ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳಕಿನ ಕುಡಿ…

ದೀವಟಿಗೆ ಹಿಡಿದ ದಾರಿಯಲ್ಲಿ ಏನೂ ತೋರುತ್ತಿರಲಿಲ್ಲ. ಹೊರಗೆ ಬೀಸುತ್ತಿದ್ದ ಗಾಳಿಗೆ ಒಳಗಿದ್ದ ಬೆಳಕಿನ ಕುಡಿಯೂ ಕಂಪಿಸುತ್ತಿತ್ತು. ಕತ್ತಲೆಯೇನೋ ಇದ್ದದ್ದೇ. ಅದರಲ್ಲೂ ಕುಂದಾಪುರದ ಆ ಹೈವೇಯಲ್ಲಿ ಆ ಸರಿ ರಾತ್ರಿಯಲ್ಲಿ ಬೆಳಕು ಬೀರುತ್ತಾ ನಿಲ್ಲುವವರಾದರೂ ಯಾರು ?

lateenu.jpg

* * * 

ತ್ರಕರ್ತ ಅರವಿಂದ ನಾವಡ, ಸುದ್ದಿಮನೆಯ ಒತ್ತಡದಲ್ಲೂ ಸಾಹಿತ್ಯಪ್ರೀತಿ ಬೆಳೆಸಿಕೊಂಡವರು. ಹಠಕ್ಕೆ ಬಿದ್ದವರಂತೆ ಸ್ವತಃ ಏನಾದರೂ ಬರೆಯುತ್ತಲೇ ಇರುವವರು. ಮತ್ತೆ ಮತ್ತೆ ಅಕ್ಷರದ ಕನಸುಗಳ ಬಾಗಿಲು ತಟ್ಟುತ್ತಲೇ ಇರುವವರು. ಎಷ್ಟೋ ಸಲ ಅವರ ಬರವಣಿಗೆ, ಅಂತರಂಗ ಬಿಟ್ಟುಕೊಡದ ಹೆಣ್ಣಿನ ಹಾಗೆ ಮುಗುಮ್ಮಾಗಿರುತ್ತದೆ. ನಾವಡ ಸುದ್ದಿ ಬರೆಯುವಾಗಲೂ ಅಷ್ಟೆ. ಇದೆಲ್ಲ ತುಡಿತದ ಪರಿಣಾಮವೋ ಎಂಬಂತೆ ಅವರೀಗ ತಮ್ಮದೇ ಒಂದು ಬ್ಲಾಗ್ ಕೂಡ ರಚಿಸಿಕೊಂಡಿದ್ದಾರೆ. ಈ ಪುಟ್ಟ ಬರಹ ಮತ್ತು ಲಾಟೀನು ಚಿತ್ರ ಅಲ್ಲಿಂದಲೇ ಆಯ್ದದ್ದು. ಸುದ್ದಿ ಬರೆಯುವವನು ಎಂದೇ ತಮ್ಮನ್ನು ಪರಿಚಯಿಸಿಕೊಂಡಿರುವ ನಾವಡ, ಅಂತರ್ಜಾಲದಲ್ಲಿ ಕೂತು “ಚಂಡೆಮದ್ದಳೆ” ಬಾರಿಸುತ್ತಿರುವ ಚೆಂದವನ್ನು ನೀವೂ ನೋಡಿ.

‍ಲೇಖಕರು avadhi

15 November, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading