ಬಸವರಾಜ ಕೋಡಗುಂಟಿ ಅಂಕಣ – ವಿವಿದ ಬಾಶೆಗಳೊಳಗಿನ ‘ಇತರ’ ಗುಂಪುಗಳು…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

59

ದಾಕಲಾದ ಹಲವು ಬಹುತೇಕ ಬಾಶೆಗಳಲ್ಲಿ, ಕೆಲವನ್ನು ಹೊರತುಪಡಿಸಿ, ಒಂದಕ್ಕಿಂತ ಹೆಚ್ಚು ತಾಯ್ಮಾತುಗಳನ್ನು ತೋರಿಸಿದೆ. ಹೀಗೆ ತಾಯ್ಮಾತುಗಳನ್ನು ಪಟ್ಟಿಸುವಾಗ ಅವುಗಳಿಗೆ ಹತ್ತು ಸಾವಿರ ಮಂದಿ ದೇಶಮಟ್ಟದಲ್ಲಿ ಇದ್ದರೆ ಅವುಗಳ ಹೆಸರನ್ನು ಕೊಟ್ಟಿರಲಾಗುತ್ತದೆ. ಇಲ್ಲದಿದ್ದರೆ ಅವುಗಳನ್ನು ಆ ಬಾಶೆಯೊಳಗೆ ಇತರ ಎಂಬ ಗುಂಪಿನಲ್ಲಿ ಹಾಕಿ ಇಡಲಾಗುತ್ತದೆ. ಕರ‍್ನಾಟಕದ ಹಲವಾರು ಬಾಶೆಗಳ ಒಳಗೆ ಇತರ ಎಂಬ ಗುಂಪು ಇದೆ. ಕೆಲವು ಬಾಶೆಗಳಲ್ಲಿ ಪರಿಗಣಿಸುವಶ್ಟು ಸಂಕೆಯ ಮಂದಿ ಈ ಗುಂಪಿನಲ್ಲಿ ಕಾಣಿಸುತ್ತಾರೆ. ಇಲ್ಲಿ ವಿವಿದ ಬಾಶೆಗಳೊಳಗಿನ ಇತರ ಗುಂಪುಗಳನ್ನು ಪರಿಚಯ ಮಾಡಿಕೊಳ್ಳಬಹುದು.

ಕರ‍್ನಾಟಕದಲ್ಲಿ ದಾಕಲಾದ ಬಾಶೆಗಳಲ್ಲಿ ಒಟ್ಟು ಅಯ್ವತ್ತೆರಡು ಬಾಶೆಗಳ ಒಳಗೆ ಇತರ ಎಂಬ ಗುಂಪು ದಾಕಲಾಗಿವೆ. ಈ ಬಾಶೆಗಳ ಒಳಗೆ ದಾಕಲಾದ ಒಟ್ಟು ಮಾತುಗರ ಸಂಕೆ 33,927. ಇದರಲ್ಲಿ ಕನ್ನಡಕ್ಕೆ ದಾಕಲಾದ ಮಾತುಗರ ಸಂಕೆ ಹತ್ತು ಸಾವಿರಕ್ಕಿಂತ ಹೆಚ್ಚಾಗಿದೆ. ಕನ್ನಡದೊಳಗೆ ದಾಕಲಾದ ಇತರ ತಾಯ್ಮಾತುಗಳನ್ನು ಆಡುವವರ ಸಂಕೆ 11,576. ಇದು ಕನ್ನಡದ ಒಟ್ಟು 0.028% ಮತ್ತು ಒಟ್ಟು ಕರ‍್ನಾಟಕದ 0.018%% ಆಗುತ್ತದೆ.

ಕನ್ನಡದ ನಂತರ ಹಿಂದಿ (7,091), ತೆಲುಗು (3,578), ಕೊಂಕಣಿ (2,235), ತುಳು (2,123), ಬಿಲಿ/ಬಿಲೊಡಿ (1,492), ಮರಾಟಿ (1,468) ಮತ್ತು ಮಲಯಾಳಂ (1,361) ಬಾಶೆಗಳಿಗೆ ಇತರ ಗುಂಪಿನಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದಾರೆ. ಆನಂತರ ಒಂಬತ್ತು ಬಾಶೆಗಳಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ನೂರಕ್ಕಿಂತ ಹೆಚ್ಚು ಮಂದಿ ಮಾತುಗರು ಇತರ ಗುಂಪಿನಲ್ಲಿ ದಾಕಲಾಗಿದ್ದಾರೆ. ಮೂವತ್ತಯ್ದು ಬಾಶೆಗಳಿಗೆ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. 

ಬಾಶೆಬಾಶೆಯ ಜನಸಂಕೆಆ ಬಾಶೆಯಲ್ಲಿನ ಇತರ ಮಾತುಗರು ಬಾಶೆಯ %
ಕನ್ನಡ4,06,51,09011,5760.028%
ಹಿಂದಿ20,13,3647,0910.352%
ತೆಲುಗು35,69,4003,5780.100%
ಕೊಂಕಣಿ7,88,2942,2350.283%
ತುಳು15,95,0382,1230.133%
ಬಿಲಿ/ಬಿಲೊಡಿ2,6211,49256.924%
ಮರಾಟಿ20,64,9061,4680.071%
ಮಲಯಾಳಂ7,74,0571,3610.175%
ಬೊಟಿಯ88852258.783%
ಕಾಂದೇಶಿ49048498.775%
ಉರ‍್ದು66,18,3244470.006%
ಲಹಂದ28927595.155%
ತಮಿಳು21,10,1281880.008%
ಓಡಿಯ64,1191770.276%
ಆಸ್ಸಾಮಿ9,8711471.489%
ಕೊರ‍್ವ13212896.969%
ಗೊಂಡಿ1,14512410.829%
ಹಲಬಿ767598.684%
ಪಂಜಾಬಿ25,981680.261%
ಮುಂಡ1765732.386%
ಆದಿ1364029.411%
ತಂಗ್ಸ3939100%
ಆವೊ603151.666%
ಮಣಿಪುರಿ4,103300.731%
ಬೆಂಗಾಲಿ87,963210.023%
ತಾಡೊ1331712.781%
ಬಿಶ್ಣುಪ್ರಿಯ151386.666%
ಕಾಶ್ಮೀರಿ3,388120.354%
ತ್ರಿಪುರಿ1141210.526%
ನೇಪಾಲಿ19,274110.057%
ಬೂಮಿಜ್1111100%
ಟಿಬೆಟನ್27,54490.032%
ಸಿಂದಿ16,95480.047%
ಅಪ್ಗಾನಿ/ಕಾಬೂಲಿ/ಪಾಶ್ತೊ27622.222%
ಅಂಗಾಮಿ57610.526%
ಜಟಾಪು66100%
ಕಿಎಮ್ನುಂಗನ್66100%
ಕರಿಯ6657.575%
ಕೇಜಾ11436.363%
ಹಲಂ7342.857%  
ಕಾಸಿ35930.835%
ಕುಕಿ11132.702%
ಕುರುಕ್/ಓರಆನ್28431.056%
ಸಂತಾಲಿ31120.643%
ದಿಮಾಸಾ20210%
ಮಿಶಿಮಿ22100%
ಮಾವೊ4912.040%
ಮೋಗ್3313.030%
ಮುಂಡಾರಿ6711.492%
ಪೊಚುರಿ6116.666%
ಶಿನಾ11100%
ತಂಗ್ ಕುಲ್20910.478%

ವಿವಿದ ಬಾಶೆಗಳ ಒಳಗೆ ಇತರ ಎಂಬ ಗುಂಪಿನ ಪ್ರತಿಶತತೆಯನ್ನು ಈಗ ಗಮನಿಸಬಹುದು. ಕೆಲವು ಬಾಶೆಗಳಿಗೆ ನೂರಕ್ಕೆ ನೂರು ಇತರ ಎಂಬ ಗುಂಪು ಇರುವುದು ಕಂಡುಬರುತ್ತದೆ. ಆದರೆ ಅತಿ ಕಡಿಮೆ ಸಂಕೆಯ ಮಂದಿ ಮಾತುಗರು ದಾಕಲಾಗಿರುವ ಬಾಶೆಗಳನ್ನು ಇಲ್ಲಿ ವಿಶೇಶವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಹಾಗಾಗಿ ಸಾವಿರಕ್ಕಿಂತ ಹೆಚ್ಚಿನ ಮಂದಿ ಇರುವ ಬಾಶೆಗಳನ್ನು ಮಾತ್ರ ತುಸು ಗಮನಿಸಬಹುದು. ಬಿಲಿ/ಬಿಲೊಡಿ ಬಾಶೆಯಲ್ಲಿ ದಾಕಲಾದ ಒಟ್ಟು ಮಾತುಗರು 2,621. ಇದರಲ್ಲಿ ಇತರ ಎಂಬ ಗುಂಪಿನಲ್ಲಿ ದಾಕಲಾದವರು 1,492 ಮಂದಿ, ಅಂದರೆ ಕರ‍್ನಾಟಕದ ಒಟ್ಟು ಬಿಲಿಯರ 56.924% ಆಗುತ್ತದೆ. ಬಿಲಿ ಬಾಶೆಯ ಅರ‍್ದ ಬಾಗಕ್ಕಿಂತ ಹೆಚ್ಚು ಮಂದಿ ಇತರ ಗುಂಪಿನಲ್ಲಿ ದಾಕಲಾಗಿದ್ದಾರೆ. 

ಬಿಲಿಯ ನಂತರ ಗೊಂಡಿ ಬಾಶೆಯಲ್ಲಿ ಇತರ ಗುಂಪಿನ ಹೆಚ್ಚು ಪ್ರತಿಶತತೆ ಕಂಡುಬರುತ್ತದೆ. ಗೊಂಡಿ ಬಾಶೆಯೊಳಗೆ ದಾಕಲಾದ ಇತರ ಗುಂಪಿನ  ಪ್ರತಿಶತತೆ 10.829% ಇದೆ. ಇದರ ನಂತರ ಆಸ್ಸಾಮಿ ಬಾಶೆಯಲ್ಲಿ ಒಂದು ಪ್ರತಿಶತಕ್ಕಿಂತ ಹೆಚ್ಚು ಮಂದಿ ಇತರ ಗುಂಪಿನಲ್ಲಿ ಇರುವುದು ಕಂಡುಬರುತ್ತದೆ. ಆಸ್ಸಾಮಿಯಲ್ಲಿನ ಇತರ ಗುಂಪಿನ ಪ್ರತಿಶತತೆ 1.489% ಆಗಿದೆ. ಉಳಿದೆಲ್ಲ ಬಾಶೆಗಳಲ್ಲಿನ ಇತರ ಗುಂಪಿನಲ್ಲಿ ಒಂದು ಪ್ರತಿಶತಕ್ಕಿಂತ ಕಡಿಮೆ ಇದೆ. ಕೆಳಗೆ ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳು ಮತ್ತು ಅವುಗಳೊಳಗಿನ ಇತರ ಗುಂಪಿನ ಪ್ರತಿಶತತೆ ಇವುಗಳನ್ನು ತೋರಿಸಿದೆ.

ಬಾಶೆರಾಜ್ಯದಲ್ಲಿ ಆ ಬಾಶೆಗಳ ಜನಸಂಕೆಆ ಬಾಶೆಯೊಳಗಿನ ಇತರ ಮಾತುಗರು ಬಾಶೆಯ %
ಬಿಲಿ/ಬಿಲೊಡಿ2,6211,49256.924%
ಗೊಂಡಿ1,14512410.829%
ಆಸ್ಸಾಮಿ9,8711471.489%
ಮಣಿಪುರಿ4,103300.731%
ಕಾಶ್ಮೀರಿ3,388120.354%
ಹಿಂದಿ20,13,3647,0910.352%
ಕೊಂಕಣಿ7,88,2942,2350.283%
ಓಡಿಯ64,1191770.276%
ಪಂಜಾಬಿ25,981680.261%
ಮಲಯಾಳಂ7,74,0571,3610.175%
ತುಳು15,95,0382,1230.133%
ತೆಲುಗು35,69,4003,5780.100%
ಮರಾಟಿ20,64,9061,4680.071%
ನೇಪಾಲಿ19,274110.057%
ಸಿಂದಿ16,95480.047%
ಟಿಬೆಟನ್27,54490.032%
ಕನ್ನಡ4,06,51,09011,5760.028%
ಬೆಂಗಾಲಿ87,963210.023%
ತಮಿಳು21,10,1281880.008%
ಉರ‍್ದು66,18,3244470.006%

‍ಲೇಖಕರು avadhi

May 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: