ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಬೆಂಗಳೂರು ನನ್ನ ಪಾಲಿಗೆ ವಿಶ್ವವಿದ್ಯಾಲಯ…’

ಮುಕ್ತ ವಿಶ್ವವಿದ್ಯಾಲಯ

ಏಣಿಗಿ ಕೊಟ್ರೇಶ್. ಕೊಟ್ಟೂರು

ಚುಕ್ಕಿ ಚುಕ್ಕಿ ಸೇರಿ ಆಗುವ ಸುಂದರವಾದ ಚಿತ್ತಾರದ ರಂಗೋಲಿಯಂತೆ ಪ್ರೇಮ. ಮನೆಯ ಮುಂದೆ ಬಿಡಿಸಿದರೆ ನೋಡಲು ಅದೆಷ್ಟು ಚೆಂದ. ಆ ಪ್ರೇಮದಲ್ಲಿ ಎರಡು ಜೀವಗಳು ಪರಸ್ಪರ ಸೇರಿದಾಗಲೇ ರಂಗೋಲಿಯಂತೆ ಚೆಂದ ಕಾಣೋದು. ಆದರೆ, ಎಲ್ಲರಿಗೂ ಇದರ ಭಾಗ್ಯ ಸಿಗದು. ಯೋಗ ಇದ್ದವರಿಗೆ ಮಾತ್ರ ದೊರಕುವುದು. ಪ್ರೀತಿ ಸಿಕ್ಕ ಪ್ರೇಮಿಗಳು ರಂಗೋಲಿಗೆ ಬಣ್ಣ ತುಂಬಿ ಇನ್ನೂ ಸುಂದರವಾಗಿ ಕಾಣುವಂತೆ ಪರಸ್ಪರ ಹೊಂದಿಕೊಳ್ಳುತ್ತಾರೆ. ಪ್ರೇಮ ಸಿಗದಿದ್ದರೆ..? ಹಾಗೆಯೇ ಒಂದು ಘಟನೆಯು ನಡೆದಿತ್ತು.
ಪಿ.ಯು.ಸಿ ಯಲ್ಲಿ ನನ್ನ ಸ್ನೇಹಿತನಿಗೂ ಪ್ರೀತಿಯ ಅನುಭವ ಆಗಿತ್ತು. ಒಂದು ಹುಡುಗಿಯನ್ನ ತುಂಬಾ ಹಚ್ಚಿಕೊಂಡಿದ್ದ. ಆದರೆ, ಅವಳನ್ನ ಒಂದು ಸಾರಿಯು ಮಾತನಾಡಿಸಿರಲಿಲ್ಲ. ನ್ಯೂ ಇಯರ್ಗೆಂದು ಗ್ರ್ರೀಟಿಂಗ್ ಅವಳಿಗೆ ಕೊಡಬೇಕೆಂದಿದ್ದ, ಕಾಲೇಜಿನಲ್ಲಿ ಕೊಡಲು ಧೈರ್ಯ ಸಾಲಲಿಲ್ಲ. ಆ ಹುಡುಗಿ ಬೇರೆ ಊರಿನಿಂದ ಕಾಲೇಜಿಗೆ ಬರುತ್ತಿದ್ದಳು. ಅಂದು ಗ್ರೀಟಿಂಗ್ ಕೊಟ್ಟು ಮಾತನಾಡಿಸಬೇಕೆಂದು ಒಂದು ಕಿಲೋ ಮೀಟರ್ ಕ್ರಮಿಸಿ. ಗ್ರಿಟಿಂಗ್ ಕೊಟ್ರೆ..? ಎನೇಳಬೇಕು. ಅವ್ಳು..! ಚಾಕಲೇಟ್ ಕೊಟ್ಟು ‘ಅಣ್ಣ ಅವರಿಗೂ ಕೊಡು’ ಅಂದಬಿಡೋದೇ..! ಅದು ಅಕಸ್ಮಾತಾಗಿ ನಮಗೆ ಕೇಳಿಸಿಬಿಡ್ತು.
ಮನೆಗೆ ಬಂದು ಊಟ ಮಾಡಿ ಅದೇ ವಿಷಯಾನ ನೆನಪಿಸಿಕೊಳ್ಳುತ್ತಾ ಮಲಗಿದೆ. ಅರೇ! ನಮಗಾಗಿ ಚಡಪಡಿಸುವ ಒಂದು ಜೀವ ಇದ್ರೇ ಎಷ್ಟು ಚೆನ್ನಾ ಅನಿಸಿದುಂಟು. ಆದ್ರೇ ಅದು ಸಾಧ್ಯವಿಲ್ಲ. ಯಾಕೆಂದರೆ, ನನ್ನ ಕೆಲಸಗಳ ನಡುವೆ ಸಮಯ ಇರಲಿಲ್ಲ. ಬೆಳಗಾದಾಕ್ಷಣ ಮಳೆ ಬಿಸಿಲು ಎನೇ ಇರಲಿ, ಮನೆಮನೆಗೆ ಪೇಪರ್ ಹಾಕಬೇಕು. ನಂತರ ಕೋರಿಯರ್ ಕೊಡಬೇಕು. ಓದ್ಕೋ ಬೇಕು. ಇಷ್ಟೂ ಕೆಲಸದ ನಡುವೆ ಪ್ರೇಮದ ಬಗ್ಗೆ ಯೋಚ್ನೆ ಮಾಡದಕ್ಕೂ ಆಗದು. ನನ್ನ ಸ್ನೇಹಿತ ಒಂದಿನ ಪೇಪರಿನಲ್ಲಿ ಕೆಲಸದ ಜಾಹಿರಾತು ನೋಡಿ. ಮುಂದಿನ ವಾರ ಬೆಂಗಳೂರಿಗೆ ಹೋಗುತೀನಿ ಎಂದು ಹೇಳಿದ. ಆ ಕ್ಷಣಕ್ಕೆ ಚಿತ್ರಮಂದಿರದಲ್ಲಿ ರೀಲ್ ತಿರುಗಿದಂತೆ ನನ್ನ ಮನಸಿನ ಬಾಗಿಲು ತೆರೆದು ಎಳೆ ಎಳೆಯಾಗಿ ಬಿಡುತ್ತಾ ಕಣ್ಣಿನ ಅಂಚಿನಲ್ಲಿ ಸಣ್ಣ ಹನಿ ಬಂತು. ಸುಮಾರು ಒಂದು ವರ್ಷವಾಗಿತ್ತು. ಹೃದಯದಲ್ಲಿ ಬೆಂಗಳೂರಿನ ಅನುಭವದ ಪ್ರಬುದ್ಧ ಪುಸ್ತಕ ಬರೆದು.
ಎಲ್ರೂ ಬೆಂಗಳೂರಿಗೆ ಹೋಗಿ ತುಂಬಾ ದುಡಿತಾರೆ. ನಾನ್ಯಾಕೆ ಹೋಗಬಾರದು ಎಂದೆನಿಸಿತು. ಆಗ ಪೇಪರಿನಲ್ಲೂ ಕೆಲಸದ ಬಗ್ಗೆ ಜಾಹಿರಾತು ಬರುತಿತ್ತು. ಅದನ್ನು ನೋಡಿ ಫೋನ್ ಮಾಡಿ ಎಲ್ಲಾ ವಿವರವನ್ನು ತಿಳಿದುಕೊಂಡೇ, ಕೆಲಸ ಸುಲಭ ಅನಿಸಿತ್ತು. ಒಂದೆರಡು ದಿನದ ನಂತರ ಸುಂದರ ಬೆಂಗಳೂರಿಗೆ ಬಂದೆನು. ಎಲ್ಲವೂ ಹೊಸತು. ಬಿಸಿಯಾಗಿ ಇದ್ದಾಗಲೇ ರುಚಿಯಾಗಿರುವುದು ಊಟ. ಹಾಗೇ ಬೆಂಗಳೂರಿಗೆ ಬಂದಾಗ ಸುಂದರ ಎನಿಸಿತ್ತು ಬೆಂಗಳೂರು. ಫೋನ್ನಲ್ಲಿ ತಿಳಿಸಿದ ಕೆಲಸದ ಬಗೆಗಿನ ಮಾಹಿತಿಯೆಲ್ಲವು ಸುಳ್ಳಾಗಿದ್ದವು. ಪುಣ್ಯಕ್ಕೆ ಈ ಊರಿನಲ್ಲಿ ನಮ್ಮ ಚಿಕ್ಕಪ್ಪ ಇದ್ದದ್ದು ನಂಗೆ ಪುನರ್ಜನ್ಮ ಸಿಕ್ಕಂತಾಗಿತ್ತು. ಊರಿಗೆ ಹಿಂತಿರುಗಿ ಹೋಗುವಂತಿಲ್ಲ. ಢಂಗೂರ ಸಾರಿದ್ದೆ. ನಾನು ಬೆಂಗಳೂರಿಗೆ ಹೋಗುತ್ತೇನೆಂದು. ಎಷ್ಟೆ ಕಷ್ಟವಾಗಲಿ ಇಲ್ಲೇ ಕೆಲಸ ಮಾಡಲೇಬೇಕು.
ಛಲದಿಂದ ಕೆಲಸವನ್ನ ಹುಡುಕುತ್ತಾ ಹೊರಟೆ. ಸತತವಾಗಿ ಒಂದು ವಾರ ಅಡ್ಡಾಡಿದರೂ ಒಂದೂ ಕೆಲ್ಸ ಸಿಗಲಿಲ್ಲ. ಕೊನೆಗೆ ದೇವ್ರೇ ನನ್ನ ಕಷ್ಟ ನೋಡಲಾರದೇ ಒಂದು ಕೆಲ್ಸ ಕೊಡಿಸಿದ, ಅದು ನೈಟ್ ಸಿಫ್ಟ್ ಗಾರ್ಮೆಂಟ್ ನಲ್ಲಿ. ಎಂಗೋ ಸಿಕ್ಕಿದ್ದ ಕೆಲ್ಸವನ್ನು ನಿಯತ್ತಾಗಿ ಮಾಡುತ್ತಿದ್ದೆನು. ಊರಿನಲ್ಲಿ ನನಗೆ ಸ್ವಲ್ಪ ಸಿಟ್ಟು ಜಾಸ್ತಿನೇ ಇತ್ತು. ಚಿಕ್ಕ ಚಿಕ್ಕ ವಿಷಯಕ್ಕೂ ಮನೆಯವರ ಮೇಲೆ ರೇಗಾಡತಿದ್ದೆೆ. ಆದರೆ, ಇಲ್ಲಿನ ಜನರಿಂದ ಅನುಭವ ಮತ್ತು ಅವಮಾನ ವಿಷಯಗಳ ಬಗ್ಗೆ ನನಗೆ ಜಗತ್ತಿನ ವಾಸ್ತವ ಸತ್ಯ ಪಾಠ ಹೇಳುತ್ತಾ ಹೊರಟಿತು. ಮನಸ್ಸು ಇನ್ನೂ ಸಧೃಡವಾಯಿತು. ಎಲ್ಲರಿಗೂ ನಾನು ಹೊಂದಿಕೊಂಡಿದ್ದರಿಂದ ಯಾವುದೇ ತೊಂದರೆಯಾಗಲ್ಲಿಲ್ಲ. ಸುಮಾರು ಆರು, ಏಳು ತಿಂಗಳ ನಂತರ ನನ್ನ ಬಗ್ಗೆ ತಿಳಿದುಕೊಂಡರು. ಓದುವುದನ್ನು ಅರ್ಧಕ್ಕೆ ನಿಲ್ಲಿಸಿರುವುದು ಅವರಿಗೆಲ್ಲ ತಿಳಿಯಿತು. ಆಗ ಅವರೆಲ್ಲರು ನನಗೆ ಬುದ್ಧಿಮಾತು ಹೇಳಿದರು.
ಅವರು ಹೇಳಿದ ಮಾತುಗಳು ಸರಿ ಎನಿಸಿತು. ಓದುವ ಹುಮ್ಮಸ್ಸು ನನ್ನಲ್ಲಿ ಹುಟ್ಟಿತು. ಊರಿಗೆ ಹಿಂತಿರುಗಿ ಬಿಟ್ಟುಹೋಗಿದ್ದ ಪೇಪರ್ ಮತ್ತು ಕೊರಿಯರ್ ಕೆಲಸವನ್ನೇ ಮಾಡುತ್ತಾ ಕಾಲೇಜಿಗೂ ಸೇರಿ ಕೊಂಡೆ. ಬೆಂಗಳೂರು ನನಗೆ ಕಲಿಸಿದ ಪಾಠವನ್ನ ಜೀವನದ ಏಳಿಗೆಗೆ ರೂಢಿಸಿಕೊಂಡೆ. ಇಷ್ಟೆಲ್ಲ ಘಟನೆ ನಡೆದರು ಯಾರ ಮುಂದೆಯೂ ತಿಳಿಸಿರಲಿಲ್ಲದ ನಾನು ನನ್ನ ಸ್ನೇಹಿತನಿಗೆ ತಿಳಿಸಿದೆ. ಅಲ್ಲಿನ ಪರಿಸ್ಥಿತಿಯನ್ನ ಅವನಿಗೆ ಹೇಳಿದಾಗ ಕೊನೆಗೆ ನನ್ನ ಸ್ನೇಹಿತನು ‘ನಿನ್ನ ವರ್ತನೆಯಲ್ಲಿ ಇಷ್ಟೂ ಬದಲಾವಣೆಯಾಗಲು ಕಾರಣ ಬೆಂಗಳೂರು’ ಎಂದು ಹೇಳಿ ಆ ಊರಿಗೆ ನನ್ನದೊಂದು ಸಲಾಮ್..! ಎಂದನು.
 

‍ಲೇಖಕರು G

7 November, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading