್ಷ್ಮ ಸಂವೇದನೆಯ ದಿನೇಶ್ ಅಮಿನ್ ಮಟ್ಟು ಸಾರ್ ಸಿದ್ಧರಾಮಯ್ಯ ಅವರ ಮಾಧ್ಯಮ ಸಲಹೆಗಾರರಾದದ್ದಕ್ಕೆ ಅಭಿನಂದನೆ. ಮುಖ್ಯವಾಗಿ ಮುಖ್ಯಮಂತ್ರಿಗಳು ಅಮಿನ್ ಮಟ್ಟು ಸಾರ್ ಅವರನ್ನು ಆಯ್ಕೆ ಮಾಡಿಕೊಂಡಿರುವುದು ಕೂಡ ಪ್ರಜ್ಞಾವಂತಿಕೆಯ ಸಂಕೇತದಂತಿದೆ.ಅಮಿನ್ ಮಟ್ಟು ಸಾರ್ ಅವರ ಜವಬ್ದಾರಿ ಮತ್ತಷ್ಟು ಹೆಚ್ಚಿದೆ. ಅದನ್ನವರು ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ ಎಂಬ ನಂಬಿಕೆ ಇದೆ.

    ಪ್ರತಿಕ್ರಿಯೆ
  7. kum.veerabhadrappa

    ದಿನೇಶ ಅಮಿನಮಟ್ಟು ಅವರಿಗೆ ಹಾರ್ದಿಕ ಅಭಿನಂದನೆಗಳು
    ಕುಂವೀ

    ಪ್ರತಿಕ್ರಿಯೆ
  8. ರಮೇಶ್ ಹಿರೇಜಂಬೂರು

    ದಿನೇಶ್ ಸರ್ ಹಾಗೂ ಸಿದ್ದರಾಮಯ್ಯ ಅವರಿಗೆ ಮೊದಲನೇಯದಾಗಿ ಅಭಿನಂದನೆಗಳು. ಎರಡನೇಯದು ಇಬ್ಬರೂ ವ್ಯಕ್ತಿಗತವಾಗಿ ಹತ್ತಿರದಿಂದ ನಾನು ಕಂಡ ಧೀಮಂತ ವ್ಯಕ್ತಿತ್ವಗಳು. ಜಾತ್ಯತೀತ ನಿಲುವನ್ನು ಹೊಂದಿದವರೇ. ಆದ ಕಾರಣ 5 ವಷ೵ಗಳ ಅವಧಿಯಲ್ಲಿ ಇಬ್ಬರೂ ತಮ್ಮ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಾರೆ ಜತೆಗೆ ಈ ರಾಜ್ಯಕ್ಕೆ ಒಳ್ಳೆಯದನ್ನು ಮಾಡುತ್ತಾರೆ ಎನ್ನುವ ನಂಬಿಕೆ ನನ್ನಲ್ಲಂತೂ ಇದೆ. ಪಿ.ಕೆ.ಶ್ರೀನಿವಾಸ್ ಅವರ ರೀತಿಯೇ ಅಮೀನ್ ಮಟ್ಟು ಸರ್ ಕೂಡ ತಮ್ಮ ನಿಜಾಯಿತಿಯನ್ನು ಪ್ರದಶಿ೵ಸಿ ಮತ್ತೆ ಪತ್ರಿಕೋದ್ಯಮಕ್ಕೆ ಮರಳಲಿ ಎಂದು ಹಾರೈಸುತ್ತೇನೆ….
    -ರಮೇಶ್ ಹಿರೇಜಂಬೂರು

    ಪ್ರತಿಕ್ರಿಯೆ
  9. vasanth

    Very good selection. Thanks to Siddaramaiah for choosing right person.
    Congrats for Amminmattu sir

    ಪ್ರತಿಕ್ರಿಯೆ
  10. santhosh ananthapura

    Wonderful….! right person for the right job. He’ll he’ll rock….!!! Best wishes sir.

    ಪ್ರತಿಕ್ರಿಯೆ
  11. Padyana Ramachandra

    ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡ ಹಿರಿಯ ಪತ್ರಕರ್ತ, ಕರಾವಳಿ ಕರ್ನಾಟಕದ ದಿನೇಶ್ ಅಮೀನ್ ಮಟ್ಟು ಅವರಿಗೆ ಅಭಿನಂದನೆಗಳು.
    – ಪ.ರಾಮಚಂದ್ರ
    ದುಬೈ -ಸಂಯುಕ್ತ ಅರಬ್ ಸಂಸ್ಥಾನ

    ಪ್ರತಿಕ್ರಿಯೆ
  12. Dinesh Madagaonkar

    ಬಹಳ ವರ್ಷದ ನಂತರ ಕರ್ನಾಟಕದ ರಾಜಕೀಯದ ಕುರಿತು ಹೆಚ್ಚಿನ ನಿರಿಕ್ಷೆ ಮೂಡಿದೆ. ರಾಜಕೀಯದ ಕುರಿತು ಒಂಚೂರು ಆಸಕ್ತಿ ತೋರಿಸದ ನನ್ನಂತಹ ಹಲವು ಯುವಕರಲ್ಲಿ ಸಿದ್ದರಾಮಯ್ಯನವರು ಹೊಸ ಆಸಕ್ತಿ ಆಶಯ ಮೂಡಿಸಿದ್ದಾರೆ. ರಾಜಕೀಯ ಅಂದ್ರೆ ಮೂಗು ಮುರಿಯುತ್ತಿದ್ದ ನನ್ನಂತಹ ಹಲವಾರು ಅನಾಸಕ್ತರು ಇವತ್ತು ಹೊಸ ಮುಖ್ಯಮಂತ್ರಿಗಳು ಕ್ರಾಂತಿಕಾರಿ ಬದಲಾವಣೆ ತರುತ್ತಾರೆ ಎಂಬ ಹೊಸ ಕನಸನ್ನು ಕಾಣ್ತಾ ಇದೇವೆ. ಅದು ನನಸಾಗುವುದಕ್ಕೆ ಒಂದೊಂದೆ ಒಳ್ಳೆಯತನಗಳು ಒಳ್ಳೆಯ ನಡೆಗಳನ್ನು ಮಾನ್ಯ ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಿದ್ದಾರೆ. ಮಟ್ಟು ಸರ್ ಸೇರ್ಪಡೆ ಅಂತಹ ಆಶಯವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಸರ್ಕಾರ ಅಭಿವೃದ್ದಿಯ ಹೊಸ ’ಮಟ್ಟು’ಗಳನ್ನು ತೆಗೆದುಕೊಳ್ಳಲು ಇದು ಸಹಾಯಕವಾಗಲಿ.
    -ದಿನೇಶ್ ಮಡಗಾಂವಕರ್

    ಪ್ರತಿಕ್ರಿಯೆ
  13. RENUKA NIDAGUNDI

    ಅಭಿನಂದನೆಗಳು ದಿನೇಶ್. ನಿಮ್ಮ ನುರಿತ ಅನುಭವದ ಆಳ, ಅರಿವಿನಲ್ಲಿ ನಿಮಗೆ ದೊರೆತ ಈ ಗುರುತರ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸುತ್ತೀರಿ ಎಂಬ ಭರವಸೆ ನಮಗಿದೆ. ಹಾರ್ದಿಕ ಅಭಿನಂದನೆಗಳು ತಮಗೆ.

    ಪ್ರತಿಕ್ರಿಯೆ
  14. Manjunath hgde

    BEST OF LUCK ದಿನೇಶ್ ಅಮೀನ್ ಮಟ್ಟು ಅವರಿಗೆ………….

    ಪ್ರತಿಕ್ರಿಯೆ
  15. nandhu KV

    ನಮ್ಮ ನೆಚ್ಚಿನ ದಿನೇಶ್ ಅಮ್ಮಿನ್ಮಟ್ಟು ಅವರಿಗೆ ಹಾದಿಱಕ ಅಭಿನಂದನೆಗಳು.

    ಪ್ರತಿಕ್ರಿಯೆ
  16. ಅಶೋಕ ಶೆಟ್ಟರ್

    It is heartening to note that Dinesh Amin Mattu is appointed as media adviser to the newly elected CM. He eminently deserves it. My hearty congratulations to him

    ಪ್ರತಿಕ್ರಿಯೆ
  17. Rangaraju.n.d.

    ಸಿದ್ದರಾಮಯ್ಯ ಅವರದು ಒಳ್ಳಯ ನಿರ್ಧಾರ . ಎಚ್ಬರಿಸ ಬಲ್ಲ ಸಲಹೆಗಾರರನ್ನೇ ಹುಡುಕಿದ್ದಕ್ಕೆ ಧನ್ಯವಾದಗಳು
    ಇಬ್ಬರಿಗೂ ಒಳ್ಳೆಯದಾಗಲಿ

    ಪ್ರತಿಕ್ರಿಯೆ
  18. s.b.jogur

    siddraamayyanavara ella aarambhagalu adbhutavaagive.mattu aayke yogya vyaktige yogya sthaana ennuvantide.

    ಪ್ರತಿಕ್ರಿಯೆ
  19. nanjappa.e

    It is the best combination of eminent and excellent persons in politics and journalism. Congrats to CM for his best choice

    ಪ್ರತಿಕ್ರಿಯೆ
  20. bhagyalakshmi

    bahala nireekshegalu ive kaleda 5 varshagalalli bahala novu avamaanagalannu anubhavisi aagide….samasyegalu nooru ….dinesh avaru janasamanyarige…..mahileyarige vishvasa baruvantha kelasa maadali…..shubha aaraikegalu

    ಪ್ರತಿಕ್ರಿಯೆ
  21. Dr.Prakash G.Khade.

    ಬಹಳ ಉತ್ತಮ ಆಯ್ಕೆ .ದಿನೇಶ ಅಮೀನ ಮಟ್ಟು ಅವರಿಗೆ ಅಭಿನಂದನೆಗಳು.
    -ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

    ಪ್ರತಿಕ್ರಿಯೆ
  22. ಲಕ್ಷ್ಮಣ ಕೊಡಸೆ

    ಕಾಂಗ್ರೆಸ್ಸಿಗೆ ಏನು ಬಂದಿದೆ ರೋಗ? ಸರ್ಕಾರ ಗೃಹಮಂಡಲಿಗೆ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಸ್ವಂತದವರಿಗೆ ಕೊಟ್ಟು ಹಣ ಮಾಡಿಕೊಂಡ, ಪ್ರತಿ ಹಬ್ಬಕ್ಕೆ ಗಂಗಾಜಲ, ಲಾಡು ವಿತರಿಸುವ ಮೂಲಕ ಇಡೀ ಬಿಜೆಪಿಯನ್ನು ನಗೆಪಾಟಲಿಗೆ ಈಡು ಮಾಡಿದ್ದ, ಇನ್ನೂ ನ್ಯಾಯಾಲಯಗಳಲ್ಲಿ ಮೊಕದ್ದಮೆ ಎದುರಿಸುತ್ತಿರುವ ಮಾಲೂರಿನ ಕೃಷ್ಣಯ್ಯ ಶೆಟ್ಟಿ ಅವರನ್ನು ಸೇರಿಸಿಕೊಳ್ಳುವುದಕ್ಕೆ. ಭ್ರಷ್ಟಾಚಾರದ ಗಂಗೋತ್ರಿ ಎಂದು ರಾಜ್ಯದ ಜನ ಕಸದ ಬುಟ್ಟಿಗೆ ಎಸೆದ ಬಿಜೆಪಿಯೇ ಉಗಿದು ಹೊರಗಟ್ಟಿದ ಶೆಟ್ಟಿಯನ್ನು ಸೇರಿಸಿಕೊಳ್ಳುವುದಕ್ಕೆ ಕಾಂಗ್ರೆಸ್ಸು ಅಷ್ಟೊಂದು ನೈತಿಕವಾಗಿ ದಿವಾಳಿ ಎದ್ದಿದೆಯೇ..?

    ಪ್ರತಿಕ್ರಿಯೆ
  23. bharat kumar polipu

    athee uttama ayke.dinesh abhinandanegalu.shubha haaraikegalu…bharat kumar polipu mumbai

    ಪ್ರತಿಕ್ರಿಯೆ
  24. sathish babu

    ಬಹಳ ಉತ್ತಮ ಆಯ್ಕೆ. ದಿನೇಶ ಅಮೀನ ಮಟ್ಟು ಅವರಿಗೆ ಅಭಿನಂದನೆಗಳು….

    ಪ್ರತಿಕ್ರಿಯೆ
  25. chee ja rajeeva

    ಮಟ್ಟು ಸರ್, ನೀವೀಗ ಪ್ರತಿಪಕ್ಷದಲ್ಲಿಯೇ ಇರಬೇಕಿತ್ತು.ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ, ಸಿದ್ದು ಅವರಿಗೆ ಪರೋಕ್ಷವಾಗಿ ಒಳ್ಳೆಯದನ್ನೇ ಮಾಡಬಹುದಾದ ಅವಕಾಶವನ್ನು ಕಳೆದುಕೊಂಡಿದ್ದೀರಿ. ಮಾಧ್ಯಮ ಸಲಹೆಗಾರರಾಗಿ ಆ ಕೆಲಸವನ್ನು ನೀವು ಪ್ರತ್ಯಕ್ಷವಾಗಿ ಮಾಡಬೇಕಾದ ಜವಾಬ್ದಾರಿ ಹೊತ್ತಿದ್ದೀರಿ. ನಿಮಗೆ ಒಳ್ಳೆಯದಾಗಲಿ. ಎಲ್ಲ ಸಾಮಾಜಿಕ ತಾಣಗಳಲ್ಲಿ ಸಿದ್ದು ಅವರ ಗುಣಗಾನ ನಡೆದಿದೆ. ಮಧುಚಂದ್ರದ ಅವಧಿಯಲ್ಲಿ ಇದೆಲ್ಲವೂ ನಡೆಯಬೇಕಾದ್ದೆ. ಆದರೆ ಸಿದ್ದು ಅವರು ಎರಡನೇ ದೇವರಾಜ ಅರಸು ಎಂಬರ್ಥದ ಮಾತುಗಳು ಅಚ್ಚರಿ ತರುತ್ತವೆ. ಕುರುಬರನ್ನು ಮೀರಿ ಅವರು ಎಲ್ಲ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ವರ್ಗಗಳಿಗೆ ಎಷ್ಟು ಪ್ರಾತಿನಿಧ್ಯ ನೀಡುತ್ತಾರೆ, ಆ ವರ್ಗಗಳಿಗೆ ಹೇಗೆ ಬಲ ತುಂಬುತ್ತಾರೆ
    ಎಂಬುದನ್ನು ನೋಡುತ್ತಿದ್ದೇವೆ. ಸಿದ್ದು ಅವರನ್ನು ಎರಡನೇ ಅರಸರನ್ನಾಗಿ ರೂಪಿಸುವ ಜವಾಬ್ದಾರಿ ನಿಮಗೂ ಇದೆ. ನಿಮ್ಮ ನಿರ್ಧಾರ ಸಿದ್ದು ಅವರಿಗೆ ಒಳ್ಳೆಯದೇ ಆಗಿರಬಹುದು, ಕನ್ನಡ ಪತ್ರಿಕೋದ್ಯಮಕ್ಕಂತೂ ಖಂಡಿತ ಅಲ್ಲ. ಆದಷ್ಟು ಬೇಗ ಪತ್ರಿಕೋದ್ಯಮಕ್ಕೆ ವಾಪಸ್ ಬನ್ನಿ. ಶುಭವಾಗಲಿ

    ಪ್ರತಿಕ್ರಿಯೆ
  26. nandu

    ದಿನೇಶ್ ಸರ್, ನಿಮಗೆ ಒಳ್ಳೆಯದಾಗಲಿ, ಜನಕ್ಕೆ ಒಳಿತಾಗುವಂತೆ ಸಲಹೆಗಳನ್ನು ಮುಖ್ಯಮಂತ್ರಿಯವರಿಗೆ ನೀಡುವಿರೆಂದು ನಮ್ಮ ನಂಬಿಕೆ…ನೀವು ಎಲ್ಲಿದ್ದರೂ ಚೆನ್ನಾಗಿರಿ…

    ಪ್ರತಿಕ್ರಿಯೆ
  27. Vithal Dalawai

    Sir, all the best. And in the combination of both of you, let Karnataka return to the path of progress.

    ಪ್ರತಿಕ್ರಿಯೆ
  28. basavaraj dodamani

    ಮಟ್ಟು ಸರ್ ಗೆ ಅಭಿನಂದನಗಳು. ನಿನ್ನೆ ದಾವಣಗೆರೆಯಲ್ಲಿ ಸಂಶೋಧಕ ಎಂ.ಎಂ.ಕಲಬುರ್ಗಿ ಅವರು ಉಪನ್ಯಾಸ ನೀಡಿದರು. ಬಸವಣ್ಣ ದೈವೀಕರಣದಿಂದ ಸಮಾಜಿಕರಣದ ಕಡೆ ಸಾಗಿದ ಚಿಂತಕ ಅಂತಾ. ಅಂದರೆ ನಾವು ದೈವತ್ವ ಪಡೆದರೆ ಸಾಲದು ನಮ್ಮ ಸೇವೆ ಸಮಾಜಕ್ಕಾಗಬೇಕು. ಹೀಗಾಗಿ ಅನಿಷ್ಟ ಪದ್ದತಿಗಳ ವಿರುದ್ಧ ಹೋರಾಟ ಸುರು ಮಾಡಿದರು. ಪತ್ರಕರ್ತರಾಗಿ ಮಟ್ಟು ಸರ್ ಅದ್ಭುತ ಕೆಲಸ ಮಾಡಿದ್ದಾರೆ. ನಾವೇಲ್ಲಾ ಪ್ರತಿ ಸೋಮವಾರದ ಅಂಕಣಕ್ಕೆ ಕಾಯುತ್ತಿದ್ದೇವು. ಜೊತೆಗೆ ದೆಹಲಿ ನೋಟ ಇಡಿ ದೇಶವನ್ನೆ ನಮಗೆ ಪರಿಚಯಿಸಿದ ಗುರುಗಳು. ಇಂತಹವರು ರಾಜ್ಯ ಸಚಿವರ ಸಮಾನ ಹುದ್ದೆಗೆ ಬಂದಿದ್ದು ನಾವು ಸಂತೋಷ ಪಡೆಲೇ ಬೇಕಾದ ವಿಚಾರ. ಎಲ್ಲರೂ ಸಿದ್ದರಾಮಯ್ಯ ಅಂದರೆ ದೇವರಾಜ್ ಅರಸು ಅಂತಾರೆ. ಅಂತಹ ದೇವರಾಜ್ ಅರಸ ಅವರ ಜೊತೆಗೆ ಎಲ್.ಜಿ.ಹಾವನೂರಂತ ಖ್ಯಾತ ಕಾನೂನು ತಜ್ಞರಿದ್ದರು. ಹೀಗೆ ಹತ್ತು ಹಲವಾರು ಖ್ಯಾತ ನಾಮರು ಇದ್ದರೂ. ಇದನ್ನೆ ಹೊಲುವಂತಹ ವಾತಾವಣ ಈಗ ರಾಜ್ಯದಲ್ಲಿ. ಬಹುತೇಕ ಪ್ರತಿಭಾನ್ವಿತ ರಾಜಕಾರಣಿಗಳು ಗೆದ್ದು ಬಂದಿದ್ದಾರೆ. ಇಂತಹ ಅದ್ಭುತ ಪ್ರಸಂಗದಲ್ಲಿ ಮಹತ್ವ ಹುದ್ದೆಗೆ ಬಂದಿದ್ದು ನಿರೀಕ್ಷೆಗಳು ನಮ್ಮ ಕಡೆಯಿಂದ ಬಹಳ ಇವೆ.

    ಪ್ರತಿಕ್ರಿಯೆ
  29. raju

    ಮಟ್ಟುಅವರಿಗೆ ಶುಬಾಶಯಗಳು ಆದರೆ ಸೋಮವಾರ ಮಾತ್ರ ಪ್ರಜಾವಾಣಿಯಲ್ಲಿ ನಿಮ್ಮ ಕಾಲಂ ತಪ್ಪಿಸಬೇದಿ ದಯವಿಟ್ಟು.

    ಪ್ರತಿಕ್ರಿಯೆ
  30. Madhava K R

    My congratulations as you have been appointed as media adviser to new CM.I hope you will maintain the same thinking as a honest Journalist. Maintain your critical thinking even as a adviser. wish you all the best in your new and responsible job

    ಪ್ರತಿಕ್ರಿಯೆ
  31. H Sreelatha

    We miss Anaavarana Sir. But expect Anaavarana of Humanity from present Administration Sir

    ಪ್ರತಿಕ್ರಿಯೆ
  32. ದಿನೇಶ್

    ಗೂಟದ ಕಾರು ಸಿಕ್ತಲ್ಲ…ಪರಮ ಪುರುಷಾರ್ಥ ಸಿದ್ಧಿಯಾಯ್ತು. ಇನ್ನ್ಯಾಕೆ ತಡ? ಹೊಡೀರಿ ಹಲಗೆ..

    ಪ್ರತಿಕ್ರಿಯೆ
  33. 9900713646

    ಜನಕ್ಕೆ ಒಳಿತಾಗುವಂತೆ ಸಲಹೆಗಳನ್ನು ಮುಖ್ಯಮಂತ್ರಿಯವರಿಗೆ ನೀಡುವಿರೆಂದು ನಮ್ಮ ಭರವಸೆ,ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಾರೆ ಜತೆಗೆ ಈ ರಾಜ್ಯಕ್ಕೆ ಒಳ್ಳೆಯದನ್ನು ಮಾಡುತ್ತಾರೆ ಎನ್ನುವ ಆಶಯ ನನ್ನಲ್ಲಂತೂ ಇದೆ

    ಪ್ರತಿಕ್ರಿಯೆ
  34. ಗುರುಶಾಂತ್ ಎಸ್.ವೈ

    ಆಯ್ಕೆ ನಿಜಕ್ಕೂ ಖುಷಿ ತಂದ ವಿಚಾರ. ಜೊತೆಗೆ ಕಾಲಂ ತಪ್ಪಿದ ವಿಷಾದ. ನಿರೀಕ್ಷೆಗಳೋ ಸಹಜ. ಅದು ಸಿದ್ಧರಾಮಯ್ಯನವರಿಗೂ. ಕನಸುಗಳೂ ಇರಬಹುದು ಅಪಾರ. ಆದರೆ ಸಿದ್ಧರಾಮಯ್ಯನವರಿಗಿಂತ ಕಾಂಗ್ರೆಸ ಸೈಜಿನಲ್ಲೂ, ಸ್ವಭಾವದಲ್ಲಿಯೂ ತುಂಬಾ ‘ದೊಡ್ಡದು’! ತನ್ನ ಸಂಗೀತಕ್ಕೆ ಯಾರನ್ನು ,ಎಷ್ಟು , ಹೇಗೆಲ್ಲಾ ಕುಣಿಸಬೇಕು, ಮಣಿಸಬೇಕು ಎನ್ನುವುದರಲ್ಲಿ ಅದು ನಿಷ್ಣಾತವಾಗಿದೆ.ಭ್ರಷ್ಟತೆಯ ಗಂಗೋತ್ರಿಯಾಗಿರುವ ಕಾಂಗ್ರೆಸ್ ಪಕ್ಷ ಲೋಕಸಬಾ ಚುನಾವಣೆಯವರೆಗೂ ನಿಶ್ಚಿತವಾಗಿ ಕರ್ನಾಟಕದಲ್ಲಿ ಅಹಿಂದ ರಾಜಕಾರಣಕ್ಕೆ ಇಂಬು ಕೊಡುವೆನೆಂಬ,ಸ್ವಚ್ಛ ಆಡಳಿತದ ಫೋಜು ನೀಡಲು ಸಿದ್ಧರಾಮಯ್ಯನವರನ್ನು ಬಳಸಲು ನೋಡುತ್ತಿದೆ. ಆದರೆ ಅದರಲ್ಲಿ ಅದೆಷ್ಟು ಸಫಲವಾದೀತು ಕಾದು ನೋಡಬೇಕು. ಏನಾದರೂ ಒಂದಿಷ್ಟು ನೆನಪಿನಲ್ಲಿಡುವಂತೆ ಮಾಡಬೇಕೆಂಬ ಹಂಬಲವಿರುವ ಸಿದ್ಧುವಿನ ಎದುರು ಈಗಾಗಲೇ ನಮ್ಮ ಮಾಧ್ಯಮಗಳು ಗುರಾಯಿಸಲು ಆರಂಭಿಸಿವೆ.ಅವುಗಳು ಸಾಗುವ ಹಾದಿ ನಿರೀಕ್ಷಿತವೇ.ಮಾಧ್ಯಮಗಳಿಗೆ ಮುಖ್ಯಮಂತ್ರಿಯವರ ‘ಮುಖ’ ಸರಿಯಾಗಿ ತೋರಿಸುವ ಪ್ರಯತ್ನವೆನೋ ಸರಿ, ಆದರೆ ಮಾಧ್ಯಮಗಳ ಮುಖವನ್ನು ಮುಖ್ಯಮಂತ್ರಿಗಳಿಗೆ ಸರಿಯಾಗಿ ತೋರಿಸಿದರೆ ಒಂದಿಷ್ಟು ಎಚ್ಚರಿಕೆಯ ಹೆಜ್ಜೆ ಅವರು ಇಡಲು ಸಹಾಯಕವಾಗಬಹುದು. ನೇತಾಗಳು ಮತ್ತು ನೀತಿಗಳ ಮುಖಾಮುಖಿಯಲ್ಲಿ ಜನರಿಗೆ ಬೆಳಕು ಕಾಣಲಿ. ಒಡನಾಡಿ ಮಟ್ಟುರವರಿಗೆ ಈಗಿನದು really tough job. ಅದರಲ್ಲಿ ಯಶಸ್ವಿಯಾಗಿ ಇನ್ನಷ್ಟೂ ಹೆಚ್ಚಿನ ಅನುಭವ ಪಡೆದು ಕಲ್ಲು ಕಟ್ಟಡದಿಂದ ಸುರಕ್ಷಿತವಾಗಿ ಈಗಿರುವಂತೆಯೇ ಹೊರಬರಲಿ ಎಂದು ಹಾರೈಕೆ, ನಮ್ಮ ಬಯಕೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: