ಡಾ ಎಸ್ ಬಿ ಜೋಗುರ
ಒಂದೊತ್ತು ಊಟ ಇಲ್ಲದಿದ್ದರೂ ಓ.ಕೆ. ಕುಡಿಯಲು ನೀರಿಲ್ಲದಿದ್ದರೂ ಹೇಗೋ ಸ್ವಲ್ಪ ಹೊತ್ತು ಮ್ಯಾನೇಜ್ ಮಾಡಬಹುದು ಆದರೆ ಫೇಸ್ಬುಕ್ ಇಲ್ಲದೇ ಇದ್ದರೆ ಇಡೀ ಜಗತ್ತಿನ ಜನ ಕಂಗಾಲಾಗಿ ಬಿಡುವ ಪ್ರಸಂಗಗಳು ಮೊನ್ನೆ ತಾನೇ ಎದುರಾದವು. 2010 ರ ಸಂದರ್ಭದಲ್ಲಿ ಹಾಗೆ ಫೇಸ್ಬುಕ್ ಬುಕ್ ವ್ಯವಹಾರಗಳು ಏನೋ ಒಂದು ತಾಂತ್ರಿಕ ಕಾರಣದಿಂದ ಗಕ್ಕನೇ ನಿಂತಾಗ ಅದನ್ನು ಅವಲಂಬಿಸಿದ ಜನತೆ ಅವಕ್ಕಾದರು. ಬರೀ ಅವರ ಕೈ ಮಾತ್ರವಲ್ಲ, ಮೆದುಳೂ ಕೆಲಸ ಮಾಡದಂತಾಯಿತು. ಎಲ್ಲವೂ ಮುಗಿದಂತೆ ಫéೀಲ್ ಮಾಡತೊಡಗಿದ್ದರು. ಮೊನ್ನೆ ಅದಕ್ಕಿಂತಲೂ ಹೆಚ್ಚು ಹೈರಾಣಾದಂತಹ ಅನುಭವ ಫೇಸ್ಬುಕ್ ಅಕೌಂಟ್ ಇರುವವರು ಅನುಭವಿಸಬೇಕಾಯಿತು. ಬೆಳಿಗ್ಗೆ ಎದ್ದದ್ದೇ ಫೇಸ್ಬುಕ್ ನೋಡಿಯೇ ದಿನಚರಿ ಆರಂಭಿಸುವ ಮತ್ತು ಫೇಸ್ಬುಕ್ ನೋಡಿಯೇ ಮಲಗುವ ಜಗತ್ತಿನ ನೂರಾರು ಕೋಟಿ ಜನರಿಗೆ ಇದ್ದಕ್ಕಿದ್ದಂಗೆ ಅರ್ಧ ಘಂಟೆ ಫೇಸ್ಬುಕ್ ಬುಕ್ ವ್ಯವಹಾರ ಸ್ಥಗಿತಗೊಂಡ ಕಾರಣಕ್ಕೆ ದೊಡ್ಡ ದಿಗಿಲೇ ಎದುರಾಗಿತ್ತು. ಯಾವುದೇ ಒಂದು ವಸ್ತುವಿನ ಉತ್ಪಾದನೆಯಿರಬಹುದು, ಮಾಹಿತಿ ರವಾನೆಯಿರಬಹುದು, ಸ್ನೇಹಿತರೊಂದಿಗೆ ಆಪ್ತವಾದ ವಿಷಯಗಳನ್ನು ಶೇರ್ ಮಾಡಿಕೊಳ್ಳುವದಿರಬಹುದು ಫೇಸ್ಬುಕ್ ಬುಕ್ ಇಲ್ಲಾಂದ್ರೆ ಇವಾವವೂ ಇಲ್ಲ. ಇಡೀ ವಿಶ್ವದಲ್ಲಿ ಫೇಸ್ಬುಕ್ ಬಳಸುವವರ ಪ್ರಮಾಣ ಸುಮಾರು [2013] 955 ಮಿಲಿಯನ ದಷ್ಟಿದ್ದರೆ, ಟ್ವಿಟರ್ ಬಳಸುವವರ ಪ್ರಮಾಣ 500 ಮಿಲಿಯನ್ ದಷ್ಟಿದೆ. ವಿಂಡೋಸ್ ಲೈವ್ ಮೆಸೆಂಜರ್ ಬಳಸುವವರ ಪ್ರಮಾಣ 350 ಮಿಲಿಯನ್ ದಷ್ಟಿದ್ದರೆ, ಗೂಗಲ್+ ಬಳಸುವವರ ಪ್ರಮಾಣ 250 ಮಿಲಿಯನ್ ದಷ್ಟಿದೆ. ಜಗತ್ತಿನಲ್ಲಿ ಅಮೇರಿಕೆ ಬಿಟ್ಟರೆ ಅತಿ ಹೆಚ್ಚು ಫೇಸ್ಬುಕ್ ಬಳಸುವವರು ಭಾರತೀಯರು ಎನ್ನುವ ಮಾತಿದೆ.

ಸೋಸಿಯಲ್ ನೆಟ್ವರ್ಕ್ ಎನ್ನುವುದು ಇಂದಿನ ಅನಿವಾರ್ಯದ ಸಂವಹನ ಮಾಧ್ಯಮವಾಗಿದೆ. ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲದೇ ಕೆಲವು ಸಮೂಹಗಳಿಗೆ ಮತ್ತು ಕಾರ್ಪೊರೇಟ್ ಕಂಪನಿಗಳಿಗೂ ಅದು ಬೇಕೇ ಬೇಕು. ಫೇಸ್ಬುಕ್ ಎಲ್ಲರ ಸಂವೇದನಗಳನ್ನು ಸಮಾನವಾಗಿ ಸ್ವೀಕರಿಸಿ ಪ್ರಸಾರಮಾಡುವ ತಾಣವಾಗಿದೆ. ಯುವಕರಿಗಂತೂ ಅತ್ಯಂತ ಆಪ್ತವಾದ ತಾಣ ಇದಾಗಿದೆ. ಒಂದು ರೀತಿ ವ್ಯಸನವಾಗಿಯೂ ಅದು ಪರಿಣಮಿಸಿರುವದಿದೆ. ಫೇಸ್ಬುಕ್ ನಿಂದ ಎಲ್ಲವೂ ಒಳ್ಳೆಯದೇ ಆಗಿದೆ ಎಂದು ಪ್ರತಿಪಾದಿಸುವುದು ಈ ಲೇಖನದ ಉದ್ದೇಶವಲ್ಲ. ಜಾಗತೀಕರಣದ ಸಂದರ್ಭದಲ್ಲಿ ಸಾಹಿತ್ಯ, ಸಂಗೀತ, ಕಲೆ, ಮಾರುಕಟ್ಟೆ ಹೀಗೆ ವಿವಿಧ ಆಯಾಮಗಳನ್ನು ಅತ್ಯಂತ ವೇಗವಾಗಿ ಪರಿಚಯಿಸುವ ಸಾಧನವಾಗಿ ಅದು ಪರಿಣಮಿಸಿದೆ. ಹಾರ್ವರ್ಡ್ ನ ಕೋಣೆಯೊಂದರಲ್ಲಿ ಕುಳಿತು ಈ ಫೇಸ್ಬುಕ್ ನ್ನು ಹುಟ್ಟು ಹಾಕಿದ ಮಾರ್ಕ್ ಜಕರ್ಬರ್ಗ್ ಗೂ ಇದು ಈ ಮಟ್ಟಕ್ಕೆ ಜನಪ್ರಿಯವಾಗುತ್ತದೆ ಎನ್ನುವುದು ತಿಳಿದಿರಲಿಕ್ಕಿಲ್ಲ. ಇಂದು ಇಡೀ ವಿಶ್ವದಲ್ಲಿ ಫೇಸ್ಬುಕ್ ಎಂಬ ಸೋಸಿಯಲ್ ನೆಟವಕರ್್ ನ್ನು ಅವಲಂಬಿಸಿದರ ಪ್ರಮಾಣ ನೂರಾರು ಕೋಟಿ. ಕೇವಲ ಅರ್ಧ ಘಂಟೆ ಅದರ ಸಂಚಲನೆ ಸ್ಥಗಿತಗೊಂಡರೆ ಇಡೀ ನಿಸರ್ಗದ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಷ್ಟೇ ಜನ ಆತಂಕ ಪಡುತ್ತಾರೆ. ಅಂದರೆ ಫೇಸ್ಬುಕ್ ಎನ್ನುವುದು ವಿಶ್ವದ ನಡಿಗೆಯಂತೆ. ಅದು ಗಕ್ಕನೇ ನಿಂತರೆ ಇಡೀ ಜಗತ್ತೇ ತಲ್ಲಣಗೊಳ್ಳುತ್ತದೆ. ಹಾಗೆ ಫೇಸ್ಬುಕ್ ತನ್ನ ಸಂಚಲನೆಯನ್ನು ಸ್ಥಗಿತಗೊಳಿಸಿದ್ದೇಕೆ ಎನ್ನುವ ಕಾರಣವನ್ನು ಬಯಲುಗೊಳಿಸದಿದ್ದರೂ ಅದನ್ನು ಅವಲಂಬಿಸಿದವರು ಮಾತ್ರ ಆ ಅರ್ಧ ಘಂಟೆ ಚಡಪಡಿಸಿದ ರೀತಿ ಅವರು ಮಾತ್ರ ಬಲ್ಲರು. ಯಾವುದನ್ನೇ ಆಗಲಿ ನಾವು ಅತಿಯಾಗಿ ಅವಲಂಬನೆಯಾದರೆ ಆಗಬಹುದಾದ ಪರಿಣಾಮವೇ ಹೀಗಿರುತ್ತದೆ.






ಫೇಸ್ ಬುಕ್ ಒಂದು ವ್ಯಸನ ಇದ್ದಂತೆ. ಗೆಳೆಯರೇನೋ ಅನೇಕರು ಆಗುತ್ತಾರೆ. ಅಭಿಪ್ರಾಯಗಳ ವಿನಿಮಯಗಳಾಗುತ್ತವೆ. ನಮ್ಮ ಮಾತಿಗೆ ಕೆಲವರು ಲೈಕ್ ಮಾಡುತ್ತಾರೆ. ತಮಾಷೆಯ ಮಾತುಗಳನ್ನು ಬರೆಯುತ್ತಾರೆ. ಕೆಲವೊಮ್ಮೆ ಅಪರೂಪದ ಮಾಹಿತಿಗಳು ಸಿಗುತ್ತವೆ.ಅದೆ ವೇಳೆ ಕೆಲ ಸಮಾಘಾತುಕ ಸಂಗತಿಗಳೂ ಘಟಿಸುತ್ತವೆ. ವ್ಯಕ್ತಿಗಳ ಚಾರಿತ್ರ್ಯಕ್ಕೆ ಕಳಂಕ ತರುವ ಕೆಲಸವೂ ನಡೆಯುತ್ತವೆ. ಅಪರಾಧಗಳೂ ಘಟಿಸಿದ್ದಿದೆ. ಹಾಗಾಗಿ ನಾವು ಫೇಸ್ ಬುಕ್ಕಿನಲ್ಲಿ ಆದಷ್ಟು ಜಾಗ್ರತರಾಗಿರಬೇಕಿದೆ. ಅಶ್ಲೀಲ ಚಿತ್ರಗಳನ್ನು ನಮ್ಮ ಫೇಸ್ ಬುಕ್ ನ ಪಾಸ್ ವರ್ಡ್ ಕಂಡು ಹುಡುಕಿ ನಮ್ಮ ಫೇಸ್ ಬುಕ್ ಗೆ ಅಂಟಿಸಿ ನಮಗೆ ಕಳಂಕ ತರುವ ಸಂದರ್ಭಗಳು ಇರುತ್ತವೆ. ಅದೊಂದು ಡಬಲ್ ಎಜ್ಜೆಡ್ ನೈಫ್ ಇದ್ದಂತೆ. ಹಣ್ಣನ್ನು ಕತ್ತರಿಸಬಹುದು ಅಥವಾ ಇನ್ನೊಬ್ಬನನ್ನು ತಿವಿಯಲು ಉಪಯೋಗಿಸಬಹುದು. ಫೇಸ್ ಬುಕ್ ಒಂದು ಟೈಮ್ ಪಾಸ್. ಜಾಗ್ರತರಾಗಿ.