ಶಹಾಪುರದ ಪಂಪಣ್ಣ ಪತ್ತಾರ ನೆನಪಿನ ಸಿರಿಸಂಪದ ಪ್ರತಿಷ್ಠಾನವು ನೀಡುವ 2011ನೇ ಸಾಲಿನ ಫೆಲೋಶಿಪ್ಗೆ ಕೇರಳದ ಕಾಸರಗೋಡು ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಾಲಕೃಷ್ಣ ಹೊಸಂಗಡಿ ಅವರು ಆಯ್ಕೆಯಾಗಿದ್ದಾರೆ.
ಪ್ರತಿವರ್ಷವು ಮುಖ್ಯವಾಹಿನಿಯಲ್ಲಿ ಕಾಣಿಸದ ವ್ಯಕ್ತಿಗಳನ್ನು ಕುರಿತು ಅಧ್ಯಯನ ನಡೆಸುವವರಿಗೆ ನೀಡಲಾಗುವ ಫೆಲೋಶಿಪ್ 10 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ ಎಂದು ಪ್ರತಿಷ್ಠಾನದ ಸಂಚಾಲಕ ಅಮರೇಶ ಹಿರೇಮಠ ತಿಳಿಸಿದ್ದಾರೆ.
ಬಾಲಕೃಷ್ಣ ಹೊಸಂಗಡಿ ಅವರು ಶ್ರವಣಬೆಳಗೊಳದ ಗೊಮ್ಮಟನ ವಿಗ್ರಹ ಕೆತ್ತಿದ ಶಿಲ್ಪಿಯನ್ನು ಕುರಿತು ಅಧ್ಯಯನ ನಡೆಸಿ ನೀಡುವ ಅದರ ಫಲಿತವನ್ನು ಪ್ರತಿಷ್ಠಾನವು ಪ್ರಕಟಿಸಲಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಾಲಕೃಷ್ಣ ಅವರಿಗೆ ಫೆಲೋಶಿಪ್ ಪ್ರದಾನ ಮಾಡಲಾಗುತ್ತದೆ







’ಎಲ್ಲಿಯ ಶಹಪುರ’ ’ಎಲ್ಲಿಯ ಕಾಸರಗೋಡು’ ಒಳ್ಳೆಯ ಕೆಲಸ
Abhinandanegalu.
Varadaraja Chandragiri
this is good. Shapurd name tndidare. Thanks
Sir, Abhinandanegalu.sirisampad pratisthanad
`choice is best choice’ annabeku.
-Manik bhure