ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರಹಗಾರರ ಬವಣೆಗಳೆಂಬ ಸುಖಗಳು… – ಸಂಗೀತ ರವಿರಾಜ್

ಸಂಗೀತ ರವಿರಾಜ್

ಬದುಕಿಗಿಂತಲು ಬರಹ ಜಟಿಲ. ಇಂತಹ ಜಟಿಲತೆಯ ಬರಹವನ್ನು ಸುಲಲಿತ ಮಾಡಿಕೊಂಡರೆ ಬದುಕಲು ಅದೆಷ್ಡು ಸುಲಭ ಅಲ್ಲವೇ?ಹೃದಯದಲ್ಲಿ ಭಾವನೆಗಳು ತುಂಬಿ ವೇದನೆ ನೀಡುವ ಬದಲಾಗಿ ಆಗಾಗ್ಗೆ ಪೆನ್ನಾಡಿಸುತ್ತಾ ಖಾಲಿ ಮಾಡಿತ್ತಿದ್ದರೆ ಹೆಪ್ಪುಗಟ್ಟುವ ಪ್ರಮೇಯವೆ ಬರುವುದಿಲ್ಲ. ಈ ಬರಹವೆನ್ನುವುದು ತೀರಾ ಖಾಸಗಿಯಿಂದ ಪ್ರಾರಂಭಗೊಂಡು ತದನಂತರ ಅದರ ಹಂತಗಳು ಬದಲಾದಂತೆ ನಿಧಾನವಾಗಿ ಬೆಳಕಿಗೆ ಬರುತ್ತದೆ. ನಾವು ಬರಹಗಾರರೆನ್ನುವುದು ನಮ್ಮ ಪಕ್ಕದ ಮನೆಯವರಿಗು ತಿಳಿಯದಿದ್ದರು ಬಲುದೂರದ ಬರಹಗಾರನೊಬ್ಬನಿಗೆ ತಿಳಿಯುತ್ತದೆ. ಇದುವೆ ಸಾಹಿತ್ಯಕ್ಕಿರುವ ಶಕ್ತಿ! ವಿರಾಮವೆ ಇಲ್ಲದ ಯಾಂತ್ರಿಕ ಬದುಕಿನ ನಡುವೆ ಸಾಹಿತ್ಯ ನೀಡುವ ಸುಖ ಬಲ್ಲವರಿಗಷ್ಟೆ್ತೆ ಬಲ್ಲುದು ಬೆಲ್ಲದ ಸವಿ.
ಸಾಗರದಂತಹ ಸಾಹಿತ್ಯ ವಲಯದಲ್ಲಿ ನಮ್ಮಂತಹ ಚಿಕ್ಕಪುಟ್ಟ್ತ ಬರಹಗಾರರ ಪೀಕಲಾಟಗಳು ಅಷ್ಟಿಷ್ಟಲ್ಲ. ಯಾಕೆಂದರೆ ಖ್ಯಾತನಾಮರಿಗಾದರೆ ಪತ್ರಿಕೆಯವರೆ ಅಂಕಣ ಬರೆಯಲು, ಲೇಖನ ಕಳಿಹಿಸಲು ತಿಳಿಸುತ್ತಾರೆ. ನಾವುಗಳು ನಾವಾಗಿಯೆ ಬರೆದು ಪತ್ರಿಕೆಗಳಿಗೆ ಕಳುಹಿಸಬೇಕು. ಯಾವುದಾದರು ಪತ್ರಿಕೆಯಲ್ಲಿ ನಮ್ಮ ಕವಿತೆ ಪ್ರಕಟವಾದದ್ದು ತಿಳಿದರೆ ಓದಿ ಅಭಿನಂದಿಸುವ ಬದಲಾಗಿ, ನಿಮ್ಮ ಕವಿತೆ ಪ್ರಕಟಿಸಲು ನೀವೆಷ್ಟು ಹಣ ಕೊಡುತ್ತೀರಿ ಎಂದು ಕೇಳುವ ಜನರಿದ್ದಾರೆ ಮತ್ತು ನನ್ನೊಂದಿಗೆ ಕೇಳಿದ್ದಾರೆ. ಇಂತವರ ಪ್ರಶ್ನೆಗಳಿಗೆ ಸಾವಾಕಾಶದಿಂದ ಪತ್ರಿಕೆಯವರೆ ನಮಗೆ ಕೊದುವ ಸಂಭಾವನೆಯ ಬಗ್ಗೆ ಹೇಳಿದಾಗ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಪತ್ರಿಕೆಯವರು ಬರಹಗಾರರಿಗೆ ನೀಡುವ ಗೌರವ ಮತ್ತು ಸಂಭಾವನೆಯ ಬಗೆಗೆ ಉಳಿದವರಿಗೆ ಖಂಡಿತಾ ತಿಳುವಳಿಕೆಯಿಲ್ಲ. ಗೌರವಧನ ಕಳುಹಿಸುತ್ತಾರೆ ಎಂದಾದ ಮೇಲೆ ನಿಮಗೆ ಸಾಧ್ಯವಾದಷ್ಟು ಬರಹಗಳನ್ನು ಕಳಿಸುವುದು ಒಳಿತಲ್ಲವೆ ಎಂದು ಕೇಳುತ್ತಾರೆ. ನಾವು ಕಳುಹಿಸಿದ್ದೆಲ್ಲಾ ಪ್ರಕಟವಾಗುವುದಿಲ್ಲ. ಅದನ್ನವರು ಆಯ್ಕೆ ಮಾಡಿ ಉತ್ತಮವಾದುದನ್ನು ಮಾತ್ರವೇ ಪ್ರಕಟಿಸುತ್ತಾರೆ ಎಂಬುದನ್ನು ನಾನು ಅನೇಕ ಮಂದಿಗೆ ಹೇಳಿದ್ದೇನೆ.

ಇನ್ನು ಬರಹಗಾರರಿಗೆ ವಸ್ತುಗಳು ಸಿಗುವುದು ತನ್ನದೇ ಅನುಭವಗಳು ಮತ್ತು ಇದರ ಹೊರತಾಗಿ ಪರಿಚಯಸ್ಥರ ವಿಷಯಗಳು. ಉಳಿದವರ ಬಗ್ಗೆ ಬರೆಯುವಾಗ ಕವಿತೆಯಾದರೆ ಪರವಾಗಿಲ್ಲ. ಯಾಕೆಂದರೆ ಅರ್ಥವಾಗದಂತೆ ಜಾಗರೂಕತೆಯಿಂದ ಬರೆಯಬಹುದು! ಆದರೆ ಉಳಿದ ಪ್ರಕಾರಗಳಾದ ಲಲಿತಪ್ರಬಂಧ, ಕತೆ ಹೀಗೆ ಬರೆಯುವಾಗ ನಮ್ಮ ಕಥಾವಸ್ತು ಇನ್ನೋಬ್ಬರನ್ನು ಗೇಲಿ ಮಾಡಿದಂತೆ ಎಂದು ಭಾವಿಸುವವರೆ ಹೆಚ್ಚು. ಇಂತಹ ಕಾರಣದಿಂದ ಜಗತ್ತಿನ ಅದೆಷ್ತೋ ಸಾಹಿತಿಗಳು ಮಾನನಷ್ಟ ಮೊಕದ್ದಮೆ ಎದುರಿಸಿದ ಉದಾಹರಣೆಗಳಿವೆ. ಖ್ಯಾತ ಉದರ್ು ಕತೆಗಾತರ್ಿ ಇಸ್ಮತ್ ಚುಗ್ತಾಯ್ ಗೆ ತನ್ನ ಕತೆ ಪ್ರಕಟವಾದ ನಂತರ ಲಾಹೋರ್ ಕೋಟರ್್ನಿಂದ ಸಮನ್ಸ್ ಬಂದಾಗ ಆಶ್ಚರ್ಯವಾಗಿತ್ತು. ಕತೆಯಲ್ಲಿ ಅಶ್ಲೀಲತೆ ಇದೆಯೆಂದು ಅವರ ವಿರುದ್ದ ಮೊಕದ್ದಮೆ ಹೂಡಿದ್ದರು. ಹಲವಾರು ವರುಷಗಳ ಕಾಲ ಸತತವಾಗಿ ಲಾಹೋರ್ ನ್ಯಾಯಾಲಯಕ್ಕು ಹೋಗಿ ಬಂದರು. ಲಾಹೋರ್ನ ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ಈ ಕಾರಣದಿಂದಲೇ ನೋಡಿದೆ ಎಂಬುದಾಗಿ ಅವರ ಆತ್ಮಕತೆ ” ಎ ಲೈಫ್ ಇನ್ ವಡ್ರ್ಸ”ನಲ್ಲಿ ತಮಾಷೆಯಾಗಿ ಹೇಳಿದ್ದಾರೆ. ಕೊನೆಗು ಅವರಿಗೆ ಜಯ ಸಿಕ್ಕಿದ್ದನ್ನು ಇಲ್ಲಿ ಸ್ಮರಿಸಬಹುದು.
ನಾನು ಭಾಗವಹಿಸಿದ ಕಥಾಗೋಷ್ಟಿಯೊಂದರಲ್ಲಿ ಸಾಹಿತಿಯೊಬ್ಬರು ಹಾಸ್ಯಕ್ಕೆಂಬಂತೆ ‘ ಮನೆಗೆ ಕಲ್ಲು ಬೀಳದೆ ಯಾವ ಕತೆಗಾರನು ಉದ್ದಾರವಾಗುವುದಿಲ್ಲ” ಎಂದಿದ್ದರು. ಇದು ಅವರ ಅನುಭವವಂತೆ. ಅವರ ಮೊದಲ ಕತೆ ಪ್ರಕಟವಾದಾಗ ಮನೆಯ ಕಿಟಕಿ ಗಾಜುಗಳನ್ನು, ಹಂಚುಗಳನ್ನು ರಾತ್ರೋರಾತ್ರಿ ಪುಡಿ ಮಾಡಿದ್ದರಂತೆ. ಯಾಕೆಂದರೆ ಅವರ ಕತೆಯ ತಿರುಳು ವಾಸ್ತವವಾಗಿ ನೆರೆಮನೆಯ ವಿಷಯವಾಗಿತ್ತು.ಇಂತಹ ಅವಾಂತರಗಳಿಗೆ ಇನ್ನೊಂದು ಉಪಾಯವೆಂದರೆ ಲೇಖಕರು ತಿಳಿಯದಂತೆ ಬರೆಯಲು ಆಗದಿದ್ದರೆ ತಮ್ಮ ಹೆಸರನ್ನೆ ಬದಲಾಯಿಸಿ ಕೊಡಬೇಕು. ಬರಹಗಾರರು ತಮ್ಮ ಹೆಸರನ್ನೆ ಬದಲಾಯಿಸಿ ಕೊಡುವ ಕ್ರಮ ತುಂಬಾ ಹಿಂದಿನಿಂದಲೆ ಚಾಲ್ತಿಯಲ್ಲಿದೆ. ಕಾವ್ಯನಾಮಗಳ ವಿಚಾರ ಬಿತ್ತು ಉಳಿದಂತೆ ಅದಡಷ್ತೋ ಬರಹಗಾರರು ತಮ್ಮ ಮೂಲನಾಮವನ್ನು ಮರೆಮಾಚುತ್ತಾರೆ. ಹೆಣ್ಣಿನ ಹೆಸರು ಉಲ್ಲೇಖಿಸಿ ಬರೆಯುವ ಗಂಡಸರಿದ್ದಾರೆ. ಹಾಗೆಯೆ ಮಹಿಳೆಯರು ಪುರುಷರ ಹೆಸರನ್ನು ಹಾಕುತ್ತಾರೆ. ಕೆಲವು ಸಂಧರ್ಭದಲ್ಲಿ ಯಾವುದಾದರು ರಹಸ್ಯವನ್ನು ಹೇಳಬೇಕೆನಿಸಿದಾಗ ಆ ಸಲ ಮಾತ್ರವೇ ಹೆಸರು ಬದಲಾಯಿಸಲು ಸಂಪಾದಕರಿಗೆ ದುಂಬಾಲು ಬೀಳುತ್ತಾರೆ.
ಬರಹಗಳನ್ನು ಪತ್ರಿಕೆಗಳಿಗೆ ಕಳುಹಿಸುವ ಪರಿಪಾಠ ಪ್ರಾರಂಭವಾದ ಮೊದಮೊದಲು ಪ್ರಕಟವಾದಾಗ ಆಗುವ ಪುಳಕ ಅನುಭವಿಸುವವರಿಗೆ ಮಾತ್ರ ತಿಳಿಯುವಂತದ್ದು. ಪ್ರಸ್ತುತ ದಿನಗಳಲ್ಲಿ ನಿಯತಕಾಲಿಕೆಗಳ ಸಂಖ್ಯೆ ತುಂಬಾ ಇದೆ. ಹೀಗಾಗಿ ಬರಹಗಾರರಿಗೆ ಪ್ರಕಟದ ಅವಕಾಶ ಸಿಗುತ್ತದೆ. ಈಗ ಇ-ಮೇಲ್ ಪದ್ದತಿ ಇರುವುದರಿಂದ ಒಂದು ಪತ್ರಿಕೆಯಲ್ಲಿ ಸ್ವೀಕೃತಿಯಾಗದಿದ್ದರೆ ಮಗದೊಂದು ಪತ್ರಿಕೆಗೆ ಕಳುಹಿಸಬಹುದು. ಕಳುಹಿಸಿದ ದಿನದೊಳಗೆ ಸ್ವೀಕೃತಿ ಅಥವ ಅಸ್ವೀಕೃತದ ಬಗೆಗೆ ಮಾಹಿತಿಯು ಸಿಗುತ್ತದೆ. ಅಸ್ವೀಕೃತವಾದರೆ ಆ ವಿಷಯ ನಮಗೆ ಮಾತ್ರ ತಿಳಿಯುತ್ತದೆ! ಅಂಚೆಯ ಮೂಲಕ ಕಳುಹ್ದಿಸುವ ಸಂಧರ್ಭದಲ್ಲಿ ಬರಹಗಾರರು ಜಾತಕ ಪಕ್ಷಿಯಂತೆ ಯಾವಾಗ ಪ್ರಕಟವಾಗುತ್ತದೆ ಎಂದು ಕಾಯಬೇಕು. ಇನ್ನೊಂದು ಪತ್ರಿಕೆಗೆ ಅದನ್ನು ಬರೆದು ಕಳುಹಿಸೋಣವೆಂದರೆ ಮೊದಲು ಕಳುಹಿಸಿದು ಪ್ರಕಟವಾದರೆ ಎಂಬ ಅಳುಕು. ಕೆಲವು ಪತ್ರಿಕೆಯವರು ವಿಳಾಸವಿರುವ ಅಂಚೆ ಕಾರ್ಡನ್ನು ಜೊತೆಯಲ್ಲಿ ಕಳುಹಿಸಿ ಎಂದು ನಮೂದಿಸಿರುತ್ತಾರೆ. ಅಸ್ವೀಕೃತವಾದರೆ ಅದನ್ನು ಬರೆದು ಕಳುಹಿಸುತ್ತಾರೆ. ಅದರೊಂದಿಗೆ ನಮ್ಮ ಬರಹದ ಅಸ್ವೀಕೃತೆಯ ವಿಚಾರ ಜಗಜ್ಜಾಹಿರು ಆಗಿಬಿಡುತ್ತದೆ. ತೆರೆದ ಅಂಚೆಯಲ್ಲಿ ಅಸ್ವೀಕೃತ ಎಂದು ಹೊತ್ತು ಬರುವ ಕಾರ್ಡನ್ನು ಪೋಸ್ಟ್ಮ್ಯಾನ್ ಆದಿಯಾಗಿ ಹಲವು ಜನರು ನೋಡಿರುತ್ತಾರೆ. ಏಕೆಂದರೆ ಹಳ್ಳಿಗಳಲ್ಲಿ ಅಂಚೆಯನ್ನು ಮನೆ ಹತ್ತಿರದ ಅಂಗಡಿಗಳಲ್ಲಿ ಇಡುವುದು ಪರಿಪಾಠ. ಇನ್ನು ಕೆಲವು ಬರಹಗಾರರಿಗೆ ಅಂಚೆಚೀಟಿಗೆ ಹಣ ವ್ಯಯಿಸಿ ಸಾಕಾಗಿ ಹೋಗಿರುತ್ತದೆ. ಎಷ್ಟು ಕಳುಹಿಸಿದರು ಸಂಪಾದಕರ ಕಸದ ಬುಟ್ಟಿ ಸ್ವಾಹ ಮಾಡಿರುತ್ತದೆ. ಕಾಂಪ್ಲಿಮೆಂಟರಿ ಪುಸ್ತಕ ಕಳುಹಿಸದ ನಿಯತಕಾಲಿಕೆಗಳಲ್ಲಿ ಪ್ರಕಟವಾದರೆ ಬಂದ ವಿಷಯ ತಿಳಿಯುವುದು ಕಷ್ಟಸಾಧ್ಯ. ಎಲ್ಲಾ ಬರಹಗಾರರು ಎಲ್ಲಾ ನಿಯತಕಾಲಿಕೆಗಳನ್ನು ತೆಗೆಯುವುದು ಅಪರೂಪ. ಹಾಗಿರುವಾಗ ತಡವಾಗಿ ತಿಳಿದು ಮತ್ತೆ ಆ ಪುಸ್ತಕಕ್ಕೆ ಪರದಾಡುವಂತೆ ಆಗುತ್ತದೆ. ಈಗ ಎಸ್ ಎಮ್ ಎಸ್ ಯುಗವಾದ್ದರಿಂದ ಓದಿದ ಕೆಲವರಿಗೆ ಸಂದೇಶ ಕಳುಹಿಸುವ ಅಭ್ಯಾಸವಿರುತ್ತದೆ. ಪತ್ರಿಕೆ ಕೊಳ್ಳಲು ಅನುಕೂಲವು ಆಗುತ್ತದೆ.
ಈ ಎಲ್ಲಾ ಬವಣೆಗಳು ಇದ್ದರು ಸಹ ಬರೆದು ಕಳುಹಿಸುವ ಜಾಯಾಮಾನ ಯಾವ ಬರಹಗಾರನಲ್ಲು ಕಡಿಮೆಯಾಗುವುದಿಲ್ಲ. ಬರೆದ್ದದೆಲ್ಲಾ ಸಂಗ್ರಹವಾದ ಮೇಲೆ ಸಂಕಲನವನ್ನು ಹೊರತಂದು ಅದರಲ್ಲಿ ಎಲ್ಲಾ ಸಂಪಾದಕರಿಗೆ ವಂದನೆಗಳನ್ನು ಸಲ್ಲಿಸುತ್ತಾರೆ.ಬರೆಯುವ ಸುಖ ಬರಹಗಾರರಿಗೆ ಮಾತ್ರವೆ ತಿಳಿದಿರುವ ಸತ್ಯ. ಏನೆ ಇರಲಿ ಅರಿವಿಗೆ ನಿಲುಕದಷ್ಟ್ತು ಎತ್ತರಕ್ಕೆ ಬೆಳೆದ ಲೋಕದಲ್ಲಿ ಹಸಿವು ಇಮ್ಮಡಿಸುತ್ತಲೆ ಇದೆ. ನಾಲ್ಕು ದಿನದ ಜಂಜಾಟದ ಬಾಳಿನಲ್ಲಿ ಸಾಹಿತ್ಯ ಸಂಪ್ರೀತಿಯಾದಲ್ಲಿ ಬದುಕಿಗೊಂದು ಅರ್ಥವಿದೆ. ಕಡೇಪಕ್ಷ ಪ್ರತಿನಿತ್ಯ ನಡೆಯುವ ವಿದ್ಯಾಮಾನಗಳನ್ನು ಡೈರಿಯಲ್ಲಿ ಬರೆದಿಡುವ ಹವ್ಯಾಸವನ್ನಾದರು ಇಟ್ಟುಕೊಂಡರೆೆ ಬರಹ ನೀಡುವಸುಖವನ್ನು ಎಲ್ಲರು ಆಸ್ವಾದಿಸಬಹುದು.

‍ಲೇಖಕರು G

14 July, 2014

2 Comments

  1. lakshmishankarjoshi.

    Tumba chennagideri…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading