ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೈ ಬೈ ಆರ್ಕುಟ್


‘ಆರ್ಕುಟ್’ ಇನ್ನು ಎರಡೇ ತಿಂಗಳಲ್ಲಿ ಶಾಶ್ವತ ವಿದಾಯ ಹೇಳಲಿದೆ.
ಫೇಸ್ ಬುಕ್, ಟ್ವಿಟರ್ಗಿಂತ ಮೊದಲು ಯುವ ಜನರನ್ನು ತನ್ನತ್ತ ಸೆಳೆದ ಸಾಮಾಜಿಕ ಜಾಲ ತಾಣ ಇದು, ಗೂಗಲ್ ಮನೆಯ ಕೂಸು.
ಗೂಗಲ್ ಸಂಸ್ಥೆಯ ಉದ್ಯೋಗಿಯಾಗಿದ್ದ ಆರ್ಕುಟ್ ಬಯುಕ್ಕುಟಿನ್ ಎನ್ನುವ ವ್ಯಕ್ತಿ ಆರ್ಕುಟ್ ನ ಮೂಲ ಸೃಷ್ಟಿಕರ್ತ. ಹಾಗಾಗಿ ಆತನ ಹೆಸರನ್ನೇ ಈ ಸಾಮಾಜಿಕ ಜಾಲ ತಾಣಕ್ಕೆ ಇರಿಸಲಾಗಿದೆ.
ಸೆಪ್ಟೆಂಬರ್ 30ರ ನಂತರ ಆರ್ಕುಟ್ ಆರ್ಕೈವ್ ಲಭ್ಯವಾಗಲಿದ್ದು, ಒಂದು ವೇಳೆ ನಿಮ್ಮ ಪೋಸ್ಟ್‌ಗಳು, ಹೆಸರು, ಭಾವಚಿತ್ರಗಳು ಬೇಡವೆನಿಸಿದರೆ ಗೂಗಲ್ ಅಕೌಂಟ್‌ನಿಂದ ಆರ್ಕುಟ್‌ಅನ್ನು ತೆಗೆದುಹಾಕಬಹುದು ಎಂದು ಗೂಗಲ್ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.
ಫೇಸ್‌ಬುಕ್ ಮತ್ತು ಆರ್ಕುಟ್ ಎರಡೂ 2004ರಲ್ಲೇ ಹುಟ್ಟಿದವು. ಫೇಸ್ ಬುಕ್ ದಿನದಿನಕ್ಕೂ ತನ್ನ ಬಾಹುಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಸಮಯದಲ್ಲಿ ಆರ್ಕುಟ್ ಆಕಾಶತಾಣದಿಂದ ನಿರ್ಗಮಿಸಲಿದೆ.
ಗೂಗಲ್ ಟೇಕ್ ಔಟ್ ಮೂಲಕ ನೀವು ನಿಮ್ಮ ಆರ್ಕುಟ್ ದತ್ತಾಂಶವನ್ನು ಇಳಿಸಿಕೊಳ್ಳುವ ಸೌಲಭ್ಯವಿದೆ.
 

‍ಲೇಖಕರು G

3 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading