ಬದುಕು ಮತ್ತು ಸಾವಿನ ಬಗ್ಗೆ ಸೂರಿ ಮತ್ತು ಜೋಗಿಯವರ
ನಡುವೆ ಫೇಸ್ ಬುಕ್ಕಿನಲ್ಲಿ ನಡೆದ ಜುಗಲ್ ಬಂದಿಯ ತುಣುಕು
ಸೂರಿ :
ಸಾವು
ಸರದಿಯಂತೆ ಬಂದೆರಗುತ್ತದೆ
ಪ್ರತಿಯೊಬ್ಬರ ಮೇಲೂ.
ಬದುಕೇಕೆ ಬಾರದು?
ಸರದಿಯಂತೆ ಬಂದೆರಗುತ್ತದೆ
ಪ್ರತಿಯೊಬ್ಬರ ಮೇಲೂ.
ಬದುಕೇಕೆ ಬಾರದು?
……
ಬದುಕು ಬರುವುದು ಗೊತ್ತಾಗಲಿಲ್ಲವೆಂದರೆ ಅದೆಂತಹ ನಿರ್ಭರ ಬದುಕು? ಬದುಕು ಬರುವುದು ಗೊತ್ತಾಗಬೇಕು. ಅಂದರೇನೆ ಬದುಕನ್ನು ಬದುಕಿದಂತೆ. ಸಾವು ಬರುವುದು ಗೊತ್ತಾಗಬಾರದು. ಆವಾಗ ಮಾತ್ರ ಸಾವನ್ನು ಸತ್ತಂತೆ.
ಜೋಗಿ
ಸಾವು ನಾಮ ಪದ. ಬದುಕು ಕ್ರಿಯಾಪದ
……
ಸರ್ಪಸುತ್ತು ಬರೋದು ಎರಡ್ಮೂರು ದಿನ ಮುಂಚೇನೇ ಗೊತ್ತಾಗತ್ತೆ
ಸೂರಿ
ಅದು ಒಂದು ಸಾಮಾನ್ಯ ನ್ಯೂನತೆ. ಮಲ್ಲಿಗೆ ಬಳ್ಳಿ ಹೂವು ಬಿಡದೆ ಹೋದರೆ, ಅದಕ್ಕೆ ಹೆದರಿಸುತ್ತಾರೆ, ನಿನ್ನನ್ನು ಬೇರುಸಮೇತ ಕಡಿದುಬಿಡುತ್ತೇನೆ ಎಂದು. ಆ ಹೆದರಿಕೆಗೆ ಬಳ್ಳಿ ಹೂವು ಬಿಡುತ್ತದಂತೆ.
ದೇಹಕ್ಕೆ ಶಿಸ್ತು, ವಿರಾಮ ಕೊಡದೇ ಹೋದಲ್ಲಿ ದೇಹ ಹೆದರಿಸುವುದು ಹೀಗೆ. ಒಮ್ಮೆ ಅದಕ್ಕೆ ಸ್ವಲ್ಪ ಶಿಸ್ತು ಕಲಿಸಿ, ವಿರಾಮ ನೀಡಿ, ನಿಮ್ಮದೇ ದೇಹ ಮತ್ತೆ ಚಿಗುರುವುದನ್ನು ನೋಡಿ. ಇದನ್ನು ಅನುಭವದಿಂದ ಹೇಳುತ್ತಿದ್ದೇನೆ.
ದೇಹಕ್ಕೆ ಶಿಸ್ತು, ವಿರಾಮ ಕೊಡದೇ ಹೋದಲ್ಲಿ ದೇಹ ಹೆದರಿಸುವುದು ಹೀಗೆ. ಒಮ್ಮೆ ಅದಕ್ಕೆ ಸ್ವಲ್ಪ ಶಿಸ್ತು ಕಲಿಸಿ, ವಿರಾಮ ನೀಡಿ, ನಿಮ್ಮದೇ ದೇಹ ಮತ್ತೆ ಚಿಗುರುವುದನ್ನು ನೋಡಿ. ಇದನ್ನು ಅನುಭವದಿಂದ ಹೇಳುತ್ತಿದ್ದೇನೆ.

0 Comments