ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೌಢಾವಸ್ಥೆಗೆ ಬಂದ ಅಯೋಧ್ಯೆಯ ಕೂಸುಗಳು – ನಾ.ದಿವಾಕರ್ ಬರಹ

        ನಾ. ದಿವಾಕರ್  

ಪ್ರೌಢಾವಸ್ಥೆಗೆ ಬಂದ ಅಯೋಧ್ಯೆಯ ಕೂಸುಗಳು

          ಕನರ್ಾಟಕದಲ್ಲಿ ಕೋಮು ರಾಜಕಾರಣ ಒಂದು ನಿದರ್ಿಷ್ಟ ಹಂತಕ್ಕೆ ಬಂದು ತಲುಪುತ್ತಿರುವುದು ಸ್ಪಷ್ಟವಾಗುತ್ತಿದೆ. ಉತ್ತರ ಭಾರತದಲ್ಲಿ ರಾಜಕೀಯ ಅಧಿಕಾರ ಕಳೆದುಕೊಳ್ಳುವುದರೊಂದಿಗೇ ತನ್ನ ಕೋಮುವಾದಿ ರಾಜಕಾರಣದ ಮೊನಚನ್ನೂ ಕಳೆದುಕೊಂಡಿರುವ ಆರೆಸ್ಸೆಸ್-ಬಿಜೆಪಿ ಪರಿವಾರ ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟಿರುವುದು ಕೇವಲ ರಾಜಕೀಯ ಅಧಿಕಾರ ಗಳಿಸಲು ಮಾತ್ರವಲ್ಲ, ತನ್ನ ಹಿಂದುತ್ವ ರಾಜಕಾರಣಕ್ಕೆ ಸೌಮ್ಯ ಮುಖವಾಡ ತೊಡಿಸಿ, ದಕ್ಷಿಣ ಭಾರತದಲ್ಲಿನ ಸಮಕಾಲೀನ ಪಯರ್ಾಯ ಸಾಮಾಜಿಕ ಚಳುವಳಿಗಳನ್ನು ಹಿಮ್ಮೆಟ್ಟಿಸಿ ತನ್ನ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಸುಭದ್ರ ನೆಲೆಯನ್ನು ಒದಗಿಸುವ ಒಂದು ಪ್ರಯತ್ನವನ್ನು ಕನರ್ಾಟಕದ ಬಿಜೆಪಿ ಮಾಡುತ್ತಿದ್ದು, ಸಫಲವಾಗುತ್ತಿದೆ ಎಂತಲೂ ಹೇಳಬಹುದು. ಇದರ ಒಂದು ಆಯಾಮವನ್ನು ಸಿಂಧಗಿಯಲ್ಲಿ ಕಂಡಿದ್ದೇವೆ.   ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಸಂಭವಿಸಿರುವ ಕೋಮು ಸಂಘರ್ಷಗಳು ವಿಭಿನ್ನ ಸ್ವರೂಪ ಹೊಂದಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಾಗುತ್ತದೆ. 1980-90ರ ದಶಕದ ಘಟನೆಗಳು ಮುಸ್ಲಿಂ-ಹಿಂದೂ ಸಮುದಾಯಗಳ ನಡುವಿನ ನೇರ ಸಂಘರ್ಷವಾಗಿರುತ್ತಿತ್ತು. ಅಯೋಧ್ಯಾಕಾಂಡ ಸೃಷ್ಟಿಸಿದ್ದ ಹುಮ್ಮಸ್ಸು, ಉತ್ಸಾಹ, ಉತ್ಸುಕತೆ ಮತ್ತು ಪ್ರಚೋದನೆಗಳು ದೇಶದ ಅಲ್ಪಸಂಖ್ಯಾತರನ್ನು ಅನ್ಯರ ಚೌಕಟ್ಟಿನಲ್ಲಿ ಬಂಧಿಸುವುದರಲ್ಲಿ ಯಶಸ್ವಿಯಾಗಿತ್ತು. ರಾಮಮಂದಿರ ನಿಮರ್ಾಣ ಮತ್ತು ಹಿಂದೂರಾಷ್ಟ್ರದ ಪರಿಕಲ್ಪನೆಗಳು ದೇಶದ ಅಲ್ಪಸಂಖ್ಯಾತರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸುವ ಮಟ್ಟಿಗೆ ದೇಶವ್ಯಾಪಿಯಾಗಿದ್ದವು. ಈ ಹಂತದಲ್ಲಿ ಕೋಮು ದ್ವೇಷದ ವಿಷಬೀಜವನ್ನು ಬಿತ್ತುವ ಕೆಲಸ ಮಾಡುತ್ತಿದ್ದುದು ಸಂಘಪರಿವಾರದ ಅಂಗ ಸಂಸ್ಥೆಗಳು. ಇದರ ಪರ್ಯವಸಾನ ಕಂಡುಬಂದಿದ್ದು 2002ರ ಗುಜರಾತ್ ಹತ್ಯಾಕಾಂಡದಲ್ಲಿ.   ಗೋಧ್ರೋತ್ತರ ರಾಜಕಾರಣ   ಗೋಧ್ರಾ ಘಟನೆ ಭಾರತದ ಕೋಮು ರಾಜಕಾರಣದ ಸಂಕಥನವನ್ನೇ ಬದಲಾಯಿಸಿದ್ದು ಎಷ್ಟು ಸತ್ಯವೋ ಅಷ್ಟೇ ಸತ್ಯ ಹಿಂದುತ್ವವಾದಿಗಳ ಕರಾಳ ಮುಖವಾಡವನ್ನು ಬಯಲು ಮಾಡಿದ್ದು. ಮಲೆಗಾಂವ್, ಸಂಜೋತ, ಅಜ್ಮೇರ್ ದಗರ್ಾ ಮುಂತಾದ ಘಟನೆಗಳಲ್ಲಿ ಹಿಂದುತ್ವವಾದಿ ಶಕ್ತಿಗಳ ಕೈವಾಡ ಇರುವುದು ಸಾಬೀತಾಗುತ್ತಿರುವಂತೆಯೇ ತನ್ನ ರಾಜಕೀಯ ದಿಕ್ಕನ್ನೇ ಬದಲಿಸಿದ ಸಂಘಪರಿವಾರ ಕೋಮು ರಾಜಕಾರಣದ ಸ್ವರೂಪವನ್ನೂ ಬದಲಾಯಿಸಿದ್ದನ್ನು ಕನರ್ಾಟಕ ಮತ್ತು ಒರಿಸ್ಸಾದಲ್ಲಿ ಸಂಭವಿಸಿದ ಘಟನೆಗಳಲ್ಲಿ ಕಾಣಬಹುದಿತ್ತು. ಮುಸ್ಲಿಂ ದ್ವéೇಷದ ರಾಜಕಾರಣವನ್ನು ಕ್ರೈಸ್ತರೆಡೆಗೆ ತಿರುಗಿಸಿ, ಭಾವನಾತ್ಮಕ ವಿಷಯವಾದ ಮತಾಂತರವನ್ನು ಸಾರ್ವಜನಿಕ ಸಂಕಥನದ ವಿಷಯವನ್ನಾಗಿ ಮಾಡಿದ್ದರ ಪರಿಣಾಮ ಈ ಎರಡೂ ರಾಜ್ಯಗಳಲ್ಲಿ ಹಿಂದುತ್ವ ಶಕ್ತಿಗಳು ಸುಭದ್ರ ನೆಲೆಯೂರಲು ನೆರವಾದವು. ಆದರೆ ಇಲ್ಲಿ ಕಂಡುಬಂದ ವ್ಯತ್ಯಾಸ ಮೂಲಭೂತವಾಗಿ ಸಂಘಟನಾತ್ಮಕ ಧೋರಣೆಗಳನ್ನು ಕುರಿತಾದದ್ದು.   ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಹಿಂದೂ ರಾಷ್ಟ್ರಗಳ ಸ್ಥಾಪನೆಗಾಗಿ ಹೋರಾಡುತ್ತಿದ್ದ ಆರೆಸ್ಸೆಸ್-ವಿಶ್ವ ಹಿಂದೂ ಪರಿಷತ್ ಮತ್ತಿತರ ಅಂಗ ಸಂಸ್ಥೆಗಳು ನೇಪಥ್ಯಕ್ಕೆ ಸರಿದು ಬಿಜೆಪಿ ರಾಜಕೀಯವಾಗಿ ನೆಲೆಯೂರಲು ನೆರವಾಗುವ ನಿಟ್ಟಿನಲ್ಲಿ ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿದ್ದವು. ಆದರೆ ಈ ಸಂಘಟನೆಗಳು ಅಯೋಧ್ಯಾ ಕಾಂಡದ ಅವಧಿಯಲ್ಲಿ ಹುಟ್ಟುಹಾಕಿದ್ದ ಬೀಜಗಳು ಮೊಳೆತು ಹೊಸ ಸ್ವರೂಪದ ಕೋಮುವಾದಿ ಕೂಸುಗಳು ಈ ವೇಳೆಗಾಗಲೇ ಕುಡಿಯೊಡೆಯಲಾರಂಭಿಸಿದ್ದವು. ಹಿಂದೂ ಜಾಗರಣ ವೇದಿಕೆ, ಶ್ರೀರಾಮಸೇನೆ, ಹಿಂದೂ ಧರ್ಮ ಜಾಗೃತಿ ವೇದಿಕೆ ಹೀಗೆ ಹತ್ತು ಹಲವಾರು ಸಂಘಟನೆಗಳು ಬೆಳೆದುನಿಂತವು. ಕನರ್ಾಟಕದಲ್ಲಿ ಪಬ್ ದಾಳಿಯಿಂದ ಹಿಡಿದು ಸಿಂಧಗಿಯ ಘಟನೆಯವರೆಗೆ ಸಂಭವಿಸಿರುವ ಎಲ್ಲ ಅನಾಹುತಗಳಿಗೂ ಹೊಸ ಸ್ವರೂಪದ ಸಂಘಟನೆಗಳೇ ಕಾರಣವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಸಂಫ ಪರಿವಾರಕ್ಕೆ ಮೂಲ ಪ್ರಶ್ನೆ ಹಿಂದೂ ರಾಷ್ಟ್ರ ಸ್ಥಾಪನೆಯಾಗಿದ್ದರೆ, ಅಯೋಧ್ಯೆಯ ಕೂಸುಗಳಾದ ಶ್ರೀರಾಮಸೇನೆ ಮತ್ತಿತರ ಸಂಘಟನೆಗಳಿಗೆ ಮೂಲ ಪ್ರಶ್ನೆ ಅಸ್ಮಿತೆಯದು. ಸಂಸ್ಕೃತಿಯ ರಕ್ಷಣೆ, ಧರ್ಮ ಜಾಗೃತಿ ಮತ್ತು ಭಾರತೀಯ (?) ಕೌಟುಂಬಿಕ ಮೌಲ್ಯಗಳ ಸಂರಕ್ಷಣೆ ಈ ಸಂಘಟನೆಯ ಮೂಲಮಂತ್ರಗಳಾದವು. ಈ ಮೂರೂ ವಿದ್ಯಮಾನಗಳನ್ನು ಕೋಮುವಾದಿ ಸಂಘಟನೆಗಳು ಪರಿಭಾವಿಸುವುದಕ್ಕೂ, ನಾಗರಿಕ ಪ್ರಜ್ಞಾವಂತ ಸಮಾಜ ಪರಿಭಾವಿಸುವುದಕ್ಕೂ ಇರುವ ಮೂಲಭೂತ ವ್ಯತ್ಯಾಸವನ್ನು ಮಾನವೀಯ ನೆಲೆಗಟ್ಟಿನಲ್ಲಿ ನಿಂತು ನೋಡಿದಾಗ ಜನಸಾಮಾನ್ಯರ ಭಾವನೆಗಳನ್ನು ತನ್ನ ಕ್ಷುದ್ರ ರಾಜಕೀಯ ಉದ್ದೇಶಗಳಿಗೆ ಬಳಸಿಕೊಂಡ ಕೋಮುವಾದಿ ಶಕ್ತಿಗಳ ಬಣ್ಣ ಬಯಲಾಗುತ್ತದೆ. ಕನರ್ಾಟಕದಲ್ಲಿ ಬಿಜೆಪಿ ತನ್ನ ರಾಜಕೀಯ ನೆಲೆ ಕಂಡುಕೊಂಡ ಕೂಡಲೇ ಮಹಿಳೆಯರ ಸಾಂಸ್ಕೃತಿಕ ಆರಕ್ಷಕರಾಗಿ ಧಾವಿಸಿದ ಹಿಂದುತ್ವವಾದಿ ಸಂಘಟನೆಗಳು ತಮ್ಮ ಕಾಯರ್ಾಚರಣೆ ಆರಂಭಿಸಿದ್ದು ಕರಾವಳಿ ಪ್ರದೇಶದಲ್ಲಿ. ಪಬ್ ಸಂಸ್ಕೃತಿಯನ್ನು ವಿರೋಧಿಸುವ ನೆಪದಲ್ಲಿ ಮಹಿಳೆಯರ ಆತ್ಮಗೌರವವನ್ನು ತಮ್ಮ ಕೋಮು ದ್ವೇಷ ಬೀಜ ಬಿತ್ತನೆ ಕಾರ್ಯಕ್ರಮಕ್ಕೆ ಬಂಡವಾಳವಾಗಿ ಉಪಯೋಗಿಸಿಕೊಂಡ ಈ ಸಂಘಟನೆಗಳು ಕ್ರಮೇಣ ಲವ್ ಜಿಹಾದ್ ಎಂಬ ಕಪೋಲ ಕಲ್ಪಿತ ವಿದ್ಯಮಾನವನ್ನೂ ಸಾರ್ವಜನಿಕ ಸಂಕಥನಕ್ಕೆ ಒಳಪಡಿಸಿದ್ದು ಹಿಂದೂ ಜನಸಮುದಾಯಗಳ ಭಾವನೆಗಳನ್ನು ಕೆರಳಿಸಿದ್ದಂತೂ ಹೌದು.   ಲವ್ಜಿಹಾದ್ ಮೂಲಕ ಮುಸ್ಲಿಂ ಸಂಘಟನೆಗಳು ಹಿಂದೂಗಳನ್ನು ಮತಾಂತರಗೊಳಿಸುತ್ತಿದ್ದಾರೆ ಎಂಬ ಹುಯಿಲು ಒಂದೆಡೆ, ಕ್ರೈಸ್ತ ಸಂಘಟನೆಗಳು ತಮ್ಮ ಧರ್ಮ ಪ್ರಚಾರದಿಂದ ಹಿಂದೂಗಳನ್ನು ಸೆಳೆಯುತ್ತಿದ್ದಾರೆ ಎಂಬ ಆರೋಪ ಮತ್ತೊಂದೆಡೆ, ಈ ಎರಡೂ ವಿದ್ಯಮಾನಗಳು ಶ್ರೀರಾಮಸೇನೆಯಂತಹ ಸಂಘಟನೆ ವ್ಯಾಪಕವಾಗಿ ಬೆಳೆಯಲು ಕಾರಣವಾಗಿದ್ದು ಕಣ್ಣಿಗೆ ರಾಚುವ ಸತ್ಯ. ಕನರ್ಾಟಕದಲ್ಲಿ ಕ್ರೈಸ್ತ ಚಚರ್ುಗಳ ಮೇಲೆ ನಡೆದ ದಾಳಿಗಳು ಒಂದು ಸಮಾಜದ ಸೌಹಾರ್ದತೆಯನ್ನೇ ನಾಶಮಾಡುವ ಮಟ್ಟಿಗೆ ಪ್ರಭಾವ ಬೀರಿದ್ದರೂ ಆರೋಪಿ ಸಂಘಟನೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ರಾಜ್ಯ ಬಿಜೆಪಿ ಸಕರ್ಾರ ಸಾಂಸ್ಕೃತಿಕ ಆರಕ್ಷಕರಿಗೆ ಮುಕ್ತ ಪರವಾನಗಿ ನೀಡಿರುವುದು ಹಿಂದುತ್ವ ರಾಜಕಾರಣದ ಒಂದು ಆಯಾಮ. ಇದರ ನೇರ ಪರಿಣಾಮವನ್ನು ಕರಾವಳಿ ಪ್ರದೇಶದ ಕಾಲೇಜುಗಳಲ್ಲಿ, ರಸ್ತೆಗಳಲ್ಲಿ, ಮಾರುಕಟ್ಟೆಗಳಲ್ಲಿ ಕಾಣಬಹುದಾಗಿದೆ. ಹಿಂದೂ ಹುಡುಗಿಯರು ಮುಸ್ಲಿಂ ಅಥವಾ ಕ್ರೈಸ್ತ ಹುಡುಗರೊಡನೆ ಮಾತನಾಡುವಂತಿಲ್ಲ, ಕಸಾಯಿಖಾನೆಗೆ ಮುಸ್ಲಿಂ ಚಾಲಕರು ಹಸುಗಳನ್ನು ಸಾಗಿಸುವಂತಿಲ್ಲ, ಕ್ರೈಸ್ತ ಚಚರ್ುಗಳು ತಮ್ಮ ಧರ್ಮ ಪ್ರವಚನಗಳನ್ನು ನೀಡುವಂತಿಲ್ಲ, ಕಾಲೇಜು ವಿದ್ಯಾಥರ್ಿ ವಿದ್ಯಾಥರ್ಿನಿಯವರು ತಮ್ಮ ವಯೋಗುಣಕ್ಕೆ ಸಹಜವಾಗಿ ಸ್ನೇಹದಿಂದಿರುವುದು ಸಾಧ್ಯವಿಲ್ಲ, ಇವೆಲ್ಲವೂ ಸಾಂಸ್ಕೃತಿಕ ಆರಕ್ಷಕರ ಅಟ್ಟಹಾಸದ ಪರಿಣಾಮ. ಇದು ಅನಿರ್ಬಂಧಿತವಾಗಿ ನಡೆಯುತ್ತಿರುವ ವಿದ್ಯಮಾನವಾದ್ದರಿಂದ, ರಾಜ್ಯ ಸಕರ್ಾರದ ನಿಲುವಿನ ಬಗ್ಗೆ ಹೆಚ್ಚಿನ ವ್ಯಾಖ್ಯಾನ ಅಗತ್ಯವಿಲ್ಲ.   ಗೂಬೆ ಕೂರಿಸುವ ಯತ್ನ   ಈ ಎಲ್ಲಾ ವಿದ್ಯಮಾನಗಳ ಹಿಂದೆ ಇರುವುದು ಹಿಂದೂ ಮೂಲಭೂತವಾದಿ ಸಂಘಟನೆಗಳೇ ಆದರೂ ಆರೆಸ್ಸೆಸ್ ಮಾತ್ರ ನೇಪಥ್ಯದಲ್ಲೇ ಇದೆ. ಕಾರಣ ಅಯೋಧ್ಯೆಯ ಕೂಸುಗಳಲ್ಲಿ ಒಂದಾದ ಶ್ರೀರಾಮಸೇನೆ ಕನರ್ಾಟಕದ ಕೋಮು ವಿಷ ಬೀಜ ಬಿತ್ತನೆಯ ಯೋಜನೆಗೆ ನೇತೃತ್ವ ವಹಿಸಿದೆ. ರಾಮಮಂದಿರ, ದತ್ತಪೀಠ, ರಾಮಸೇತುಗಳು ಜನಸಾಮಾನ್ಯರ ಆಸಕ್ತಿಯನ್ನು ಕೆರಳಿಸಲಾರದು ಎಂದು ಅರಿತಿರುವ ಈ ಸಂಘಟನೆಗಳು ಈಗ ಪ್ರಜೆಗಳ ಭಾವನೆಗಳಿಗೇ ನೇರವಾಗಿ ಲಗ್ಗೆ ಹಾಕಿವೆ. ಸಾಧ್ವಿ ಪ್ರಗ್ಯಾಸಿಂಗ್, ಕರ್ನಲ್ ಪುರೋಹಿತ್ ಅವರಂತಹ ವಿಧ್ವಂಸಕರು ಬಾಂಬ್ ಸ್ಫೋಟಗಳ ಮೂಲಕ ಮುಸ್ಲಿಂ ಸಮುದಾಯದ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಿದರೆ, ಶ್ರೀರಾಮಸೇನೆಯಂತಹ ಸಂಘಟನೆಗಳು ಭಿನ್ನ ಮಾರ್ಗ ಅನುಸರಿಸುತ್ತವೆ. ಮಸೀದಿಯ ಎದುರು ಹಂದಿ ಮಾಂಸ ಎಸೆಯುವುದು, ದೇವಸ್ಥಾನಗಳ ಮುಂದೆ ಗೋಮಾಂಸ ಇಡುವುದು, ದೇವರ ಪ್ರತಿಮೆಗಳಿಗೆ ಚಪ್ಪಲಿ ಹಾರ ಹಾಕುವುದು ಈ ರೀತಿಯ ಅನೇಕ ಕೃತ್ಯಗಳು ಕೋಮು ಸಂಘರ್ಷಗಳಿಗೆ ಕಾರಣವಾಗಿರುವ ಹಲವು ನಿದರ್ಶನಗಳಿವೆ. ಇಂತಹುದೇ ಧೋರಣೆಯ ಪರಾಕಾಷ್ಠೆಯನ್ನು ಸಿಂಧಗಿಯ ಪ್ರಕರಣದಲ್ಲಿ ಕಾಣಬಹುದಾಗಿದೆ. ಪಾಕಿಸ್ತಾನದ ಧ್ವಜವನ್ನು ತಹಸೀಲ್ದಾರ್ ಕಚೇರಿಯಲ್ಲಿ ತಾವೇ ಹಾರಿಸಿ, ತಾವೇ ಪ್ರತಿಭಟನೆ ನಡೆಸಿ, ಬಂದ್ ಆಚರಿಸಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿ, ಆರೋಪಿಗಳನ್ನು ಬಂಧಿಸಲು ಉಗ್ರ ಪ್ರತಿಭಟನೆ ಮಾಡುವ ಮೂಲಕ ಶ್ರೀರಾಮಸೇನೆ ಮತ್ತಿತರ ಸಂಘಟನೆಗಳು ತಮ್ಮ ಕ್ಷುದ್ರ ರಾಜಕಾರಣದ ಒಂದು ಆಯಾಮವನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿವೆ. ಪಾಕ್ ಧ್ವಜವನ್ನು ಮುಸ್ಲಿಂ ಅಸ್ಮಿತೆಯೊಡನೆ ಸಮೀಕರಿಸಿ, ಭಾರತೀಯ ಮುಸ್ಲಿಮರು ಪಾಕಿಸ್ತಾನದ ಧ್ವಜವನ್ನು ಗೌರವಿಸುತ್ತಾರೆ ಎಂಬ ಭಾವನೆಯನ್ನು ಜನಮಾನಸದಲ್ಲಿ ಮೂಡಿಸುವ ಒಂದು ಕ್ಷುಲ್ಲಕ ರಾಜಕಾರಣವನ್ನು ಈ ಘಟನೆ ಬಿಂಬಿಸುತ್ತದೆ. ಈ ಕೃತ್ಯ ಎಸಗಿದವರು ಆರೆಸ್ಸೆಸ್ನವರೋ, ಶ್ರೀರಾಮಸೇನೆಯವರೋ ಎಂಬುದು ಇಲ್ಲಿ ಅಪ್ರಸ್ತುತ. ಏಕೆಂದರೆ ಹಿಂದುತ್ವ ರಾಜಕಾರಣದ ಎಲ್ಲ ಸಂಘಟನೆಗಳೂ ಅಯೋಧ್ಯಾ ಕಾಂಡದ ಕೂಸುಗಳೇ.  ]]>

‍ಲೇಖಕರು G

14 January, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading