ಪ್ರವಾಸ ಅನುದಾನ ಯೋಜನೆಯಡಿ ಅರ್ಜಿ ಆಹ್ವಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಅನುದಾನ ಯೋಜನೆಯಡಿ ಅರ್ಜಿ ಆಹ್ವಾನ


ಕರ್ನಾಟಕ ಸಾಹಿತ್ಯ ಅಕಾಡೆಮಿಯು 2015-16ನೇ ಸಾಲಿನಲ್ಲಿ ಹಮ್ಮಿಕೊಂಡಿರುವ ಯೋಜನೆಗಳಲ್ಲಿ `ಪ್ರವಾಸ ಅನುದಾನ’ ಯೋಜನೆಯೂ ಒಂದಾಗಿದೆ. ಈ ಯೋಜನೆಯಡಿ 10 ಜನ ಆಸಕ್ತ ಲೇಖಕರನ್ನು ಆಯ್ಕೆ ಮಾಡಲಾಗುವುದು. ಹೀಗೆ ಆಯ್ಕೆಯಾದ ಲೇಖಕರು ವಿವಿಧ ರಾಜ್ಯಗಳಿಗೆ ಪ್ರವಾಸ ಕೈಗೊಂಡು ಅದರ ಸಾಹಿತ್ಯಕ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಹಿನ್ನೆಲೆಯಲ್ಲಿ ಪ್ರವಾಸ ಕಥನವೊಂದನ್ನು ಬರೆದುಕೊಡಬೇಕು. ಅರ್ಜಿ ಹಾಕಲು ಅಪೇಕ್ಷಿಸುವ ಲೇಖಕರು ಕೆಳಗಿನ ನಿಬಂಧನೆಗಳನ್ನು ಗಮನಿಸಿ ನಂತರ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಕಾಡೆಮಿಗೆ ದಿನಾಂಕ:18-6-2015ರ ಒಳಗೆ ಸಲ್ಲಿಸಲು ಕೋರಿದೆ. ಆಯ್ಕೆ ಮಾಡಿದ ಲೇಖಕರ ಹೆಸರುಗಳನ್ನು ಜುಲೈ ಮೊದಲ ವಾರದಲ್ಲಿ ಅಕಾಡೆಮಿಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ನಿಬಂಧನೆಗಳು:
1) ಪ್ರವಾಸವನ್ನು ಕೈಗೊಳ್ಳಲಿಚ್ಚಿಸುವ ಆಸಕ್ತ ಲೇಖಕರು 25-50 ವರ್ಷ ವಯೋಮಿತಿ ಒಳಗಿರಬೇಕು.
2) ಸುಸ್ಥಿರ ಆರೋಗ್ಯವನ್ನು ಹೊಂದಿರಬೇಕು.
3) ಯಾವುದೇ ಸಾಹಿತ್ಯ ಪ್ರಕಾರದಲ್ಲಿ ಕನಿಷ್ಠ 2 ಕೃತಿಗಳು ಪ್ರಕಟವಾಗಿರಬೇಕು.
4) ಪ್ರವಾಸದ ಅವಧಿಯು ಕನಿಷ್ಠ 10 ದಿನಗಳಿಂದ ಗರಿಷ್ಠ 20 ದಿನಗಳ ಅವಧಿಯದಾಗಿರಬೇಕು.
5) ಪ್ರವಾಸ ಕೈಗೊಳ್ಳುವವರು ಉದ್ಯೋಗಸ್ಥರಾಗಿದ್ದರೆ ಆಯ್ಕೆಯಾದ ನಂತರ ಸಂಬಂಧಪಟ್ಟ ಸಂಸ್ಥೆಯಿಂದ ನಿರಪೇಕ್ಷಣಾ ಪತ್ರವನ್ನು ಪಡೆಯಬೇಕು. ಪ್ರವಾಸ ಕೈಗೊಳ್ಳಲು ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ವಿಶೇಷ ರಜೆ ನೀಡಲು ಅಕಾಡೆಮಿಯು ಶಿಫಾರಸ್ಸು ಮಾಡುವುದಿಲ್ಲ.
6) ಈ ಯೋಜನೆಯಡಿ ದಕ್ಷಿಣ ಭಾರತದ ರಾಜ್ಯಗಳು (ಕರ್ನಾಟಕ ಹಾಗೂ ಮಧ್ಯಪ್ರದೇಶ ಸೇರಿದಂತೆ) ರೂ. 30,000-00 ಗಳು ಹಾಗೂ ಉತ್ತರ ಭಾರತ, ಈಶಾನ್ಯ ಭಾರತ ರಾಜ್ಯಗಳಿಗೆ ರೂ. 50,000-00ಗಳ ಅನುದಾನವನ್ನು ನೀಡಲಾಗುವುದು.
7) ಆಯ್ಕೆಯಾದ ಲೇಖಕರಿಗೆ ಅವರು ಆಯ್ಕೆ ಮಾಡಿದ ರಾಜ್ಯಗಳಲ್ಲದೆ ಅಕಾಡೆಮಿಯು ಅಪೇಕ್ಷಿಸುವ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳಲು ಅಕಾಡೆಮಿಯು ಸೂಚಿಸಬಹುದು.
8) ಈ ಯೋಜನೆಯಡಿ ನಿಗದಿಪಡಿಸಿದ ಮೊತ್ತವನ್ನು ಆಯ್ಕೆಯಾದ ಲೇಖಕರಿಗೆ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು.
9) ಇದಕ್ಕಾಗಿ ಯಾವುದೇ ಪತ್ರ ವ್ಯವಹಾರ ಮಾಡುವ ಅಗತ್ಯವಿಲ್ಲ. ಆಯ್ಕೆಯಾದ ಲೇಖಕರ ಹೆಸರುಗಳನ್ನು ಅಕಾಡೆಮಿಯ ವೆಬ್ಸೈಟ್ ನಲ್ಲಿ ಹಾಕಲಾಗುವುದು.
10) ಈ ಹಿಂದೆ ಅಕಾಡೆಮಿಯಿಂದ ಪ್ರವಾಸ ಅನುದಾನ ಪಡೆದಿರುವ ಲೇಖಕರು ಅರ್ಜಿ ಹಾಕುವಂತಿಲ್ಲ.
11) ಪ್ರವಾಸವನ್ನು ಕೈಗೊಳ್ಳಲು ಅಕಾಡೆಮಿಯು ಈ ಕೆಳಕಂಡ ರಾಜ್ಯಗಳನ್ನು ಆಯ್ಕೆ ಮಾಡಿದೆ.
 
1) ತ್ರಿಪುರ
2) ಉತ್ತರಾಂಚಲ
3) ಸಿಕ್ಕಿಂ
4) ನಾಗಾಲ್ಯಾಂಡ್
5) ಮೇಘಾಲಯ
6) ಒರಿಸ್ಸಾ
7) ಛತ್ತೀಸಗಡ
8) ಝಾರ್ಖಂಡ್
9) ಗುಜರಾತ್
10) ರಾಜಸ್ಥಾನ
11) ಮಹಾರಾಷ್ಟ್ರ
12) ಗೋವಾ
13) ತೆಲಂಗಾಣ
14) ಮಧ್ಯಪ್ರದೇಶ
15) ಕರ್ನಾಟಕ
ಲೇಖಕರ ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
 

‍ಲೇಖಕರು G

June 11, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: