ರೇಖೆಗಳೇ ಕುಣಿಯುವ ಬಗೆ ಗೊತ್ತಿಲ್ಲದಿದ್ದಲ್ಲಿ ರಾವ್ ಬೈಲ್ ಕೈ ಚಳಕವನ್ನು ನೀವೊಮ್ಮೆ ನೋಡಬೇಕು. ರಾವ್ ಬೈಲ್ ಕೈನಲ್ಲಿ ರೇಖೆ ಮೂಡುವುದಿಲ್ಲ, ಕುಣಿಯುತ್ತದೆ. ಅವರ ಪ್ರತೀ ರೇಖೆಯಲ್ಲಿ ಅವರದ್ದೇ ಸ್ಟಾಂಪ್ ಇದೆ.
ಮುಂಬೈನಲ್ಲಿ ಇದ್ದ ರಾವ್ ಬೈಲ್ ಈಗ ಮರಳಿ ಮಣ್ಣಿಗೆ ಬಂದಿದ್ದಾರೆ. ಈಗ ಅವರು ಧಾರವಾಡ ನಿವಾಸಿ. ಬೈಲಹೊಂಗಲ ಅವರ ಊರಂತೆ. ಹಾಗಾಗಿ ಅವರ ಹೆಸರಲ್ಲಿರುವ ‘ಬೈಲ್’ ಮೂಡಿದೆ ಎನ್ನುತ್ತಾರೆ. ಗುಲ್ವಾಡಿ ಇದ್ದಾಗಿನ ‘ತರಂಗ’ದಲ್ಲಿ, ಜಿ ಎಸ್ ಸದಾಶಿವರ ಉಸ್ತುವಾರಿ ಸುಧಾಕ್ಕಿದ್ದಾಗ ‘ಸುಧಾ’ದಲ್ಲಿ ರೇಖೆಗಳ ಮೂಲಕ ಕನ್ನಡದ ಓದುಗರಿಗೆ ಪರಿಚಿತರಾಗಿದ್ದ ರಾವ್ ಬೈಲ್ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯುವ ಹಂಬಲ ‘ಅವಧಿ’ಗೆ. ಅವರ ರೇಖೆಗಳ ಜ್ಹಲಕ್ ನೋಡಿ-







ನಾನು ಚಿಕ್ಕಂದಿನಲ್ಲಿ…ರಾವ್ ಬೈಲ್ ರೇಖೆಗಳನ್ನು ನೋಡುತ್ತಿದ್ದೆ. ಇತ್ತಿಚೆಗೆ ಅವರ ರೇಖೆಗಳು ಕಾಣುತ್ತಿಲ್ಲ.
ಬೈಲೆ ರೇಖೆಗಳನ್ನು ನೋಡಿ ಬಾಳ ಖುಶಿ ಆತು..