ಬಲ್ಲಿರೇನಯ್ಯ…?
ಕಾರಂತರು ಹೀಗೆ ಗುಡುಗು ಹಾಕಿದಾಗ ಎಷ್ಟೋ ಜನಕ್ಕೆ ಯಕ್ಷಗಾನವನ್ನು ಹೇಗೆಲ್ಲಾ ಬದಲಿಸಬಹುದು ಎಂಬುದು ಗೊತ್ತಿರಲಿಲ್ಲ. ಯಕ್ಷಗಾನವನ್ನು ಗಡಿಯಾಚೆ ಕೊಂಡೊಯ್ಯುವ ಸಾಹಸಕ್ಕೆ ಸ್ವತಃ ಕಾರಂತರೇ ಗೆಜ್ಜೆ ಕಟ್ಟಿಕೊಂಡರು. ಯಕ್ಷಗಾನ ಉಳಿದು ಒಂದು ಅದ್ಭುತ ಕಲೆಯಾಗಬೇಕಾದರೆ ಏನೆಲ್ಲಾ ಬದಲಾಗಬೇಕು ಎಂಬ ನಿಚ್ಚಳ ನೋಟ ಅವರಲ್ಲಿತ್ತು.
ಹಾಗಾಗಿಯೇ ನೆಳಲು ಬೆಳಕಿನ ಸಂಯೋಜನೆ ತಂದರು. ಮಾತು ಕಡಿಮೆ ಮಾಡಿ ಅಭಿನಯಕ್ಕೆ ಒತ್ತು ಕೊಟ್ಟರು. ನೋಡಲಿಕ್ಕೆ ಸಾಧ್ಯವಾಗುವಷ್ಟು ಮಾತ್ರ ಸಮಯ ಇಟ್ಟರು. ಯಕ್ಷಗಾನಕ್ಕೆ ಮಹತ್ವದ ಬ್ಯಾಲೆಯ ರೂಪ ಕೊಟ್ಟರು.
![]()
ಯಕ್ಷಗಾನ ಭಾಷೆಯ, ದೇಶದ ಗಡಿ ಮೀರಿತು. ಆದರೆ ಕನ್ನಡದ ನೆಲದಲ್ಲೇ ಅಪಸ್ವರ ಎದ್ದಿತು. ಕಾರಂತರ ಯಕ್ಷಗಾನದಲ್ಲಿ ಯಕ್ಷಗಾನ ಎಲ್ಲಿದೆ ಎಂದು ಪ್ರಶ್ನಿಸಿದವರೇ ಹೆಚ್ಚು. ಕಾರಂತರು ಇದನ್ನೆಲ್ಲಾ ಮುಲಾಜಿಗೆ ಇಟ್ಟವರೇ ಅಲ್ಲ. ಆನೆ ನಡೆದದ್ದೇ ದಾರಿ ಎಂಬಂತೆ ತಮ್ಮ ಪ್ರಯೋಗ ನಡೆಸಿಯೇ ನಡೆಸಿದರು.
ಕಾರಂತರ ಅಭಿನಯ, ಕುಣಿತ… ಓ! ಬಣ್ಣಿಸಲು ಶಬ್ದಗಳೇ ಸೋತಾವು. ಹಾಗಾಗಿಯೇ ಈ ಚಿತ್ರಗಳು.
ಚಿತ್ರಗಳು: ಯಜ್ಞ





0 Comments