ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬನ್ನಿ ಕನ್ನಡ ಮಾತಾಡೋಣ…

ಕಣಾದ ಮೇಟಿಕುರ್ಕೆ

ಬೀದಿ ಬದಿಯ ಪೆಟ್ಟಿಗೆ ಅಂಗಡಿಯಲ್ಲಿ ಅಣ್ಣ ಒಂದ್ ಲೋಟ ಬಿಸಿಬಿಸಿ ಕಾಪಿ ಕೊಡು ಅನ್ನೋನು… Coffee dayಗೆ ಹೋದ ತಕ್ಷಣ Bearer can you get me a cup of cappuccino ಅಂತಾನೆ…
ಎರಡೂ ಅಂಗಡಿ ಇರೋದು ಅಕ್ಕಪಕ್ಕದಲ್ಲೇ ಆದ್ರೂ ಯಾಕೆ ಇಷ್ಟೊಂದು ವ್ಯತ್ಯಾಸ???
ಇದು ಕೇವಲ ನಮ್ಮ ಮನಃಸ್ಥಿತಿ ಅಷ್ಟೆ
ಈ ಕೀಳರಿಮೆಯನ್ನು ಹೋಗಲಾಡಿಸಲು ಹಾಗೂ ಕನ್ನಡಿಗರಿಗೆ ಕನ್ನಡ ಮಾತನಾಡಲು ಉತ್ತೇಜಿಸುವುದೇ ನಮ್ಮ ಕಂಕಣ ತಂಡದ ಉದ್ದೇಶ…

ನಿಮಗೂ ನಮ್ಮ ಜೊತೆ ಸೇರಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಲು ಆಸಕ್ತಿಯಿದ್ದಲ್ಲಿ…. ಇದೇ ಭಾನುವಾರ ನಗರದ MG ರಸ್ತೆಯಲ್ಲಿ ನಡೆಯುವ ಕನ್ನಡ ಮಾತಾಡಿ ಅಭಿಯಾನದಲ್ಲಿ ಪಾಲ್ಗೊಳ್ಳಿ…
ಕೆ ಆರ್ ಮಾರ್ಕೆಟ್ಟಲ್ಲಾದರೂ ಇರು, ಸೂಪರ್ ಮಾರ್ಕೆಟ್ಟಲ್ಲಾದರೂ ಇರು ಎಲ್ಲೆಲ್ಲಿಯೂ ಕನ್ನಡ ಮಾತನಾಡುತ್ತಿರು
ಕನ್ನಡವೇ ಸತ್ಯ, ಕನ್ನಡವೇ ದಿನನಿತ್ಯ
 

‍ಲೇಖಕರು G

27 June, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading