-ಸುಜಾತಾ ವಿಶ್ವನಾಥ
ಮೌನದ ತುದಿಯಲ್ಲಿ ಅವಿತು ಕುಳಿತ ಅರ್ಥ ಕೈಗೆಟುಕುವುದು ಬಲು ಅಪರೂಪ. ಬದುಕು ಹೇಳದೆ ಕೇಳದೆ ಹೊತ್ತಿ ಉರಿಯುವ ದೀಪ. ಹಚ್ಚುವವರು ನಾವಲ್ಲ, ಕೊನೆಗೆ ನಂದಿಸುವವರೂ ನಾವಲ್ಲ. ಉರಿಯುವಾಗ ಮಾತ್ರ ನಾವು ಅದರಲ್ಲಿ ಭಾಗಿಗಳು. ಜೀವನದ ಪಯಣ ಹುಟ್ಟಲು, ನಿಲ್ಲಲು, ಮತ್ತೆ ಬದುಕು ಶುರುವಾಗಲು ನೆನೆಪುಗಳು ಬೇಕು. ಹುಟ್ಟು ಪ್ರಶ್ನೆ. ಸಾವು ಮತ್ತೂಂದು ಪ್ರಶ್ನೆ. ನಡುವಿನ ಆರಂಭ ಅಂತ್ಯ ದಯಪಾಲಿಸುವ ಪುಳಕ ಅಂತ್ಯದವರೆಗೂ ಉಳಿದರೆ ಬದುಕೆ ಎಷ್ಟು ಚೆಂದ?
ಪ್ರೀತಿಯೂ ಹಾಗೆಯೇ ಎಲ್ಲಿ ಹುಟ್ಟುತ್ತದೆ, ಎಲ್ಲಿ ಕಳೆದು ಹೋಗುತ್ತದೆ ಎಂಬ ಕಿಂಚಿತ್ತೂ ಸುಳಿವೂ ನಮಗೆ ನೀಡುವುದಿಲ್ಲ. ಹೀಗೆ ಹತ್ತಾರು ಪ್ರಶ್ನೆಗಳು ಕಾಡುವುದು ಸಹಜ. ಆದರೆ ಗೊಂದಲದ ಎದೆಗೆ ಪ್ರೀತಿಯ ಗುಂಡಿಕ್ಕುವುದು? ಪ್ರೀತಿಯ ಒತ್ತಡಕ್ಕೂ ಬಲಿಯಾದಾಗ ಓಡುವ ಮನ, ಸುಖಾಸುಮ್ಮನೆ ನಿಂತು ಬಿಡುವುದು ಬದುಕಿನ ಸೌಂದರ್ಯವೋ, ಇಲ್ಲ ನಮ್ಮ ಮನದ ದೌರ್ಬಲ್ಯವೋ ಇಂಥ ತಿಳಿಯದು ಅದೆಷ್ಟೋ ಮಾತಿಗೆ ಅರ್ಥವೇ ಇಲ್ಲ. ಇದ್ದರೂ ಸುಲಭಕ್ಕೆ ಅರ್ಥವಾಗುವುದಿಲ್ಲ. ಗೊಂದಲ ಹೆರುವುದು ಮನದ ಕಾಯಕ. ಮಾತು ಅದರ ಆಪ್ತ ಸಹಾಯಕ. ಮಾತು ಮಾತಿಗೂ ಪ್ರಶ್ನೆ ಎಸೆಯುವುದು ಎಷ್ಟು ಸರಿಯೋ? ಅರ್ಥ ನಿಲುಕದೇ ಹೋದಾಗ, ಅಪಾರ್ಥದ ಬೆನ್ನ ಹಿಂದೆ ಅಲೆಯುವುದಕ್ಕಿಂತ ಮನವು ಗೊಂದಲದಕ್ಕೊಳಗಾದ ಹಾಗೆ ನಿಯಂತ್ರಿಸಿ ಬದುಕುವುದು ಅಷ್ಟೇ ಸರಿಯಲ್ಲವೇ?

ಹುಡುಗಿ ಪ್ರೀತಿಸಲಿಲ್ಲವೆಂದು ಹುಚ್ಚು ಹುಡುಗರು ತನಗೆ ದಕ್ಕದವಳು ಮತ್ಯಾರಿಗೆ ದಕ್ಕೆಬಾರದು, ಅವಳನ್ನು ಮತ್ತಾರನ್ನು ನೋಡಬಾರದು ಜೀವಂತವಿರುವವರೆಗೆ ನರಳಿನರಳಿ ಸಾಯಬೇಕು ಎಂದು ಸೇಡಿಗೆ ಬೀಳುವ ವಿಕೃತಿ ಮನಸ್ಸಿನಿಂದ ಸುಂದರ ಮುಖಕ್ಕೆ ಆ್ಯಸಿಡ್ ಎರಚಿ ವಿರೂಪಗೊಳಿಸುವಂತ ಅಮಾನವೀಯ ಘಟನೆಗಳು ಆಗಾಗ ಕೇಳಿಬರುತ್ತವೆ. ಅದಕ್ಕೆ ಕಠಿಣ ಕ್ರ್ರಮವಿದೆ. ಅಲ್ಲದೆ ತಪ್ಪಿಸಿಕೊಳ್ಳಲು ಅವಕಾಶವಿದೆ. ಈ ಕಾರಣಕ್ಕಾಗಿಯೇ ಪುರುಷರು ಮಹಿಳೆಯರ ಮೇಲೆ ದಾಳಿ ಮಾಡುತ್ತಲೇ ಇರುವರು. ಶನಿವಾರ ಸೆಪ್ಟಂಬರ್ 20 ರಂದು ಸಂಜೆ ವತರ್ೂರಿನ ಗಾಂಧಿ ವೃತ್ತದಲ್ಲಿ ಉಲ್ಪತ್ ಭಾನು ಮೇಲೆ ಆ್ಯಸಿಡ್ ದಾಳಿ ನಡೆದು ನಗರ ಮತ್ತೊಮ್ಮೆ ಸುದ್ಧಿ ಮಾಡಿದೆ. ಅತ್ಯಾಚಾರ ವರದಕ್ಷಿಣೆ ಕಿರುಕéು ಪ್ರತಿನಿತ್ಯ ಎಗ್ಗಿಲ್ಲ ನಡೆಯುತ್ತಿವೆ. ಈ ಘಟನೆಗಳಿಗೆ ಯಾವ ಕಾನೂನು ಭಯವಿಲ್ಲ ಪೊಲೀಸರ ಹೆದರಿಕೆಯಿಲ್ಲ. ಈ ಘಟನೆಗೆ ಹಿನ್ನೆಲೆ ತಿಳಿಯುವುದಕ್ಕಿಂತ ಇಂತಹ ಕೃತ್ಯ ಎಸಗುವುದನ್ನು ಖಂಡಿಸಲೇಬೇಕು ಹಾಗೂ ಶಿಕ್ಷೆಗೆ ಹೊಸ ಕಾನೂನು ಮಾಪರ್ಾಡುಗಳಿಗೆ ಒತ್ತಾಯಿಸಬೇಕಾದ್ದು ನಮ್ಮ ಜವಬ್ದಾರಿ, ಈ ಘಟನೆಗೆ ಕಾರಣನಾದವನಿಗೆ ಶಿಕ್ಷೆ ಯಾಗಲಿ ಹಾಗೂ ಆ ಮಹಿಳೆಯಗೆ ನ್ಯಾಯ ಸಿಗಲೇಬೇಕು.
ಹೆಂಡತಿಯ ನಡುವಳಿದೆ ಬಗ್ಗೆ ಅನುಮಾನಗೊಂಡ ಪಾಪಿ ಪತಿರಾಯ, ಹಂಡತಿ ಜೊತೆ ಜಗಳ ಮಾಡಿ ಕೆಂಡಮಂಡಲವಾಗಿ ಕುಪಿತಗೊಂಡು ಮನೆಯಿಂದ ಹೊರ ನಡೆದಿದ್ದಾನೆ. ತನ್ನ ಚಿಕ್ಕಪ್ಪನ ತರಕಾರಿ ಅಂಗಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ತನ್ನ ಬ್ಯಾಗ್ನಲ್ಲಿ ಆ್ಯಸಿಡ್ ತೆಗೆದುಕೊಂಡು ನೇರವಾಗಿ ತರಕಾರಿ ಅಂಗಡಿಗೆ ಬಂದಿದ್ದಾನೆ. ಕೆಲಸ ಮಾಡುತ್ತಾ ನಿಂತದ್ದು ಮಹಿಳೆ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಕೂಡಲೇ ಸುತ್ತಮುತ್ತಲಿದ್ದ ಜನ ರಕ್ಷಿಸಿ ಆಸ್ಪತ್ರೆಗೆ ದಾವಿಸಿದ್ದಾರೆ. ಅದೃಷ್ಟವಶ ಆಕೆ ಬದುಕಿದ್ದಾಳೆ ಶೇ 20% ರಷ್ಟು ದೇಹದ ಭಾಗ ಸುಟ್ಟು ಹೋಗಿದೆ. ಕೈ ಸೇರಿದಂತೆ ಗೆದ್ದ ಇತರೆ ಭಾಗಗಳಲ್ಲಿ ಸುಟ್ಟಿದೆ ಆದರೆ ಮೊದಲೇ ಗಂಡನ ಬಗ್ಗೆ ಅನುಮಾನಗೊಂಡ ಪತ್ನಿ ಮುಖ ತಿರುಗಿಸಿದ್ದರಿಂದ ಭಾಗಶಃ ಮುಖಕ್ಕೆ ಆ್ಯಸಿಡ್ ಬಿದ್ದಿಲ್ಲ. ಶೌಚಾಲಯ ಸ್ವಚ್ಛಗೊಳಿಸಲು ಬಳಸುವ ಆ್ಯಸಿಡ್ ಬಳಿಸಿದ್ದಾಗಿ ಹೇಳಿಕೆ ಕೊಟ್ಟಿದ್ದಾನೆ. ಇದಷ್ಟು ನಡೆದ ಘಟನೆ ಮತ್ತು ಕಾರಣ ಪೊಲೀಸ್ ವರದಿಯಾಯಿತು.
ಮಾನವೀಯ ಗುಣವುಳ್ಳ ಪ್ರತಿಯೊಬ್ಬರು ಇದು ಒಂದು ಘಟನೆಯಾಗಿ ನೋಡಿದರೆ ಮನುಷತ್ವಕ್ಕೆ ಬೆಲೆಯಿರದು. ಆ್ಯಸಿಡ್ ಪ್ರಕರಣದಂತವು ಅತಿ ಕಡಿಮೆಯಾದರು ಇದು ವಿಕೃತಿಯ ಪ್ರತಿಕ ಈ ಘಟನೆಗೆ ಪ್ರೇರಕ ಶಕ್ತಿ ಅಸಹನೆ ಅಮಾನುಷ್ಯ ವಿಕೃತಿಯ ಕಾರಣವೇ ಹೊರತು ಬೇರೇನು ಅಲ್ಲ. ಆ್ಯಸಿಡ್ ದಾಳಿ ಪ್ರಕರಣದಲ್ಲಿ ಅತಿ ಹೆಚ್ಚು ಬಲಿಯಾದವರು ಮಹಿಳೆಯರೇ ಆಗಿದ್ದಾರೆ. ಅದರಲ್ಲೂ ಪ್ರೀತಿ, ಪ್ರೇಮ, ಅನೈತಿಕತೆಯೇ ಕಾರಣವಾಗಿದೆ. ಪುರುಷತ್ವ ದೋರಣೆಯು ಮಹಿಳೆಯನ್ನು ತನ್ನ ಗುಲಾಮಳಾಗಿ ನೋಡುವುದು ಮೀರಿ ನಡೆದರೆ ಆಕೆ ಜೀವನ ಪರ್ಯಂತ ನರಳಿ ನರಳಿ ತನ್ನ ಕಣ್ಮುಂದೆ ಸಾಯಲಿ ಎನ್ನುವ ದುಬರ್ುದ್ಧಿ ಕಾರಣವಾಗಿದೆ.
ಈ ಘಟನೆ ಮರುಕಳಿಸದಂತೆ ತಡೆಯಲು ಸರಕಾರ ಕಠಿಣ ಕ್ರಮ ರೂಪಿಸಬೇಕು. ಕಾನೂನಿನ ಪ್ರಕಾರ ಮೊದಲು ಆ್ಯಸಿಡ್ ದಾಳಿಯನ್ನು ಕೊಲೆ ಪ್ರಯತ್ನ ಎಂದು ಪರಿಗಣಿಸುವುದರಿಂದಾಗಿ ಜಾಮೀನು ರಹಿತ ಕೇಸಾದರೂ ಜಾಮೀನು ದೊರೆತು ಆರೋಪಿ ಆರಾಮವಾಗಿ ಓಡಾಡುತ್ತಾನೆ. ಆ್ಯಸಿಡ್ ದಾಳಿ ಕೊಲೆಗಿಂತಲೂ ಭೀಕರ ದಾಳಿಗೆ ಒಮ್ಮೆ ತುತ್ತಾದರೆ ಆ ಮೇಲೆ ಏನು ಮಾಡಲು ಸಾಧ್ಯವಿಲ್ಲ ಆದ್ದರಿಂದ ಈ ಕೃತ್ಯವನ್ನು ಗಂಭೀರವಾಗಿ ಪರಿಗಣೆಸಿ ಕೊಲೆಗಿಂತಲೂ ಹೆಚ್ಚಿನ ಮತ್ತು ಕಠಿಣ ಶಿಕ್ಷೆಯ ಕಾನೂನು ರೂಪಿಸಿ ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಬೇಕು.
ಆ್ಯಸಿಡ್ ಉತ್ಪಾದನೆ ಮಾಡುವ ಕಂಪನಿಗಳ ಮೇಲೆ ಮಾರಾಟದ ನಿಯಂತ್ರಣ ಹೇರಬೇಕು. ಮಾರುವವರನ್ನು ಇಂತಹ ಘಟನೆ ನಡೆದಾಗ ಭಾಗಿದಾರರಾಗಿ ಗಣನೆಗೆ ತೆಗೆದುಕೊಳ್ಳಬೇಕು, ಅಲ್ಲದೆ ಅವರ ಮೇಲೂ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ಪ್ರಕರಣಗಳಿಗೆ ಪ್ರತ್ಯೇಕ ಫಾಸ್ಟ್ ಟ್ರಾಕ್ ಕೊರ್ಟಗಳ ಸ್ಥಾಪಿಸಿ ತ್ವರಿತ ವಿಲೇವಾರಿ ಮಾಡಿ ಉಗ್ರ ಶಿಕ್ಷೆ ವಿದಿಸಿದಾಗಲೇ ಆ್ಯಸಿಡ್ ದಾಳಿ ನಡೆಸುವವರ ಮತ್ತು ಆ್ಯಸಿಡ್ ಮಾರುವವರ ಎದೆಯಲ್ಲಿ ನಡುಕ ಹುಟ್ಟುತ್ತದೆ. ಇಲ್ಲದಿದ್ದರೆ ಪುರುಷಪ್ರಧಾನ ಸಮಾಜದಲ್ಲಿ ಈಗಿನ ್ಲ ಆಧುನಿಕ ಅಪಾಯಕಾರಿ ಅಸ್ತ್ರ ಆ್ಯಸಿಡ್ ದಾಳಿಗಳನ್ನು ತಡೆಯಲು ಸಾಧ್ಯವಾಗದು.
ಹೆಂಡತಿಯ ಮೇಲೆ ಪ್ರೀತಿ ಇರುವ ಯಾವ ಗಂಡಸರು ಹೀಗೆ ಮಾಡಲಾರರು. ಅಲ್ಲದೆ ನಿಜವಾದ ಪ್ರೀತಿಸಿದ ಯಾವ ಪ್ರೇಮಿಯು ಹೀಗೆ ಮಾಡಲಾರ. ಪ್ರೀತಿಸಿದ ಹೃದಯಗಳ ಕ್ಷಣ ಕ್ಷಣದ ಆರಾಧನೆ ಎಷ್ಟೊಂದು ಮಧುರವಾಗಿರುತ್ತದೆ. ಪ್ರೀತಿ ಮನುಷ್ಯನ ಎರಡು ಹೃದಯಗಲನ್ನು ಬೆಸೆದು ಎದೆಯಾಂತರಾಳವನ್ನು ನೂರಾರು ಕನಸುಗಳ ಭಾವುಕತೆಗೆ ತಳ್ಳಿಬುಡುತ್ತದೆ. ಒಮ್ಮೆ ಪ್ರೀತಿಗೆ ಬಿದ್ದ ಮನಸ್ಸುಗಳು ಮತ್ತೆ ಮತ್ತೆ ಆ ಪ್ರೀತಿಯನ್ನು ಹಂಬಲಿಸುತ್ತವೆ. ಪ್ರೀತಿಗಾಗಿ, ಆ ಪ್ರೀತಿಯ ಕಣ್ಣ ನೋಟಕ್ಕಾಗಿ ಹಾತೋರೆಯುತ್ತವೆ, ಪ್ರೀತಿಯಿಂದ ಕಣ್ಣರಳಿಸಿ ಒಬ್ಬರನ್ನೊಬ್ಬರು ನೋಡುತ್ತಾ ಆಡುವ ಒಂದೊಂದು ಪಿಸುಮಾತಿಗಾಗಿ ಕಾಯುತ್ತವೆ, ಹಿತವಾದ ಮುಧುರ ಸ್ಪರ್ಷಕ್ಕಾಗಿ ಒಡಲ ಕಣ ಕಣವೂ ಪುಳಕಗೊಂಡಿರುತ್ತದೆ. ಅನುರಾಗದ ಅಪ್ಪುಗೆಗಾಗಿ ಕಾಯುವ ಕ್ಷಣ ಕ್ಷಣವೂ ಯುಗವಾದಂತೆ ಭಾವಾಗುತ್ತದೆ, ತುಟಿಯಂಚಿನ ಆ ಸಿಹಿಯಾದ ಪ್ರೇಮದ ಮುದ್ರೆಗಾಗಿ ಆ ಘಳಿಗೆಯ ಭಾವುಕತೆಗೆ ಮನಸ್ಸುಗಳು ತವಕಿಸುತ್ತಿರುತ್ತವೆ. ಪ್ರೀತಿಯಲ್ಲಿ ಮುಳುಗಿದ ಆ ಮನಸ್ಸುಗಳಿಗೆ ನಿದ್ರಿಸಲು ಬಿಡುವುದಿಲ್ಲ. ಪ್ರೀತಿಯ ಆಳದ ಸೆಳೆತವೇ ಹೀಗೆ, ಪ್ರೀತಿಯಲ್ಲಿ ಜಾರಿದ ಮನಸ್ಸುಗಳು ಇನ್ನಷ್ಟು ಪ್ರೀತಿಗಾಗಿ ಹಾತೊರೆಯುತ್ತದೆ. ಅಲ್ಲದೆ ರಾಶಿ ರಾಶಿ ಬಣ್ಣಬಣ್ಣದ ಕನಸುಗಳಲ್ಲಿ ತೆಲುತ್ತವೆ. ಆರಂಭ ಕೊಡುವ ಪುಳಕ ಅಂತ್ಯದವರೆಗೂ ಉಳಿದರೆ ಎಷ್ಟು ಚೆಂದ?
ಮುಗಿಯದ ಮಾತಿನ ರಥೋತ್ಸವದಲ್ಲಿ ಎಷ್ಟು ಹೊತ್ತು ತೇರನೆಳೆಯಲು ಸಾಧ್ಯ? ಜೀವನದ ಸಾಗರಕ್ಕೆ ದುಮಕಲೇಬೇಕಲ್ಲವೇ? ದುಮುಕಿದಾಗ ಬರುವ ಅಲೆಗಳಿಗೆ ಎದೆಯೊಡ್ಡಿ ಈಜಲೇಬೇಕಲ್ಲವೇ? ಈಜಲು ಎದರಿ ಸೋತೆನೆಂಬ ಭಾವದಲ್ಲಿ ಹೀಗೆ ಮಾಡುವುದು ಎಷ್ಟು ಸರಿ? ಹುಡುಗೀಯರ ಜೀವನವನ್ನು ನರಕ ಮಾಡುವುದು ಸರಿಯಲ್ಲ. ಜೀವನದ ಬೀದಿಯಲಿ ನಿಂತು ಉಕ್ಕಿ ಬರುವ ಭಾವನೆಗಳು ಸೋತಾಗ, ತಾಳಲಾರದೆ ಬಿಕ್ಕಿ ಬಿಕ್ಕಿ ಅಳುವುದು ಭಾವುಕತೆ. ನಮ್ಮ ಭಾವನೆಗಳನ್ನು ನಾವೇ ಬದಲಿಸಿಕೊಳ್ಳಬೇಕು. ಇಲ್ಲವೇ ನಾವೇ ಬದಲಿಸಬೇಕು ಅಥವಾ ಮತ್ಯಾರೋ ಕೈ ಬೀಸಿ ಕರೆದಾಗ ಅವರ ಹಾದಿಯ ಬದಿಯಲ್ಲಿ ಅವಿತು ಕುಳಿತ ಸಂಭ್ರಮಗಳಿಗೆ, ನೋವುಗಳಿಗೆ ಮನಸ್ಸು ಕೊಟ್ಟು ಬಿಡಬೇಕು. ಹರಿವ ನದಿಯಂತೆ ತನ್ನ ಪಾಡಿಗೆ ತಾನಿರುವ ಮನದ ಓಟಕ್ಕೆ ತಡೆಯೊಡ್ಡುವ ಅನಾಮಿಕ ಅಣೆಕಟ್ಟುಗಳನ್ನು ಸೃಷಿಯಾಗಲು ಬಿಡಬಾರದು? ನದಿ ಸರಾಗವಾಗಿ ಹರಿಯವಂತೆ ನೋಡಿಕೊಳ್ಳಬೇಕು. ಅಂಥ ಕ್ಷಣವನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಕುಣಿಯುತ್ತಿರುವ ಮನ, ಯಥಾಸ್ಥಿತಿ ಕಾಯ್ದುಕೊಳ್ಳಲು ಒದ್ದಾಡುತ್ತಿರುತ್ತದೆ, ಆಗ ಆ ಮನಸ್ಸಿಗೆ ಕಡಿವಾಣ ನಾವೇ ಹಾಕಬೇಕು ಆಗಲೇ ಬದುಕನ್ನು ಪ್ರೀತಿಯನ್ನು ಗೆಲ್ಲಲೂ ಸಾಧ್ಯ. ಇದೇ ಪ್ರೀತಿಯ ಮಾಯೇ ಈ ಮಾಯೆಗೆ ಸಿಲುಕಿದವರು ಬದುಕಿನ ಪಯಣದಲ್ಲಿ ಹಾದಿಯಲ್ಲಿ ಬರುವ ಕಲ್ಲು ಮುಳ್ಳುಗಳನ್ನು ತುಳಿದು ಮುನ್ನುಗ್ಗಿ ನಡೆದರೆ ಬದುಕನ್ನು ಸಂತೋಷದಿಂದ ಸ್ವೀಕರಿಸಬೇಕು ಈ ರೀತಿಯ ರೋಷ ದ್ವೇಷಗಳನ್ನು ತೋರಬಾರದು.
ಆದ್ದರಿಂದ ಇಬ್ಬರಲ್ಲಿ ಯಾರೊಬ್ಬರು ಮುನಿಸಿಕೊಂಡಾಗಲೆಲ್ಲ ಇಬ್ಬರು ಹಠಕ್ಕೆ ಬಿದ್ದರೆ ಸಂಬಂಧದ ಕೊಂಡಿ ಕಳಚಿ ಬೀಳುವುದನ್ನು ತಡೆಯುವವರಾರು? ಸಿಟ್ಟು ನಮ್ಮೊಳಗಿನ ಅಹಂನ ಮೂರ್ತ ರೂಪವೇ ಆಗಿದೆ. ಆದ ಕಾರಣ ಸಿಟ್ಟಿನ ಕೈಗೆ ಮನಸ್ಸುನ್ನು ಕೊಡದೆ ಸಮಾಧಾನದಿಂದಿರಬೇಕು. ಸಿಟ್ಟಿಗೆ ಸಿಟ್ಟೇ ಉತ್ತರವಲ್ಲ? ಉದ್ರಿಕ್ತಗೊಂಡಾಗ ಬದುಕಿನ ಸಂಭ್ರಮಗಳೂ ಸಹ ಸೂತಕವಾಗಿಬಿಡುವವು. ಇದೆಲ್ಲ ನಮ್ಮ ಟೈಮ್ ಎಂಬುದಕ್ಕಿಂತಲೂ, ಸಾವಾಧಾನವಾಗಿ ಯೋಚಿಸಬೇಕು ಕಾಲದ ಹಿರಿಮೆಯೋ ಅಥವಾ ನಮ್ಮೊಳಗಿನ ಕೀಳರಿಮೆಯೋ? ಎಂಬ ಗೊಂದಲಗಳಿಗೆ ಉತ್ತರ ಕಂಡುಕೊಂಡರೆ ಜೀವನವೇ ಸಿಹಿಯಾಗಿರುತ್ತದೆ. ಒಟ್ಟಾರೆ ಈ ಆ್ಯಸಿಡ್ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳೇ ಬಲಿಯಾಗುವುದು, ಆದುದರಿಂದ ಹೆಣ್ಣು ಮಕ್ಕಳು ಹೆಜ್ಜೆ ಹೆಜ್ಜೆಗೂ ತಮ್ಮನ್ನು ತಾವು ಕಾಪಾಡಿಕೊಳ್ಳುವಲ್ಲಿ ಮುಂದಾಗಬೇಕು. ಹರೆಯದ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದು ನಿಮ್ಮ ಜೀವನವನ್ನು ಆಳು ಮಾಡಿಕೊಳ್ಳಬೇಡಿ…ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ ಯಾರೋ ಅನಾಮಿಕನಿಗೆ ಮನಸ್ಸು ಕೊಡುವ ಮುನ್ನ ನಿಧಾನವಾಗಿ ಯೋಚಿಸಿ, ಇಲ್ಲವಾದಲ್ಲಿ ಈ ರೀತಿಯ ಅನಾಹುತಗಳು ನಡೆಯುತ್ತಲಿರುತ್ತವೆ.






ಅವಧಿಯಲ್ಲಿ ಪ್ರಕಟವಾಗಿರುವ ನಿಮ್ಮ’ಪ್ರೀತಿಯೊಂದು ಮಾಯೆ, ಆದರೆ ….’ ಲೇಖನದ ಒಂದಷ್ಟು ಸಾಲುಗಳು ನನ್ನ ಲೇಖನವೊಂದರಿಂದ ಆಯ್ದುಕೊಂಡಿರುವಂತೆ ಭಾಸವಾಗುತ್ತಿದೆ. ನನ್ನ ಲೇಖನ ಈ ವರ್ಷದ ಜುಲಯ್ ೨೨ರಂದು ಉದಯವಾಣಿ ಜೋಶ್ ಪುರವಣಿಯಲ್ಲಿ ಪ್ರಕಟಗೊಂಡಿದೆ. ಆ ಲೇಖನದ ಕೊಂಡಿ ಇಲ್ಲಿದೆ…http://www.udayavani.com/news/505119L15-%E0%B2%AE-%E0%B2%97-%E0%B2%AF%E0%B2%A6-%E0%B2%AE-%E0%B2%A4-%E0%B2%A8-%E0%B2%B0%E0%B2%A5-%E0%B2%A4-%E0%B2%B8%E0%B2%B5.html ನೀವೂ ಗಮನಿಸಿ ಸಾಧ್ಯವಾದರೆ ಸ್ಪಷ್ಟನೆ ನೀಡಿ. ನನ್ನ ಲೇಖನದ ಕೊನೆಯ ಎರಡು ಪ್ಯಾರಾಗಳು ಹಾಗು ನಿಮ್ಮ ಲೇಖನದ ಮೊದಲೆರಡು ಪ್ಯಾರಾಗಳಲ್ಲಿ ಸಾಮತ್ಯೆ ಇದೆ.
ಇದೆ ಅನಿಸುತ್ತೆ ಆದರೆ ನಾನು ಖಂಡಿತ ನೋಡಿರಲಿಲ್ಲ…ನನ್ನ ಮನಸ್ಸಿನಲ್ಲಾದ ತಲ್ಲಣವೇ ಇಲ್ಲಿ ಅಕ್ಷರದ ರೂಪವಾಗಿವೆ. ನಾನು ಹಾಗೆ ನಿಮ್ಮ ಲೇಖನವನ್ನು ಗಮನಿಸಿದ್ದರೆ ನಿಮ್ಮ ಹೆಸರನ್ನು ಇಲ್ಲಿ ತೊರಿಸುತ್ತಿದ್ದೆ…ಆದರೆ ಈಗ ಓದಿದರೆ ಇದು ನಿನವೇನೋ ಅನಿಸುತ್ತೆ….ಇಂದಿನ ಯುವ ಪೀಳಿಗೆಯ ಮನಸ್ಸುಗಳನ್ನು ನೋಡಿದಾಗ ೀಈ ರೀತಿಯ ಭಾವನೆಗಳು ಬರುತ್ತವೆ….ಖಂಡಿತ ನಾನು ನೋಡಿರಲಿಲ್ಲ….ನಿಮ್ಮ ಹೇಳಿಕೆಗೆ ಧನ್ಯವಾದಗಳು