ಮೊನ್ನೆ ತುಮಕೂರಿನಲ್ಲಿ ಡಾ. ಸಿದ್ದಲಿಂಗಯ್ಯ ಅವರ ಊರು ಕೇರಿ ನಾಟಕ ಪ್ರದಶ೯ನವಿತ್ತು. ಈ ನಾಟಕ ಪ್ರದಶ೯ನದ ಉದ್ಘಾಟನಾ ಸಮಾರಂಭಕ್ಕೆ ಸ್ವತಃ ಲೇಖಕರು, ಪ್ರೀತಿಯ ಕವಿಗಳಾದ ಡಾ. ಸಿದ್ಧಲಿಂಗಯ್ಯ ಹಾಗೂ ಹೆಸರಾಂತ ಕಥೆಗಾರ ನಟರಾಜ್ ಹುಳಿಯಾರು ಆಗಮಿಸಿದ್ದರು.
ಬಡವರ ನಗುವಿನ ಶಕ್ತಿಯನ್ನು ಎಳೆಯಾಗಿಟ್ಟುಕೊಂಡು ಹುಳಿಯಾರು ಅವರು ತುಂಬಾ ಅಥ೯ಪೂಣ೯ವಾಗಿ ಮಾತನಾಡಿದರು. ನಾಟಕ ಮುಗಿಯುತ್ತಿದ್ದಂತೆ ಕವಿಗಳಾದ ಸಿದ್ದಲಿಂಗಯ್ಯ ಅವರಿಗೆ ಪ್ರೇಕ್ಷಕರು ಜೈಕಾರ ಕೂಗಿದರು. ವೇದಿಕೆ ಏರಿ ಕವಿಗಳಿಗೆ ನಮಸ್ಕರಿಸಿದರು.
ಯುವಕರು ತಮಟೆ ಬಾರಿಸಿದರು. ಹೋರಾಟದ ಹಾಡುಗಳನ್ನು ಗುನುಗಿದರು. ಒಬ್ಬ ಕವಿ ಹೇಗೆಲ್ಲಾ ತನ್ನ ಮುಂದಿನ ತಲೆಮಾರನ್ನು ಪ್ರಭಾವಿಸುತ್ತಾರಲ್ಲ. ತುಮಕೂರಿನಲ್ಲಿ ಮಳೆಗಾಲದ ದಿವಸದಲ್ಲೂ ಅಥ೯ಪೂಣ೯ ಸಂಜೆ ನಡೆದು ಹೋಯಿತು]]>
ಬಡವರ ನಗುವಿನ ಶಕ್ತಿ
ನಿಮಗೆ ಇವೂ ಇಷ್ಟವಾಗಬಹುದು…





malenadinallu natakavannu adisalu sadhyave?