ಯಾಕೆ ನೋಟೀಸ್ ಕೊಡಬಾರದು?!
– ಬಿ ಎಂ ಬಶೀರ್
ಒಂದು ಶೋಕಾಸ್ ನೋಟಿಸ್:
ಶ್ರೀದೇವಿ, ರೇಖಾ, ಹೇಮಾಮಾಲಿನಿ ಇವರನ್ನು ಕಂಡರೆ ಕಾಲನಿಗೇಕೆ ಭಯ? ನಮ್ಮಂತಹ ತರುಣರ(?) ಕೂದಲು, ಮೀಸೆ, ಗಡ್ಡದ ಮೇಲೆ ಅಕಾಲದಲ್ಲಿ ಮುಗಿ ಬೀಳುವ ಈ ಕಾಲನಿಗೆ ಶ್ರೀದೇವಿಯ ಅವಧಿ ಮುಗಿದ ಸೊಂಟವೇಕೆ ಕಣ್ಣಿಗೆ ಬೀಳಲ್ಲ? ಟೈಮ್ ಬಾರ್ ಆದ ಹೇಮಾಮಾಲಿನಿಯ ಬೆಣ್ಣೆಯಂಥ ಕೆನ್ನೆಯಾ ತೋರು ಬೆರಳಲ್ಲೂ ಮುಟ್ಟಲು ಅವನಿಗೇಕೆ ಅಳುಕು…ರೇಖಾಳ ಕಣ್ಣಲ್ಲಿ ತುಳುಕುವ ಹಳೆ ವೈನನ್ನೊಮ್ಮೆ ಚಪ್ಪರಿಸುವ ಬದಲು..ಈ ಕಾಲ…ಆ ಮಾನಿನಿಯರ ಕಾಲ ಬುಡದಲ್ಲಿ ಹೊರಳಾಡುತ್ತಿದ್ದಾನಲ್ಲ…
ತನ್ನ ಕರ್ತವ್ಯ ಮೆರೆತ ಇವನನ್ನು ಕೆಲಸದಿಂದ ವಜಾ ಯಾಕೆ ಮಾಡ ಬಾರದು?



ಅದ್ಭುತ ಪರಿಕಲ್ಪನೆ ! ಕಲ್ಪನೆ ಏನ್ ಬಂತು….. ಇದೇ ರಿಯಲ್… !! 🙂
tumba chennagide