ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೋರಯ್ಯ ಚೆನ್ನಪ್ಪನವರ : ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ…

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಇದೇ ೨೭ ಶನಿವಾರ ಸಂಜೆ ೪ ಕ್ಕೆ ಕಲಾವಿದ, ಹರಿಹರದ ಬೋರಯ್ಯ ಚೆನ್ನಪ್ಪ ಅವರ ಪ್ರಕೃತಿ ಎಂಬ ಶೀರ್ಷಿಕೆಯಡಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನೆಯಾಗಲಿದೆ.

ಇಲ್ಲಿಯ ಹಂಚಿನಮನಿ ಆರ್ಟ ಗ್ಯಾಲರಿಯಲ್ಲಿ ೨೭ ರಿಂದ ೨೯ ರವರೆಗ ಮೂರು ದಿನಗಳ ಕಾಲ ನಡೆಯುವ ಚಿತ್ರಕಲಾ ಪ್ರದರ್ಶನವನ್ನು ನಾಡಿನ ಹಿರಿಯ ಕಲಾವಿದ, ದಾವಣಗೇರಿಯ ನಾ. ರೇವನ್ ಉದ್ಘಾಟಿಸಲಿದ್ದಾರೆ. ಕಲಾವಿದ ಕರಿಯಪ್ಪ ಹಂಚಿನಮನಿ ಅಧ್ಯಕ್ಷತೆ ವಹಿಸುವರು. ಶಿಲ್ಪ ಕಲಾವಿದ ಬ್ಯಾಡಗಿಯ ಹರೀಶ ಮಾಳಪ್ಪನವರ ಅತಿಥಿಯಾಗಿರುವರು.

ಇದೇ ಸಂದರ್ಭದಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರದ ಉತಸ್ವ ರಾಕ್ ಗಾರ್ಡನ್ನಿನ ಶ್ರೀಮತಿ ವೇದಾರಾಣಿ ದಾಸನೂರ ಅವರನ್ನು ಸನ್ಮಾನಿಸಲಾಗುವುದು.

ಪ್ರತಿ ದಿನ ೧೧ ರಿಂದ ಸಂಜೆ ೬ ರ ತನಕ ಚಿತ್ರಕಲಾ ಪ್ರದರ್ಶನವನ್ನು ನೋಡಲು ಅವಕಾಶವಿದೆ ಎಂದು ಪ್ರಕಟಣೆ ತಿಲಿಸಿದೆ.

‍ಲೇಖಕರು Admin

26 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading