ಪ್ರೇಮಿ ಕೈಚಾಚಿದ್ದಾಳೆ..

ನಾಗರಾಜ ಹರಪನಹಳ್ಳಿ 
-೧-
ಆಕಾಶಕ್ಕೆ ಮುಖ ಕೊಟ್ಟೆ
ಹತ್ತಿರವಾಗುತ್ತಿದ್ದೇನೆ
ಎಂಬ
ಕೂಗು ಪ್ರತಿಧ್ವನಿಸಿತು
***
-೨-
ಕಡಲ ಎದುರಿಗೆ ನಿಂತೆ
ವಿರಹ ಮುಗಿದಿದೆ
ಪ್ರೇಮಿ ಕೈಚಾಚಿದ್ದಾಳೆ ಎಂದು
ಪಿಸುಗುಟ್ಟಿತು ದಂಡೆ
***
-೩-
ದಾರಿಯಲ್ಲಿ ನಡೆದೆ
ಬದಿಯ ಹೂಗಳು ನಸು ನಕ್ಕು
ಹೇಳಿದವು ;
ನಕ್ಷತ್ರಗಳ ಕೈಗಿಟ್ಟವು
ನಾಳೆ ನಿನ್ನ ಪ್ರೇಮಿ ಬರುವಳು
ಅವಳ ಹೆರಳಿಗೆ ಮುಡಿಸೆಂದು
****

-೪-
ಗಾಳಿ ಸಿಳ್ಳೆ ಹಾಕಿತು
ಮೋಹದ ರಾಗ ಹಾಡಿತು
ಹಾಗೂ ರಾಗ ಮಾಲೆಯ ಕೈಗಿಟ್ಟು
ಹೇಳಿತು;
ನಾಳೆ ನಿನ್ನ ಪ್ರೆಯಸಿ ಬರುವಳು
ಬರಸೆಳೆ, ಬಿಗಿದಪ್ಪು
ರಾಗಮಾಲೆ ತೊಡಿಸೆಂದು
****
-೫-
ಸ್ವಲ್ಪ ಮುಂದೆ ನಡೆದೆ
ಎದುರಾದ ಹಕ್ಕಿ ಹೇಳುತು
ನಾಳೆ ನಿನ್ನ ರೂಪಸಿ ಬರುವಳು
ನನ್ನ ರೆಕ್ಕೆಯ ಆಕೆಗೆ ತೊಡಿಸು
ಹಾರಿಸಿ ಕೊಂಡು‌ಹೋಗು
ಏಳು ಕಡಲಾಚೆ ಪ್ರೇಮಿಸೆಂದು
****
-೬-
ಕೊನೆಗೆ ರೂಮಿ
ಭುಜದ ಮೇಲೆ ಕೈಯಿಟ್ಟು
ಬೆನ್ನ ಸವರಿ ಹೇಳಿದ;
ಪ್ರೇಮಿಸು; ಪ್ರೇಮಿಯ
ಸುಮ್ಮನೆ ಪ್ರೇಮಿಸು
ಮಾತಾಡಬೇಡ ಎಂದ
*****
-ನಾಗರಾಜ್ ಹರಪನಹಳ್ಳಿ.
 

‍ಲೇಖಕರು avadhi

March 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: