ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫ್ಯಾಮಿಲಿಮ್ಯಾನ್-2 ನಲ್ಲಿ ಏನು ಹೇಳಿದ್ದಾರೆ?

ಪರಮೇಶ್ವರ ಗುರುಸ್ವಾಮಿ

ಇತ್ತೀಚಿನ ಇತಿಹಾಸದಿಂದ ಪ್ರೇರಿತವಾದ ಕತೆಯನ್ನು ಹೆಣೆಯುವಾಗ ಇಂಥಾ ಬೇಜವಾಬ್ದಾರಿತನ ಇಟ್ಟುಕೊಳ್ಳಬಾರದು. ಪ್ರಭಾಕರ (ಕೆಲವರ ಪ್ರಕಾರ ಪಿರಬಾಕರ) ಮತ್ತು ಭಾಸ್ಕರ ಎರಡೂ ಸೂರ್ಯನ ಹೆಸರೆ. ಹೀಗೆ ಇತಿಹಾಸಕ್ಕೆ ಸೇರಿದ ವ್ಯಕ್ತಿಯೆಡೆಗೆ ಬೊಟ್ಟು ಮಾಡಿಕೊಂಡು ಮತ್ತೆ ಹಲವಾರು ಸಂಗತಿಗಳನ್ನು ನೆನಪಿಸುವಂತೆ ಕತೆ ಹೆಣೆದು, ಹೆಣೆದ ಕತೆ ವಕ್ರಬುದ್ದಿಯಿಂದ ಕೂಡಿದ್ದರೆ ಸರಣಿಚಿತ್ರ ಮಾಡಿದವರು ‘ಇದು ತಮ್ಮ ಸ್ವಂತ ಕಲ್ಪನೆ’ ಎಂದು ತಪ್ಪಿಸಿಕೊಳ್ಳುವುದಕ್ಕಾಗುವುದಿಲ್ಲ.

‘ಫ್ಯಾಮಿಲಿಮ್ಯಾನ್-೨ ನಲ್ಲಿ ಏನು ಹೇಳಿದ್ದಾರೆ? ಸನಾತನವಾದವನ್ನು ಆಗಿ ಪ್ರೇಕ್ಷಕರ ತಲೆಗೆ ರವಾನಿಸುವ ಯತ್ನ ಮಾಡಿದ್ದಾರೆ. ಉತ್ತರಭಾಗದ ರಾಮಲಕ್ಷ್ಮಣರು ದಕ್ಷಿಣಭಾಗದ ‘ರಾಕ್ಷಸರನ್ನು’ ಸಂಹರಿಸಿದ್ದಾರೆ. ಉತ್ತರದ ತಿವಾರಿಯ ಮಗಳ ‘ಶೀಲ’ವನ್ನು ಜತನದಿಂದ ಕಾಪಾಡುವ ನಿರ್ದೇಶಕದ್ವಯರು ದಕ್ಷಿಣದ ‘ಶೂರ್ಪನಖಿ’ಯ ಶೀಲವನ್ನು ಅವಳು ಹೋದೆಡೆಯೆಲ್ಲಾ ಚರಪಿನಂತೆ ವಿತರಿಸಿಬಿಟ್ಟಿದ್ದಾರೆ.

ಪ್ರೇಕ್ಷಕ/ಕಿ ನಂಬಿಬಿಟ್ಟರೆ ತಿರುಚಿದ ಇತಿಹಾಸದ ಅಪಸವ್ಯವನ್ನೇ ಸತ್ಯ ಅಂದುಕೊಳ್ಳಲಿ. ಸತ್ಯ ಗೊತ್ತಿರುವವರು ಪ್ರಶ್ನಿಸಿದರೆ, ಇದು ಸತ್ಯಘಟನೆಯ ಕಥನವಲ್ಲ, ನಮ್ಮ ಪ್ರತಿಭೆ ಮತ್ತು ಕಲ್ಪನೆಗಳ poetic license ಬಳಸಿ ಹೇಳಿರುವ ಕತೆ ಎಂಬ ಜಾಮೀನು. ಚಿತ್ರಕತೆ ಜಾಳು ಜಾಳು. ಕೆಲವುಕಡೆಯಂತೂ ಅಸಹನೀಯ ಎಳೆತ. ಓಬೀರಾಯನ ಕಾಲದ ನಾಯಕನ ಮನೆಯವರ ಹಿಡಿದಿಟ್ಟುಕೊಂಡು ನಡೆಸುವ ಬ್ಲ್ಯಾಕ್‌ಮೇಲ್, ಇಂಗ್ಲಿಷ್ ಒರಿಜಿನಲ್ ಥ್ರಿಲ್ಲರ್ ಸರಣಿಗಳ‌ ದೃಶ್ಯಗಳನ್ನು ಷಾಟ್‌ಗಳನ್ನು ಕೆಟ್ಟದಾಗಿ ಕದ್ದಿರುವುದು. ತಾಂತ್ರಿಕವಾಗಿಯೂ ಬಹಳ ಕಳಪೆ.

ಸಾಬರನ್ನು ತಮಿಳರನ್ನು ಸಾರಾಸಗಟು ದೇಶದ್ರೋಹಿಗಳು ಎಂಬಂತೆ ಬಿಂಬಿಸಿರುವುದೇ ಈ ಸರಣಿಯ ಹೆಚ್ಚುಗಾರಿಕೆ. Highly biased storyline and uncompetitive production. ಇದನ್ನು ‘ಪಾತಾಳ್ ಲೋಕ್’ ಜೊತೆಗಿಟ್ಟು ನೋಡಿ. ರವೀಂದ್ರ ಪ್ರಸಾದ್ ಮುತ್ತುವಾಗಿ ಗಮನ ಸೆಳೆದರೆ ಸಮಂತ ಅಕ್ಕಿನೇನಿ ರಾಜಿ ಆಗಿ ಮರೆಯಲಾಗದ ಪಾತ್ರ. ತಿವಾರಿಯಾಗಿ ಮನೋಜ್ ಬಾಜಪಯ್ ಇನ್ನೂ ‘ವಾಸೇಪುರ್’ನ ನೆರಳಿನಲ್ಲಿ ಕಾಲಯಾಪನೆ ಮಾಡಿದ್ದಾರೆ.

‍ಲೇಖಕರು Avadhi

18 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading