
ಎಂ ಎಸ್ ಪ್ರಸಾದ್ ಹಾಗೂ ಪ್ರವೀಣ್ ಡಿ ರಾವ್ ಸದಾ ‘ಏನಾದರೂ ಮಾಡುತಿರು ತಮ್ಮ ನೀ ಸುಮ್ಮನಿರಬೇಡ…’ ಗುಂಪಿಗೆ ಸೇರಿದವರು. ಹಾಗಾಗಿಯೇ ಪ್ರಕೃತಿ ಎಂಬ ತಂಡ ಕಟ್ಟಿಕೊಂಡಿದ್ದಾರೆ. ಐ ಟಿ, ಕಾರ್ಪೊರೇಟ್ ಸಂಸ್ಥೆಗಳ ಕಿವಿಗೆ ಕನ್ನಡದ ಕವಿತೆಗಳನ್ನು ಹಾಕುವ ಉತ್ಸಾಹದಲ್ಲಿದ್ದಾರೆ.
ಇದೂ ಅಲ್ಲದೆ ಕಬ್ಬನ್ ಪಾರ್ಕ್ ನ ಬ್ಯಾಂಡ್ ಸ್ಟಾಂಡ್ ನಲ್ಲಿ ಪ್ರತೀ ವಾರ ಸುಗಮ ಸಂಗೀತದ ಹಬ್ಬ ನಡೆಸುತ್ತಾರೆ. ಇದು ಹಬ್ಬ -ಯಾಕೆಂದರೆ ತಾವೇ ಒದ್ದಾಡಿ ಹಣ ಹಾಕಿ ಪೊಲೀಸರ ಹತ್ತಿರ ಪರದಾಡಿ ಲೈಸೆನ್ಸ್ ತಂದು ಗೀತೆಗಳು ಜನರಿಗೆ ತಲುಪುವಂತೆ ಮಾಡುತ್ತಾರೆ. ಅಂದ ಮಾತ್ರಕ್ಕೆ ಸುಮ್ಮನೆ ಯಾರನ್ನೋ ಕರೆಸಿ ನಾಮಕಾವಸ್ತೆ ಕಾರ್ಯಕ್ರಮ ಮಾಡುವುದಿಲ್ಲ. ಜನ ಕೇಳಬೇಕು ಎಂದು ಬಯಸುವ ಗಾಯಕರೇ ಅಲ್ಲಿರುತ್ತಾರೆ.
ಇಲ್ಲಿನ ಫೋಟೋಗಳೇ ಆ ಕಾರ್ಯಕ್ರಮದ ಅಭಿರುಚಿಗೆ ಸಾಕ್ಷಿ. ನಿಮ್ಮ ಬಳಿಗೂ ಈ ಕಾರ್ಯಕ್ರಮ ಬರಬೇಕಾದರೆ ಅಥವಾ ನೀವು ಬ್ಯಾಂಡ್ ಸ್ಟಾಂಡ್ ನತ್ತ ಹೋಗಬೇಕಾದರೆ ಈ ಫೋನ್ ನಂಬರ್ ಬಳಸಿ- 99453 68083
ಅಂದ ಹಾಗೆ ಈವಾರ ಅರ್ಚನಾ ಉಡುಪ ಹಳೆಯ ಚಿತ್ರ ಗೀತೆಗಳಿಗೆ ದನಿ ನೀಡುತ್ತಾರೆ (೧೯ ರಂದು)
೨೬ ರಂದು ಬೇಂದ್ರೆ ಮೀಟ್ಸ್ ಕೈಲಾಸಂ ಪಲ್ಲವಿ ಮತ್ತು ರವಿ ಮೂರೂರ್ ಅವರಿಂದ, ನವೆಂಬರ್ ಎರಡರಂದು ಸಿ ಅಶ್ವಥ್ ಮೈಸೂರು ಮಲ್ಲಿಗೆಗೆ, ೯ ರಂದು ದಿವ್ಯಾ ರಾಘವನ್ ಶಿಶು ಗೀತೆಗಳಿಗೆ, ೧೬ ರಂದು ಸುಪ್ರಿಯಾ ಆಚಾರ್ಯ ಭಾವ ಗೀತೆಗಳಿಗೆ, ೨೩ ರಂದು ಪುತ್ತೂರು ನರಸಿಂಹ ನಾಯಕ್ ದಾಸರ ಪದಗಳಿಗೆ ದನಿಯಾಗುತ್ತಾರೆ.


ಬ್ಯಾಂಡ್ ಸ್ಟಾಂಡ್ ನಲ್ಲಿ 'ಪ್ರಕೃತಿ'
ನಿಮಗೆ ಇವೂ ಇಷ್ಟವಾಗಬಹುದು…





0 Comments