ಪ್ರಿಯ ಬಂಧು,
ಪ್ರಕಾಶ್ ರೈ ಮತ್ತು ಶೈಲಜಾ ನಾಗ್ ನಿರ್ಮಿಸಿರುವ ಡ್ಯುಯೆಟ್ ಮೂವೀಸ್-ಮೀಡಿಯಾ ಹೌಸ್ ಸ್ಟುಡಿಯೋ ಸಂಸ್ಥೆಯ ಬಿ.ಸುರೇಶ ನಿರ್ದೇಶನದ ‘ಪುಟ್ಟಕ್ಕನ ಹೈವೇ’ ಇದೇ ಮೇ ೨೦ರಂದು ಬಿಡುಗಡೆಯಾಗುತ್ತಿದೆ.
ಬೆಂಗಳೂರಿನ ಮೇನಕಾ, ಪಿವಿಆರ್, ಐನಾಕ್ಸ್ ಮಂತ್ರಿ, ಐನಾಕ್ಸ್ ಜಯನಗರ, ಐನಾಕ್ಸ್ ಸೆಂಟ್ರಲ್ (ಸಾರಕ್ಕಿ)ಯಲ್ಲಿ ಈ ಸಿನಿಮಾ ಇದೆ. (ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನ ವೇಳೆಗಳನ್ನು ಚೆಕ್ ಮಾಡಿಕೊಂಡು ಹೋಗಿ)
ಶೃತಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್, ವೀಣಾ ಸುಂದರ್, ಮಂಡ್ಯ ರಮೇಶ್, ಸಿಹಿಕಹಿ ಚಂದ್ರು, ಸತೀಷ್ ಕ್ವಾಟ್ಳೆ ಶ್ರೀನಿವಾಸ ಪ್ರಭು ಮುಂತಾದವರು ಅಭಿನಯಿಸಿರುವ ಈ ಸಿನಿಮಾದ ಸಂಗೀತ ನಿರ್ದೇಶನ ಹಂಸಲೇಖ ಅವರದ್ದು. ಯೋಗರಾಜ್ ಭಟ್ ಮತ್ತು ಹಂಸಲೇಖ ಗೀತೆಗಳನ್ನು ಬರೆದಿದ್ದಾರೆ. ಎಚ್.ಎಂ.ರಾಮಚಂದ್ರ ಛಾಯಾಗ್ರಹಣ, ಜೋ.ನಿ.ಹರ್ಷ ಸಂಕಲನವಿರುವ ಈ ಚಿತ್ರವು ನಾಗತಿಹಳ್ಳಿ ಚಂದ್ರಶೇಖರ್ ಅವರ ಸಣ್ಣ ಕತೆಯನ್ನು ಆಧರಿಸಿದೆ. ಬಿ.ಸುರೇಶ ಅವರು ಈ ಸಿನಿಮಾಗೆ ಚಿತ್ರಕತೆ-ಸಂಭಾಷನೆ ಬರೆದು ನಿರ್ದೇಶಿಸಿದ್ದಾರೆ.
ಅಭಿವೃದ್ಧಿಯ ಹೆಸರಲ್ಲಿ ಆಡಳಿತ ಯಂತ್ರಗಳು ಮಾಡುವ ಯೋಜನೆಗಳಲ್ಲಿ ಬಡವರು ಹೇಗೆ ಬಲಿಪಶುವಾಗುತ್ತಾರೆ ಎಂಬುದನ್ನು ಹೇಳುತ್ತಲೇ ಈ ನಾಡಿನ ಬಡವರ ಬದುಕುವ ಛಲವನ್ನೂ ನಿರೂಪಿಸುವ ಈ ಸಿನಿಮಾ ಸಮಕಾಲೀನ ತಲ್ಲಣಗಳಿಗೆ ಹಿಡಿದ ಕೈಗನ್ನಡಿಯಾಗಿದೆ.
ಇಂತಹ ಸಿನಿಮಾಗಳನ್ನು ಮತ್ತೊಂದು ವಾರಕ್ಕೆ ಎಂದು ಕಾಯದೆ ಮೊದಲವಾರದಲ್ಲಿಯೇ ನೋಡಬೇಕೆಂದು ಕೋರುತ್ತೇವೆ.
ದಯಮಾಡಿ ಮರೆಯದಿರಿ. ಈ ವಿಷಯವನ್ನು ನಿಮ್ಮ ಗೆಳೆಯರಿಗೂ ತಿಳಿಸಿ. ನಮ್ಮ ಪ್ರಯತ್ನಗಳನ್ನು ಪ್ರೋತ್ಸಾಹಿಸಿ.
-ಬಿ ಸುರೇಶ






0 Comments