ಬಸವರಾಜ ಕೋಡಗುಂಟಿ ಅಂಕಣ – ಬಾಗಲಕೋಟೆ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಬಾಗಲಕೋಟೆ ಜಿಲ್ಲೆಯ ಬಗ್ಗೆ ಬೆಳಕು

ಚೆಲ್ಲಲಾಗಿದೆ.

17

ಬಾಗಲಕೋಟೆ ಜಿಲ್ಲೆಯಲ್ಲಿ ಕಡಿಮೆ ಎಂದರೂ ಇಪ್ಪತ್ತೆಂಟು ಬಾಶೆಗಳು ಬಳಕೆಯಲ್ಲಿವೆ ಮತ್ತು ಅಯ್ವತ್ಮೂರು ತಾಯ್ಮಾತುಗಳು ದಾಕಲಾಗಿವೆ. ಅತಿ ಹೆಚ್ಚು ಮಂದಿ ಕನ್ನಡ ಮಾತಾಡುವ ಜಿಲ್ಲೆಗಳಲ್ಲಿ ಬಾಗಲಕೋಟೆಯೂ ಒಂದು. ಇಲ್ಲಿ ಕನ್ನಡ ಮಾತಾಡುವವರ ಪ್ರತಿಶತತೆ 86.060% ಇದೆ. ಕನ್ನಡದ ಹೊರತಾಗಿ ಉರ‍್ದು ಬಾಶೆಗೆ ಎರಡು ಲಕ್ಶದ ಹತ್ತಿರದಶ್ಟು ಮಂದಿ ಮಾತುಗರು ಕಾಣಿಸುತ್ತಾರೆ. ಇವುಗಳ ನಂತರ ಮರಾಟಿ ಮತ್ತು ಲಂಬಾಣಿ ಬಾಶೆಗಳಿಗೆ ಪರಿಗಣಿಸುವಶ್ಟು ಮಂದಿ ಮಾತುಗರು ಕಾಣಿಸುತ್ತಾರೆ.

***

ಬಾಗಲಕೋಟೆ ಜಿಲ್ಲೆಯ ಬಾಶಿಕ ಮಾಹಿತಿಯನ್ನು ಕೆಳಗಿನ ಅಟ್ಟದಲ್ಲಿ ತೋರಿಸಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಬೆಂಗಾಲಿ1388256
ಬೆಂಗಾಲಿ1388256
ಗುಜರಾತಿ250612741232
ಗುಜರಾತಿ1421719702
ಇತರ1085555530
ಹಿಂದಿ401032058819515
ಬಂಜಾರಿ19310588
ಬೋಜ್ಪುರಿ412714
ಗೊಜ್ರಿ/ಗುಜ್ಜಾರಿ/ಗುಜರ್110
ಹರ/ಹರೋತಿ110
ಹರಿಯಾಣ್ವಿ110
ಹಿಂದಿ860845804028
ಲಮಾಣಿ/ಲಂಬಾಡಿ277981410013698
ಮಾರ‍್ವಾರಿ273513911344
ಪವಾರಿ/ಪೊವಾರಿ251312
ರಾಜಸ್ತಾನಿ571297274
ಸಾದನ್/ಸಾದ್ರಿ27189
ಇತರ1025448
ಕನ್ನಡ1626549817142809407
ಕನ್ನಡ1626325817022809303
ಕುರುಬ/ಕುರುಂಬ1394
ಇತರ211111100
ಕಾಶ್ಮೀರಿ1266
ಕಾಶ್ಮೀರಿ1266
ಕೊಂಕಣಿ902461441
ಕೊಂಕಣಿ883451432
ಕುಡುಬಿ/ಕುಡುಂಬಿ18108
ಇತರ101
ಮಯ್ತಿಲಿ110
ಮಯ್ತಿಲಿ110
ಮಲಯಾಳಂ985345
ಮಲಯಾಳಂ985345
ಮರಾಟಿ280321411713915
ಮರಾಟಿ280321411713915
ನೇಪಾಲಿ63549
ನೇಪಾಲಿ63549
ಓಡಿಯಾ876720
ಓಡಿಯಾ866719
ಇತರ101
ಪಂಜಾಬಿ1628874
ಪಂಜಾಬಿ1447470
ಇತರ18144
ಸಂಸ್ಕ್ರುತ422
ಸಂಸ್ಕ್ರುತ422
ಸಿಂದಿ19910198
ಕಚ್ಚಿ341816
ಸಿಂದಿ1658382
ತಮಿಳು1417727690
ಕೊರವ499236263
ತಮಿಳು918491427
ತೆಲುಗು1308965136576
ತೆಲುಗು1234761396208
ವಡರಿ241113
ಇತರ718363355
ಉರ‍್ದು1756888848187207
ಉರ‍್ದು1756808847687204
ಇತರ853
ಅರಾಬಿಕ್/ಅರ‍್ಬಿ1266
ಅರಾಬಿಕ್/ಅರ‍್ಬಿ1266
ಬಿಲಿ/ಬಿಲೋಡಿ523
ಮವ್ಚಿ110
ಪರದಿ413
ಕೂರ‍್ಗಿ/ಕೊಡಗು1116051
ಕೂರ‍್ಗಿ/ಕೊಡಗು312
ಕೊಡವ1085949
ಇಂಗ್ಲೀಶು503020
ಇಂಗ್ಲೀಶು503020
ಕೊಡ/ಕೊರ211
ಕೊಡ/ಕೊರ211
ಕೊರ‍್ವ251411
ಇತರ251411
ಲಹಂದ422
ಇತರ422
ಲಕೇರ್202
ಮರ202
ತ್ರಿಪುರಿ101
ಕೊಕ್‍ಬರಾಕ್101
ತುಳು219118101
ತುಳು219118101
ಇತರ271121150

ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು ಇಪ್ಪತ್ತೇಳು ಬಾಶೆಗಳನ್ನು ಮತ್ತು ಒಂದು ಇತರ ಎಂಬ ಗುಂಪನ್ನು ಜನಗಣತಿ ಪಟ್ಟಿಸಿದೆ. ಇತರ ಎಂಬ ಗುಂಪಿನಲ್ಲಿ ಕಡಿಮೆ ಮಾತುಗರು ಇರುವುದರಿಂದ ಇದನ್ನು ಒಂದು ಬಾಶೆ ಎಂದು ಲೆಕ್ಕಿಸಿದರೆ ಜಿಲ್ಲೆಯಲ್ಲಿ ಒಟ್ಟು ಇಪ್ಪತ್ತೆಂಟು ಬಾಶೆಗಳು ಎಂದಾಯಿತು. ದಾಕಲಾದ ತಾಯ್ಮಾತುಗಳ ಸಂಕೆ ಅಯ್ವತ್ತೆರಡು ಮತ್ತು ಇತರ ಎಂಬುದು ಒಂದು ತಾಯ್ಮಾತು ಎಂದು ಲೆಕ್ಕಿಸಿ ಜಿಲ್ಲೆಯ ಒಟ್ಟು ತಾಯ್ಮಾತುಗಳು ಅಯ್ವತ್ಮೂರು ಆಗುತ್ತದೆ. ಇವುಗಳಲ್ಲಿ ಹತ್ತು ಬಾಶೆಗಳ ಒಳಗೆ ಇತರ ಎಂಬ ಗುಂಪು ಇದೆ ಮತ್ತು ಇತರ ಎಂಬ ಗುಂಪಿನಲ್ಲಿ ಒಂದು ತಾಯ್ಮಾತು. ಇತರ ಎಂಬ ತಾಯ್ಮಾತು ದಾಕಲಾಗಿರುವ ಬಾಶೆಗಳೆಂದರೆ ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಓಡಿಯಾ, ಪಂಜಾಬಿ, ತೆಲುಗು, ಉರ‍್ದು, ಕೊರ‍್ವ ಮತ್ತು ಲಹಂದ. ಇನ್ನುಳಿದಂತೆ ನಲ್ವತ್ತೆರಡು ತಾಯ್ಮಾತುಗಳ ಹೆಸರುಗಳನ್ನು ದಾಕಲಿಸಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕನ್ನಡ ಅತಿ ಹೆಚ್ಚು ಮಂದಿ ಮಾತಾಡುವ ಬಾಶೆಯಾಗಿದೆ. ಕನ್ನಡ ಮಾತಾಡುವ 16,26,549 (86.072%) ಮಂದಿ ಇದ್ದಾರೆ. ಕನ್ನಡದ ನಂತರ 1,75,680 (9.296%) ಸಂಕೆಯ ಮಾತುಗರಿರುವ ಉರ‍್ದು ಜಿಲ್ಲೆಯ ಎರಡನೆ ಅತಿದೊಡ್ಡ ಬಾಶೆಯಾಗಿದೆ. ಕನ್ನಡದ ಹೊರತಾಗಿ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರಿರುವ ಬಾಶೆ ಉರ‍್ದು ಆಗಿದೆ. ಇವುಗಳ ಹೊರತಾಗಿ ಹಿಂದಿಗೆ 40,103 (2.122%), ಮರಾಟಿಗೆ 28,032 (1.483%) ಮತ್ತು ತೆಲುಗಿಗೆ 13,089 (0.692%) ಮಂದಿ ಇದ್ದು ಈ ಮೂರು ಬಾಶೆಗಳಿಗೆ ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಆನಂತರ 2,506 (0.132%) ಮಂದಿ ಇರುವ ಗುಜರಾತಿ ಮತ್ತು 1,417 (0.074%) ಮಂದಿ ಇರುವ ತಮಿಳು ಬಾಶೆಗಳು ಬರುತ್ತವೆ. ಆರು ಬಾಶೆಗಳಿಗೆ ಸಾವಿರಕ್ಕಿಂತ ಕಡಿಮೆ ಮಂದಿ ಮಾತುಗರು ಇದ್ದಾರೆ. ಅವು, ಕೊಂಕಣಿ, ಇತರ, ತುಳು, ಸಿಂದಿ, ಪಂಜಾಬಿ, ಬೆಂಗಾಲಿ ಮತ್ತು ಕೊಡವ. ಇವುಗಳ ಜೊತೆಗೆ ಇತರ ಗುಂಪಿನಲ್ಲಿ 271 ಮಂದಿ ಇದ್ದಾರೆ. ಒಂದು ನೂರಕ್ಕೂ ಕಡಿಮೆ ಮಂದಿ ಮಾತನಾಡುವ ಹದಿನಾಲ್ಕು ಬಾಶೆಗಳು ಇವೆ. ಬಾಗಲಕೋಟೆ ಜಿಲ್ಲೆಯ ಬಾಶೆಗಳನ್ನು ಕೆಳಗಿನಂತೆ ಚಿತ್ರಿಸಿ ತೋರಿಸಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ16,26,549 86.072%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು1,75,6889.296%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಹಿಂದಿ 40,103 2.122%
’’ಮರಾಟಿ28,032 1.483%
’’ತೆಲುಗು13,089 0.692%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಗುಜರಾತಿ2,5060.132%
’’ತಮಿಳು1,4170.074%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಕೊಂಕಣಿ, ಇತರ, ತುಳು, ಸಿಂದಿ, ಪಂಜಾಬಿ, ಬೆಂಗಾಲಿ, ಕೊಡವ20020.105%
ನೂರಕ್ಕಿಂತ ಕಡಿಮೆ ಹದಿನಾಲ್ಕು ಬಾಶೆಗಳು3660.019%
ಒಟ್ಟು ಮಾತುಗರು18,89,752100%

ತಾಯ್ಮಾತುಗಳ ಅಂಕಿಸಂಕೆಯನ್ನು ತುಸು ಗಮನಿಸಿದಾಗ ಜಿಲ್ಲೆಯ ಬಾಶೆಗಳ ಚಿತ್ರಣದಲ್ಲಿ ಬದಲಾವಣೆ ಕಾಣಿಸುತ್ತದೆ. ಹಿಂದಿ ಬಾಶೆಯ ಅಂಕಿಸಂಕೆಗಳನ್ನು ಇಲ್ಲಿ ಮುಕ್ಯವಾಗಿ ಗಮನಿಸಬೇಕು. ಹಿಂದಿಯೊಳಗೆ ಪಟ್ಟಿಸಿರುವ ಕರ‍್ನಾಟಕದ ಸಂದರ‍್ಬ ದಲ್ಲಿ ಮುಕ್ಯವಾದ ತಾಯ್ಮಾತುಗಳ ಪಟ್ಟಿ ಕೆಳಗೆ ಕೊಟ್ಟಿದೆ.

ಬಾಶೆ ತಾಯ್ಮಾತು ಒಟ್ಟು ಮಾತುಗರು

ಹಿಂದಿ 40103

ಬಂಜಾರಿ 193

ಬೋಜ್ಪುರಿ 41

ಹಿಂದಿ 8608

ಲಮಾಣಿ/ಲಂಬಾಡಿ 27798

ಮಾರ‍್ವಾರಿ 2735

ರಾಜಸ್ತಾನಿ 571

ಹಿಂದಿ ಬಾಶೆಯ ಒಳಗೆ ಲಂಬಾಣಿ ಬಾಶೆ ಅತಿ ಹೆಚ್ಚು ಮಂದಿ ಮಾತುಗರನ್ನು ಹೊಂದಿದೆ. ಲಮಾಣಿ (27,798) ಮತ್ತು ಬಂಜಾರಿ (193) ಮಂದಿ ಸೇರಿ ಲಂಬಾಣಿ ಬಾಶೆಯನ್ನಾಡುವ 27,991 ಮಾತುಗರು ಕಾಣಿಸುತ್ತಾರೆ. ಇದು ಹಿಂದಿಯ 69.797% ರಶ್ಟು ಮತ್ತು ಜಿಲ್ಲೆಯ 1.481%ದಶ್ಟು ಆಗುತ್ತದೆ. ಇದರ ಹೊರತಾಗಿ ಮಾರ‍್ವಾರಿ ಬಾಶೆಗೆ 2,735 (0.144%) ಮಾತುಗರು ದಾಕಲಾಗಿದ್ದಾರೆ. ಹಿಂದಿ ಬಾಶೆಗೆ 8,608 ಮಾತುಗರು ಮಾತ್ರ ಇದ್ದಾರೆ. ಇದು ಜನಗಣತಿಯ ಹಿಂದಿ ಮಾಹಿತಿಯ 21.464% ಆಗುತ್ತದೆ ಮತ್ತು ಜಿಲ್ಲೆಯ 0.455% ಆಗುತ್ತದೆ. ಈಗ ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳಲ್ಲಿ ಲಂಬಾಣಿ ಸೇರುತ್ತದೆ, ಸಾವಿರಕ್ಕೂ ಹೆಚ್ಚು ಮಂದಿ ಇರುವ ಬಾಶೆಗಳ ಗುಂಪಿಗೆ ಮಾರ‍್ವಾರಿ ಸೇರಿಕೊಳ್ಳುತ್ತದೆ. ಹಿಂದಿ ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರ ಬಾಶೆಗಳ ಗುಂಪಿನಿಂದ ಹತ್ತು ಸಾವಿರಕ್ಕಿಂತ ಕಡಿಮೆ ಮಾತುಗರ ಬಾಶೆಗಳ ಗುಂಪಿಗೆ ಇಳಿಯುತ್ತದೆ. 

ತಮಿಳಿಗೆ ಒಟ್ಟು 1,417 ಮಂದಿ ದಾಕಲಾಗಿದ್ದು, ಕೊರವ ಮಾತುಗರು 499 ಮಂದಿ ಇದ್ದಾರೆ ಮತ್ತು ತಮಿಳಿಗೆ 918 ಮಂದಿ ಇದ್ದಾರೆ. ಹಾಗಾಗಿ ತಮಿಳು ಸಾವಿರಕ್ಕೂ ಹೆಚ್ಚು ಮಂದಿ ಇರುವ ಬಾಶೆಗಳ ಗುಂಪಿನಿಂದ ಕೆಳಗಿಳಿಯುತ್ತದೆ. 

ಜಿಲ್ಲೆಯ ತಾಯ್ಮಾತುಗಳನ್ನು ಮತ್ತು ಈ ಮೇಲಿನ ಮಾತುಕತೆಯನ್ನು ಆದರಿಸಿ ಬಾಗಲಕೋಟೆ ಜಿಲ್ಲೆಯ ಬಾಶೆಗಳ ಚಿತ್ರಣವನ್ನು ಮರುರೂಪಿಸಿ ಕೆಳಗೆ ತೋರಿಸಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ16,26,32586.060%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು1,75,6809.296%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಮರಾಟಿ28,0321.483%
’’ಲಂಬಾಣಿ27,9911.481%
’’ತೆಲುಗು12,3470.653%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಹಿಂದಿ8,6080.455%
’’ಮಾರ‍್ವಾರಿ2,7350.144%
’’ಗುಜರಾತಿ2,5060.132%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳನ್ನು ಇಲ್ಲಿ ಪಟ್ಟಿಸಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಬಾಗಲಕೋಟೆ18,89,752ಕನ್ನಡ16,26,32586.060%1
ಉರ‍್ದು1,75,6809.296%2
ಮರಾಟಿ28,0321.483%3
ಲಂಬಾಣಿ27,9911.481%4
ತೆಲುಗು12,3470.653%5
ಹಿಂದಿ8,6080.455%6
ಮಾರ‍್ವಾರಿ2,7350.144%7
ಗುಜರಾತಿ2,5060.132%8
ತಮಿಳು9180.048%9
ಕೊಂಕಣಿ8830.046%10

‍ಲೇಖಕರು Admin

June 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: