ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫಸ್ಟ್ ರ಼್ಯಾಂಕ್ ರಾಜು ಬಹಳ ನೆನಪಾದ.. ವಾ…..ಟ್ಟುಡೂ

ನಾಗೇಂದ್ರ ಶಾ

ನಮ್ ಸ್ನೆಹಿತ್ರಗೆ ಶೃತಿ ಬಾಕ್ಸ್ ತೊಗೊಳಕೆ ಅಂಗಡೀಗೋದೆ. ನಾವು ಶೃತಿ ಪೆಟ್ಗೆ ನೋಡ್ತಿದ್ವಿ.

ಒಂದು ಹುಡುಗಿ ರಭಸದಿಂದ ಒಳನುಗ್ಗಿದ್ದೆ ‘ಒಂದು ಗಿಟಾರ್ ಕೊಡಿ 9000 ದ್ದು. ನನ್ಚ ಬಾಯ್ ಫ್ರೆಂಡ್ಗೆ ಪ್ರೆಸೆಂಟ್ ಮಾಡ್ಬೇಕು ಅರ್ಜಂಟ್….’ ಅಂತ ವದರದ್ಲೂ.

ಅಂಗಡಿಯವರು ‘6500 ಆಗತ್ತೆ…. ಗಿಟಾರ್. ಚೆನ್ನಾಗಿದೆ ಇದನ್ನ ತೊಗೋಳಿ…’ ಅಂದ್ರು. ಆದ್ರೆ ಅವಳು ದೆವ್ವ ಹೊಕ್ಕವಳಂತೆ ‘ಅದನ್ನೆ 9000 ಮಾಡ್ಕೊಳಿ. ನಾನು ಅವನ್ಗೆ ಅಷ್ಟು ದುಡ್ಡಿಂದೆ ಗಿಫ್ಟ್ ಮಾಡ್ಬೇಕು. ನಿಮ್ಮಂಗಡೀಲಿ ಕಾಷ್ಟ‌ಲೀ ಗಿಟಾರ್ ಯಾಕಿಟ್ಟಿಲ್ಲಾ…?!’ ಅಲವತ್ತುಕೊಳ್ಲುತ್ತಿತ್ತು.

ಅಂಗಡಿಯವನು ಪೆಂಗನಂತೆ ಅವಳನ್ನು ನೋಡುತ್ತಿದ್ದ. ‘ಬೇಗ ಕೊಡಿ…’ ಉಲಿಯಿತು ಗಿಣಿ. ‘ಇರೀ…. ಟ್ಯೂನ್ ಮಾಡಿ ಕೊಡ್ತಿನಿ…’ ಅಂಗಡೀವ್ನು ಗಿಟಾರ್ ಕೈಗೆ ತೊಗೊಂಡ ಟ್ಯೂನ್ ಮಾಡಕೆ.

‘ಅಯ್ಯೋ ಅದೆಲ್ಲ ಬೇಡ ಕೊಡಿ. ಅವನಿಗೆ ಗಿಟಾರೆಲ್ಲ ಬಾರಸಕ್ ಬರಲ್ಲ. ಏನೋ ಆಸೆ ಪಡ್ತಿದಾನೆ. ನೀವು 9000 ದ ಗಿಟಾರ್ ಇಟ್ಟಿಲ್ದೆ ನನಗ್ ಬೇಜಾರ್ ಮಾಡದ್ರಿ…’ ಅಂತೇಳಿ ಅವರ ಕೈನಿಂದ ಗಿಟಾರ್ ಕಿತ್ಕೊಂಡು… ನೋಟಿನ ಕಂತೆ ಅವರ ಕೈಗೆ ತುರುಕಿ ಓಡಿತು ಕನ್ಯೆ.

ಫಸ್ಟ್ ರ಼್ಯಾಂಕ್ ರಾಜು ಬಹಳ ನೆನಪಾದ….

ವಾ…..ಟ್ಟುಡೂ

‍ಲೇಖಕರು admin

10 December, 2015

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading