ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ಆಸ್ಸಾಮಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

52

ಆಸ್ಸಾಮಿ ಬಾಶೆಗೆ ಕರ‍್ನಾಟಕದಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮಂದಿ ಇದ್ದಾರೆ. ಕರ‍್ನಾಟಕದಲ್ಲಿ ಆಸ್ಸಾಮಿ ಇಪ್ಪತ್ತಾರನೆಯ ಸ್ತಾನವನ್ನು ಪಡೆದುಕೊಳ್ಳುತ್ತದೆ. ಕರ‍್ನಾಟಕದ ಆಸ್ಸಾಮಿ ಮಾತುಗರ ಸಂಕೆ 9,871 ಆಗಿದೆ. ಇದು ಕರ‍್ನಾಟಕದ 0.016% ಪ್ರತಿಶತ ಮತ್ತು ದೇಶದ ಒಟ್ಟು ಆಸ್ಸಾಮಿಯ 0.064% ಪ್ರತಿಶತ ಆಗುತ್ತದೆ. ಆಸ್ಸಾಮಿಯ ಒಳಗೆ ಆಸ್ಸಾಮಿ (9,724) ಎಂಬ ಒಂದೆ ತಾಯ್ಮಾತು ಮತ್ತು ಇತರ (147) ಎಂಬ ಗುಂಪು ದಾಕಲಾಗಿದೆ.

ಕರ‍್ನಾಟಕದಲ್ಲಿ ಇರುವ ಆಸ್ಸಾಮಿ ಮಾತುಗರು ಬಹುತೇಕ ಬೆಂಗಳೂರು ನಗರ ಜಿಲ್ಲೆಯಲ್ಲಿ ದಾಕಲಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆಸ್ಸಾಮಿ ಮಾತುಗರ ಸಂಕೆ 7,758 ಆಗಿದೆ. ಇದು ಕರ‍್ನಾಟಕದ ಒಟ್ಟು ಆಸ್ಸಾಮಿ ಜನಸಂಕೆಯ 78.593% ಆಗುತ್ತದೆ. ಬೆಂಗಳೂರು ನಗರ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಆಸ್ಸಾಮಿ ಮಾತುಗರ ಸಂಕೆ ಕಡಿಮೆ ಇದೆ. ಅಯ್ದು ಜಿಲ್ಲೆಗಳಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಇದೆ. ಹದಿನೆಂಟು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ಕರ‍್ನಾಟಕದ ಆರು ಜಿಲ್ಲೆಗಳಲ್ಲಿ ಆಸ್ಸಾಮಿಯ ಒಬ್ಬರೂ ದಾಕಲಾಗಿಲ್ಲ.

ಇಲ್ಲಿ ಕೆಳಗೆ ಕರ‍್ನಾಟಕದ ಆಸ್ಸಾಮಿ ಮಾತುಗರ ಜಿಲ್ಲಾವಾರು ಪಟ್ಟಿಯನ್ನು ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಮಾತುಗರು ಆ ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ6,10,95,2979,7240.015%100%
ಬೆಂಗಳೂರು ನಗರ 96,21,5517,7580.080%79.781%
ಕೊಡಗು5,54,5196590.118%6.777%
ಬೆಂಗಳೂರು ಗ್ರಾಮಂತರ9,90,9233140.031%3.229%
ದಕ್ಶಿಣ ಕನ್ನಡ20,89,6492650,012%3.415%
ಹಾಸನ17,76,4211690.009%2.178%
ಮಯ್ಸೂರು 30,01,1271300.004%1.675%
ತುಮಕೂರು26,78,980910.935%
ಬೆಳಗಾವಿ47,79,661900.925%
ಉಡುಪಿ11,77,361670.689%
ಕೋಲಾರ15,36,401650.668%
ಬಳ್ಳಾರಿ 24,52,595440.452%
ಚಿಕ್ಕಮಗಳೂರು11,37,961400.411%
ರಾಮನಗರ10,82,636310.318%
ಉತ್ತರ ಕನ್ನಡ14,37,169280.287%
ಬೀದರ17,03,300230.236%
ಶಿವಮೊಗ್ಗ17,52,753180.185%
ಮಂಡ್ಯ18,05,769160.164%
ಚಿಕ್ಕಬಳ್ಳಾಪುರ12,55,104120.123%
ದಾವಣಗೆರೆ 19,45,497110.113%
ಚಿತ್ರದುರ‍್ಗ16,59,45680.082%
ವಿಜಯಪುರ21,77,33170.071%
ಕೊಪ್ಪಳ13,89,92160.061%
ರಾಯಚೂರು19,28,81240.041%
ದಾರವಾಡ18,47,02330.030%

ಆಸ್ಸಾಮಿ ಮಾತುಗರ ಹಂಚಿಕೆ

‍ಲೇಖಕರು avadhi

30 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading