ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ
ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಈ ವಾರದ ಅಂಕಣದಲ್ಲಿ ತುಮಕೂರುಜಿಲ್ಲೆಯ ಬಗ್ಗೆ ಬೆಳಕು
ಚೆಲ್ಲಲಾಗಿದೆ.
13
ತುಮಕೂರು
ತುಮಕೂರು ಜಿಲ್ಲೆಯಲ್ಲಿ ಕನಿಶ್ಟ ಮೂವತ್ಮೂರು ಬಾಶೆಗಳು ಬಳಕೆಯಲ್ಲಿವೆ ಮತ್ತು ಅರ್ವತ್ತೊಂದು ತಾಯ್ಮಾತುಗಳು ಬಳಕೆಯಲ್ಲಿವೆ. ತುಮಕೂರಿನಲ್ಲಿ ಹೆಚ್ಚು ಮಂದಿ ಕನ್ನಡ ಮಾತಾಡುವವರಿದ್ದು ಸುಮಾರು 85% ಕನ್ನಡ ಇದೆ. ಉರ್ದು ಸುಮಾರು ಎರಡೂವರೆ ಲಕ್ಶದಶ್ಟು ಮಂದಿಯನ್ನು ಹೊಂದಿ ಜಿಲ್ಲೆಯ ಎರಡನೆ ದೊಡ್ಡ ಬಾಶೆಯಾಗಿದೆ. ತೆಲುಗು ಕೂಡ ಜಿಲ್ಲೆಯ ಇನ್ನೊಂದು ಪ್ರದಾನ ಬಾಶೆಯಾಗಿದೆ. ಲಂಬಾಣಿ ಮತ್ತು ಮರಾಟಿಯ ಮಾತುಗರ ಸಂಕೆ ಜಿಲ್ಲೆಯಲ್ಲಿ ಗಮನ ಸೆಳೆಯುತ್ತದೆ.
***
ಜನಗಣತಿ ಒದಗಿಸಿರುವ ತುಮಕೂರು ಜಿಲ್ಲೆಯ ಬಾಶೆಗಳ ಮಾಹಿತಿಯನ್ನು ಇಲ್ಲಿ ಪಟ್ಟಿ ಮಾಡಿ ಕೊಟ್ಟಿದೆ.
| ಬಾಶೆ | ತಾಯ್ಮಾತು | ಒಟ್ಟು ಮಾತುಗರು | ಗಂಡು | ಹೆಣ್ಣು |
| ಆಸ್ಸಾಮಿ | 91 | 79 | 12 | |
| ಆಸ್ಸಾಮಿ | 91 | 79 | 12 | |
| ಬೆಂಗಾಲಿ | 377 | 260 | 117 | |
| ಬೆಂಗಾಲಿ | 377 | 260 | 117 | |
| ಗುಜರಾತಿ | 706 | 367 | 339 | |
| ಗುಜರಾತಿ | 652 | 341 | 311 | |
| ಸವರಾಶ್ಟ್ರ/ಸವರಾಶ್ಟ್ರಿ | 5 | 1 | 4 | |
| ಇತರ | 49 | 25 | 24 | |
| ಹಿಂದಿ | 39119 | 21129 | 17990 | |
| ಬಂಜಾರಿ | 25 | 13 | 12 | |
| ಬರ್ಮವುರಿ | 1 | 1 | 0 | |
| ಬೋಜ್ಪುರಿ | 29 | 25 | 4 | |
| ಚತ್ತೀಸ್ಗರಿ | 3 | 1 | 2 | |
| ಗೊಜ್ರಿ/ಗುಜ್ಜಾರಿ/ಗುಜರ್ | 11 | 8 | 3 | |
| ಹರಿಯಾಣ್ವಿ | 8 | 6 | 2 | |
| ಹಿಂದಿ | 8655 | 5581 | 3074 | |
| ಲಮಾಣಿ/ಲಂಬಾಡಿ | 28598 | 14484 | 14114 | |
| ಮಾರ್ವಾರಿ | 986 | 551 | 435 | |
| ರಾಜಸ್ತಾನಿ | 592 | 338 | 254 | |
| ಸುಗಾಲಿ | 10 | 5 | 5 | |
| ಇತರ | 201 | 116 | 85 | |
| ಕನ್ನಡ | 2276105 | 1148096 | 1128009 | |
| ಕನ್ನಡ | 2275796 | 1147922 | 1127874 | |
| ಕುರುಬ/ಕುರುಂಬ | 1 | 0 | 1 | |
| ಪ್ರಾಕ್ರುತ/ಪ್ರಾಕ್ರುತ ಬಾಶಾ | 33 | 15 | 18 | |
| ಇತರ | 275 | 159 | 116 | |
| ಕಾಶ್ಮೀರಿ | 36 | 13 | 23 | |
| ಕಾಶ್ಮೀರಿ | 35 | 13 | 22 | |
| ದಾರ್ದಿ | 1 | 0 | 1 | |
| ಕೊಂಕಣಿ | 643 | 332 | 311 | |
| ಕೊಂಕಣಿ | 619 | 316 | 303 | |
| ಕುಡುಬಿ/ಕುಡುಂಬಿ | 21 | 14 | 7 | |
| ನವಾಯಿತಿ | 3 | 2 | 1 | |
| ಮಯ್ತಿಲಿ | 12 | 9 | 3 | |
| ಮಯ್ತಿಲಿ | 12 | 9 | 3 | |
| ಮಲಯಾಳಂ | 2373 | 941 | 1432 | |
| ಮಲಯಾಳಂ | 2372 | 941 | 1431 | |
| ಯರವ | 1 | 0 | 1 | |
| ಮಣಿಪುರಿ | 55 | 28 | 27 | |
| ಮಣಿಪುರಿ | 53 | 27 | 26 | |
| ಇತರ | 2 | 1 | 1 | |
| ಮರಾಟಿ | 13298 | 6719 | 6579 | |
| ಮರಾಟಿ | 13265 | 6705 | 6560 | |
| ಇತರ | 33 | 14 | 19 | |
| ನೇಪಾಲಿ | 145 | 86 | 59 | |
| ನೇಪಾಲಿ | 145 | 86 | 59 | |
| ಓಡಿಯಾ | 288 | 174 | 114 | |
| ಓಡಿಯಾ | 280 | 171 | 109 | |
| ಇತರ | 8 | 3 | 5 | |
| ಪಂಜಾಬಿ | 103 | 60 | 43 | |
| ಪಂಜಾಬಿ | 103 | 60 | 43 | |
| ಸಂಸ್ಕ್ರುತ | 8 | 3 | 5 | |
| ಸಂಸ್ಕ್ರುತ | 8 | 3 | 5 | |
| ಸಂತಾಲಿ | 4 | 0 | 4 | |
| ಸಂತಾಲಿ | 4 | 0 | 4 | |
| ಸಿಂದಿ | 87 | 46 | 41 | |
| ಕಚ್ಚಿ | 9 | 5 | 4 | |
| ಸಿಂದಿ | 78 | 41 | 37 | |
| ತಮಿಳು | 12112 | 6146 | 5966 | |
| ತಮಿಳು | 12112 | 6146 | 5966 | |
| ತೆಲುಗು | 90639 | 43907 | 46732 | |
| ತೆಲುಗು | 90627 | 43901 | 46726 | |
| ಇತರ | 12 | 6 | 6 | |
| ಉರ್ದು | 241943 | 121781 | 120162 | |
| ಉರ್ದು | 241940 | 121778 | 120162 | |
| ಇತರ | 3 | 3 | 0 | |
| ಅರಾಬಿಕ್/ಅರ್ಬಿ | 1 | 1 | 0 | |
| ಅರಾಬಿಕ್/ಅರ್ಬಿ | 1 | 1 | 0 | |
| ಬಿಲಿ/ಬಿಲೊಡಿ | 3 | 3 | 0 | |
| ಇತರ | 3 | 3 | 0 | |
| ಬೊಟಿಯ | 17 | 9 | 8 | |
| ಇತರ | 17 | 9 | 8 | |
| ಕೂರ್ಗಿ/ಕೊಡಗು | 42 | 16 | 26 | |
| ಕೂರ್ಗಿ/ಕೊಡಗು | 27 | 10 | 17 | |
| ಕೊಡವ | 15 | 6 | 9 | |
| ಇಂಗ್ಲೀಶು | 113 | 63 | 50 | |
| ಇಂಗ್ಲೀಶು | 113 | 63 | 50 | |
| ಕಾಸಿ | 19 | 17 | 2 | |
| ಕಾಸಿ | 12 | 11 | 1 | |
| ಮ್ನಾರ್/ಸಿಂಟೆಂಗ್ | 7 | 6 | 1 | |
| ಲುಶಾಯಿ/ಮಿಜೊ | 5 | 1 | 4 | |
| ಲುಶಾಯಿ/ಮಿಜೊ | 5 | 1 | 4 | |
| ನಿಸ್ಸಿ/ದಪ್ಲ | 1 | 0 | 1 | |
| ಅಪ್ತಾನಿ | 1 | 0 | 1 | |
| ಸವರ | 2 | 1 | 1 | |
| ಸವರ | 2 | 1 | 1 | |
| ಟಿಬೆಟನ್ | 3 | 3 | 0 | |
| ಟಿಬೆಟನ್ | 3 | 3 | 0 | |
| ತ್ರಿಪುರಿ | 4 | 4 | 0 | |
| ತ್ರಿಪುರಿ | 4 | 4 | 0 | |
| ತುಳು | 558 | 263 | 295 | |
| ತುಳು | 558 | 263 | 295 | |
| ಇತರ | 68 | 37 | 31 |
ಜನಗಣತಿ ಒದಗಿಸಿರುವ ಮಾಹಿತಿಯಂತೆ ತುಮಕೂರು ಜಿಲ್ಲೆಯಲ್ಲಿ ಒಟ್ಟು ಮೂವತ್ತೆರಡು ಬಾಶೆಗಳು ಬಳಕೆಯಲ್ಲಿವೆ. ಅದರೊಟ್ಟಿಗೆ ಇತರ ಎಂಬ ಒಂದು ಗುಂಪು ದಾಕಲಾಗಿದೆ. ಇದರಲ್ಲಿ ಕೇವಲ ಅರವತ್ತೆಂಟು ಮಂದಿ ಇದ್ದು ಇದು ಒಂದು ಬಾಶೆ ಎಂದು ಲೆಕ್ಕಿಸಿದರೆ ತುಮಕೂರಿನಲ್ಲಿ ಜನಗಣತಿ ದಾಕಲೆಯಂತೆ ಒಟ್ಟು ಮೂವತ್ಮೂರು ಬಾಶೆಗಳು ಎಂದಾಗುತ್ತದೆ. ಹಾಗೆಯೆ ಅರವತ್ತು ತಾಯ್ಮಾತುಗಳನ್ನು ಇದರಲ್ಲಿ ಕಾಣಬಹುದು. ಇದರಲ್ಲಿ ಇತರ ಎಂಬ ಬಾಶೆಯ ಗುಂಪಿನಲ್ಲಿ ಕಡಿಮೆ ಮಾತುಗರು ಇರುವುದರಿಂದ ಇದು ಒಂದು ತಾಯ್ಮಾತು ಎಂದು ತೆಗೆದುಕೊಂಡರೆ ಒಟ್ಟು ಅರ್ವತ್ತೊಂದು ತಾಯ್ಮಾತುಗಳು ಎಂದಾಗುತ್ತದೆ. ಇವುಗಳಲ್ಲಿ ಹತ್ತು ಬಾಶೆಗಳಲ್ಲಿ ಇತರ ಎಂಬ ಗುಂಪು ಕಾಣಿಸುತ್ತದೆ. ಇತರ ಗುಂಪುಗಳನ್ನು ಒಳಗೊಂಡಿರುವ ಬಾಶೆಗಳು ಹೀಗಿವೆ, ಗುಜರಾತಿ, ಹಿಂದಿ, ಕನ್ನಡ, ಮಣಿಪುರಿ, ಮರಾಟಿ, ಓಡಿಯಾ, ತೆಲುಗು, ಉರ್ದು, ಬಿಲಿ/ಬಿಲೊಡಿ ಮತ್ತು ಬೊಟಿಯ. ಇವುಗಳ ಹೊರತಾಗಿ ಒಟ್ಟು ಅಯ್ವತ್ತು ತಾಯ್ಮಾತುಗಳನ್ನು ಹೆಸರಿಸಿದೆ.
ತುಮಕೂರು ಜಿಲ್ಲೆಯ ಜನಸಂಕೆ 26,78,980. ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡ. ಕನ್ನಡ ಮಾತಾಡುವವರು 22,76,105 ಆಗಿದ್ದಾರೆ. ಇದು ಜಿಲ್ಲೆಯ 84.961% ಆಗುತ್ತದೆ. ಇಲ್ಲಿ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡವಾಗಿದೆ. ಉರ್ದು ಬಾಶೆಗೆ ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಉರ್ದು ಮಾತುಗರ ಸಂಕೆ 2,41,943 (9.031%). ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ನಾಲ್ಕು ಬಾಶೆಗಳು ಇವೆ. ತೆಲುಗು – 90,639 (3.383%), ಹಿಂದಿ – 39,119 (1.460%), ಮರಾಟಿ – 13,298 (0.496%) ಮತ್ತು ತಮಿಳು – 12,112 (0.452%). ಮಲಯಾಳಂ – 2,373 (0.088%) ಬಾಶೆಗೆ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಇನ್ನು ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಎಂಟು ಬಾಶೆಗಳು ಇವೆ. ಅವುಗಳೆಂದರೆ, ಗುಜರಾತಿ, ಕೊಂಕಣಿ, ತುಳು, ಬೆಂಗಾಲಿ, ಓಡಿಯಾ, ನೇಪಾಲಿ, ಇಂಗ್ಲೀಶು ಮತ್ತು ಪಂಜಾಬಿ. ನೂರಕ್ಕಿಂತ ಕಡಿಮೆ ಮಾತುಗರನ್ನು ಹೊಂದಿರುವ ಹತ್ತೊಂಬತ್ತು ಬಾಶೆಗಳು ಇವೆ. ಈ ಬಾಶೆಗಳನ್ನು ಕೆಳಗಿನಂತೆ ಚಿತ್ರಿಸಿ ತೋರಿಸಬಹುದು.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಹತ್ತು ಲಕ್ಶಕ್ಕಿಂತ ಹೆಚ್ಚು | ಕನ್ನಡ | 22,76,105 | 84.961% |
| ಹತ್ತು ಲಕ್ಶಕ್ಕಿಂತ ಕಡಿಮೆ ಒಂದು ಲಕ್ಶಕ್ಕಿಂತ ಹೆಚ್ಚು | ಉರ್ದು | 2,41,943 | 9.031% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ತೆಲುಗು | 90,639 | 3.383% |
| ’’ | ಹಿಂದಿ | 39,119 | 1.460% |
| ’’ | ಮರಾಟಿ | 13,298 | 0.496% |
| ’’ | ತಮಿಳು | 12,112 | 0.452% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ಮಲಯಾಳಂ | 2,373 | 0.088% |
| ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು | ಗುಜರಾತಿ, ಕೊಂಕಣಿ, ತುಳು, ಬೆಂಗಾಲಿ, ಓಡಿಯಾ, ನೇಪಾಲಿ, ಇಂಗ್ಲೀಶು, ಪಂಜಾಬಿ | 2,933 | 0.109% |
| ನೂರಕ್ಕಿಂತ ಕಡಿಮೆ | ಹತ್ತೊಂಬತ್ತು ಬಾಶೆಗಳು | 460 | 0.017% |
| ಒಟ್ಟು ಮಾತುಗರು | 26,78,980 | 100% |
ಜಿಲ್ಲೆಯ ತಾಯ್ಮಾತುಗಳನ್ನು ಗಮನಿಸಿ ಈ ಚರ್ಚೆಯನ್ನು ಬೆಳೆಸಿದಾಗ ಜಿಲ್ಲೆಯ ಬಾಶೆಗಳ ಪಟ್ಟಿಯಲ್ಲಿ ತುಸು ಬದಲಾವಣೆ ಆಗುತ್ತದೆ. ಹಿಂದಿಯೊಳಗೆ ಕರ್ನಾಟಕದ ಸಂದರ್ಬದಲ್ಲಿ ಮುಕ್ಯವೆನಿಸುವ ಬಾಶೆಗಳನ್ನು ಕೆಳಗೆ ಪಟ್ಟಿ ಮಾಡಿದೆ.
ಹಿಂದಿ 39,119
ಬಂಜಾರಿ 25
ಬೋಜ್ಪುರಿ 29
ಹಿಂದಿ 8,655
ಲಮಾಣಿ/ಲಂಬಾಡಿ 28,598
ಮಾರ್ವಾರಿ 986
ರಾಜಸ್ತಾನಿ 592
ಸುಗಾಲಿ 10
ಹಿಂದಿ ಬಾಶೆಯ ತುಮಕೂರು ಜಿಲ್ಲೆಯಲ್ಲಿ ಒಟ್ಟು ದಾಕಲಾದ ಮಾತುಗರ ಸಂಕೆ 39,119. ಇದರಲ್ಲಿ ಹಿಂದಿಯನ್ನಾಡುವವರು 8,655 ಆಗಿದ್ದಾರೆ. ಇದು ಒಟ್ಟು ಹಿಂದಿಯ 22.124% ಮತ್ತು ಜಿಲ್ಲೆಯ 0.323% ಆಗುತ್ತದೆ. ಲಮಾಣಿ ಹೆಸರಿನಲ್ಲಿ 28,598, ಬಂಜಾರಿ ಹೆಸರಿನಲ್ಲಿ 25 ಮತ್ತು ಸುಗಾಲಿ ಹೆಸರಿನಲ್ಲಿ 10 ಮಂದಿ ದಾಕಲಾಗಿದ್ದು ಇವು ಸೇರಿ ಲಂಬಾಣಿಯ ಮಾತುಗರ ಸಂಕೆ 28,633 ಆಗುತ್ತದೆ. ಇದು ಜಿಲ್ಲೆಯ ಹಿಂದಿಯ 73.194% ಮತ್ತು ಜಿಲ್ಲೆಯ 1.068% ಆಗುತ್ತದೆ. ಈಗ ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರ ಬಾಶೆಗಳ ಪಟ್ಟಿಯಲ್ಲಿದ್ದ ಹಿಂದಿಯ ಬದಲಿ ಲಂಬಾಣಿ ಈ ಪಟ್ಟಿಗೆ ಬರುತ್ತದೆ ಮತ್ತು ಹಿಂದಿ ಹತ್ತು ಸಾವಿರಕಿಂತ ಕಡಿಮೆ ಮಾತುಗರ ಬಾಶೆಗಳ ಪಟ್ಟಿಗೆ ಇಳಿಯುತ್ತದೆ. ಈ ಚರ್ಚೆಯನ್ನು ಮತ್ತು ಜಿಲ್ಲೆಯ ತಾಯ್ಮಾತುಗಳ ಸಂಕೆಗಳನ್ನು ಬಳಸಿಕೊಂಡು ಮೇಲೆ ತೋರಿಸಿದ ತುಮಕೂರಿನ ಬಾಶೆಗಳ ಪಟ್ಟಿಯನ್ನು ಇನ್ನೊಮ್ಮೆ ಮರುಚಿತ್ರಿಸಿ ಕೊಡಬಹುದು.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಹತ್ತು ಲಕ್ಶಕ್ಕಿಂತ ಹೆಚ್ಚು | ಕನ್ನಡ | 22,75,796 | 84.950% |
| ಹತ್ತು ಲಕ್ಶಕ್ಕಿಂತ ಕಡಿಮೆ ಒಂದು ಲಕ್ಶಕ್ಕಿಂತ ಹೆಚ್ಚು | ಉರ್ದು | 2,41,940 | 9.031% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ತೆಲುಗು | 90,627 | 3.382% |
| ’’ | ಲಂಬಾಣಿ | 28,623 | 1.068% |
| ’’ | ಮರಾಟಿ | 13,265 | 0.495% |
| ’’ | ತಮಿಳು | 12,112 | 0.452% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ಹಿಂದಿ | 8,655 | 0.323% |
| ’’ | ಮಲಯಾಳಂ | 2,372 | 0.088% |
ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಬಾಶೆ | ಮಾತುಗರು | ಜಿಲ್ಲೆಯ % | ಜಿಲ್ಲೆಯಲ್ಲಿ ಸ್ತಾನ |
| ತುಮಕೂರು | 26,78,980 | ಕನ್ನಡ | 22,75,796 | 84.950% | 1 |
| ಉರ್ದು | 2,41,940 | 9.031% | 2 | ||
| ತೆಲುಗು | 90,627 | 3.382% | 3 | ||
| ಲಂಬಾಣಿ | 28,623 | 1.068% | 4 | ||
| ಮರಾಟಿ | 13,265 | 0.495% | 5 | ||
| ತಮಿಳು | 12,112 | 0.452% | 6 | ||
| ಹಿಂದಿ | 8,655 | 0.323% | 7 | ||
| ಮಲಯಾಳಂ | 2,372 | 0.088% | 8 | ||
| ಮಾರ್ವಾರಿ | 986 | 0.036% | 9 | ||
| ಗುಜರಾತಿ | 706 | 0.026% | 10 |






0 Comments