ಚಿಂತನಕ್ಕೆ ಪ್ರೇರಕ ಗ್ರಂಥ
ವಾಸುಕಿ
ಡಾ. ಎಂ. ಪ್ರಭಾಕರ ಜೋಶಿಯವರ
ತತ್ತ್ವಮನನ
ತತ್ತ್ವಮನನಃ, ಧರ್ಮ, ತತ್ತ್ವ, ಪುರಾಣ ವಿಚಾರ ಸಂಕಲನ.
ಆಕೃತಿ ಆಶಯ ಪ್ರಕಾಶನ, ಬಾವುಟ ಗುಡ್ಡೆ, ಮಂಗಳೂರು-೧.
ದೂರವಾಣಿ : ೦೮೨೪ – ೨೪೪೩೦೦೨
ವರ್ಷ ೨೦೧೬. ಬೆಲೆ ರೂ. ೧೮೦.
ನಾಡಿನ ಹಿರಿಯ ಅರ್ಥಧಾರಿ, ಸಂಶೋಧಕ, ವಾಗ್ಮಿ ಡಾ. ಎಂ ಪ್ರಭಾಕರ ಜೋಶಿಯವರ ೧೮ ಲೇಖನಗಳ ಸಂಕಲನವಿದು. ಇದರಲ್ಲಿ ಭಾರತೀಯ ತತ್ತ್ವ ಶಾಸ್ತ್ರದ ಸಂಕ್ಷಿಪ್ತವಾದ ನೋಟ ಶೈವ ದರ್ಶನಗಳ ಸಂಗ್ರಹ, ಬುದ್ಧ ಮತ್ತು ವೇದಾಂತದ ಸಂಬಂಧ ಪರಿಶೀಲನೆ, ಅದ್ವೈತ ವೇದಾಂತ ಮತ್ತು ಶಂಕರಾಚಾರ್ಯರ ಕುರಿತ ನಾಲ್ಕಾರು ಲೇಖನಗಳಿವೆ.
ಮೀಮಾಂಸಾ, ವೇದಾಂತ, ಬೌದ್ಧ ದರ್ಶನಗಳ ಕುರಿತು ವಿಶಿಷ್ಟವಾದ ವಿವೇಚನೆಗಳಿವೆ. ಪುರಾಣ ಅಧ್ಯಯನದ ಕುರಿತಾದ ಪ್ರವೇಶ ರೂಪೀ ಲೇಖನವಿದೆ. ಭಾರತೀಯ ಸ್ಪಂದನ, ಭಾರತೀಯವಾದ ವಿಶಿಷ್ಟ ಚಿಂತನ ವಿಧಾನದ ಕುರಿತು ನೋಟಗಳಿವೆ.
ಸ್ಥಾಪಿತವಾದ ಮತ್ತು ರಾಜಕೀಯ ಪ್ರೇರಿತವಾದ ದೃಷ್ಟಿಗಳಿಂದ ಭಾರತದ ಪ್ರಾಚೀನವನ್ನು ಕಾಣುವ ತೀರ ಸಂಕುಚಿತ ಕಥನಗಳ ಮಧ್ಯೆ, ಭಾರತೀಯತೆಯನ್ನು ಅದರದಾದ ನಿಟ್ಟಿನಲ್ಲಿ ಆರ್ಷ ದೃಷ್ಟಿಗೆ ಅಪಚಾರವಾಗದೇ, ಆಧುನಿಕತೆ ದ್ರವ್ಯಗೋಪಿತವಾದ ವ್ಯವಸ್ಥಿತ ಮಾರ್ಗದಲ್ಲಿ ನೋಡುವ ಈ ಸಂಕಲನವು ಚಿಂತನೆಗೆ ಪ್ರೇರಕ. ಭಾಷೆ, ಮಂಡನೆ ಮತ್ತು ಧೋರಣೆಗಳಲ್ಲಿ ತೂಕ ಮ್ಮತ್ತು ಸಂಯಮದ, ಗುಣಮಟ್ಟದ ಸಂಕಲನ.






0 Comments