ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್‌ಬುಕ್ ಪಿಕ್ : ಗುಟ್ಕಾ ನಿಷೇಧ ಮತ್ತು ಕೆ ಟಿ ಶಿವಪ್ರಸಾದ್ ರ ನೆನಪು…

ನಾಗರಾಜ್ ಹೆತ್ತೂರು

ಗುಟ್ಕಾ ನಿಷೇಧ. ರಾಜ್ಯದಲ್ಲಿ ಗುಟ್ಕಾ ನಿಷೇಧ ಹೀಗೊಂದು ಘೋಷಣೆ ಹೊರಬಿದ್ದಿದ್ದೆ. ನಮ್ಮ ಗುರುಗಳು ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ನೆನಪಾದರು. ಕಾರಣ ಅವರು ಹನ್ಸ್ ಪ್ರಿಯರು. ಹನ್ಸ್ ಇಲ್ಲದೆ ಒಂದು ಕ್ಷಣ ಇರುವವರಲ್ಲ. ಹೀಗಾಯಿತಲ್ಲ ಏನು ಅವರ ಕತೆ ಎಂದು ಹಾಗೆ ಸುಮ್ಮನೆ ಒಂದು ಕರೆ ಮಾಡಿದೆ. ಸಾರ್ ವಿಚಾರ ಗೊತ್ತಾಯ್ತ..? ಎಂದೆ. ಏನೋ ಎಂದರು. ಗುಟ್ಕಾ ನಿಷೇಧ ಸಾರ್ ಏನು ಮಾಡುತ್ತೀರಿ..? ಎಂದೇ. ನಾನು ಪೇಪರಲ್ಲಿ ನೋಡ್ದೆ. ಏನು ಮಾಡೋದೋ…ನಾಳೆಯಿಂದಲೇ ಜಾರಿ ಇಲ್ಲ ಅಲ್ವೇನೋ..? ಎಂದರು. ಏನೋ ಗೊತ್ತಿಲ್ಲ ಸಾರ್ ಇವತ್ತಿಂದಲೇ ಎಲ್ಲ ಮಾರಾಟ ನಿಂತಿದೆ ಎಂದು ಸುಮ್ಮನೆ ಒಂದು ಓಳು ಬಿಟ್ಟೆ. ಹೌದೇನೋ ಒಳ್ಳೆ ಕತೆ ಆಯಿತಲ್ಲಾ… ಸಿಗ್ರೆಟೂ ಬ್ಯಾನ್ ಮಾಡಿದ್ದಾರೆನೋ..? ಎಂದರು. ಇಲ್ಲ ಸಾರ್ ಎಂದೆ. ಹೊಗೆಸೊಪ್ಪು…? ಇಲ್ಲ ಎಂದೆ. ಹಾಗಿದ್ರೆ ಪರ್ವಾಗಿಲ್ಲ ಬಿಡು ಬದುಕ್ದೆ.

ಸಿಗರೇಟ್ ಗೆ ಹೊಗೆಸೊಪ್ಪು ಬೇಕಲ್ವೇನೋ..ಅದುನ್ನ ಹೆಂಗೆ ಬ್ಯಾನ್ ಮಾಡ್ತಾರೆ. ಬೆಳೆದವ್ರ ಕತೆ ಏನು…? ಏನಾದ್ರೂ ಟೈಂ ಕೊಟ್ಟಿದ್ದಾರಾ..? ಎಂದರು. ದನಿಯಲ್ಲಿ ರಾಜ್ಯದಲ್ಲಿ ಏನೋ ಆಗುತ್ತಿದೆ ಎಂಬ ಆತಂಕ ಇತ್ತು. ಅದು ಇನ್ನೂ ನಿರ್ಧಾರ ಆಗಿಲ್ವಂತೆ ಎಂದೆ. ಏನಾದ್ರೂ ಆಗ್ಲಿ ಈಗ್ಲೆ ಒಂದಷ್ಟು ಸ್ಟಾಕ್ ಮಾಡ್ಕೊಂಡಿದ್ರೆ ಒಳ್ಳೆದು ಇರು ಆಮೇಲೆ ಮಾಡ್ತಿನಿ ಎಂದವರೇ ಪೋನ್ ಇಟ್ಟರು… ಕೊನೆಗೆ ಸಂಜೆ ವೇಳೆಗೆ ಬಂದ ಸುದ್ದಿ ಏನೆಂದರೆ ಅವರಿಗೊಬ್ಬ ಗೆಳೆಯನಿದ್ದಾನೆ. ಆತ ನಗರದ ಪೌರ ಕಾರ್ಮಿಕ. ಹೆಸರು ನಲ್ಲಪ್ಪ ಅಂತಾ ಅವನಿಗೆ ಫೋನ್ ಮಾಡಿ ಕರೆಸಿಕೊಂಡು ತಿಂಗಳಿಗೆ ಆಗುವಷ್ಟು ಹನ್ಸ್ ಪ್ಯಾಕೆಟ್ ತರಿಸಿಕೊಂಡು ಸ್ಟಾಕ್ ಇಟ್ಟುಕೊಂಡಿದ್ದಾರಂತೆ… !

‍ಲೇಖಕರು avadhi

3 June, 2013

1 Comment

  1. ಡಾ.ಶಿವಾನಂದ ಕುಬಸದ

    ಇದು ಅಡಿಕ್ಶನ್ನೋ ಅಥವಾ ಹೆಮ್ಮೆಯಿಂದ ಹೇಳಿಕೊಳ್ಳುವ ವಿಷಯವೋ…ಗೊತ್ತಾಗಲಿಲ್ಲ.
    ಅಡಿಕ್ಶನ್ ಆಗಿದ್ರೆ ಅಂಥ ದೊಡ್ಡವರಿಗೆ ತಿಳಿಹೇಳುವುದು ಕಷ್ಟದ ಕೆಲಸವಾಗಬಹುದು
    ಹೆಮ್ಮೆಯಿಂದ ಹೇಳಿದ್ದರೆ I pity the system..!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading