ರೂಪ ಹಾಸನ
ಸಾಹಿತ್ಯ ಕಾರ್ಯಕ್ರಮವೊಂದಕ್ಕೆ ಹಿರಿ ಕಿರಿಯ ಗೆಳೆಯ ಗೆಳತಿಯರೊಡಗೂಡಿ ಮುಂಬಯಿಗೆ ಹೋಗಿದ್ದ ಸಂದರ್ಭ. ಸಮುದ್ರದ ಬೀಚ್ವೊಂದಕ್ಕೆ ಭೇಟಿ ನೀಡಿದ್ದೆವು. ಅದರ ಮುಂಭಾಗದಲ್ಲೇ ಬೈರಾಗಿಯಂತ ವ್ಯಕ್ತಿಯೊಬ್ಬ ಚಿಕ್ಕ ಪ್ರಮಾಣದಲ್ಲಿ ಒಂದಿಷ್ಟು ತಿಂಡಿ ಸಾಮಗ್ರಿಗಳನ್ನು ಮಾರಾಟಕ್ಕೆ ಹರವಿಕೊಂಡು ಕುಳಿತಿದ್ದ. ಆ ಪುಡಿ ತಿಂಡಿಗಳು ಮನುಷ್ಯರು ತಿನ್ನುವುದಕ್ಕಲ್ಲ! ಪಾರಿವಾಳಗಳಿಗೆ ಹಾಕಲು! ಕೇವಲ ಒಂದು, ಎರಡು, ಐದು ರೂಪಾಯಿಗಳ ತಿನಿಸುಗಳಷ್ಟೇ. ಬೀಚ್ ನೋಡಲು ಬಂದವರು ಅದನ್ನು ಕೊಂಡು ಸಮುದ್ರ ತೀರದಲ್ಲಿ ಬೀಡು ಬಿಟ್ಟಿರುವ ಪಾರಿವಾಳಗಳನ್ನು ಆಕಷರ್ಿಸಲು ಎಸೆಯುತ್ತಿದ್ದರು. ಯಾರೂ ಕೊಂಡು ಹಾಕುವವರಿಲ್ಲದಿದ್ದರೆ ಈ ಮನುಷ್ಯನೇ ಪಾರಿವಾಳಗಳನ್ನು ಕರೆದು ತಿಂಡಿಗಳನ್ನು ಎಸೆಯುತ್ತಿದ್ದ! ಅವು ಕೇಕೆ ಹಾಕುತ್ತಾ ಹಾರಿ ಬಂದು ತಿನ್ನುವುದನ್ನು ನೋಡುತ್ತಾ ಸಂಭ್ರಮಿಸುತ್ತಿದ್ದ. ದಿನವೆಲ್ಲಾ ಇವನ್ನು ಮಾರಿದರೂ ಈ ಮನುಷ್ಯನಿಗೆ ಲಾಭವೆಷ್ಟಾಗಬಹುದು? ಅದರ ಜೊತೆಗೇ ತಾನೇ ಪಾರಿವಾಳಗಳಿಗೆ ತಿಂಡಿ ದಾನ ಬೇರೆ ಮಾಡುತ್ತಾನೆ. ಹಾಗಿದ್ದರೆ ಇವನು ಮನೆಗೇನು ತೆಗೆದುಕೊಂಡು ಹೋಗುತ್ತಾನೆ? ಎಂದು ಯೋಚಿಸಿದೆ.

ನಾನೂ ಸ್ವಲ್ಪ ಹೆಚ್ಚು ಹಣಕ್ಕೇ ತಿಂಡಿ ಸಾಮಗ್ರಿಗಳನ್ನು ಕೊಂಡೆ. ಮಿತ್ರರೆಲ್ಲಾ ಸೇರಿ ಪಾರಿವಾಳಗಳಿಗೆ ಎರಚಿದೆವು. ನಮ್ಮೊಂದಿಗೆ ಆ ವ್ಯಕ್ತಿಯೂ ಪಾರಿವಾಳಗಳ ಸಂಭ್ರಮದಲ್ಲಿ ಭಾಗಿಯಾದ. ಮೆಲ್ಲಗೆ ಅವನ ಕುಟುಂಬದ ಬಗ್ಗೆ ವಿಚಾರಿಸಿದೆ. ಹೀಗೆ ತಿಂಡಿಯನ್ನೆಲ್ಲಾ ದಾನ ಮಾಡಿದರೆ ಮನೆಗೇನು ತೆಗೆದುಕೊಂಡು ಹೋಗುತ್ತೀಯಾ? ಎಂದು ಕೇಳಿದೆ. ವಿರಾಗಿಯಂತೆ ನಿಲರ್ಿಪ್ತ ನಗೆ ನಕ್ಕ. ‘ನಾನು ಪಾರಿವಾಳಗಳಿಗೆ ಆಹಾರಕೊಟ್ಟರೆ ನನ್ನ ಮಕ್ಕಳಿಗೆ ಯಾರಾದರೂ ಆಹಾರ ಕೊಡುತ್ತಾರಲ್ಲವೇ ಅದಕ್ಕೇಕೆ ಚಿಂತೆ ಮಾಡಬೇಕು?’ ಎಂದ. ‘ಮನೆಯವರು ಬೈಯ್ಯುವುದಿಲ್ಲವೇ?’ ಎಂದೆ. ‘ಇಲ್ಲ. ನಾನಿರುವುದೇ ಹೀಗೆ. ಅವರಿಗೆ ಗೊತ್ತಾಗಿದೆ. ತಮ್ಮ ಜವಾಬ್ದಾರಿಯನ್ನು ತಾವೇ ಹೊರುತ್ತಾರೆ. ನಾನು ಮಾರಾಟ ಮಾಡಿ ಬಂದ ಹಣವನ್ನೆಲ್ಲಾ ಪೈಸೆ ಕೂಡ ಖಚರ್ು ಮಾಡದೇ ತೆಗೆದುಕೊಂಡು ಹೋಗಿ ಕೊಡುತ್ತೇನಲ್ಲಾ’ ಎಂದ ಮುಗ್ಧವಾಗಿ. ‘ಪಾರಿವಾಳಗಳಿಗೆ ನೀನೇ ತಿಂಡಿ ಹಾಕಿದ್ದಕ್ಕೆ ಲೆಕ್ಕ?’ ಎಂದೆ. ‘ಅದು ನನ್ನ ಖಚರ್ಿನ ಲೆಕ್ಕಕ್ಕೆ. ನಾನು ಬೇರೇನೂ ಖಚರ್ು ಮಾಡಲ್ವಲ್ಲ?’ ಎಂದ ತಿಳಿ ನಗೆ ನಗುತ್ತಾ. ಇಂತವರೂ ಪ್ರಪಂಚದಲ್ಲಿ ಇರುತ್ತಾರಲ್ಲಾ ಎಂದು ಕಣ್ಣು ತುಂಬಿ ಬಂತು.
ಬೀಚ್ ನೋಡಲು ಬಂದವರೆಲ್ಲಾ ಇವನಿಂದಲೇ ತಿಂಡಿ ಖರೀದಿಸಿ ಪಾರಿವಾಳಗಳಿಗೆ ಹಾಕಲಿ ಎಂದು ಹಾರೈಸುತ್ತಾ ಅವನಿಗೆ 50 ರೂಪಾಯಿ ಕೊಡಲು ಹೋದೆ. ಬೇಡವೆಂದು ನಿರಾಕರಿಸಿದ. ಇದನ್ನು ನಿರೀಕ್ಷಿಸಿಯೇ ಇದ್ದಿದ್ದರಿಂದ ‘ಇದು ನಿನಗಲ್ಲ. ಪಾರಿವಾಳಗಳಿಗೆ ಹಾಕಲು. ಅವುಗಳಿಗೀಗ ಹೊಟ್ಟೆ ತುಂಬಿದೆ. ಆಮೇಲೆ ಈ ಹಣದಷ್ಟು ತಿಂಡಿ ನೀನೇ ಹಾಕು. ನಾವು ಹೊರಡಬೇಕು’ ಎಂದೆ. ಹಣ ತೆಗೆದುಕೊಂಡ. ಮಿತ್ರರೆಲ್ಲಾ ಖಡಾಖಂಡಿತವಾದ ದನಿಯಲ್ಲಿ ಹೇಳಿದರು, ‘ಖಂಡಿತಾ ಆ ಮನುಷ್ಯ ಪಾರಿವಾಳಗಳಿಗೆ ಅಷ್ಟೂ ಹಣದ ತಿಂಡಿ ಹಾಕುತ್ತಾನೆ ನೋಡು. ನಿನ್ನ ಹಣಕ್ಕೆ ಮೋಸವಿಲ್ಲ’ ಎಂದು. ನಮಗೆಲ್ಲರಿಗೂ ಆ ವ್ಯಕ್ತಿಯ ಬಗೆಗೆ ನಂಬಿಕೆ ಇತ್ತು. ಪ್ರಾಮಾಣಿಕತೆ ಎಂದರೆ ಬೇರೆಯವರ ಎದುರಿಗೆ ತೋರ್ಪಡಿಕೆಗಾಗಿ ಅಲ್ಲ. ಯಾರೂ ವಿಚಾರಿಸುವವರಿಲ್ಲದಿದ್ದಾಗಲೂ ಪ್ರಾಮಾಣಿಕವಾಗಿರುವುದು ಅಲ್ಲವೇ? ಆತ್ಮಸಾಕ್ಷಿಗೆ ಬದ್ಧವಾಗಿ ಬದುಕುವುದು ಎಂದರೆ ಇದೇ ಇರಬೇಕು. ಇಂತಹ ವ್ಯಕ್ತಿಗಳನ್ನು ನೋಡಿದಾಗ ಒಳಿತಿನೆಡೆಗಿನ ನಂಬಿಕೆ ಇಮ್ಮಡಿಯಾಗುತ್ತದೆ.






ಅವನ ಮಾತಿನಂತೆ ಮನಸ್ಸು ನಿಷ್ಕಲ್ಮಷ. ಇಂಥ ವ್ಯಕ್ತಿಗಳೇ ನಮ್ಮ ನಾಯಕರಾಗಬೇಕು.
ಉತ್ತಮ ಬರಹ ಓದಿಸಿದ್ದಕ್ಕೆ ವಂದನೆಗಳು ಮೇಡಂ.
MANA MUTTUVA BARAHA! THANX.
ANU
“ಪ್ರಾಮಾಣಿಕತೆ ಎಂದರೆ ಬೇರೆಯವರ ಎದುರಿಗೆ ತೋರ್ಪಡಿಕೆಗಾಗಿ ಅಲ್ಲ. ಯಾರೂ ವಿಚಾರಿಸುವವರಿಲ್ಲದಿದ್ದಾಗಲೂ ಪ್ರಾಮಾಣಿಕವಾಗಿರುವುದು” ಈ ಸಾಲುಗಳು ತುಂಬಾ ಆಪ್ತವಾಗಿದೆ. ಒಳ್ಳೆಯ ಬರಹಕ್ಕಾಗಿ ಧನ್ಯವಾದಗಳು
Nalina
mana thattuva baraha
simply beautiful!
Honesty is how you work when no other human being is observing you and when you have no mortal supervisor to be accountable!!
i agree ..!!valuable article..
ಇಂತ ಸಂಗತಿಗಳನ್ನು ಕಂಡರೂ ಕಾಣಿಸಿದಂತೆ ಸಂವೇದನೆ ಕಳಕೊಂಡ ಕಣ್ಣುಗಳನ್ನು ಎಚ್ಚರಿಸಿದ್ದಕ್ಕಾಗಿ ಧನ್ಯವಾದಗಳು.
Simply beautiful!
AHANI
Narration of the incident commendable.
Rare to see Honesty.
GRRRao
Bangalore
Timely article. Thanks madam
ಪ್ರಾಮಾಣಿಕತೆ ಎಂದರೆ ಇದೇ.ಸಭೆ ಸಮಾರಂಭಗಳಲ್ಲಿ ಹಾರ ತುರಾಯಿಗಳ ಹಾಕಿಸಿಕೊಳ್ಳಲೆಂದೇ ದಾನ ಧರ್ಮಗಳ ಮಾಡುತ್ತ, ನೀತಿ ನಿಯತ್ತುಗಳ ಬಗ್ಗೆ ಮಾತನಾಡುತ್ತ, ಒಳಗೊಳಗೇ ಕುಟಿಲ ಕುಹಕಗಳ ಹೊರೆ ಹೊತ್ತೇ ಬದಕುತ್ತಿರುವ ಶೇಖಡಾ 99 ರ ಮದ್ಯೆ ಇಂತಹ ತಬರನ ಕಥೆಯ ನಮಗೆ ತಿಳಿಸಿದ್ದೀರಿ.ಅಭಿನಂದನೆಗಳು. —-ಅಕ್ಕಿಮಂಗಲ
Naalku dinada baalinalli pramanikatheye nammannu amarannagisuvdu Alva mam…. Thumbs chennagide
೫೦ ರೂಪಾಯಿ ಮುಗಿದ ಮೇಲೆ ಪಾರಿವಾಳಗಳು ಅಕ್ಕ ಮತ್ತೆ ಬರಲಿಲ್ಲವೆ ಎಂದು ಕೇಳಬಹುದು!
ನನ್ನ ಪರವಾಗಿ ಪಾರಿವಾಳಗಳಿಗೆ ತಿಂಡಿ ಹಾಕಲು ಆ ಬೈರಾಗಿಯೇ ಇದ್ದಾರಲ್ಲಾ ಸರ್! ಮೊದಲೂ ಅವರೇ ಹಾಕ್ತಾ ಇದ್ದಿದ್ದೂ ಈಗಲೂ ಅವರೇ ಹಾಕ್ತಿರೋದು.ನಾನು ಆ ಮನುಷ್ಯನ ಪ್ರಾಮಾಣಿಕತೆಗೆ, ನಿಲಿಱಪ್ತತೆಗೆ ಮಾರುಹೋದ ಅಬ್ಬೆಪಾರಿ ಅಷ್ಟೇ!
ಬಾಂಬೆಯ ಆ ತಿಂಡಿ ಮಾರಾಟಗಾರನಿಗೆ
ಕನ್ನಡ ಮಾತನಾಡಲು ಬರುತ್ತಿತ್ತಾ ?
ಸಂಭಾಷಣೆ ನಡೆದಿದ್ದು ಹಿಂದಿಯಲ್ಲಿ. ನನಗೆ ಹಿಂದಿ ಬರುತ್ತೆ ಮೇಡಂ. ನಿಮ್ಮ ಕುತೂಹಲಕ್ಕೆ ವಂದನೆಗಳು.
ಪ್ರಾಮಾಣಿಕ ಪ್ರತಿಕ್ರಿಯೆಗಳಿಗೆ ವಂದನೆಗಳು.
ರೂಪ