ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬಹುರೂಪಿ’ ಪ್ರಕಟಣೆ, ಅರುಣ್ ಕುಮಾರ್ ವಿನ್ಯಾಸಕ್ಕೆ ಪುಸ್ತಕ ಪ್ರಾಧಿಕಾರದ ಮನ್ನಣೆ

ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ೨೦೨೧ ನೆಯ ಸಾಲಿನ ಪ್ರಶಸ್ತಿಯನ್ನು ಘೋಷಿಸಲಾಗಿದ್ದು’ ಬಹುರೂಪಿ’ಯ ಪ್ರಕಟಣೆ, ಅರುಣ್ ಕುಮಾರ್ ವಿನ್ಯಾಸ ಮನ್ನಣೆ ಗಳಿಸಿದೆ.

ಡಾ ಮುಜಾಫರ್ ಅಸ್ಸಾದಿ ಅವರ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಕೃತಿಯ ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಪಾತ್ರವಾಗಿದೆ.

ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಇಂದು ಪ್ರಕಟಿಸಿದರು. ಇಂದು ನಡೆದ ಸ್ಥಾಯಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಈ ಪ್ರಶಸ್ತಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆದು ಸರ್ವಾನುಮತದಿಂದ ಪ್ರಶಸ್ತಿಗಳ ಆಯ್ಕೆ ಮಾಡಲಾಯಿತು.

ಖ್ಯಾತ ಕಲಾವಿದ ಜಿ ಅರುಣ್ ಕುಮಾರ್ ಅವರ ವಿನ್ಯಾಸ ಸಾಕಷ್ಟು ಓದುಗರ ಗಮನ ಸೆಳೆದಿತ್ತು. ಅರುಣ್ ಸಿನಿ ಬಜ್ ಅಂತರ್ಜಾಲ ಸಿನಿ ಪತ್ರಿಕೆಯ ಸಂಸ್ಥಾಪಕ ಸಂಪಾದಕರು. ಇವರ ವಿನ್ಯಾಸ ಪ್ರಕಾಶನ ಕ್ಷೇತ್ರದಲ್ಲಿ ತನ್ನದೇ ಹೆಜ್ಜೆ ಗುರುತನ್ನು ಮೂಡಿಸಿದೆ.

ಬಹುಮಾನ ರೂ.10 ಸಾವಿರ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.

‍ಲೇಖಕರು avadhi

4 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading