ಪ ಸ ಕುಮಾರ್ ಕನ್ನಡ ಕಂಡ ಮಹತ್ವದ ಕಲಾವಿದರು. ಕೆನ್ ಕಲಾಶಾಲೆ ಹಡಪದ್ ಮುಂದಾಳ್ತನದಲ್ಲಿ ತನ್ನ ವೈಭವವನ್ನು ಮೆರೆಯುತ್ತಿದ್ದ ಕಾಲದಲ್ಲಿ ಅಲ್ಲಿಂದ ಮೂಡಿ ಬಂದವರು ಪ ಸ ಕುಮಾರ್. ಪ ಸ ಇದ್ದಲ್ಲಿ ಸದಾ ನಗೆಬುಗ್ಗೆ ಇದ್ದೇ ಇರುತ್ತದೆ. ಅವರ ವ್ಯಕ್ತಿತ್ವವೇ ಅಂತಹದ್ದು. ಸದಾ ಖುಷಿಯಾಗಿದ್ದು, ಇತರರನ್ನೂ ಖುಷಿಯಾಗಿಡುವುದು ಅವರಿಗೆ ಕುಶಿಯ ಕೆಲಸ. ಈ ಕಾರಣಕ್ಕಾಗಿಯೇ ಪ ಸ ದುಃಖದಿಂದ ಬಳಲದಂತೆ ಅವರ ಸ್ನೇಹಿತರೂ ನೋಡಿಕೊಂಡಿದ್ದಾರೆ.
ಕನ್ನಡಪ್ರಭದಲ್ಲಿ ದಶಕಗಳ ಕಾಲ ಕಲಾವಿದರಗಿದ್ದ ಪ ಸ ಈಗ ನಿವೃತ್ತರಾಗಿದ್ದಾರೆ. ಪ ಸ ಕುಮಾರ್ ಅವರ ಸಾಹಿತ್ಯದ ಓದು ಅವರನ್ನು ಇತರರಿಗಿಂತ ಭಿನ್ನವಾಗಿಸಿದೆ. ಆ ಕಾರಣಕ್ಕಾಗಿಯೇ ಯಾವುದೇ ಕೃತಿ ಇವರ ರೇಖೆಗಳಲ್ಲಿ ಜೀವ ತಳೆಯುವ ಬಗೆಯೇ ಭಿನ್ನ. ಪ್ರಜಾಮತ, ತುಷಾರ ಗಳಲ್ಲಿ ಇವರ ಚಿತ್ರಗಳನ್ನು ನೋಡಿದವರು ಆ ಕಥೆಗಳನ್ನೂ ಮರೆತಿರಲಾರರು.
‘ಜವರಾಯ’ ಮನೆಯ ಹೊಸ್ತಿಲಿನಲ್ಲಿ ಗಸ್ತು ತಿರುಗುತ್ತಿದ್ದಾಗಲೂ ನಗು ನಗುತ್ತಾ ಅವನನ್ನು ಸಾಕಷ್ಟು ಕಾಲ ಬೇಸ್ತು ಬೀಳಿಸಿದವರು ಪ ಸ. ಪ ಸ ಕುಮಾರ್ ಅವರ ಕಲಾಕೃತಿಗಳ ಒಂದು ನೋಟ ಇಲ್ಲಿದೆ. ಇಷ್ಟವಾದರೆ ಅವರಿಗೆ ಫೋನಾಯಿಸಿ: 98865 91104






thanks to Avadhi friends for giving me
an surprise KUSHI.
Pa.Sa.Kumar
ಪ.ಸ.ಕುಮಾರ್,
ನನಗೆ ತುಂಬಾ ಇಷ್ಟದ ಕಲಾವಿದರು. ಅವರೊಂದಿಗೆ ಇದ್ದ ಎಲ್ಲ ಸಂದರ್ಭಗಳಲ್ಲಿ ಅವರ ಆಸಕ್ತಿ, ಉತ್ಸಾಹಗಳನ್ನು ಕಂಡು ನಾಚಿದ್ದೂ ಇದೆ. ಯಾಕೆಂದರೆ ಅವರು ಅಷ್ಟರ ಮಟ್ಟಿಗೆ ಆಕ್ಟಿವ್.
ಅವರ ಉತ್ಸಾಹ ಎಂದಾಗ ಅವರೇ ಹೇಳಿದ ಮಾತೊಂದು ನೆನಪಾಗುತ್ತಿದೆ.
“ಒಂದು ಅವರು ನವರಂಗ ಕಡೆಗೆ ವಾಕ್ ಹೋಗಿದ್ದೆ (ಬಹುಶಃ ಸಂಜೆ). ಎದುರಿಗೆ ಬಂದವರೆಲ್ಲಾ ರಿಟೈರ್ ಆದವರು. ಜೋಲು ಮುಖ ಹೊತ್ತು ಸೋತವರ ಹಾಗೆ ಎದುರಿಗೆ ಬರುತ್ತಿದ್ದರು. ಎಷ್ಟು ದೂರ ಹೋದರೂ ಇಂಥವರೆ. ಅದಕ್ಕೆ ನಾನು ಮಾರನೆ ದಿನದಿಂದ ಆ ಕಡೆ ಹೋಗಲೇ ಇಲ್ಲ. ಅವರನ್ನು ನೋಡಿ ನನ್ನ ಉತ್ಸಾಹ ಕಳೆದುಕೊಳ್ಳೋಕೆ ತಯಾರಿಲಿಲ್ಲ. ಯಾಕಂದರೆ ನಾನಿನ್ನೂ ಯಂಗ್ ಮ್ಯಾನ್.”
ಹೀಗಂದು ಮನಃಪೂರ್ವಕವಾಗಿ ನಕ್ಕಿದ್ದರು.
ಕುಮಾರ್ ಸರ್ ಇಂಥ ಉತ್ಸಾಹಿ ಅನ್ನೋದರ ಜೊತೆಗೆ ಸಹೃದಯಿ ಓದುಗ, ಒಳ್ಳೆಯ ಗಾಯಕ. ಮತ್ತೆ ಅವರಂಥ ಫ್ರೆಂಡ್ ಮತ್ತೊಬ್ಬರು ಇರಲಿಕ್ಕಿಲ್ಲ.
ಅವರ ರೇಖಾ ಚಿತ್ರಗಳ ಮೋಡಿಯನ್ನು ನಾನು ನೋಡಿದ್ದೇನೆ. ಅವರು ರೂಪಕಗಳನ್ನು ಗ್ರಹಿಸಿಕೊಳ್ಳುವ ರೀತಿಯನ್ನು ಅವರ ಬಾಯಿಂದಲೇ ಕೇಳಿದ್ದೇನೆ. ಅಕ್ಷರಗಳನ್ನು ಒಂದು ಪ್ರತಿಮೆಯನ್ನು ಕಟ್ಟಿಕೊಟ್ಟರೆ, ಅದರಷ್ಟೇ, ಅದಕ್ಕಿಂತ ಹೆಚ್ಚು ಸಮರ್ಥವಾದ ಪ್ರತಿಮೆಯೊಂದನ್ನು ಅವರ ರೇಖೆಗಳು ಕಟ್ಟಿಕೊಟ್ಟಿದನ್ನು ನೋಡಿದ್ದೇನೆ. ಇದು ಕುಮಾರ್ ಅವರ ಹೆಗ್ಗಳಿಕೆ.
ಹೀಗಿದ್ದೂ ಒಬ್ಬ ಅಪರಿಚಿತ ಕಲಾವಿದನೊಬ್ಬ ಕಲಾಕೃತಿಯನ್ನು ನೋಡಿದಾಗ ಅವರು ಬೆರಗಿನಿಂದ ನೋಡುತ್ತಿದ್ದರು. “ಇಷ್ಟು ದಿನವಾದರೂ ಒಂದು ಒಳ್ಳೆಯ ಕಲಾಕೃತಿ ಮಾಡಲಾಗಲಿಲ್ಲ. ಇವರು ನೋಡು ಎಂಥೆಂಥ ವರ್ಕ್ ಮಾಡಿದ್ದಾರೆ ” ಅನ್ನುತ್ತಾರೆ.
ನನ್ನ ಅಸಡ್ಡೆಯನ್ನು, ಸೋಮಾರಿತನವನ್ನು ಬೈಯುತ್ತಲೇ ಅವರು ಸಾಹಿತ್ಯ, ಸಂಗೀತ, ಸಿನಿಮಾಗಳ ಬಗ್ಗೆ ಹರಟಿದ್ದಾರೆ.
ನಿಜಕ್ಕೂ ಕುಮಾರ್ ಸರ್ ನಮ್ಮ ಜಗತ್ತಿನ ಗ್ರೇಟ್ ಕಲಾವಿದ.