ಪ್ರಿಯ ಶಂಕರ್ ಸರ್….

– ರವಿವರ್ಮ, ಹೊಸಪೇಟೆ

ನಮಸ್ಕಾರ. ನಿಮ್ಮ ಪುಸ್ತಿಕೆ “ಹುಡುಕಾಟ” ದ ಬಗ್ಗೆ ಓದಿದೆ. ಈ ಸಾಲುಗಳು ಹೃದಯ ತಟ್ಟಿದವು. ಕಾವ್ಯ ಕನ್ನಿಕೆಯ ತೊಡೆಯಮೇಲೆ ಮುಖವಿಟ್ಟು ಅಳುವುದು ಎಂದು ಲಂಕೇಶರು ಬರೆದಿದ್ದರಲ್ಲ, ಅದೇನೆಂದು ಈಗ ಅರ್ಥವಾಯಿತು. ಕಣ್ಣೆದುರು ಬರೀ ಗವ್ವೆನ್ನುವ ಕತ್ತಲು ಕವಿದಿದ್ದ ಸ್ಥಿತಿ, ಬರವಣಿಗೆ ನನ್ನಿಂದ ಶಾಶ್ವತವಾಗಿ ಜಾರಿಹೋದಂತಿತ್ತು, ಪ್ರತಿ ವಾರವೂ ಯಾರೋ ವಿಧಿಸಿದ ಶಿಕ್ಷೆಯ೦ತಾಗಿತ್ತು. ಒಮ್ಮೊಮ್ಮೆ ಅಕ್ಷರಶಃ ಅಳು ಬರುತಿತ್ತು, ತಿಂಗಳೆರಡು ತಿಂಗಳ ನಂತರ ತಹಬದಿಗೆ ಬಂತು. ಆಗ ಆತ್ಮಸ್ಥೈರ್ಯ, ವಿಶ್ವಾಸ ನೀಡಿದ ಜಯರಾಮ ಅಡಿಗರಿಗೆ ಕೋಟಿ ಕೋಟಿ ವಂದನೆ. ಹುಡುಕಾಟ ಪುಸ್ತಿಕೆ title ನಿಜಕ್ಕೂ ಅರ್ಥಪೂರ್ಣವಾಗಿದೆ. ಬಹುಷಃ ನಮ್ಮ ಬದುಕೆಲ್ಲ ಹುಡುಕಾಟದಲ್ಲೇ ಕಳೆದುಹೋಗುತ್ತದೆ, ಉದ್ಯೋಗ, ಹೆ೦ಡತಿ, ಮಕ್ಕಳು, ಮಕ್ಕಳಿಗೆ ಉದ್ಯೋಗ, ಅವರ ಮದುವೆ, ಪ್ರಶಸ್ತಿ, ಅಸ್ತಿತ್ವ, ಏನನ್ನೋ ಕಳೆದುಕೊಂಡು ಅದನ್ನೇ ಹುಡುಕುವುದರಲ್ಲೇ ಇಡೀ ಬದುಕು ಕಳೆದುಹೊಗುತ್ತೇನೋ,  ಕುಷ್ವಂತ್  ಅವರ ಇತ್ತೀಚಿನ ಪುಸ್ತಕ ಓದುತಿದ್ದೆ, ‘Absolute ಖುಷ್ವಂತ್’.  ಕುಷ್ವಂತ್  ಸಿಂಗ್ with humra quraishi ಅಲ್ಲಿ ಕುಷ್ವಂತ್  ಒಂದು ಅರ್ಥ ಪೂರ್ಣ ಮಾತು ಹೇಳುತ್ತಾರೆ ‘ ಏನು ಕೇಳುತ್ತೀರಿ ನನ್ನ ಕೆಲಸದ ಬಗ್ಗೆ ನಾನು ಕುರುಡರ ನಾಡಿನಲ್ಲಿ ಕನ್ನಡಿಗಳನ್ನು ಮಾರುತ್ತಿದ್ದೇನೆ ” ‘ಅವಧಿ’ಯ ಮೂಲಕ ನಿಮ್ಮ ಹುಡುಕಾಟದ ಬಗ್ಗೆ ತಿಳಿದು ತುಂಬಾ ಖುಶಿಯಯ್ತು , ಪುಸ್ತಿಕೆ ತುಂಬಾ ಆಕರ್ಷಕವಾಗಿ ಬಂದಿದೆ, ತಕ್ಷಣ ಪುಸ್ತಕ ತರಿಸಿಕೊಂಡು ಓದಬೇಕೆಂಬ ಉತ್ಕಟತೆಯಿಂದ ಇದ್ದೇನೆ.]]>

‍ಲೇಖಕರು G

February 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. D.RAVI VARMA

    ನಾನು ಅವದಿಗೆ ಋಣಿಯಾಗಿದ್ದೇನೆ
    ravi varma hosapete

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: