ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೋಟೊಗ್ರಾಫರ್

ಲಡಾಯಿ ಬಸೂ

ಸಣ್ಣ ಕಥೆ

ಅವನೊಬ್ಬ ಫೋಟೊಗ್ರಾಫರ್. ಎಲ್ಲೊ ಬೆಂಕಿ ಬಿದ್ದ ಸುದ್ದಿ ಬಂದಿತು. ಹೋಗಿ ನೋಡಿದರೆ ಬೆಂಕಿಯ ಕೆನ್ನಾಲಿಗೆಯಲ್ಲಿ ಧಗ ಧಗ ಉರಿಯುತ್ತಿರುವ ಗುಡಿಸಲುಗಳು. ಬಡಪಾಯಿಗಳ ಆಕ್ರಂದನ. ಇದ್ದುದನೆಲ್ಲ ಕಳಕೊಂಡ ಜನರ ದುಃಖ ಕಣ್ಣೀರಾಗಿತ್ತು.

ಕ್ಯಾಮರಾ ಬ್ಯಾಗ್ ಬಿಚ್ಚದೆ, ಧಗಧಗಿಸುವ ಬೆಂಕಿಯನ್ನು ಆರಿಸಲು ಓಡಾಡುವ ಜನಗಳಲ್ಲಿ ಆತನೂ ಸೇರಿಹೋದ. ಅವನೊಂದಿಗೆ ಬಂದಿದ್ದ ಅವನ ಸಹೋದ್ಯೋಗಿ ಗುಡಿಸಲುಗಳನ್ನು ನುಂಗಿಹಾಕುವ ಬೆಂಕಿಜ್ವಾಲೆಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿದನು.

ಮುಂದೊಂದು ದಿನ ಫೋಟೋಗ್ರಫಿ ಸ್ಪರ್ಧೆಯಲ್ಲಿ ಅದೇ ಫೋಟೋ ಮೊದಲ ಬಹುಮಾನ ಗಳಿಸಿತು. ಆಯೋಜಕರು ಅವನಿಗೆ ಶ್ರೇಷ್ಠ ಫೋಟೋಗ್ರಾಫರ್ ಪ್ರಶಸ್ತಿ ನೀಡಿದರು. ನೆರೆದವರೆಲ್ಲ ಅವನನ್ನು ಹೊಗಳುವವರೇ. ಬೆಂಕಿ ಹತ್ತಿದ್ದ ಗುಡಿಸಲುಗಳನ್ನು ಆರಿಸುವವರಲ್ಲಿ ಸೇರಿಹೋಗಿದ್ದ ಈ ಹುಡುಗ ಯಾರೂ ಮಾತನಾಡಿಸದ ಜನಗಳ ಮಧ್ಯೆ ಮಿಕಿಮಿಕಿ ನೋಡುತ್ತ ನಿಂತಿದ್ದ.

ನೂರಾರು ವಾಹನಗಳು ಅವರನ್ನು ದಾಟಿಕೊಂಡು ಹೋಗುತ್ತಿದ್ದವು.

 

‍ಲೇಖಕರು G

15 December, 2012

2 Comments

  1. Gopaal Wajapeyi

    ಸೇವೆ ಮಾಡುವ ಕೈಗಳೇ ಬೇರೆ… ಪ್ರಶಸ್ತಿಗಾಗಿ ಒಡ್ಡಿಕೊಂಡಿರುವ ಕೈಗಳೇ ಬೇರೆ… ನಿಮ್ಮ ಈ ಕಿರು ಕಥೆ ನೈಜವಾದದ್ದು… ಅದನ್ನು ಹೇಳಿರುವ ರೀತಿ ಇಷ್ಟವಾಯಿತು.

  2. samyuktha

    short and deep! tumba chennagide…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading