ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ನವಾಯಿತಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

51

ನವಾಯಿತಿ ಕೊಂಕಣಿ ಬಾಶೆಯ ಒಳಗೆ ಒಂದು ತಾಯ್ಮಾತು ಎಂದು ದಾಕಲಾಗಿದೆ. ಕರ‍್ನಾಟಕದಲ್ಲಿ ನವಾಯಿತಿಗೆ ಪರಿಗಣಿಸುವಶ್ಟು ಮಂದಿ ಮಾತುಗರು ದಾಕಲಾಗಿದ್ದಾರೆ. ನವಾಯಿತಿ ಕರ‍್ನಾಟಕದ ಇಪ್ಪತ್ತಯ್ದನೆ ದೊಡ್ಡ ಬಾಶೆಯಾಗಿದೆ. ಒಟ್ಟು ಬಾರತದಾಗ ನವಾಯಿತಿ ಮಾತುಗರು 13,123 ಮಂದಿ ಇದ್ದಾರೆ. ಇದರಲ್ಲಿ ಬಹುತೇಕರು ಕರ‍್ನಾಟಕದಲ್ಲಿಯೆ ದಾಕಲಾಗಿದ್ದಾರೆ. ಕರ‍್ನಾಟಕದಲ್ಲಿ ದಾಕಲಾದ ನವಾಯಿತಿಗಳ ಸಂಕೆ 12,775 ಅಂದರೆ ಒಟ್ಟು ಬಾರತದ ನವಾಯಿತಿಗಳ 97,348% ಆಗುತ್ತದೆ. ಇದರಲ್ಲಿ ಅತಿ ಹೆಚ್ಚು ಮಂದಿ ಅಂದರೆ 9,819 ಮಂದಿ ಕಾರವಾರ ಜಿಲ್ಲೆಯಲ್ಲಿ ಮಾತ್ರವೆ ಇದ್ದಾರೆ. ಇದು ಒಟ್ಟು ಕರ‍್ನಾಟಕದ 76.861% ಆಗುತ್ತದೆ. ಅದರ ನಂತರ ಉಡುಪಿ ಜಿಲ್ಲೆಯಲ್ಲಿ ಸಾವಿರಕ್ಕಿಂತ ಹೆಚ್ಚು ಮಂದಿ ನವಾಯಿತಿಗಳು ಅಂದರೆ 1,563 ಇದ್ದಾರೆ. ಇದು ಒಟ್ಟು ಕರ‍್ನಾಟಕದ ನವಾಯಿತಿ 12.234% ಆಗುತ್ತದೆ. ಉಳಿದಂತೆ ಅಯ್ದು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮತ್ತು ಏಳು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ರಾಜ್ಯದ ಹದಿನಾರು ಜಿಲ್ಲೆಗಳಲ್ಲಿ ನವಾಯಿತಿಯ ಮಾತುಗರು ದಾಕಲಾಗಿಲ್ಲ.

ಇಲ್ಲಿ ಕೆಳಗೆ ಕರ‍್ನಾಟಕದ ನವಾಯಿತಿ ನವಾಯಿತಿ ಮಾತುಗರ ಜಿಲ್ಲಾವಾರು ಪಟ್ಟಿಯನ್ನು ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಮಾತುಗರು ಆ ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ 6,10,95,29712,7750.020%100%
ಉತ್ತರ ಕನ್ನಡ 14,37,1699,8190.683%76.861%
ಉಡುಪಿ  11,77,3611,5630.132%12.234%
ಮಯ್ಸೂರು  30,01,1274460.014%3.49%
ಕೊಡಗು 5,54,5192800.050%2.191%
ಬೆಂಗಳೂರು ನಗರ  96,21,5512550.002%1.996%
ಶಿವಮೊಗ್ಗ 17,52,7531570.008%1.228%
ದಕ್ಶಿಣ ಕನ್ನಡ  20,89,6491360.006%1.064%
ಚಿಕ್ಕಮಗಳೂರು 11,37,961590.461%
ಹಾವೇರಿ 15,97,668320.250%
ಹಾಸನ 17,76,421120.093%
ಬೆಳಗಾವಿ 47,79,66180.062%
ಚಾಮರಾಜನಗರ 10,20,79140.031%
ತುಮಕೂರು 26,78,98030.023%
ಕೋಲಾರ 15,36,40110.007%

ನವಾಯಿತಿ ಮಾತುಗರ ಹಂಚಿಕೆ

‍ಲೇಖಕರು avadhi

23 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading