ಮಹಡಿ ಮನೆಯ ಹುಡುಗ ಟಿ.ವಿ. ನೋಡುತ್ತಿದ್ದ. ಇದ್ದಕ್ಕಿದ್ದಂತೆಯೇ ಹೊರಗೆ, ಗಾಳಿ ಮಳೆ ಸುರಿಯ ತೊಡಗಿತು.
ಟಿ.ವಿ. ಬ್ಲರ್ರ್ ಆಗಿ, ಆಫ್ ಆಗಿ ಹೋಯಿತು. ಹುಡುಗ ಸಿಟ್ಟಿನಿಂದ ‘‘ಥತ್ ದರಿದ್ರ ಮಳೆ…’’ ಎಂದು ಶಪಿಸಿದ.
ಅವನ ಶಾಪದ ಫಲವೋ ಏನೋ…ಮಳೆ ನಿಂತಿತು. ಟಿ.ವಿ. ಮತ್ತೆ ಮಾತನಾಡತೊಡಗಿತು.
ಹುಡುಗ ಖುಷಿಯಿಂದ ‘ಥ್ಯಾಂಕ್ಯೂ ಗಾಡ್’ ಎಂದ.
ಮರುದಿನ ದಿನಪತ್ರಿಕೆಯ ಮೂಲೆಯಲ್ಲೊಂದು ಸಣ್ಣ ಸುದ್ದಿಯಿತ್ತು
‘‘ಮಳೆಯಿಲ್ಲದೆ ಕಂಗೆಟ್ಟ ಇಬ್ಬರು ರೈತರ ಆತ್ಮಹತ್ಯೆ’’




0 Comments