ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ತೆಲುಗು ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

34

ಕರ‍್ನಾಟಕದಲ್ಲಿ ಬಳಕೆಯಲ್ಲಿರುವ ಮೂರನೆ ಅತಿದೊಡ್ಡ ಬಾಶೆ ತೆಲುಗು ಆಗಿದೆ. ತೆಲುಗು ಮಾತಾಡುವ 35,69,400 ಮಂದಿ ದಾಕಲಾಗಿದ್ದಾರೆ. ಇದು ಒಟ್ಟು ದೇಶದ ತೆಲುಗಿನ 4.399% ಆಗುತ್ತದೆ ಮತ್ತು ಕರ‍್ನಾಟಕದ 2.275% ಆಗುತ್ತದೆ. ಇದು ಕರ‍್ನಾಟಕದ ಮೂರನೆ ಅತಿದೊಡ್ಡ ಬಾಶೆಯಾಗಿದೆ. ತೆಲುಗಿನಲ್ಲಿ ಎರಡು ತಾಯ್ಮಾತುಗಳು ದಾಕಲಾಗಿವೆ. ತೆಲುಗು (35,65,618) ಮತ್ತು ವಡರಿ (204). ಇದರಲ್ಲಿ ಬಹುತೇಕರು ತೆಲುಗು ಮಾತಾಡುವವರು ಆಗಿದ್ದಾರೆ. ಇವುಗಳ ಜೊತೆಗೆ ಇತರ (3,578) ಎಂಬ ಗುಂಪು ಕೂಡ ದಾಕಲಾಗಿದೆ. 

ಕರ‍್ನಾಟಕದಲ್ಲಿ ದಾಕಲಾದ ತೆಲುಗರಲ್ಲಿ ಅಂದಾಜು 38% ಮಂದಿ ಬೆಂಗಳೂರು ನಗರ ಜಿಲ್ಲೆಯಲ್ಲಿಯೆ ದಾಕಲಾಗಿದ್ದಾರೆ. ಬೆಂಗಳೂರಿನ ತೆಲುಗರ ಸಂಕೆ 13,46,047 ಆಗಿದ್ದು ಇದು ಕರ‍್ನಾಟಕದ ಒಟ್ಟು ತೆಲುಗರ ಸುಮಾರು 14% ಆಗಿದೆ. ಆನಂತರ ಕೋಲಾರ (3,48,253) ಮತ್ತು ಚಿಕ್ಕಬಳ್ಳಾಪುರ (3,39,761) ಜಿಲ್ಲೆಗಳಲ್ಲಿ ತಲಾ ಸುಮಾರು 10% ಮಂದಿ ದಾಕಲಾಗಿದ್ದಾರೆ. ಬಳ್ಳಾರಿಯಲ್ಲಿ (2,37,403) ಸುಮಾರು 7% ಮತ್ತು ರಾಯಚೂರಿನಲ್ಲಿ (1,56,421) 4% ಪ್ರತಿಶತಕ್ಕೂ ಹೆಚ್ಚು ಮಂದಿ ಇದ್ದಾರೆ. ಆನಂತರ ಬೆಂಗಳೂರು ಗ್ರಾಮಾಂತರ (1,27,243), ಕಲಬುರಗಿ (1,04,643) ಜಿಲ್ಲೆಗಳಲ್ಲಿ ಒಂದು ಲಕ್ಶಕ್ಕಿಂತ ಹೆಚ್ಚು ತೆಲುಗರು ದಾಕಲಾಗಿದ್ದಾರೆ. ಆನಂತರ ಒಟ್ಟು ಹತ್ತೊಂಬತ್ತು ಜಿಲ್ಲೆಗಳಲ್ಲಿ ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇದ್ದಾರೆ. ಉಳಿದ ನಾಲ್ಕು ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮಂದಿ ಇದ್ದಾರೆ.

ಇಲ್ಲಿ ಕೆಳಗೆ ತೆಲುಗು ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ. 

ಪ್ರದೇಶಜಿಲ್ಲೆಯ ಜನಸಂಕೆಮಾತುಗರು  ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ6,10,95,29735,65,6182.275%100%
ಬೆಂಗಳೂರು96,21,55113,46,04713.989%37.750%
ಕೋಲಾರ15,36,4013,48,25322.666%9.766%
ಚಿಕ್ಕಬಳ್ಳಾಪುರ12,55,1043,39,7612.707%9.528%
ಬಳ್ಳಾರಿ24,52,5952,37,4039.679%6.658%
ರಾಯಚೂರು19,28,8121,56,4218.109%4.386%
ಬೆಂಗಳೂರು ಗ್ರಾಮಾಂತರ 9,90,9231,27,24312.840%3.568%
ಕಲಬುರಗಿ 25,66,3261,04,6434.077%2.934%
ತುಮಕೂರು26,78,98090,6273.382%2.541%
ಚಿತ್ರದುರ‍್ಗ16,59,45689,3745.385%2.506%
ಮಯ್ಸೂರು30,01,12787,2112.905%2.445%
ಬೀದರ17,03,30072,4384.252%2.031%
ಶಿವಮೊಗ್ಗ17,52,75371,2294.063%1.997%
ಯಾದಗಿರಿ11,74,27161,0275.197%1.711%
ಕೊಪ್ಪಳ13,89,92157,8954.165%1.623%
ದಾವಣಗೆರೆ19,45,49754,8992.821%1.539%
ದಾರವಾಡ18,47,02343,5472.357%1.221%
ಬೆಳಗಾವಿ47,79,66138,4170.803%1.007%
ಹಾಸನ17,76,42134,7651.957%0.975%
ಚಾಮರಾಜನಗರ10,20,79133,5453.286%0.940%
ಚಿಕ್ಕಮಗಳೂರು11,37,96131,6982.785%0.888%
ರಾಮನಗರ10,82,63623,9550.211%0.671%
ಮಂಡ್ಯ18,05,76923,4571.299%0.657%
ಉತ್ತರ ಕನ್ನಡ14,37,16919,5301.358%`0.547%
ಹಾವೇರಿ15,97,66815,3210.958%0.429%
ವಿಜಯಪುರ21,77,33114,7880.079%0.414%
ಬಾಗಲಕೋಟೆ18,89,75212,3470.653%0.346%
ಗದಗ10,20,7918,8880.870%0.249%
ಕೊಡಗು5,54,5198,5861.548%0.240%
ದಕ್ಶಿಣ ಕನ್ನಡ20,89,6497,9310.379%0.222%
ಉಡುಪಿ11,77,3614,3950.373%0.123%

ತೆಲುಗು ಮಾತುಗರ ಹಂಚಿಕೆ 

C:\Users\DELL\Downloads\distribution of Telugu(1).jpg

‍ಲೇಖಕರು Admin

3 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading