ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಕ್ಸ್ ಆಫೀಸ್ ಬೇಗಂ – ಮಲೆಗಳಲ್ಲಿ ಮದುಮಗಳು, ಫೋಟೋ ಆಲ್ಬಂ

ಕೇವಲ  ಐ ಪಿ ಎಲ್ ಮ್ಯಾಚ್ ಗಳಿಗಷ್ಟೇ ಕ್ಯೂ ಅಲ್ಲ. ಮಲೆಗಳಲಿ ಮದುಮಗಳು ನೋಡೋಕ್ಕೂ ಜನ ಕ್ಯೂ ನಿಂತಿದಾರೆ. ಮುಗಿಬಿದ್ದು, ಇರುಳಗಳೆನ್ನದೆ ಟಿಕೆಟ್ ಗಾಗಿ ರಂಗಾಸಕ್ತರು ಕಾದು ನಿಂತದ್ದು  ಮದುಮಗಳ ಹೆಗ್ಗಳಿಕೆ. ರಾಜ್ಯದ ಮೂಲೆ ಮೂಲೆಯಿಂದ ಬಂದು ಟಿಕೆಟ್ ಗಾಗಿ ಒಂಟಿ ಕಾಲಲ್ಲಿ ನಿಂತಿದ್ದಾರೆ. ದೇಶ ವಿದೇಶಗಳಿಂದ ಬಂದವರೂ ಕ್ಯೂನಲ್ಲಿ ನಿಂತು ಟಿಕೆಟ್ ಗಾಗಿ ಹವಣಿಸಿದ್ದಾರೆ. ಮಳೆಬಂದರೂ ಮದುಮಗಳ ಮೇಲಿನ ಪ್ರೀತಿ ಚೂರೂ ಕಮ್ಮಿಯಾಗಿಲ್ಲ. ಇದು ಕಳೆದು ಹೋಗುತ್ತಿದ್ದ ರಂಗಾಸಕ್ತಿಯನ್ನು ಮತ್ತೆ ಹಿಡಿದಿಟ್ಟ ಚಿನ್ನದ ಘಳಿಗೆ. ಇಲ್ಲೂ ಸಹ ಟಿಕೆಟ್ ಸಿಕ್ಕೋರು ಹಿರಿ ಹಿರಿ ಹಿಗ್ಗಿದಾರೆ, ಟಿಕೆಟ್ ಸಿಗದವರು ಲೊಚಗುಟ್ಟಿದ್ದಾರೆ.  ಇಷ್ಟೆಲ್ಲಾ ನಡೆದ ಮೇಲೂ ಮಲೆಗಳಲಿ ಮದುಮಗಳು ಬಾಕ್ಸ್ ಆಫೀಸಿನ ಬಾದ್ ಷಾ ಅಲ್ಲದೆ ಇನ್ನೇನು? ಇಷ್ಟು ಯಶಗಂಡಿರುವ ಮಲೆಗಳಲಿ ಮದುಮಗಳ ಬಾಕ್ಸ್ ಆಫೀಸ್ ನ ಕೆಲವು ಛಾಯಾ ಚಿತ್ರಗಳು ಅವಧಿ ಆಪ್ತರಿಗೆ…

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:

‍ಲೇಖಕರು avadhi

16 May, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading