ಬಹಳ ನೋವಿನಿಂದ ಹೇಳುತ್ತಿದ್ದೇನೆ.. 

 

 

 

 

ಒಂದು ಸಣ್ಣ ಲೆಕ್ಕಾಚಾರ 

——————————————

ಪಲ್ಲವಿ ಐದೂರು 

 

 

 

ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ 58-60% ದಷ್ಟು ಜನ ಕೆಳ ಮಧ್ಯಮ ವರ್ಗದವರು. 30-32% ರಷ್ಟು ತೀರ ಕೆಳ ವರ್ಗದ ಅಂದರೆ below poverty line ಅಲ್ಲಿರುವ ಜನ. ಇನ್ನು 9-11% ದಷ್ಟು ಜನ ಮೇಲ್ಮಧ್ಯಮ ವರ್ಗ ಅಥವ ತಕ್ಕ ಮಟ್ಟಿಗೆ ಶ್ರೀಮಂತರೆಂದು ಪರಿಗಣಿಸಲ್ಪಡುವ ಜನ.  ಇದಲ್ಲದೆ 1% ಜನರಿದ್ದಾರೆ ಅವರುಗಳು ಈ ದೇಶದ ಅತ್ಯಂತ ಶ್ರೀಮಂತರೆಂದುಜಗತ್ತಿನಾದ್ಯಂತ ಗುರುತಿಸಿಕೊಂಡವರು. ಈ 1% ಜನರಲ್ಲಿ ಈ ದೇಶದ ಒಟ್ಟು ಐಶ್ವರ್ಯದ ಅಥವ total wealth ಅಂತ ಏನು ಕರೀತೀವಿ  ಅದರ 60% ದಷ್ಟು ಜಮೆಯಾಗಿದೆ.  ಹಾಗಾದರೆ 99% ಭಾರತೀಯರಾದ ನಮಗೆ ಉಳಿದಿದ್ದು ಕೇವಲ 40% ರಷ್ಟುಸಂಪತ್ತಷ್ಟೇ..!!

ಇದು ಒಂದು ಲೆಕ್ಕಾಚಾರವಾದರೆ, ಕೆಳವರ್ಗದ 30% ಜನರಿಗೆ ನಮ್ಮ ದೇಶದಲ್ಸಿ ಸಿಗುತ್ತಿರುವ ಸೌಲಭ್ಯಗಳಾದರೂ ಏನು?ನಿಮ್ಮಲ್ಲಿ ಬಿಪಿಎಲ್ ಕಾರ್ಡ್ ಇದ್ದಲ್ಲಿ ನಾವು ರೇಷನ್ ಕೊಡ್ತೀವಿ, ಬೇಯಿಸಿಕೊಂಡು ತಿನ್ನಿ. ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆಸೇರಿಸಿ ನಾವು 10 ನೇ ತರಗತಿಯವರೆಗಿನ ಉಚಿತ ಶಿಕ್ಷಣ ಕೊಡ್ತೀವಿ. ಮುಂದೆ?? ಕೆಲಸಕ್ಕೇನು ದಾರಿ?  10ನೇ ತರಗತಿಯನಂತರದ ಶಿಕ್ಷಣಕ್ಕೇನು ದಾರಿ..?  ಇನ್ನು ಸರಕಾರಿ ಕಾಲೇಜುಗಳ  ಶಿಕ್ಷಣವನ್ನು ನೆಚ್ಚಿಕೊಂಡು ಓದುವುದಾದರೂ ಬಡತನಕ್ಕೇನು ದಾರಿ?? ಇವರನ್ನು ನಿಜವಾಗಲೂ ಮೇಲೆತ್ತುವ ಯಾವ  ಜನಪರ ಕಾರ್ಯಗಳೂ ಆಸ್ಥೆಯಿಂದ  ನಡೆದಿವೆಯಾ?

ಇನ್ನು ಕೆಳ ಮಧ್ಯಮ ವರ್ಗದ ಜನರ ಪಾಡು ಇದಕ್ಕಿಂತ ಮೋಸ. ಈ ವರ್ಗದ ಜನ ಒಂದೊಳ್ಳೆಯ ಬದುಕಿನ ಭವಿಷ್ಯದ ಕನಸು ಕಟ್ಟಿ ಸಾಲ ಸೋಲ  ಮಾಡಿಯಾದರೂ ತಮ್ಮ ಮಕ್ಕಳಿಗೆ ಒಂದು ಹಂತದ ವಿದ್ಯಾಭ್ಯಾಸ ಕೊಡಿಸಿದರೂ ಅಷ್ಟೂ 60% ಜನಸಂಖ್ಯೆಗೆ ಉದ್ಯೋಗ ಖಾತ್ರಿಯೇ? ಇಲ್ಲ.  ಈ ವರ್ಗದ ಜನರು ಅದೆಷ್ಟು ಅತಂತ್ರರು ಅಂದರೆ ಸ್ವಂತ ಉದ್ಯೋಗ ಮಾಡಲು ಬಂಡವಾಳದ ಸಮಸ್ಯೆ, ಕೆಲಸವಂತೂ ಮೊದಲೇ ಸಿಗದು..  ಇವೆಲ್ಲವನ್ನೂ ಮೀರಿ ಜೀವನಕ್ಕೊಂದು ದಾರಿ ಮಾಡಿಕೊಳ್ಳುವುದು ಎಷ್ಟು ತುಟ್ಟಿಯೋಚಿಸಿ..

ಇಷ್ಟೆಲ್ಲ ಯಾಕೆ ಬರೆಯಬೇಕಾಗಿ ಬಂತೆಂದರೆ, ಮೊನ್ನೆ ನನ್ನ ಮಗನ ಬ್ಯಾಡ್ಮಿಂಟನ್ ಕಿಟ್ ಬ್ಯಾಗ್ ಹರಿದಿದ್ದು ಹೊಸ ಕಿಟ್ ಕೊಂಡುಕೊಳ್ಳುವುದಕ್ಕೆ ಸ್ಪೋರ್ಟ್ಸ್ ಶಾಪ್ ಗೆ ಹೋಗಿದ್ದೆ. ಇಲ್ಲೂ ಒಂದು ಸಣ್ಣ ಲೆಕ್ಕ ಕೊಡ್ತೀನಿ ನೋಡಿ.., ಒಂದು ಕಂಪ್ಲೀಟ್ ಬ್ಯಾಡ್ಮಿಂಟನ್ ಕಿಟ್ ಬೆಲೆ ಕನಿಷ್ಟ 15,000 ರಿಂದ 20,000/-

ಟೆನ್ನಿಸ್ ಗೂ ಹೆಚ್ಚು ಕಡಿಮೆ ಇಷ್ಟೇ. ಕ್ರಿಕೆಟ್ ಕಿಟ್ ಕೂಡ ಮಿನಿಮಮ್ 10,000ರಿಂದ 15,000/-.  ಇನ್ನು ಒಬ್ಬ ಅಥ್ಲೀಟ್ ಗೆ ಬರೀ ಕಿಟ್ ಗೇ  10000/-  ಖರ್ಚು ಮಾಡಬೇಕು.  ಇವೆಲ್ಲವೂ ನಮ್ಮ ದೇಶದ ಹೊಸ ಟ್ಯಾಕ್ಸ್ ಪದ್ಧತಿಯ (GST) ಪ್ರಕಾರ ಲಕ್ಸುರಿ ಐಟಮ್ಸ್ ಅಡಿಯಲ್ಲಿ ಬರುತ್ತೆ.  ಇವುಗಳಿಗೆ 5% ದಷ್ಟಿದ್ದ ಟ್ಯಾಕ್ಸ್ ಏಕಾಏಕಿ 12% ರಿಂದ 28% ದಷ್ಟಾಗಿದೆ.  ನಾನು 28% ಟ್ಯಾಕ್ಸ್ ಪಾವತಿಸಿ ಕಿಟ್ ಬ್ಯಾಗ್ ಕೊಂಡುಕೊಂಡಿದ್ದಾಯ್ತು..  ಇದಲ್ಲದೆ ಕೋಚಿಂಗ್ ಫೀ ಮೇಲೂ GST ಇದೆ!!

ಈಗ ಹೇಳಿ, ಒಬ್ಬ ಬಡ ಅಥವ ಕೆಳ ಮಧ್ಯಮ ವರ್ಗದ ಮನುಷ್ಯ ಇಷ್ಟೆಲ್ಲವನ್ನೂ ತೆತ್ತು ಯಾವುದೇ ತರಹದ ಸ್ಥಿರ ಆದಾಯಕ್ಕೆಮೂಲವಲ್ಲದ ಸ್ಪೋರ್ಟ್ಸ್ ಅನ್ನುವ ಮರೀಚಿಕೆಯ ಬೆನ್ನತ್ತಲು ಸಾಧ್ಯವಾ? ಸ್ಪೋರ್ಟ್ಸ್ ಅನ್ನು ಆಯ್ಕೆ ಮಾಡಿಕೊಂಡವರಿಗೆ ತಿಂಗಳಿಗೆ ಕನಿಷ್ಟ ಖರ್ಚೇ 20000 ದಿಂದ 25000/-.  ಇದನ್ನು ಎಷ್ಟು ಮಂದಿ ತಂದೆ ತಾಯಿ ಭರಿಸಬಲ್ಲರು?

ಇನ್ನು ಯಾವುದೇ ಸ್ಪೋರ್ಟ್ಸ್ಅಕಾಡೆಮಿಗಳಿಗೂ ಸರಕಾರದಿಂದ ಸಬ್ಸಿಡಿ ಸೌಲಭ್ಯ ಇಲ್ಲದೇ ಇರುವುದರಿಂದ ಈ ಅಕಾಡೆಮಿಗಳು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಉಚಿತ ತರಬೇತಿ ನೀಡುವ ಪ್ರಶ್ನೆಯೇ ಇಲ್ಲ. ಇನ್ನು ಸರಕಾರದ ವತಿಯಿಂದ ಪ್ರತಿಭೆಗಳನ್ನ ಗುರುತಿಸುವ ಕಾರ್ಯ ಎಷ್ಟರ ಮಟ್ಟಿಗೆ ನಡೀತಿದೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.. ಇನ್ನು ಪ್ರಾಯೋಜಕರು, ಸ್ವಂತ ಖರ್ಚಿನಲ್ಲಿ ಕಲಿತುಒಂದು ಹಂತ ತಲುಪಿದರಷ್ಟೇ  ಆ ಯೋಗವೂ ಕೂಡ. ಒಟ್ಟಿನಲ್ಲಿ ಆಸಕ್ತಿಯನ್ನು ಗುರುತಿಸಿ ಪೋಷಿಸುವ ಕೆಲಸ ನಮ್ಮ ದೇಶದಲ್ಲಿ ನಡೆಯುವುದಿಲ್ಲ.

ಪಡೇಗಾ ಇಂಡಿಯಾ ತೊ ಬಡೇಗಾ ಇಂಡಿಯಾ , ಖೇಲೊ ಇಂಡಿಯಾ ಖೇಲೋ ಇವೆಲ್ಲ ಪ್ರಚಾರದ ಸ್ಲೋಗನ್ ಗಳಷ್ಟೇ!! ದುಡಿದಿದ್ದರಲ್ಲಿ 35-40% ಟ್ಯಾಕ್ಸ್ ಕಟ್ಟುವುದಲ್ಲದೇ ಉಳಿದಿದ್ದರಲ್ಲಿ ಕೊಳ್ಳುವ ಅನುಭವಿಸುವ ಪ್ರತಿಯೊಂದರ ಮೇಲೂ GST ಹೆಸರಿನಲ್ಲಿ ಮತ್ತೆ ಬರೆ. !!

ಒಂದು ನಿರ್ದಿಷ್ಟ ರೀತಿಯ ಅಗತ್ಯಗಳನ್ನು ಅಭಿವ್ರದ್ಧಿಯನ್ನು ಗಮನದಲ್ಲಿಟ್ಟುಕೊಂಡು ಜನರ ಸ್ಥಿತಿಗತಿಗಳನ್ನು ಯೋಚಿಸಿ GST ರೂಪಿಸಿದ್ದರೆ ಯಾರೊಬ್ಬರ  ತಕರಾರು ಇರುತ್ತಿರಲಿಲ್ಲ.  ಆದರೆ ಆಗಿದ್ದೇನು?!?

ಮಾತೆತ್ತಿದರೆ ಸದ್ದಡಗಿಸುವ ಕೆಲಸವೂ ಯಾವುದೇ ಭಯವಿಲ್ಲದೆ ನಿರಾತಂಕವಾಗಿ ನಡೆಯುತ್ತಿದೆ ಈ ದೇಶದಲ್ಲಿ.!!!

ಸರಿಯಾದ ರೂಪು ರೇಷೆಗಳಿಲ್ಲದ, ಲೆಕ್ಕಾಚಾರವಿಲ್ಲದ ದೂರದ್ಱಷ್ಟಿಯಿಲ್ಲದ ಸರಿಯಾದ ವಿದ್ಯೆಯಿಲ್ಲದ ಬೊಗಳೆ ದಾಸಯ್ಯನಂಥವರು ಅಧಿಕಾರದ ಚುಕ್ಕಾಣಿ  ಹಿಡಿದರೆ ಇದಕ್ಕಿಂಥ ಹೆಚ್ಚಿನದೇನು ನಿರೀಕ್ಷೆ ಮಾಡಲು ಸಾಧ್ಯ? ಪ್ರತಿಯೊಂದು ತಪ್ಪನ್ನೂ ಸಮರ್ಥನೆಮಾಡಿಕೊಳ್ಳುವುದರಿಂದ ಪರಿಹಾರವಂತೂ ಅಸಾಧ್ಯ..  ಅಭಿವ್ಖದ್ಧಿಯ ಹಾದಿಯಲ್ಲಿ ಸಾಗಬೇಕಾದ ನಾವುಗಳು ಹಿಮ್ಮುಖ ನಡಿಗೆಪ್ರಾರಂಭಿಸಿಯಾಗಿದೆ..

ಸಾಮಾನ್ಯ ಕೆಳ ಮಧ್ಯಮ ವರ್ಗಕ್ಕೆ ಸೇರಿರುವ ನಾನು ಗಳಿಕೆಯ ಬಹಳಷ್ಟು ಟ್ಯಾಕ್ಸ್ ರೂಪದಲ್ಲಿ  ಸುರಿಯುತ್ತಿರುವುದಕ್ಕೆ ಬಹಳ ನೋವಿನಿಂದ ಹೇಳುತ್ತಿದ್ದೇನೆ..  ಕನಸು ಬಲು ದುಬಾರಿ…

‍ಲೇಖಕರು avadhi

October 25, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Praveen Chandra

    Wonderfully explained the reality on the ground with regard to Gap between rich,
    super rich n the middle class segment, GST impact , situation in sports arena..eye opener for many … Keep writing

    ಪ್ರತಿಕ್ರಿಯೆ
    • ಉಷಾ ರೈ

      ಪ್ರತೀಸಲ ಏನಾದರೂ ಖರೀದಿಸುವಾಗ ಜಿಎಸ್ ಟಿ , ಎಸ್ ಜಿ ಎಸ್ ಟಿ ಎಂದು ಒಂದು ಸಾಮಾನಿಗೆ ೨೮+೨೮% ಹೆಚ್ಚು ಹಣ ಪಾವತಿಸುವಾಗ ನಿಮ್ಮ ಹಾಗೇ ನಾನೂ ನೊಂದು ಕೊಂಡುದಿದೆ. ಅದರ ಮೇಲೆ ಇನ್ ಕಂ ಟ್ಯಾಕ್ಸ್ ಕೊಡುತ್ತೇವೆ. ಮದ್ಯಮ ಮತ್ತು ಕೆಳ ಮದ್ಯಮ ವರ್ಗದವರು, ತಮ್ಮ ಅಲ್ಪಸ್ವಲ್ಪ ಉಳಿತಾಯದ ಹಾಗೂ ನಿವೃತ್ತಿ ವೇತನದಲ್ಲಿ ಜೀವವನ ಸಾಗಿಸುವ ಹಿರಿಯ ನಾಗರಿಕರು ಇದರಿಂದ ಬಹಳಷ್ಟು ಕಷ್ಟ ಪಡುತ್ತಿದ್ದಾರೆ. ಆದರೆ ಕೇಳುವವರು ಯಾರು? ಕ್ರೀಡಾ ವಿಭಾಗದ ಕಷ್ಟಗಳ ಬಗ್ಗೆ ಸರಿಯಾಗಿ ಹೇಳಿದ್ದೀರಿ. ಹೇಳಬೇಕಾದುದನ್ನು ಸ್ವಲ್ಪ ವಾಕ್ಯಗಳಲ್ಲೇ ಬಹಳ ಚೆನ್ನಾಗಿ ಹೇಳಿದ್ದೀರಿ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: