ನಿದ್ರಿಸದ ನಿರೀಕ್ಷೆಗಳು
– ಎಚ್.ಕೆ.ಶರತ್

ತೊಟ್ಟ ಹಳೆ ಉಡುಗೆಗಳನ್ನೆಲ್ಲ ಕಳಚಿ
ನಿನ್ನೆದುರು ಬೆತ್ತಲಾಗಿ ನಿಂತಿದ್ದೇನೆ
ನನ್ನ ಬೆತ್ತಲೆ ದೇಹ ಕಂಡು
ಜಗತ್ತು ನಗುತ್ತಿದೆ
ನೀ ಹೆಕ್ಕಿ ತಂದ ಚಿಂದಿ ಬಟ್ಟೆಗಳಲ್ಲಿ
ಹೊಸ ಕನಸಿನ ಚಿತ್ತಾರಗಳು ಇಣುಕುತ್ತಿವೆ
ನಾಲ್ಕು ಗೋಡೆಗಳ ನಡುವೆ
ಜಡವಾಗಿ ನಿಂತ ಹೊಲಿಗೆ ಯಂತ್ರದ ಅಡಿ ಸಿಲುಕಿ
ನಲುಗಿದ ಬಟ್ಟೆಯ ತೊಟ್ಟು ಬೀಗಿದ ಮನ
ಈಗೀಗ ಹಗುರಾಗುತ್ತಿದೆ
ಚಿಂದಿಯ ಚಾದರದಡಿ
ಬದುಕಿನ ಅಸಂಖ್ಯ ಚಿತ್ರಗಳು ಹರಡಿಕೊಂಡಿವೆ
ನೀನೆಂಬ ಅರೆ ಪಾರದರ್ಶಕ ವಸ್ತ್ರದಡಿ
ನನ್ನೆಲ್ಲ ನಿರೀಕ್ಷೆಗಳು ನಿದ್ರಿಸಿದಂತೆ ನಟಿಸುತ್ತಿವೆ





ಶತರ್ ತುಂಬಾ ಚೆನ್ನಾಗಿದೆ… ಹೀಗೆ ಬರೆಯಿರಿ..
ಕವಿತೆ ಚೆನ್ನಾಗಿದೆ ಶರತ್. ಪುಟ್ಟ ಸಾಲುಗಳಿಂದ ದೊಡ್ಡ ಕವಿತೆಯ ತನಕ ಬೆಳೆದು ಬಿಟ್ಟಿರಲ್ಲಾ!
nice…..
thank you
nice..