ಬ್ರೇಕಿಂಗ್ ನ್ಯೂಸ್: ರಂಗಾಯಣ ನಿರ್ದೇಶಕರಾಗಿ ಲಿಂಗದೇವರು ಹಳೆಮನೆ

ಹಿರಿಯ ಅಂಕಣಕಾರ, ಪ್ರಗತಿಪರ ಚಿಂತನೆಯ, ನೇರ ನುಡಿಯ ಲಿಂಗದೇವರು ಹಳೆಮನೆ ಪ್ರತಿಷ್ಠಿತ ರಂಗಾಯಣದ ನಿರ್ದೇಶಕರಾಗಿ ಇಂದು ನೇಮಕಗೊಂಡಿದ್ದಾರೆ. ಅವರ ಮೇಲೆ ಹತ್ತು ಹಲವು ವಿವಾದ ಹೊರಿಸುವ ಮೂಲಕ ನೇಮಕ ಕಗ್ಗಂಟು ಮಾಡಲಾಗಿತ್ತು.
ಲಿಂಗದೇವರು ಹಳೆಮನೆ ಸಮುದಾಯ ರಂಗ ತಂಡದಲ್ಲಿ ತೊಡಗಿಸಿಕೊಂಡವರು. ರಂಗಾಯಣ ಅಲ್ಲದಿದ್ದರೆ ಅವರಿಗೆ ಬೇರೆ ಸಂಘಟನೆಗಳ ಮೂಲಕವೂ ಕ್ರಿಯಾಶೀಲವಾಗಿರುವುದು ಗೊತ್ತಿತ್ತು. ಹಳೆಮನೆ ಅವರನ್ನು ನೇಮಕ ಮಾಡುವ ಮೂಲಕ ಸರ್ಕಾರ ತನ್ನನ್ನು ತಾನು ಗೌರವಿಸಿಕೊಂಡಿದೆ.

‍ಲೇಖಕರು avadhi

May 18, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. tadagalale surendra

    vichaaravanta naatakakaara aatmeeya geleya HALEMANE konegoo rangaayanada nirdeshaka aagiruvudu santhoshada sangati. sarkaara kidigedigala maatannu badigotti HALAMANEyavarannu nemisiruvudu sajjanara vijaya. avarige shubhavaagali. itteechege udyoga kaledukonda kalaavidarige ‘baduku’ sigabahudendu aashisonave ?

    ಪ್ರತಿಕ್ರಿಯೆ
  2. kirankumari

    ಸರ್,
    ಸಾ೦ಸ್ಕೃತಿಕ ಸ೦ಘಟನೆಯಾದ ಕರ್ನಾಟಕ ಸಮುದಾಯ -ಮೈಸೂರು ತ೦ಡದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸ೦ದರ್ಭದಲ್ಲಿ ತಮ್ಮ ಗರಡಿಯಲ್ಲಿ ನಾಟಕ ತಾಲೀಮು ಮಾಡುವ ಅವಕಾಶ ನನಗೆ ದೊರಿತಿತ್ತು. ಆ ದಿನಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ನಾನು ಶಿಸ್ತು, ಬದ್ದತೆ ಮತ್ತು ಜನಪರವಾಗಿ ಯೋಚಿಸುವ ಕಾರ್ಯವನ್ನು ನಿಷ್ಟೆಯಿ೦ದ ಕಲಿತುಕೊಳ್ಳಲು ಸಾಧ್ಯವಾಯಿತು. ನಿಮ್ಮಲ್ಲಿನ ಜೀವ ಪರ ಕಾಳಜಿ, ಸಮುದಾಯದ ಕುರಿತಾಗಿನ ತಾತ್ವಿಕ ನಿಲುವು..ನಮ್ಮನ್ನು ಮತ್ತಷ್ಟು ಕ್ರಿಯಾಶೀಲರಾಗಿ ದುಡಿಯಲು ಪ್ರೇರೇಪಿಸಿದೆ. ನಿಮ್ಮನ್ನು ಸರ್ಕಾರ ರ೦ಗಾಯಣ-ಕ್ಕೆ ನೇಮಕ ಮಾಡಿಕೊಳ್ಳುವ ಮೂಲಕ ಆ ಪೋಸ್ಟ್ ಗೆ ನ್ಯಾಯ ಒದಗಿಸಿದ೦ತಾಗಿದೆ. ನಿಮ್ಮ ಕ್ರಿಯಾಶೀಲ ಮತ್ತು ಸೃಜನಶೀಲ ಕೆಲಸಗಳು..ನಾಟಕ-ಸಾ೦ಸ್ಕೃತಿಕ ವಲಯಕ್ಕೆ ಮತ್ತಷ್ಟು ಕೊಡುಗೆ ನೀಡಲಿ ಎ೦ದು ಹಾರೈಸುತ್ತೇನೆ.
    ಪ್ರೀತಿಯಿ೦ದ
    ಕಿರಣ್.ಎಸ್.
    ಮೈಸೂರು.

    ಪ್ರತಿಕ್ರಿಯೆ
  3. ಆನಂದ ಕೋಡಿಂಬಳ

    ರಂಗಾಯಣದ ನಿರ್ದೇಶಕರಾಗಿ ಕೊನೆಗೂ ಲಿಂಗದೇವರು ಹಳೆಮನೆ ಅವರನ್ನು ನೇಮಕಮಾಡಿ ಗೌರವಿಸಿದ್ದು ಅಭಿಮಾನದ ಸಂಗತಿ. ಈ ಮೂಲಕವಾಗಿ ರಂಗಾಯಣ ಸಮರ್ಥರ ನೇತೃತ್ವಕ್ಕೆ ಒದಗುವಂತಾಗಿದೆ. ಹಳೆಮನೆಯವರ ಜ್ಞಾನ,ಅನುಭವ, ವೈಚಾರಿಕ ಸೂಕ್ಷ್ಮಜ್ಞತೆ ಮತ್ತು ರಂಗಾಯಣದ ಒಳಹೊರಗಿ ಅರಿವು ರಂಗಾಯಣವನ್ನು ಕ್ರಿಯಾಶೀಲವಾದ ಸರಿದಾರಿಯಲ್ಲಿ ಖಂಡಿತ ಬೆಳೆಸುತ್ತದೆ.
    ಲಿಂಗದೇವರು ಹಳೆಮನೆಯವರಿಗೆ ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: