ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್: ಶ್ರೀಧರ್ ಆಚಾರ್ ಇನ್ನಿಲ್ಲ

1 Comment

  1. ಹಾಲ್ದೊಡ್ಡೇರಿ ಸುಧೀಂದ್ರ

    ಜಿ.ಎನ್.ರಂಗನಾಥರಾವ್ ಅವರ ನಂತರ ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಕೆ.ಶ್ರೀಧರ ಆಚಾರ್ ಅವರನ್ನು ಭೇಟಿ ಮಾಡುವ ಕೆಲವು ಅವಕಾಶಗಳು ಸಿಕ್ಕಿದ್ದವು. `ಸುಧಾ’ದಲ್ಲಿ ನನ್ನ ಅಂಕಣ `ವಿಜ್ಞಾನಕ್ಕೊಂದು ಬೆಳಕಿಂಡಿ’ ಪ್ರಕಟವಾಗುತ್ತಿತ್ತು. ನೀವು `ಪ್ರಜಾವಾಣಿ’ಗೆ ಲೇಖನಗಳನ್ನು ಬರೆದಿಲ್ಲ ಎಂದು ನವಿರಾಗಿ ಆಕ್ಷೇಪಿಸಿದಾಗ ಸಾಪ್ತಾಹಿಕ ಪುರವಣಿಗೆ `ತಂತ್ರಜ್ಞರ ಮೇಲಾಟಕ್ಕೊಂದು (ರಣ)ರಂಗಭೂಮಿ’ ಹಾಗೂ `ಅಮಾಯಕರ ರಕ್ಷಣೆಗೆ ಇಂಟರ್‌ನೆಟ್ ಆಪತ್ಬಾಂಧವ’ ಲೇಖನಗಳನ್ನು ಬರೆದುಕೊಟ್ಟಿದ್ದೆ. ಮೆಲುದನಿಯ, ಮಿತಮಾತುಗಳ ಸಹೃದಯಿ ಶ್ರೀಧರ ಆಚಾರ್ `ಸಂಕ’ದಲ್ಲಿದ್ದ ಗೆಳೆಯರಾದ ಪ್ರಹ್ಲಾದ ಕುಳಲಿ ಹಾಗೂ ಗುಂಡಾಭಟ್ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ನನ್ನ ತಂದೆಯವರನ್ನು (ಹೆಚ್.ಆರ್.ನಾಗೇಶರಾವ್) ತಪ್ಪದೇ ಮಾತನಾಡಿಸುತ್ತಿದ್ದೆ ಎಂದು ನೆನಪಿಸಿಕೊಂಡಿದ್ದರು. ಎಸ್.ವಿ.ಜಯಶೀಲರಾವ್, ವಡ್ಡರ್ಸೆ ರಘುರಾಮಶೆಟ್ಟಿ ಹಾಗೂ ಎಂ.ಬಿ.ಸಿಂಗ್ ಅವರಿಗೆ ಟಿ.ಎಸ್.ಆರ್. ಪ್ರಶಸ್ತಿ ಒಂದೇ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪ್ರದಾನ ಮಾಡಿದರು. ಆ ಮೂವರಿಗೂ ಆತ್ಮೀಯರಾಗಿದ್ದ ನನ್ನ ತಂದೆ ಸಮಾರಂಭಕ್ಕೆ ಹೋಗಲು ಇಚ್ಛಿಸಿದ್ದರು. ಆಗಷ್ಟೇ ಕ್ಯಾಟರಾಕ್ಟ್ ಆಪರೇಶನ್‍ಗೆ ಸಿದ್ಧರಾಗುತ್ತಿದ್ದ ಅವರು ಸಂಜೆಯ ವೇಳೆ ಕಣ್ಣು ಮಂಜಾಗುತ್ತದೆ, ಜತೆಗೆ ಬಾ ಎಂದು ನನ್ನನ್ನೂ ಕರೆದೊಯ್ದಿದ್ದರು. ಮೊದಲ ಸಾಲಿನಲ್ಲಿ ಜಿ.ಕೆ.ಸತ್ಯ ಅವರೊಂದಿಗೆ ಕುಳಿತಿದ್ದ ಶ್ರೀಧರ ಆಚಾರ್, ನಾಲ್ಕನೆಯ ಸಾಲಿನಲ್ಲಿದ್ದ ನನ್ನ ತಂದೆಯವರನ್ನು ಅಚಾನಕ್ ಆಗಿ ಕಂಡು, ಹಿಂದೆ ಬಂದು ಅತ್ಯಂತ ಗೌರವದಿಂದ ಮಾತನಾಡಿಸಿದ್ದು ಇನ್ನೂ ನೆನಪಿನಲ್ಲಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading