ಬಾಳಾಸಾಹೇಬರೇ.. ಇದು ಸರಿಯೇ..??

ರೇಣುಕಾರಾಧ್ಯ. ಎಚ್.ಎಸ್.

ಕವಿ ಮಮತಾ ಅರಸೀಕೆರೆಯವರ ವಾಲ್ ನಲ್ಲಿ ಇದೀಗ ಈ ಕೆಳಗಿನ ಪೋಸ್ಟ್ ನೋಡಿದೆ.ಪೋಸ್ಟ್ ಓದಿದ ಕ್ಷಣವೇ ಕೆಲ ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡವು.ಅವುಗಳನ್ನು ನಿಮ್ಮ ಮುಂದಿಟ್ಟಿದ್ದೇನೆ….

(ATTENTION PLS
ಕೇಂದ್ರ ಸಾಹಿತ್ಯ ಅಕಾದೆಮಿ 40 ವರ್ಷದೊಳಗಿನ ಕವಿಗಳ ಅಂಥಾಲಜಿ ಹೊರತರುತ್ತಿದ್ದೆ .
2 ಪದ್ಯ ಹಾಗೂ ಒಪ್ಪಿಗೆ ಪತ್ರ ವನ್ನ (ಕಡ್ಡಾಯ) ಬಾಳಾಸಾಹೇಬ್ ಲೋಕಾಪುರರ ಮೈಲ್ ಐಡಿಗೆ ಕಳಿಸಲು ಕೋರಿದೆ .
ವಯಸ್ಸಿನ ಮಿತಿಯಲ್ಲಿ ಒಂದೆರಡು ವರ್ಷ ಹೆಚ್ಚಿದ್ದರೂ ಪರವಾಗಿಲ್ಲವಂತೆ
[email protected])
– Mamatha Arsikere

– ಇದು ನನಗೆ ಅರ್ಥವಾಗುತ್ತಿಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿಯ ಈ ಆ್ಯಂಥಾಲಜಿಯ ಸಂಪಾದಕರು, ಲೋಕಾಪುರ ಬಾಳಾ ಸಾಹೇಬರೆ? ಅವರೇ ಆಗಿದ್ದರೆ, 40 ವಯಸ್ಸಿನ ಒಳಗಡೆ ಕನ್ನಡದಲ್ಲಿ ಉತ್ತಮ ಕವಿತೆಗಳನ್ನು ಬರೆಯುತ್ತಿರುವ ಕವಿಗಳ ಕವಿತೆಗಳನ್ನು ಮೊದಲು ಸಂಗ್ರಹಿಸಿ, ಕವಿತೆಗಳನ್ನ ಖುದ್ದು ಓದಿ, ಅದು ಅವರಿಗೆ ಇಷ್ಟವಾಗಿ, ಆ ನಂತರ ಇಂಥ ಕವಿಯ, ಇಂಥ ಕವಿತೆ, ಕೇಂದ್ರ ಸಾಹಿತ್ಯ ಅಕಾಡೆಮಿ ಹೊರತರುತ್ತಿರುವ ಆ್ಯಂಥಾಲಜಿಗೆ ಆಯ್ಕೆಯಾಗಿದೆ, ಅದಕ್ಕಾಗಿ ನಿಮ್ಮ ಒಪ್ಪಿಗೆ ಪತ್ರ ಬೇಕಾಗಿದೆ ಎಂದು ಖುದ್ದು ಲೋಕಾಪುರರು      E- mail / ಪತ್ರವನ್ನು ಕವಿಗಳಿಗೆ ಬರೆಯಬೇಕಲ್ಲವೆ.

ಆದರೆ ಇಲ್ಲಿ ನೋಡಿದರೆ, ಸಂಪಾದಕರು ಕೇಳುತ್ತಿರುವುದು ಸ್ವತಃ ಕವಿಗಳೆ ಎರಡು ಕವಿತೆಗಳನ್ನ ಮತ್ತು ಒಪ್ಪಿಗೆ ಪತ್ರವನ್ನು ಕಳಿಸಿದರೆ ಆಗ ಸಂಪಾದಕರು, ಆ ಕವಿಗಳು ಕಳಿಸಿದ ಕವಿತೆಗಳಲ್ಲಿ ಚೆನ್ನಾಗಿರುವ ಕವಿತೆಗಳನ್ನ ಆಯ್ಕೆ ಮಾಡಿ ಆ್ಯಂಥಾಲಜಿಗೆ ಸೇರಿಸಬಹುದು ಅನ್ನಿಸುತ್ತೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಹೊರತರುತ್ತಿರುವ ಆ್ಯಂಥಾಲಜಿಯ ವಿಷಯ ತಿಳಿಯದ, ಮತ್ತು ತಿಳಿದು ತಮ್ಮ ಕವಿತೆಗಳನ್ನು ಕಳಿಸಲು ಮುಜುಗರ ಪಡುವ ಉತ್ತಮ ಕವಿಗಳ ಕವಿತೆಗಳು ಈ ಆ್ಯಂಥಾಲಜಿಯಿಂದ ಹೊರಗೆ ಉಳಿಯುತ್ತವೆ ಅಲ್ಲವೆ?

ಆಗ ಈ ಆ್ಯಂಥಾಲಜಿಯು ಒಂದು ಮಾದರಿ ಆ್ಯಂಥಾಲಜಿ ಆಗುತ್ತದೆಯೆ?

ಕೇಂದ್ರ ಸಾಹಿತ್ಯ ಅಕಾಡೆಮಿ ಒಂದು ಉತ್ತಮ ಆ್ಯಂಥಾಲಜಿ ತರುವ ಯೋಜನೆಯನ್ನು ಸಂಪಾದಕರ ಮುಂದಿಟ್ಟಿದೆ. ಆದರೆ ಸಂಪಾದಕರು ಅನುಸರಿಸುತ್ತಿರುವ ಈ ಮೇಲಿನ ಮಾರ್ಗ ಉತ್ತಮ ಆ್ಯಂಥಾಲಜಿಯ ಉದ್ದೇಶವನ್ನು ಅನ್ನು ಹಾಳುಮಾಡುತ್ತಿದೆ ಅನ್ನಿಸುವುದಿಲ್ಲವೆ…

‍ಲೇಖಕರು avadhi

June 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Champaka

    ಇದು ಲೋಕಾಪುರ ಅವರಿಗೆ ಸೀಮಿತವಾದ ಸಂಗತಿಯೇನೂ ಅಲ್ಲ. ಕನ್ನಡದ ಕಥೆಗಳನ್ನು ಮರಾಠಿಗೆ ಅನುವಾದಿಸುವ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಗಿರೀಶ ಜಕಾಪುರೆ ಹಾಗೂ ಅವರ ಗೆಳೆಯರು ಹೀಗೆಯೇ ಕಥೆಗಳು, ಕಥೆಗಾರರ ಹೆಸರುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಸಂಪಾದನೆ ಎನ್ನುವ ಪರಿಕಲ್ಪನೆಯನ್ನು ಅವಮಾನಿಸುವ ನಡವಳಿಕೆಗಳಿವು. ಕನ್ನಡ ಸಾಹಿತ್ಯದಲ್ಲಿ ಲಜ್ಜೆ ಎನ್ನುವುದೇ ಕಾಣೆಯಾಗುತ್ತಿದೆ.
    –ಚಂಪಕಾ

    ಪ್ರತಿಕ್ರಿಯೆ
  2. prakash konapur

    ನಿಜ
    ಅವರೇ ಕವಿತೆಗಳ ಆಯ್ಕೆ ಮಾಡಿ ಕವಿಗಳ ಒಪ್ಪಿಗೆ ಪತ್ರ ಕೇಳುವುದು ಒಳ್ಳೆಯದು
    ನಾಲವತ್ತು ವರ್ಷದೊಳಗಿನ ಎನ್ನುವ ನಿಬಂಧನೆ ಸರಿಯಲ್ಲ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: